Connect with us

DAKSHINA KANNADA

ಬಸ್‌ ಸಂಚಾರ ಆರಂಭ; ಮೊದಲ ದಿನವೇ ಬಸ್‌ ಫುಲ್‌

Published

on

ಮಂಗಳೂರು: ಸರಿಸುಮಾರು 2 ತಿಂಗಳ ಲಾಕ್‌ಡೌನ್‌ ಬಳಿಕ ಮತ್ತೆ ಖಾಸಗಿ ಸಿಟಿ ಮತ್ತು ಸರ್ವೀಸ್‌ ಬಸ್ಸುಗಳು ಇಂದು ಸಂಚಾರ ನಡೆಸಿದ್ದು, ಬಹುತೇಕ ರಸ್ತೆಗಳಲ್ಲಿ ಖಾಸಗಿ ಬಸ್ಸುಗಳು, ಸರಕಾರಿ ಬಸ್ಸುಗಳು ಓಡಾಟವನ್ನು ನಡೆಸಿವೆ.

ಶೇಕಡಾ 50ರಷ್ಟು ಮಂದಿ ಪ್ರಯಾಣಿಕರನ್ನು ಮಾತ್ರ ತುಂಬಿಸಿಕೊಂಡು ಹೋಗಬೇಕೆಂದು ಜಿಲ್ಲಾಡಳಿತ ಬಸ್ಸು ಮಾಲಕರಿಗೆ ಸೂಚನೆ ನೀಡಿದೆ. ಈ ಆದೇಶ ಇದ್ದರೂ ಕೂಡಾ ಹಲವು ಬಸ್ಸುಗಳಲ್ಲಿ ಇಂದು ಬಸ್ಸುಗಳಲ್ಲಿ ಪ್ರಯಾಣಿಕರು ನಿಂತುಕೊಂಡು, ನೇತಾಡಿಕೊಂಡು ಹೋಗುವ ದೃಶ್ಯಗಳು ಕಂಡು ಬಂದಿವೆ. ತಲಪಾಡಿ ಸ್ಟೇಟ್‌ಬ್ಯಾಂಕ್‌, ಮಂಗಳಾದೇವಿ ಸುರತ್ಕಲ್‌, ಮಂಗಳೂರು- ಕೊಣಾಜೆ, ಸ್ಟೇಟ್‌ಬ್ಯಾಂಕ್‌ – ಬೊಂದೇಲ್‌ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಖಾಸಗಿ ಬಸ್ಸುಗಳು ಇಂದು ಓಡಾಡಿವೆ. ಇನ್ನು ಸ್ಮಾನಿಟೈಜಸರ್, ಮಾಸ್ಕ್‌ ಎಲ್ಲವೂ ಮರೀಚಿಕೆಯಾಗಿದೆ. ಬಹುತೇಕ ಬಸ್ಸುಗಳಲ್ಲಿ ಸಾಮಾಜಿಕ ಅಂತರವೇ ಇರಲಿಲ್ಲ. ಇನ್ನು ಬಸ್ಸು ಓಡಾಟವೂ ಸಂಜೆಯವರೆಗೆ ಓಡಿಸಲು ಅವಕಾಶ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘ ಜಿಲ್ಲಾಡಳಿತವನ್ನು ಕೋರಿಕೊಂಡಿದ್ದರೂ ಅದಿನ್ನೂ ನಿರ್ಧಾರವಾಗಿಲ್ಲ.

ಪ್ರಯಾಣ ದರ ಏರಿಕೆ 

ಟಿಕೆಟ್ ಪ್ರಯಾಣ ದರವನ್ನು  2 ರೂಪಾಯಿಗೆ ಹೆಚ್ಚಿಸಲಾಗಿದ್ದು, ಮಿನಿಮಮ್ ಪ್ರಯಾಣ ದರ 12 ರೂಪಾಯಿ ಆಗಿದೆ.  ಪ್ರಯಾಣ ದರ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಯಾಣಿಕರು ತಮ್ಮಲ್ಲಿ ಕಷ್ಟವಿದ್ದರೂ 12 ರೂಪಾಯಿ ಕೊಟ್ಟು ಸಂಚರಿಸಿದ್ದಾರೆ. ಎಲ್ಲೂ ಕೂಡಾ ಪ್ರಯಾಣ ದರಕ್ಕೆ ಸಂಬಂಧಿಸಿ ವಾಗ್ವಾದ ನಡೆದಿರುವ ಬಗ್ಗೆ ವರದಿಯಾಗಿಲ್ಲ.

DAKSHINA KANNADA

ತಲಪಾಡಿ: ಟ್ಯಾಂಕರ್ ಗೆ ಗುದ್ದಿದ ಕಾರು, ತಪಾಸಣೆ ವೇಳೆ ಕಾರಿನಲ್ಲಿ ಸಿಕ್ತು ಲಕ್ಷಾಂತರ ಮೌಲ್ಯದ ಡ್ರಗ್ಸ್..!

Published

on

ಉಳ್ಳಾಲ: ಕಾರೊಂದು ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದು ಕಾರಿನೊಳಗೆ ಲಕ್ಷಾಂತರ ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಪತ್ತೆಯಾದ ಘಟನೆ ಮಂಗಳೂರು ಹೊರ ವಲಯದ ತಲಪಾಡಿಯಲ್ಲಿ ಇಂದು ನಡೆದಿದೆ.

ಮಂಗಳೂರಿನಿಂದ‌ ಉಪ್ಪಳದ ಕಡೆಗೆ ಬರುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ  ಆದಮ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಪೊಲೀಸರು ತನಿಖೆಗೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಸುಮಾರು 78 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

 

Continue Reading

DAKSHINA KANNADA

ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವಕ ನಾಪತ್ತೆ; ಪ್ರಕರಣ ದಾಖಲು

Published

on

ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಳಿತಪಡ್ಪು ನಿವಾಸಿ ಇದಿನಬ್ಬ ಎಂಬವರ ಮಗ ಮಹಮ್ಮದ್ ರಾಝಿಮ್ (23) ಎಂಬಾತ ಕಾಣೆಯಾಗಿರುವ ಯುವಕನಾಗಿದ್ದಾನೆ.

ರಾಝಿಮ್ ಕಾರ್ಕಳದ ಕಂಪೆನಿಯ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಮನೆಗೆ ಬಂದು ಹೋಗುತ್ತಿದ್ದ. ಆದರೆ ಡಿಸೆಂಬರ್ 5 ರಂದು ಮನೆಯಿಂದ ಕಾರ್ಕಳಕ್ಕೆ ಕೆಲಸಕ್ಕೆಂದು ಹೋದ ಈತ ಸಂಜೆ ಮನೆಗೆ ಬಾರದೆ ಕಾಣೆಯಾಗಿದ್ದಾನೆ.

ಇದನ್ನೂ ಓದಿ: ಸುರತ್ಕಲ್‌: ಒಂಟಿ ವೃದ್ಧೆ ಮನೆಯಲ್ಲಿ ಕಳವು ಪ್ರಕರಣ; ಮೂವರು ಆರೋಪಿಗಳ ಬಂಧನ

ಮೊಬೈಲ್ ಸ್ವಿಚ್ ಆಪ್ ಆಗಿದ್ದು, ಈತನ ಸುಳಿವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Continue Reading

BANTWAL

ಬಂಟ್ವಾಳ: ರಸ್ತೆ ಅಗೆದು ಜಲ್ಲಿ ಹಾಕಿ ಹೋದವರು ನಾಪತ್ತೆ; ಅಣ್ಣಳಿಕೆಯಿಂದ ಕೊಯಿಲದವರೆಗಿನ ರಸ್ತೆಗಿಲ್ಲ ಡಾಂಬರ್ ಭಾಗ್ಯ

Published

on

ಬಂಟ್ವಾಳ: ರಸ್ತೆಯನ್ನು ಅಗೆದು ಜಲ್ಲಿ ಹಾಕಿ ಹೋದವರು ಪತ್ತೆಯಿಲ್ಲ, ಡಾಂಬರ್‌ಗಾಗಿ ಕಾದು ಕಾದು ಸುಸ್ತಾದ ರಸ್ತೆಯ ಜಲ್ಲಿಕಲ್ಲುಗಳು ವಾಹನ ಮೇಲೆ ದಾಳಿ ಮಾಡುತ್ತಿದ್ದು, ವಾಹನ ಸವಾರರಿಗೆ ಅಪಾಯದ ಕರೆಗಂಟೆ ಬಾರಿಸಿದೆ.


ಇದು ಬಂಟ್ವಾಳ ಮೂಡಬಿದಿರೆ ರಸ್ತೆಯ ಅಣ್ಣಳಿಕೆಯಿಂದ ಕೊಯಿಲವರೆಗಿನ ಒಂದುಕಾಲು ಕಿ.ಮೀ‌.ರಸ್ತೆಯ ದುರಾವಸ್ಥೆ! ಹೇಳುವವರು ಇಲ್ಲ, ಕೇಳುವರು ಇಲ್ಲ… ಅನ್ನುವ ಸ್ಥಿತಿ ಎದುರಾಗಿದ್ದು, ಕಳೆದ ಒಂದು ವರ್ಷಗಳಿಂದ ಇಲ್ಲಿನ ಜನರು ರಸ್ತೆಯಲ್ಲಿ ಓಡಾಟ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಇದು ಝಿಗ್‌ ಜ್ಯಾಗ್‌ ರಸ್ತೆಯಾಗಿದ್ದು ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಟ ನಡೆಸುತ್ತಿವೆ. ಜನರು ಸಾವಿನ ಭಯದಿಂದ ಸಂಚರಿಸುವಂತಾಗಿದೆ. ಪಿಡಬ್ಲ್ಯೂ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು, ರಸ್ತೆಯ ಡಾಂಬರೀಕರಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯೂ ಆರಂಭವಾಗಿದೆ ಆದರೆ ಕಾಮಗಾರಿ ಇನ್ನೂ ಮುಗಿಯುತ್ತಿಲ್ಲ.

ಇದನ್ನೂ ಓದಿ: ಸುರತ್ಕಲ್‌: ಒಂಟಿ ವೃದ್ಧೆ ಮನೆಯಲ್ಲಿ ಕಳವು ಪ್ರಕರಣ; ಮೂವರು ಆರೋಪಿಗಳ ಬಂಧನ

ಡಾಂಬರು ಹಾಕಲೆಂದು‌ ರಸ್ತೆಯನ್ನು ಅಗೆದು ತಿಂಗಳುಗಳು ಕಳೆದಿವೆಯಾದರೂ ಇನ್ನೂ ಡಾಂಬರು ಹಾಕಿಲ್ಲ. ಇದ್ದ ರಸ್ತೆಯನ್ನು ಅಗೆದು ಜಲ್ಲಿ ಹಾಕಿ ತಿಂಗಳಾಗುತ್ತಾ ಬಂದಿದ್ದು, ಇನ್ನೂ ಧೂಳು ಮಿಶ್ರಿತ ಜಲ್ಲಿ ಕಲ್ಲು ಮೇಲೆ ಡ್ಯಾನ್ಸ್ ಮಾಡುತ್ತಾ ಕುಂಟುತ್ತಾ, ಉರುಳುತ್ತಾ ಸಾಗಬೇಕಾಗಿರುವ ಸ್ಥಿತಿ ಉಂಟಾಗಿದೆ ಎಂಬ ಆರೋಪ ಇಲ್ಲಿನ‌ ಜನರದ್ದಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page