Connect with us

bangalore

ದೂರು ನೀಡಿದವರು ಮನೆಗೆ ಬಂದ್ದಿದ್ದು ನಿಜ; ಅವರಿಗೆ ಹಣ ಕೊಟ್ಟು ಪೊಲೀಸ್ ಕಮಿಷನರ್ ಬಳಿ ಕಳುಹಿಸಿದ್ದೆ : ಬಿಎಸ್ ವೈ

Published

on

ಬೆಂಗಳೂರು : ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಲೈಂಗಿಕ ಕಿರುಕುಳದ ಕೇಸ್ ದಾಖಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಮನೆಗೆ ಸಹಾಯ ಕೇಳಿಕೊಂಡು ಬಂದವರಿಗೆ ಸಹಾಯ ಮಾಡಿದ್ದೇ ತಪ್ಪಾಯ್ತು ಅಂತ ಪ್ರಶ್ನೆ ಮಾಡಿದ್ದಾರೆ.

ಕೆಲ ದಿನಗಳಿಂದ ಮನೆಯ ಬಳಿ ಬರುತ್ತಿದ್ದ ಮಹಿಳೆ ಹಾಗೂ ಆಕೆಯ ಮಗಳನ್ನು ಸರಿಯಾಗಿ ಗಮನಿಸಿಲ್ಲ. ಆದ್ರೆ ಆಮೇಲೆ ಏನೋ ಕಷ್ಟ ಇರಬೇಕು ಎಂದು ಮನೆಯೊಳಗೆ ಕರೆದು ವಿಚಾರಿಸಿದೆ. ಆದ್ರೆ ಆಕೆಯ ಸಮಸ್ಯೆ ಏನು ಅನ್ನೋದು ಸರಿಯಾಗಿ ಅರ್ಥ ಆಗದ ಕಾರಣ ನಗರ ಪೊಲೀಸ್ ಆಯುಕ್ತರ ಬಳಿ ಆಕೆಯನ್ನು ಕಳುಹಿಸಿಕೊಟ್ಟಿದೆ. ಹಾಗೇ ಹೋಗುವಾಗ ಸ್ವಲ್ಪ ಹಣದ ಸಹಾಯ ಕೂಡಾ ಮಾಡಿದ್ದೆ ಎಂದು ಹೇಳಿದ್ದಾರೆ.

ಆದ್ರೆ, ಈಗ ಈ ರೀತಿಯ ಕೇಸ್ ದಾಖಲಿಸಿದ್ದು ಆಶ್ಚರ್ಯ ತಂದಿದ್ದು, ಯಾರಿಗೂ ಸಹಾಯ ಮಾಡಬಾರದು ಎಂದು ಎನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾನೂನು ಪ್ರಕಾರ ಯಾವ ಹೋರಾಟ ಮಾಡಬೇಕೋ ಅದನ್ನು ಮಾಡುವುದಾಗಿಯೂ ಈ ಸಮಯದಲ್ಲಿ ಅವರು ಹೇಳಿಕೆ ನೀಡಿದ್ದಾರೆ.

ಗೃಹ ಸಚಿವ ಹೇಳಿಕೆ :
ಇನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ನಿನ್ನೆ ರಾತ್ರಿ ಮಹಿಳೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ದೂರು ಕೊಟ್ಟಿದ್ದಾರೆ. ಪರಿಶೀಲನೆ ಮಾಡಿ ಕೇಸ್ ದಾಖಲಾಗಿದೆ. ತನಿಖೆಯನ್ನು ಪ್ರಾರಂಭ ಮಾಡ್ತಾರೆ. ಕೊಟ್ಟಿರುವ ವಿಚಾರದಲ್ಲಿ ಯಾವುದನ್ನೂ ಹೇಳಲು ಬರುವುದಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ಮಹಿಳೆಯು ಬಳಲುತ್ತಿದ್ದಾರೆ. ಟೈಪ್ ಮಾಡಿ ದೂರು ಕೊಟ್ಟಿದ್ದಾರೆ. ಬರೆದು ಕೊಟ್ಟಿಲ್ಲ. ಹಾಗಾಗಿ ದೂರು ದಾಖಲಿಸಿದ ಮೇಲೆ ತನಿಖೆ ಮಾಡುವವರೆಗೆ ಯಾವುದೇ ವಿಚಾರ ಹೇಳಲು ಆಗದು ಎಂದು ಹೇಳಿದ್ದಾರೆ.

bangalore

ಬೆಂಗಳೂರನ್ನು ಭಾರತದಲ್ಲೇ ಅತ್ಯುತ್ತಮ ಆಹಾರ ನಗರ ಎಂದ ವಿದೇಶಿಗ!

Published

on

ಬೆಂಗಳೂರು : ಅದೇಷ್ಟೋ ಮಂದಿ ಆಹಾರ ಪ್ರೇಮಿಗಳು ಇದ್ದಾರೆ. ಪ್ರವಾಸಿ ತಾಣ ವೀಕ್ಷಿಸುವ ಜತೆಗೆ ಅಲ್ಲಿಯ ಆಹಾರವನ್ನು ಸವಿಯಲೆಂದು ಪ್ರವಾಸ ಹೋಗುತ್ತಾರೆ. ಅದೇ ರೀತಿ ವಿದೇಶಿ ಪ್ರಜೆಯೊಬ್ಬರು ಬೆಂಗಳೂರಿನ ಗರಿಗರಿಯಾದ ದೋಸೆ ಹಾಗೂ ಮೃದುವಾದ ಇಡ್ಲಿಯನ್ನು ಸವಿದು ಬೆಂಗಳೂರು ಭಾರತದ ಅತ್ಯುತ್ತಮ ಆಹಾರ ನಗರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳಿಗೆ ಫುಲ್ ಫಿದಾ ಆಗಿರುವ ವಿದೇಶಿ ಪ್ರಜೆ ತನ್ನ ಅಭಿಪ್ರಾಯವನ್ನು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ವಿದೇಶಿಗನ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.


ಭಾರತದ ವಿವಿಧ ನಗರಗಳು ಸೇರಿದಂತೆ ಪಾಕಿಸ್ತಾನಕ್ಕೂ ತೆರಳಿ ಅಲ್ಲಿನ ಪ್ರವಾಸಿ ತಾಣಗಳು ಹಾಗೂ ಆಹಾರಗಳನ್ನು ಸವಿದಿದ್ದರು. ಹಗ್ (hugh.abroad) ಹೆಸರಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶ್ನೋತ್ತರ ಸರಣಿಯನ್ನು ನಡೆಸಿದ್ದು, ಈ ವೇಳೆ ಬಳಕೆದಾರರೊಬ್ಬರು ಪ್ರತಿಯೊಂದು ದೇಶದಲ್ಲೂ ಅತ್ಯುತ್ತಮವಾದ ಆಹಾರ ನಗರವನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

ಕೇವಲ ಬೆಳಗ್ಗಿನ ಉಪಾಹಾರ ಸಂಸ್ಕೃತಿಯಿಂದಾಗಿ ಭಾರತದ ಅತ್ಯುತ್ತಮ ಆಹಾರ ನಗರ ಬೆಂಗಳೂರು. ಬೆಂಗಳೂರಿನ ಬೆಳಗ್ಗಿನ ಉಪಾಹಾರವಾದ ಇಡ್ಲಿ ಸಾಂಬಾರ್, ಮಸಾಲಾ ದೋಸೆಯನ್ನು ಫಿಲ್ಟರ್ ಕಾಫಿಯೊಂದಿಗೆ ಸವಿದಿದ್ದಾರೆ. ದೋಸೆಗಳು ತುಂಬಾ ಗರಿಗರಿಯಾಗಿವೆ. ಇಡ್ಲಿಯನ್ನು ಬಾಯಿಲ್ಲಿಟ್ಟರೆ ಕರಗುತ್ತದೆ ಎಂದಿದ್ದಾರೆ. ಇನ್ನು ಕರಾಚಿಯನ್ನು ಪಾಕಿಸ್ತಾನದ ಅತ್ಯುತ್ತಮ ಆಹಾರ ನಗರವೆಂದು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: IND vs SA: ರೋಹಿತ್-ಕೊಹ್ಲಿ ಆರ್ಭಟ; 2ನೇ ODI ಪಂದ್ಯಕ್ಕೂ ಮುನ್ನ ಬಿಸಿಸಿಐ ದಿಢೀರ್ ಸಭೆ!

ಈ ವೀಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಒಮ್ಮೆ ಈ ತಿನಿಸುಗಳನ್ನು ಆಸ್ವಾದಿಸಿದರೆ ಮತ್ತೆ ಮತ್ತೆ ನೀವು ಬರುತ್ತೀರಿ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.

Continue Reading

bangalore

ಗಂಡನ ಸೋಲಿನಲ್ಲೂ ಗೆಲುವು ಕಂಡ ರಜಿನಿ; ಮೆಚ್ಚುಗೆ ವ್ಯಕ್ತಪಡಿಸಿದ ಫ್ಯಾನ್ಸ್

Published

on

ಬೆಂಗಳೂರು: ಇತ್ತೀಚಿಗಷ್ಟೆ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಪತಿ ಅರುಣ್‌ ಅಥ್ಲಿಟ್‌. ಅವರು ಬಾಡಿ ಬಿಲ್ಡರ್‌ ಹಾಗೂ ಜಿಮ್‌ ಕೋಚ್‌ ಕೂಡ ಆಗಿದ್ದಾರೆ.


ಇತ್ತೀಚಿಗೆ ನಡೆದ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಇದರಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ರಜಿನಿ ಪತಿಗೆ ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಹೇಳಿ ಮೋಟಿವೇಟ್‌ ಮಾಡಿದ್ದಾರೆ. ಪತಿ ಪಟ್ಟ ಕಷ್ಟವನ್ನು ರಜಿನಿ ಅರ್ಥ ಮಾಡಿಕೊಂಡು ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಜಿನಿ-ಅರುಣ್ ವಿವಾಹವಾಗಿ ಹಲವಾರು ದಿನಗಳೇ ಕಳೆದಿವೆ. ಆದರೆ ಪರಸ್ಪರ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ರಜಿನಿ ಅವರ ಧಾರಾವಾಹಿ ಕೆಲಸಗಳು ಹಾಗೂ ಅರುಣ್‌ ಅವರ ಬಾಡಿ ಬಿಲ್ಡಿಂಗ್‌ ಟ್ರೇನಿಂಗ್‌.

ಅರುಣ್ ಬಾಡಿ ಬಿಲ್ಡಿಂಗ್‌ ಕಾಂಪಿಟೀಷನ್‌ಗೆ ಸಖತ್‌ ಬಾಡಿ ಟ್ರೇನ್ ಮಾಡಿದ್ದರು. ಅವರ ಕೋಚ್‌ ಕೂಡ ಬಾಡಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ ಸ್ಪರ್ಧೆಯಲ್ಲಿ ಅರುಣ್‌ ಅವರಿಗೆ ಗೆಲುವು ಸಿಕ್ಕಿಲ್ಲ ಎಂದು ರಜಿನಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಸೋಲು ಗೆಲುವಿನ ನಡುವೆ ನಮ್ಮ ಪ್ರಯತ್ನ ನಿರಂತರ. ಅರುಣ್‌ಗೆ ವಿಶ್‌ ಮಾಡಿದ ಎಲ್ಲರಿಗೂ ಥ್ಯಾಂಕ್ಸ್‌. ಅವರಿಗೆ ಮೆಡಲ್‌ ಸಿಗದೆ ಇರಬಹುದು. ನಿಮ್ಮ ವಿಶ್ ಮೆಡಲ್‌ಗಿಂತ ಜಾಸ್ತಿ. ಉಪ್ಪು ಖಾರ ಇಲ್ಲದೆ ಊಟ ಮಾಡಿ, ಒಂದು ವರ್ಷ ಶ್ರಮ ಹಾಕಿ ಕೊನೆಗೆ ಬರಿಗೈಯಲ್ಲಿ ನಿಲ್ಲೋದು ಯಾವ ಶತ್ರುವಿಗೂ ಬೇಡ ಎಂದು ರಜಿನಿ ಹೇಳಿದ್ದಾರೆ. ಸೋತರು ಪ್ರಯತ್ನ ಬಿಡಬಾರದು ಎಂದು ರಜಿನಿ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: BBK12: ಗಿಲ್ಲಿ ಮಾತಿನಿಂದ ಅತಿಥಿಗಳಿಗೆ ಕಿರಿಕಿರಿ!

ರಜಿನಿ ಅವರು ಹಂಚಿಕೊಂಡ ವಿಡಿಯೋಗೆ ಅನೇಕರು ಒಳ್ಳೆಯ ಕಮೆಂಟ್‌ ಮಾಡಿದ್ದಾರೆ. ಅರುಣ್‌ ಅವರ ಶ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Continue Reading

bangalore

ಜರ್ಮನಿಯಿಂದ ಬಂದಿದ್ದ ವಿದ್ಯಾರ್ಥಿ ಫ್ಲೆಕ್ಸ್‌ಗೆ ಬಲಿ

Published

on

ನೆಲಮಂಗಲ: ವಿದ್ಯುತ್ ಕಂಬಕ್ಕೆ ಹಾಕಲಾಗಿದ್ದ ಬ್ಯಾನರ್(ಫ್ಲೆಕ್ಸ್) ಚಲಿಸುತ್ತಿದ್ದ ಬೈಕ್ಗೆ ತಾಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಯುವಕ ಸಾವನ್ನಪ್ಪಿರುವ ಘಟನೆ ಶುಕ್ರವಾರ (ನ.21) ನೆಲಮಂಗಲದಲ್ಲಿ ನಡೆದಿದೆ.


ತೇಜಸ್ ಗೌಡ(27) ಮೃತ ಯುವಕ.

ತೇಜಸ್ ಕುಟುಂಬ ನೆಲಮಂಗಲದ ನಗರದಲ್ಲಿ ವಾಸಿಯಾಗಿದ್ದು, ಆತ ಜರ್ಮನಿಯಲ್ಲಿ ಎಂ.ಎಸ್. ವಿದ್ಯಾಭ್ಯಾಸ ಮಾಡುತ್ತಿದ್ದ. ರಜೆಯಿದ್ದ ಕಾರಣ ಮನೆಗೆ ಬಂದಿದ್ದ ತೇಜಸ್ ಮೂರು ದಿನಗಳ ಹಿಂದೆ ರಸ್ತೆಯಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಹಾಕಲಾದ ಬ್ಯಾನರ್ ತಾಗಿದೆ. ಪರಿಣಾಮ ಕೆಳಗೆ ಬಿದ್ದ ತೇಜಸ್ ತೀವ್ರ ಗಾಯಗೊಂಡಿದ್ದ.

ಇದನ್ನೂ ಓದಿ: ಮಹಾರಾಷ್ಟ್ರ: ಕಾರು ಚಾಲಕನಿಗೆ ಹೃದಯಾಘಾತ; ಸರಣಿ ಅಪಘಾತಕ್ಕೆ ನಾಲ್ವರು ಬಲಿ!

ತಕ್ಷಣ ತೇಜಸ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page