Connect with us

ಕೋವಿಡ್-19 ಪರಿಹಾರ ನಿಧಿ ವಿತರಣೆಯಲ್ಲಿ ಗೊಂದಲಕ್ಕೀಡಾದ ಕಟ್ಟಡ ಕಾರ್ಮಿಕರು..

Published

on

ಕೋವಿಡ್-19 ಪರಿಹಾರ ನಿಧಿ ವಿತರಣೆಯಲ್ಲಿ ಗೊಂದಲಕ್ಕೀಡಾದ ಕಟ್ಟಡ ಕಾರ್ಮಿಕರು..

ಮಂಗಳೂರು: ಕೋವಿಡ್-19 ಪರಿಹಾರ ನಿಧಿ ವಿತರಣೆಯಲ್ಲಿ ಕಟ್ಟಡ ಕಾರ್ಮಿಕರು ಗೊಂದಲಕ್ಕೀಡಾಗಿದ್ದಾರೆ.

ಕೆಲವರಿಗೆ ಒಂದೊಂದು ರೀತಿಯಲ್ಲಿ ಮೊತ್ತ ಪಾವತಿಯಾಗಿದ್ದರೆ, ಇನ್ನು ಹಲವರಿಗೆ ಕೆಲಸವಿಲ್ಲದೆ 50 ದಿನಗಳು ಕಳೆದರೂ ಹಣವೇ ಪಾವತಿಯಾಗಿಲ್ಲ.

ಸರಕಾರವನ್ನು ನಂಬಿರುವ ಜಿಲ್ಲೆಯ ಕಾರ್ಮಿಕರು ಅತಂತ್ರರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಗಮನಹರಿಸುತ್ತಿಲ್ಲ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸದಸ್ಯ ಜಯಂತ್ ನಾಯ್ಕ್ ಹೇಳಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದೆ ಜೇಬು ಖಾಲಿಯಾಗಿದೆ. ಎರಡನೇ ಲಾಕ್ ಡೌನ್ ವೇಳೆ ಸರಕಾರ ರೂ.5,000 ಕೊಡುವ ಭರವಸೆ ನೀಡಿತ್ತು.

ಆದರೆ ಕೆಲವರ್ಷದ ಅವಧಿಗೆ ನೋಂದಣಿ ನಡೆಸಲಾದ ಕೆಲವೇ ಕಾರ್ಮಿಕರಿಗೆ ಪರಿಹಾರ ನಿಧಿ ಅಕೌಂಟಿಗೆ ಜಮೆಯಾಗಿದೆ.

ಈ ಪೈಕಿ ಹಲವರಿಗೆ ರೂ.2000, ಇನ್ನು ಕೆಲವರಿಗೆ 10,000 ಮತ್ತು ರೂ.5,000 ಹಾಗೂ ಉಳಿದವರಿಗೆ ಮೊತ್ತವೇ ಪಾವತಿಯಾಗಿಲ್ಲ.

ಒಂದೆಡೆ ಕಟ್ಟಡ ಕಾಮಗಾರಿಗಳು ಮರಳು ಖಾಲಿಯಾಗಿ ಹಾಗೂ ಸಿಮೆಂಟ್ ದರ ಏರಿಕೆಯಿಂದ ಕೆಲಸವನ್ನು ನಿಲ್ಲಿಸಿರುವುದರಿಂದ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ.

ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರಿಗೆ ಹಣ ವರ್ಗಾವಣೆಯ ಅಧಿಕಾರವೇ ಇಲ್ಲದಂತಾಗಿದೆ.

ನೇರವಾಗಿ ಬೆಂಗಳೂರಿನ ಇಲಾಖೆಯೇ ಪರಿಹಾರ ನಿಧಿಯಲ್ಲಿ ಕಾರ್ಯಾಚರಿಸುತ್ತಿದೆ. ಒಂದೂವರೆ ವರ್ಷದಿಂದ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಮೊತ್ತ, ಕಾರ್ಮಿಕರ ವೈದ್ಯಕೀಯ ಸವಲತ್ತು, ಆಕಸ್ಮಿಕ ಸಾವಿನ ಪರಿಹಾರ ಸಿಗುತ್ತಿಲ್ಲ.

ಕಾರ್ಮಿಕ ಮಂಡಳಿಯಲ್ಲಿ ಇರುವ 9,000 ಕೋಟಿ ರೂ. ಹಣ ನೀಡಲು ಸರಕಾರ ಹಿಂದೇಟು ಹಾಕುತ್ತಿರುವುದು ಸಂಶಯ ಹುಟ್ಟಿಸುತ್ತಿದೆ.

ಈ ಕೂಡಲೇ ಸರಕಾರ ಹೇಳಿದ ಕಟ್ಟಡ ಕಾರ್ಮಿಕರ ಸಹಾಯಧನ ಬ್ಯಾಂಕ್ ಖಾತೆಗೆ ಹಾಕಿ ಎಂದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ವೃದ್ಧ ದಂಪತಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್, ಮುಹೂರ್ತ ಇಟ್ಟಿದ್ದ ತಮ್ಮನ ವೈದ್ಯ ಮಗ ಅರೆಸ್ಟ್..!

Published

on

ಶಿವಮೊಗ್ಗ: ಇಲ್ಲಿನ ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ದ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣ ಮತ್ತು ಚಿನ್ನಾಭರಣಕ್ಕಾಗಿ ಕಿರಾತಕ ವೈದ್ಯನೊಬ್ಬ ತನ್ನ ದೊಡ್ಡಪ್ಪ, ದೊಡ್ಡಮ್ಮನನ್ನೇ  ಕೊಲೆಗೈದ ವಿಚಾರ ಬೆಳಕಿಗೆ ಬಂದಿದೆ.

ವಿಐಎಸ್‌ಎಲ್ ನಿವೃತ್ತ ನೌಕರ ಚಂದ್ರಪ್ಪ (78) ಮತ್ತು ಅವರ ಪತ್ನಿ ಜಯಮ್ಮ  (75) ಹತ್ಯೆಗೀಡಾದ ಮೃತ ದುರ್ದೈವಿಗಳು. ಮೃತ ಚಂದ್ರಪ್ಪ ಅವರ ಸಹೋದರ ಫಾಲಾಕ್ಷಪ್ಪ ಅವರ ಪುತ್ರ ಡಾ.ಮಲ್ಲೇಶ್ ಬಂಧಿತ ಆರೋಪಿ.

ವಿಶೇಷವೆಂದರೆ ವೃದ್ಧ ದಂಪತಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಈತನ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ವೈದ್ಯ, ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಯಾವುದೇ ಗಾಯ ಮಾಡದೆ ಅತ್ಯಂತ ಚಾಣಾಕ್ಷತನದಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ವೃದ್ಧ ದಂಪತಿ ಕೊಲೆಯಾದ ಬಳಿಕ ನಾಪತ್ತೆಯಾಗಿದ್ದ ಚಿನ್ನಾಭರಣಗಳ ಜಾಡು ಹಿಡಿದ ಭದ್ರಾವತಿ ಓಲ್ಡ್ ಟೌನ್ ಪೊಲೀಸರು, ತನಿಖೆಯ ಸಂದರ್ಭದಲ್ಲಿ ಡಾ. ಮಲ್ಲೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಆರೋಪಿ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಹಣ ಮತ್ತು ಚಿನ್ನದ ಆಸೆಗಾಗಿ ಸ್ವಂತ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಲ್ಲಲು ಈತ ಮುಂದಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Continue Reading

LATEST NEWS

ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

Published

on

ಪಡುಬಿದ್ರೆ: ತಮ್ಮ ವಿಶಿಷ್ಟ ಮಾತುಗಳಿಂದ ಮನೆ ಮಾತಾಗಿರುವ , ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಇದೇ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ್ದು, ರಕ್ಷಿತಾ ಶೆಟ್ಟಿಗೆ ಅಭಿಮಾನಿಗಳು ಮುತ್ತಿಗೆ ಹಾಕಿ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಚೆಂಡೆ ನಾದದೊಂದಿಗೆ ರಕ್ಷಿತಾಳನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ತುಳುನಾಡಿನ ಬಾಲೆಗೆ ತುಳುನಾಡ ಶಾಲು ಹಾಕಿ ಗೌರವಿಸಲಾಯಿತು. ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿ ಟೋಲ್ ಪ್ರವೇಶಿಸಿದ ರಕ್ಷಿತಾಳಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನೇ ನೀಡಿದರು. ರಕ್ಷಿತಾ ಅಭಿಮಾನಿಗಳು, ಕುಟುಂಬಿಕರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಇನ್ನು ರಕ್ಷಿತಾಳ ಜೊತೆ ತಮ್ಮ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. ರಕ್ಷಿತಾ ಕುಡಾ ಅಭಿಮಾನಿಗಳನ್ನು ನಿರಾಶೆ ಮಾಡಲಿಲ್ಲ.

ಅವರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಸಾಲದಕ್ಕೆ ಚೆಂಡೆ ಧ್ವನಿಗೆ ನೃತ್ಯ ಮಾಡಿ ಮನರಂಜಿಸಿದರು. ಹೆಜಮಾಡಿ ಟೋಲ್‌ನಿಂದ ಪಡುಬಿದ್ರಿ ಪೇಟೆ ತನಕ ಮೆರವಣಿಗೆ ಮಾಡಲಾಯಿತು. ಜಾತಿ, ಧರ್ಮವೆನ್ನದೇ ಎಲ್ಲರೂ ಬಂದು ರಕ್ಷಿತಾಳಿಗೆ ಶುಭ ಹಾರೈಸಿದರು. ಬಿಗ್ ಬಾಸ್ ರಕ್ಷಿತಾಳಿಗೆ ಜೈ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವೀಡಿಯೊ ನೋಡಿ:

 

Continue Reading

hasana

ಕುಡಿದ ಮತ್ತಿನಲ್ಲಿ ಜಗಳ-ಸ್ನೇಹಿತನ ಕೊಲೆ: ಭೀಕರ ಸ್ಥಿತಿಯಲ್ಲಿ ಮೃತದೇಹ ಪತ್ತೆ

Published

on

ಹಾಸನ: ಕುಡಿದ ಮತ್ತಿನಲ್ಲಿ ಗೆಳೆಯರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಅಘಾತಕಾರಿ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಕಬ್ಬೂರು ಗ್ರಾಮದಲ್ಲಿ ನಡೆದಿದೆ.


ಗಣೇಶ್‌(46) ಮೃತ ದುರ್ದೈವಿ. ಅಶೋಕ್‌ ಮತ್ತು ಸುಧೀರ್‌ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿಗಳು.

ಸೋಮವಾರ(ಜ.19)ದಂದು ಜಮೀನು ಕಾಯಲು ಹೋದ ಗಣೇಶ್‌ ತನ್ನ ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಆ ಸಂಧರ್ಭ ಸ್ನೇಹಿತರು ಗಣೇಶ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮೃತದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಲೇಡಿ ಫಿಟ್ನೆಸ್ ಟ್ರೈನರ್ ಮೇಲೆ ಅತಿಯಾದ ಮೋಹ; ಯುವಕ ಅರೆಸ್ಟ್‌

ಬಳಿಕ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂದಿ ಶವವನ್ನು ಗಮನಿಸಿದಾಗ, ಮೃತದೇಹದ ತಲೆ ಮತ್ತು ಕುತ್ತಿಗೆ ಭಾಗವನ್ನು ಕಾಡು ಪ್ರಾಣಿಗಳು ಕಚ್ಚಿ ತಿಂದಿದ್ದವು. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ, ಹಳ್ಳಿಮೈಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page