Connect with us

LATEST NEWS

ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: ಸಾವಿನ ಸಂಖ್ಯೆ 36ಕ್ಕೆ ಏರಿಕೆ

Published

on

30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಬಸ್​ ಕಮರಿಗೆ ಉರುಳಿ ಬಿದ್ದ ಭೀಕರ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಉತ್ತರಖಂಡಾದ ಅಲ್ಮೋರಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮಾರ್ಚುಲಾ ಸಾಲ್ಟ್​ ಪ್ರದೇಶದಲ್ಲಿ ಬಸ್​ ಕಮರಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ 36 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಬಂದಿದೆ. ಸ್ಥಳದಲ್ಲಿ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಪಡೆ ಮೂರು ತಂಡಗಳಾಗಿ ರಕ್ಷಣಾ ಕಾರ್ಯಚರಣೆ ಮಾಡುತ್ತಿದ್ದಾರೆ.

ಉತ್ತರಖಂಡಾದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಘಟನಾ ಸ್ಥಳದಿಂದ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.

LATEST NEWS

ಮಂಗಳೂರಿಗೆ ಆಗಮಿಸಿದ ಸಿಐಎಸ್‌ಎಫ್‌ ಕೋಸ್ಟಲ್‌ ಸೈಕ್ಲೋಥಾನ್ 2025

Published

on

ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ ದೇಶದ ಕರಾವಳಿ ತೀರದುದ್ದಕ್ಕೂ ನಡೆಯುತ್ತಿರುವ ಸಿಐಎಸ್‌ಎಫ್‌ ಕೋಸ್ಟಲ್‌ ಸೈಕ್ಲೋಥಾನ್‌ 2025 ಬುಧವಾರ ಸಂಜೆ ಮಂಗಳೂರಿಗೆ ಆಗಮಿಸಿತು.


ಪಣಂಬೂರು ಬೀಚಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಕೆ. ಆನಂದ್, ಎಸ್ಪಿ ಯತೀಶ್ ಮತ್ತಿತರರು ಸೈಕಲ್ ರ್ಯಾಲಿಯನ್ನು ಸ್ವಾಗತಿಸಿದರು.

ಇದನ್ನೂ ಓದಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ವರದಿ ತಿರಸ್ಕರಿಸಿದ ಭಾರತ..!

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಂದರೆ ಸಿಐಎಸ್‌ಎಫ್ ಭಾರತದ ಭದ್ರತಾ ಮೂಲಸೌಕರ್ಯದ ಆಧಾರಸ್ತಂಭವಾಗಿದೆ. ಪ್ರಮುಖ ಕೈಗಾರಿಕಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಜಾಲಗಳು, ಪರಮಾಣು ಸ್ಥಾಪನೆ ಮತ್ತು ಪ್ರಮುಖ ಕರಾವಳಿ ಪ್ರದೇಶಗಳನ್ನು ಸಿಐಎಸ್‌ಎಫ್‌ ರಕ್ಷಿಸುತ್ತಿದೆ.

 

ಭಾರತದ ಆರ್ಥಿಕ ಜೀವನಾಡಿಗಳನ್ನು ರಕ್ಷಿಸುವುದರಿಂದ ಹಿಡಿದು ಲಕ್ಷಾಂತರ ಜನರ ಸುರಕ್ಷತೆಯನ್ನು ಮಾಡುತ್ತಿದೆ. ಭಾರತದ 7,500 ಕಿಲೋ ಮೀಟರ್ ಕರಾವಳಿಯು ವ್ಯಾಪಾರ, ಆರ್ಥಿಕತೆ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರೊಂದಿಗೆ, ಸಿಐಎಸ್‌ಎಫ್ ಕರಾವಳಿ ಭದ್ರತೆ, ಪ್ರಮುಖ ಬಂದರುಗಳು, ಕಡಲ ಮೂಲಸೌಕರ್ಯಗಳನ್ನು ರಕ್ಷಿಸುವುದು ಮತ್ತು ಕರಾವಳಿ ಸಮುದಾಯಗಳಲ್ಲಿ ವಿಶ್ವಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾರ್ಚ್‌ 7ರಂದು ಈ ಕೋಸ್ಟಲ್‌ ಸೈಕ್ಲೋಥಾನ್‌ 2025ಕ್ಕೆ ಚಾಲನೆ ನೀಡಲಾಗಿತ್ತು.

Continue Reading

LATEST NEWS

ನಟಿ ಅಪ್ಸರಾ ಕೊ*ಲೆ ಪ್ರಕರಣ : ದೇವಸ್ಥಾನದ ಅರ್ಚಕನಿಗೆ ಜೀ*ವಾವಧಿ ಶಿಕ್ಷೆ..!

Published

on

ಮಂಗಳೂರು/ರಂಗಾರೆಡ್ಡಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಯುವ ನಟಿಯ ಕೊ*ಲೆ ಪ್ರಕರಣದಲ್ಲಿ ದೇವಾಲಯದ ಅರ್ಚಕನೊಬ್ಬನಿಗೆ ಜೀ*ವಾವಧಿ ಶಿಕ್ಷೆ ವಿಧಿಸಲಾಗಿದೆ. ಜೂನ್ 2023 ರಲ್ಲಿ ಯುವತಿಯನ್ನು ಕೊ*ಲೆ ಮಾಡಿ ಆಕೆಯ ಶ*ವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಅಡಗಿಸಿಟ್ಟ ಪ್ರಕರಣದಲ್ಲಿ ಅಯ್ಯಗಾರಿ ವೆಂಕಟ ಸಾಯಿ ಕೃಷ್ಣ ತಪ್ಪಿತಸ್ಥನೆಂದು ಸಾಬೀತಾಗಿದೆ.

ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ 10,000 ರೂ. ದಂಡ ಮತ್ತು ಹೆಚ್ಚುವರಿಯಾಗಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೃ*ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಪ್ರೀತಿಗೆ ಬಲಿಯಾದ ನಟಿ!

ಇದು ಹೈದರಾಬಾದ್ ಅನ್ನು ಬೆಚ್ಚಿಬೀಳಿಸಿದ ಪ್ರಕರಣವಾಗಿದ್ದು, ಅಪ್ಸರಾ ಕೊಲೆ ಪ್ರಕರಣ ಅಂತಾನೇ ಹೆಸರಾಗಿತ್ತು. ಅಪ್ಸರಾ ನಿತ್ಯ ಭೇಟಿ ನೀಡುತ್ತಿದ್ದ ದೇವಸ್ಥಾನದಲ್ಲಿ ಸಾಯಿ ಕೃಷ್ಣ ಅರ್ಚಕನಾಗಿದ್ದು ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ವಿವಾಹಿತನಾಗಿದ್ದ ಸಾಯಿ ಕೃಷ್ಣ ಅಪ್ಸರಾ ಮದುವೆಗೆ ಒತ್ತಾಯಿಸಿದ ಕಾರಣಕ್ಕೆ ಆಕೆಯನ್ನು ಕೊ*ಲೆ ಮಾಡಿದ್ದ.

2023 ರ ಜೂನ್ 3 ರ ರಾತ್ರಿ ಅಪ್ಸರಾಳನ್ನು ಯಾತ್ರಾ ಕ್ಷೇತ್ರಕ್ಕೆ  ಕರೆದುಕೊಂಡು ಹೋಗುವ ನೆಪದಲ್ಲಿ ಕರೆದುಕೊಂಡು ಹೋಗಿ ಕೊ*ಲೆ ಮಾಡಿದ್ದಾನೆ. ಪ್ರಯಾಣದ ದಾರಿ ಮಧ್ಯದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ನಿದ್ದೆಯಲ್ಲಿದ್ದ ಅಪ್ಸರಾಳನ್ನು ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಸಾ*ವು ಖಚಿತವಾಗದ ಹಿನ್ನೆಲೆಯಲ್ಲಿ ಕಲ್ಲಿನಿಂದ ತಲೆಯನ್ನು ಜ*ಜ್ಜಿ ಹಾಕಿದ್ದಾನೆ.

ಇದನ್ನೂ ಓದಿ : ಈಗಲೇ ನೋಡಿಕೊಳ್ಳಿ ..! ಶರೀರದ ಈ ಭಾಗದಲ್ಲಿ ಮಚ್ಚೆ ಇದ್ದರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ..!

ಮೃ*ತದೇಹವನ್ನು ಕಂಬಳಿಯಲ್ಲಿ ಸುತ್ತಿ ತನ್ನ ಮನೆಗೆ ಕೊಂಡೊಯ್ದು ಎರಡು ದಿನಗಳ ಕಾಲ ಏನೂ ಆಗಿಲ್ಲ ಎಂಬಂತೆ ದೇವಸ್ಥಾನದ ಪೂಜೆಗೆ ಹಾಜರಾಗಿದ್ದ. ಎರಡು ದಿನದ ಬಳಿಕ ಮನೆಯಿಂದ ಮೃ*ತದೇಹವನ್ನು ಬಂಗಾರು ಮೈಸಮ್ಮ ದೇವಸ್ಥಾನದ ಬಳಿಯ ಮ್ಯಾನ್ ಹೋಲ್ ಗೆ ಎಸೆದಿದ್ದ. ಬಳಿಕ ಮ್ಯಾನ್ ಹೋಲ್ ನಿಂದ ವಾಸನೆ ಬರುವ ನೆಪ ಒಡ್ಡಿ ಎರಡು ಟ್ರಕ್ ಮಣ್ಣು ತರಿಸಿ ಮ್ಯಾನ್ ಹೋಲ್ ಮುಚ್ಚಿ ಹಾಕಿದ್ದ.

ಆದರೆ, ಅಪ್ಸರಾ ನಾಪತ್ತೆ ದೂರು ದಾಖಲಾದ ಬಳಿಕ ಶಂಷಾಬಾದ್ ಪೊಲೀಸರು ನಡೆಸಿದ ತನಖೆಯಲ್ಲಿ ಅರ್ಚಕ ಸಾಹಿಕೃಷ್ಣನ ಬಂಧನವಾಗಿತ್ತು.

Continue Reading

LATEST NEWS

ಈಗಲೇ ನೋಡಿಕೊಳ್ಳಿ ..! ಶರೀರದ ಈ ಭಾಗದಲ್ಲಿ ಮಚ್ಚೆ ಇದ್ದರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ..!

Published

on

ಮಚ್ಚೆಗಳ ಸಂಖ್ಯೆ ಮತ್ತು ಅವುಗಳ ಸ್ಥಳವು ವ್ಯಕ್ತಿಯ ವೈಯಕ್ತಿಕ ಜೀವನದ ಪ್ರಮುಖ ಅಂಶಗಳನ್ನು ನಿರ್ಧರಿಸುತ್ತದೆ. ದೇಹದ ಮೇಲಿನ ಮಚ್ಚೆಗಳು ಎಲ್ಲಿವೆ, ಅವು ಎಷ್ಟು ದೊಡ್ಡದಾಗಿವೆ ಮತ್ತು ಅವು ಯಾವ ಬಣ್ಣವನ್ನು ಹೊಂದಿವೆ ಎಂಬುದರ ಆಧಾರದ ಮೇಲೆ ಫಲಿತಾಂಶಗಳು ಬದಲಾಗುತ್ತವೆ. ಹಾಗಾದರೆ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಏನು ಅರ್ಥ?  ಎಂದು ನೊಡೋಣ ಬನ್ನಿ..

ಹಣೆಯ ಬಲಭಾಗದ ಮಚ್ಚೆ:

ಹಣೆಯ ಬಲಭಾಗದಲ್ಲಿರುವ ಮಚ್ಚೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತು, ಗೌರವ ಮತ್ತು ಸಾಮಾಜಿಕ ಮಹತ್ವವನ್ನು ಪ್ರತಿನಿಧಿಸುತ್ತದೆ. ಎಡಭಾಗದಲ್ಲಿ ಮಚ್ಚೆಯಿದ್ದರೆ, ಅದು ನಿಮ್ಮ ವೃತ್ತಿಜೀವನದಲ್ಲಿ ಕೆಲವು ಆರ್ಥಿಕ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಸೂಚಿಸುತ್ತದೆ. ಬಲ ಹುಬ್ಬಿನ ಮೇಲಿನ ಮಚ್ಚೆಯು ಯಶಸ್ಸು ಮತ್ತು ಉಜ್ವಲ ಭವಿಷ್ಯವನ್ನು ಸೂಚಿಸುತ್ತದೆ. ಆದರೆ ಎಡ ಹುಬ್ಬಿನ ಮೇಲೆ ಮಚ್ಚೆಯಿದ್ದರೆ, ವೃತ್ತಿ ಮತ್ತು ವ್ಯವಹಾರದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಕಣ್ಣಿನ ಬಳಿ ಹಾಗೂ ಮೂಗಿನ ತುದಿಯಲ್ಲಿ ಮಚ್ಚೆ:

ಬಲಗಣ್ಣಿನ ಬಳಿ ಇರುವ ಮಚ್ಚೆಯು ಸಂಪತ್ತು ಮತ್ತು ಸಂತೋಷವನ್ನು ಸೂಚಿಸುತ್ತದೆ. ಆದರೆ ಅದು ಎಡಗಣ್ಣಿಗೆ ಹತ್ತಿರದಲ್ಲಿದ್ದರೆ, ಅದು ಆರ್ಥಿಕ ಒತ್ತಡವನ್ನು ಸೂಚಿಸುತ್ತದೆ. ಮೂಗಿನ ತುದಿಯಲ್ಲಿ ಮಚ್ಚೆಯಿದ್ದರೆ, ನಿಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತವಾಗಿರಬಹುದು. ಮೇಲಿನ ತುಟಿಯ ಮೇಲಿನ ಮಚ್ಚೆಯು ದಯೆ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. ಆದಾಗ್ಯೂ, ಕೆಳಗಿನ ತುಟಿಯ ಮೇಲಿನ ಮಚ್ಚೆಯು ಕಲೆ ಮತ್ತು ಸೃಜನಶೀಲತೆಯಲ್ಲಿ ಆಸಕ್ತಿಯನ್ನು ಸೂಚಿಸುತ್ತದೆ.

ಎಡ ಕಿವಿಯಲ್ಲಿ ಮಚ್ಚೆ:

ಕೆನ್ನೆಗಳ ಮೇಲೆ ಮಚ್ಚೆ ಇದ್ದರೆ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಸಮಾಜದಲ್ಲಿ ಉತ್ತಮ ಗೌರವ ಮತ್ತು ಸ್ಥಿರ ಜೀವನವನ್ನು ಸಾಧಿಸಲು ಅವಕಾಶವಿದೆ. ನಿಮ್ಮ ಬಲ ಕಿವಿಯಲ್ಲಿ ಮಚ್ಚೆಯಿದ್ದರೆ, ಸುಲಭವಾಗಿ ಹಣ ಗಳಿಸುವ ಸಾಧ್ಯತೆ ಇರುತ್ತದೆ. ಆದರೆ ಎಡ ಕಿವಿಯ ಮೇಲೆ ಮಚ್ಚೆಯಿದ್ದರೆ, ಬೆಳೆಯಲು ಕಷ್ಟಪಟ್ಟು ಕೆಲಸ ಮಾಡಬೇಕಾದ ಸಂದರ್ಭಗಳು ಎದುರಾಗುತ್ತವೆ.

ಕುತ್ತಿಗೆಯಲ್ಲಿ ಮಚ್ಚೆ:

ಕುತ್ತಿಗೆಯ ಮುಂಭಾಗದಲ್ಲಿ ಮಚ್ಚೆಯಿದ್ದರೆ, ಅದು ಸಂಪತ್ತು ಮತ್ತು ಗೌರವವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅವರ ಭುಜದ ಮೇಲೆ ಮಚ್ಚೆ ಇದ್ದರೆ, ಅವರು ಕಠಿಣ ಪರಿಶ್ರಮಿಗಳು ಮತ್ತು ಯಾವುದೇ ಕಷ್ಟವನ್ನು ನಿವಾರಿಸುತ್ತಾರೆ ಎಂದರ್ಥವನ್ನು ನೀಡುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page