Connect with us

LATEST NEWS

ಪ್ರೀತಿಸುತ್ತಿದ್ದವಳನ್ನೇ ಕೊ*ಲೆ ಮಾಡಿದ ಪ್ರಿಯಕರ 6 ತಿಂಗಳ ಬಳಿಕ ಸಿಕ್ಕಿಬಿದ್ದ

Published

on

ಮಂಗಳೂರು/ಗದಗ: ಮದವೆಯಾಗು ಎಂದು ಪೀಡಿಸುತ್ತಿದ್ದ ಪ್ರೇಯಸಿಯನ್ನೆ ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿಟ್ಟಿದ್ದ ಪ್ರಕರಣವನ್ನು ಗದಗ ಪೊಲೀಸರು ಭೇದಿಸಿದ್ದಾರೆ.


ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಸಂಭವಿಸಿದ ಒಂದು ಭೀಕರ ಕೊಲೆ ಪ್ರಕರಣವು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿತ್ತು.

ಈ ಘಟನೆಯಲ್ಲಿ ಸತೀಶ್ ಹಿರೇಮಠ (25) ಎಂಬ ಯುವಕ ತನ್ನ ಪ್ರೇಯಸಿ ಮಧುಶ್ರೀ (23) ಎಂಬ ಯುವತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಹತ್ತಿರದ ಹಳ್ಳದಲ್ಲಿ ಹೂತು ಮುಚ್ಚಿಹಾಕಿದ್ದ. ಈ ಘಟನೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದರೂ, ಆರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಸತೀಶ್ ಮತ್ತು ಮಧುಶ್ರೀ ಒಂದೇ ಗ್ರಾಮದವರಾಗಿದ್ದು, ಐದಾರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ ಮಧುಶ್ರೀ ಕುಟುಂಬಸ್ಥರಿಗೆ ಈ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ. ಹೀಗಾಗಿ ಗದಗದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗಿತ್ತು. ಅದು 2024 ಡಿಸೆಂಬರ್ 16 ರ ರಾತ್ರಿ ಮಧುಶ್ರೀ ಗದಗ ನಗರದ ಅವರ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದಳು. ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿ ಕೊನೆಗೆ 2025 ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಆಗ ಪೊಲೀಸರು ಸತೀಶ್ ಮೇಲೆ ಅನುಮಾನದಿಂದ ವಿಚಾರಣೆ ಆರಂಭ ಮಾಡಿದ್ದು, ನನಗೆ ಏನು ಗೊತ್ತಿಲ್ಲ ಎಂದು ನಾಟಕ ಮಾಡಿದ್ದ.

ಕೇಸಿಗೆ ಟ್ವಸ್ಟ್ ಕೊಟ್ಟಿದ್ದು ಆ ಒಂದು ಮೆಸೇಜ್?
ಆದರೆ ಇಬ್ಬರು ಒಂದೇ ಬೈಕ್ ನಲ್ಲಿ ಹೋಗಿರುವ ಸಿಸಿಟಿವಿ ವಿಡಿಯೋ ಸಹ ಸಿಕ್ಕಿತ್ತು. ಇದರ ಆಧಾರದ ಮೇಲೆ ಪೊಲೀಸರು ಮತ್ತೆ ಸತೀಶ್ ನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಬೈಕ್ ಮೇಲೆ ಇಬ್ಬರು ಹೊಗಿದ್ದು ನಿಜ. ಆದ್ರೆ, ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಹೋಗಿದ್ದೇನೆ. ಅವಳು ಎಲ್ಲಿಗೆ ಹೋಗಿದ್ದಳೆಂದು ಗೊತ್ತಿಲ್ಲ ಎಂದಿದ್ದ. ಆಗ ಪೊಲೀಸರು ಸತೀಶ್​ ನನ್ನು ಬಿಟ್ಟು ಕಳಿಸಿದ್ದರು. ಕಲೆ ದಿನಗಳ ನಂತರ ಸತೀಶ್ ನ ಮೊಬೈಲ್ ಒಂದು‌‌ ಕಂಪನಿ ಮೆಸೇಜ್ ಬಂದಿತ್ತು. ಆಗಲೇ ನಾಪತ್ತೆ ಕೇಸ್​ ಗೆ ಟ್ವಿಸ್ಟ್ ಸಿಕ್ಕಿದ್ದು, ಈ ಮೆಸೇಜ್​ ಜಾಡು ಹಿಡಿದು ಹೋದ ಪೊಲೀಸರಿಗೆ ಸತೀಶನ ನೌಟಂಕಿ ಆಟ ಗೊತ್ತಾಗಿದೆ. ಸತೀಶನ ಮೊಬೈಲ್​ ಗೆ ಬಂದಿದ್ದ ಲೊಕೇಶನ್ ಬೇರೆಯಾಗಿತ್ತು. ಆಗ ಪೊಲೀಸರಿಗೆ ಆರೋಪಿ ಸತೀಶ್‌ ಮೇಲೆ ಅನುಮಾನ ಜಾಸ್ತಿಯಾಗಿದ್ದು, ಮತ್ತೆ ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಅಂದಹಾಗೇ 2024 ಡಿಸೆಂಬರ್ 16 ರಂದು ಪ್ರೇಯಸಿ ಮಧುಶ್ರೀಯನ್ನು ಕರೆದುಕೊಂಡು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದ, ತಮ್ಮ ಜಮೀನಿಗೆ ಹೋಗಿದ್ದ. ಆಗ ಮಧುಶ್ರೀ ಮದುವೆಯಾಗು ಎಂದು ಹಠ ಹಿಡಿದಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಗಲಾಟೆ ವಿಕೋಪಕ್ಕೆ ಹೋಗಿದೆ. ರೊಚ್ಚಿಗೆದ್ದ ಸತೀಶ್ ಮಧುಶ್ರೀಯ ವೇಲ್ ನಿಂದ ಕುತ್ತಿಗೆಗೆ ಬಿಗಿದು, ಕೊಲೆ ಮಾಡಿದ್ದಾನೆ. ನಂತರ ಪಕ್ಕದ ಹಳ್ಳದಲ್ಲಿ ಅವಳ ಶವವನ್ನು ಹೊತು ಹಾಕಿ, ಏನೂ ಗೊತ್ತಿಲ್ಲದ ರೀತಿ ಇದ್ದ.

ಇದನ್ನೂ ಓದಿ: ತಾನೇ ಗಂಡನ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡ ಸೋನಮ್; ಮಂಗಳಸೂತ್ರ ನೀಡಿತ್ತು ಕಿರಾತಕಿಯ ಸುಳಿವು!

ಬಳಿಕ ಮೃತದೇಹ ಹೂತು ಹಾಕಿದ್ದ ಸ್ಥಳಕ್ಕೆ ಆಗಾಗ ಬಂದು ಎಲುಬುಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದ. ಆದ್ರೆ, ಅಂದು ಸ್ವಿಚ್ ಆಫ್ ಆದ ಮೊಬೈಲ್ ಗೆ ಕಂಪನಿಯ ಒಂದು ಮೆಸೇಜ್ ಬಂದಿದ್ದು, ಆರೋಪಿ ಸತೀಶ್ ಹೇಳೋ ಲೊಕೇಶನ್ ಬೇರೆ, ಮೊಬೈಲ್ ಗೆ ಬಂದಿರೋ ಮೆಸೇಜ್ ಲೊಕೇಶನ್ ಬೇರೆಯಾಗಿತ್ತು. ಹೀಗಾಗಿ ಕೇಸ್ ಬೆನ್ನತ್ತಿದ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಮಾರುತಿ, ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಶವವನ್ನು ಹೊತು ಹಾಕಿದ ಜಾಗವನ್ನು ತೋರಿಸಿದ್ದಾನೆ. ಸದ್ಯ ದೇಹದ ಕೆಲವು ಎಲುಬು ಸಿಕ್ಕಿದ್ದು, ಇನ್ನೂ ಅವಳ ರುಂಡ ಸಿಕ್ಕಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಪೊಲೀಸರು ರುಂಡಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ಪೊಲೀಸರು ಮಧುಶ್ರೀ ಶವದ ಅವಶೇಷಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದ್ದು, ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಬಿಡಿಸುವಲ್ಲಿ ಜಾಣತನದ ತನಿಖೆ ಪ್ರದರ್ಶಿಸಿದ್ದಾರೆ. ಸತೀಶ್ ಸಾಕ್ಷ್ಯಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದ್ದರೂ, ಮೊಬೈಲ್ ಸಂದೇಶವೊಂದು ಪ್ರಕರಣದ ಜಾಡು ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರ ಜೊತೆಗೆ, ಸತೀಶ್‌ನ ಸಂಪರ್ಕದ ವಿವರಗಳು ಮತ್ತು ಆತನ ಚಲನವಲನಗಳನ್ನು ಪರಿಶೀಲಿಸಿದ್ದು ಪೊಲೀಸರಿಗೆ ಸಹಾಯಕವಾಯಿತು.

ಆದರೆ ಮದುವೆಯಾಗು ಎಂದಿದ್ದಕ್ಕೆ ಪ್ರೀಯಕರ ಸತೀಶ್ ಪ್ರೇಯಸಿ ಮಧುಶ್ರೀಯನ್ನು ಕೊಲೆ ಮಾಡಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

 

DAKSHINA KANNADA

‘ಎಲ್ಲಾ ಆದ ಮೇಲೆ ಶಾಂತಿಸಭೆ’: ಸಂಸದ ಕೋಟ

Published

on

ಉಡುಪಿ: ಚರ್ಚೆ, ವಾದ-ವಿವಾದ, ಪ್ರಕರಣಗಳು ಆದ ಬಳಿಕ ಶಾಂತಿ ಸಭೆ ಇಷ್ಟು ದಿನಗಳ ನಂತರವಾ.. ಎಂಬ ಚರ್ಚೆ ಸಮಾಜದಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇವತ್ತು ಎಲ್ಲಾ ಶಾಂತಿ ಸಭೆಗಳು, ಪೊಲೀಸ್ ಕ್ರಮಗಳು ಹಾಗೂ ಪೊಲೀಸ್ ಫೋರ್ಸ್‌ಗಳು ಎಲ್ಲವೂ ಕೂಡ ಈ ಸಮಾಜದ ಮುಖ್ಯ ವಾಹಿನಿಯಿಂದ ಬದುಕುತ್ತಿರುವಂತಹ ಹಿಂದೂಗಳ ಮೇಲೆ ಗಧಾ-ಪ್ರಹಾರ ಮಾಡಲು ರೂಪಿಸಿದ್ದಾರೆಯೇ ಎಂಬ ಭಾವನೆ ಮೂಡುತ್ತಿದೆ. ಇಂದು ಯಾವ ರೀತಿಯ ವಾತಾವರಣ ಇದೆ ಎಂದರೆ ಯಾರೇ ಒಬ್ಬ ಕಾರ್ಯಕರ್ತ ಅದು ಬಿಜೆಪಿ ಕಾರ್ಯಕರ್ತನೋ, ಹಿಂದೂತ್ವದ ಬಗ್ಗೆ ಮಾತನಾಡುವ ಸಾಮಾನ್ಯ ಕಾರ್ಯಕರ್ತ ಆಗಿರಬಹುದು, ಅವನ ಬದುಕಿನ ಹಕ್ಕನ್ನೇ ಮೊಟಕುಗೊಳಿಸುವಂತಹ ಪ್ರಯತ್ನಗಳು, ರೌಡಿಶೀಟರ್ ಹಾಕುವಂತಹ ಕೆಲಸಗಳು ನಡೆಯುತ್ತಿವೆ. ಪರಮೇಶ್ವರ್ ಅವರು ತಿಳುವಳಿಕೆ ಇರುವಂತಹ ಮಂತ್ರಿ. ಒಂದು ಸಮಾಜವನ್ನು ಒಡೆಯುವ, ಸಮಾಜದ ಮೇಲೆ ಗಧಾಪ್ರಹಾರ ಮಾಡುವ, ಸಮಾಜದ ಮೇಲೆ ದೌರ್ಜನ್ಯ ಮಾಡುವ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

WATCH VIDEO

Continue Reading

DAKSHINA KANNADA

ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡ್ಲ್‌ ಈಸ್ಟ್- 2025; ತುಳುನಾಡಿನ ಮಹಿಳೆಯರಿಗಾಗಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ

Published

on

ಉಡುಪಿ: ಘೋಷನ್ ಇವೆಂಟ್ಸ್ ಮೀಡಿಯಾ ಮತ್ತು ಪ್ರಿಯಾ ಫ್ಯಾಶನ್ ದುಬೈ ಇದರ ಆಶ್ರಯದಲ್ಲಿ ತುಂಬೆ ಮೆಡಿ ಸಿಟಿ ಅಜ್ಮನ್ ಇದರ ಸಹಯೋಗದಲ್ಲಿ “ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025” ಅಂತಾರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾಗಿದೆ.


ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಘೋಷನ್ ಇವೆಂಟ್ಸ್ ಮೀಡಿಯಾದ ದೆಚಮ್ಮ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ತುಳುನಾಡಿನ ಮಹಿಳೆಯರಿಗೆ ವೇದಿಕೆ‌ ಒದಗಿಸುವ ನಿಟ್ಟಿನಲ್ಲಿ ಈ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. “ಮಿಸ್ ಮಂಗಳೂರು ದಿವಾ” ಸ್ಪರ್ಧೆಯಲ್ಲಿ 18ರಿಂದ 35ವರ್ಷದೊಳಗಿನ ಅವಿವಾಹಿತ ಮಹಿಳೆಯರು ಭಾಗವಹಿಸ ಬಹುದು. ಮಿಸಸ್ ಮಂಗಳೂರು ದಿವಾ ಸ್ಪರ್ಧೆಯಲ್ಲಿ ಎಲ್ಲ ವಯೋಮಿತಿಯ ವಿವಾಹಿತ ಮಹಿಳೆಯರು ಪಾಲ್ಗೊಳ್ಳಬಹುದು ಎಂದರು. ಆಗಸ್ಟ್ ಅಂತ್ಯಕ್ಕೆ ನೋಂದಣಿ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಆ ಬಳಿಕ ಮಂಗಳೂರಿನಲ್ಲಿ ಅಡಿಷನ್ ನಡೆಯಲಿದ್ದು, ಅಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ನವೆಂಬರ್ ತಿಂಗಳು ದುಬೈನಲ್ಲಿ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಫೈನಲ್ ಗೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ವಿಸಾ, ವಿಮಾನ ಟಿಕೆಟ್, ಮೂರು ದಿನಗಳ ವಾಸ್ತವ್ಯವನ್ನು ಒದಗಿಸಲಾಗುವುದು. ಅಲ್ಲದೆ, ಊಟ, ಪ್ರಯಾಣ, ಫೋಟೋ ಶೂಟ್‌, ರ್ಯಾಂಪ್ ವಾಕ್ ತರಬೇತಿ, ಮೇಕಪ್ ಹಾಗೂ ಕಾಸ್ಟ್ಯೂಮ್ ಅನ್ನು ಉಚಿತವಾಗಿ ಆಯೋಜಕರು ಒದಗಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ತಲೆ ಸಿಮಿಯಾ ರೋಗಿಗಳಿಗೆ ನ್ಯೂಟ್ರಿಶಿಯನ್‌ ಬಾರ್‌ ಕೊಡುಗೆ ನೀಡಿದ ಎಂಆರ್‌ಪಿಎಲ್‌

ಘೋಷನ್ ಇವೆಂಟ್ಸ್ ಮೀಡಿಯಾದ ಸಬಿತಾ ಕರ್ಲೋ ಮಾತನಾಡಿ, ಫೈನಲ್ ನಲ್ಲಿ ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಸುತ್ತಿನಲ್ಲಿ ಸಾಂಪ್ರದಾಯಿಕ ವಸ್ತ್ರ ಧರಿಸಿ ಪ್ರದರ್ಶನ ನೀಡಬೇಕು. ಎರಡನೇ ಸುತ್ತಿನಲ್ಲಿ ಫಿಜನ್ ಹಾಗೂ ಮೂರನೇ ಸುತ್ತಿನಲ್ಲಿ ಗೌನ್ ಧರಿಸಿ ವಾಕ್ ಮಾಡಬೇಕು. ಮೂರನೇ ಸುತ್ತಿನ ಬಳಿಕ ಪ್ರಶ್ನಾವಳಿ ಸುತ್ತು ನಡೆಯಲಿದೆ. ಟಾಪ್ ಮೂವರು ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಫ್ಯಾಶನ್ ಮಾಲಕಿ ಪ್ರಿಯಾ ಫೆರ್ನಾಂಡಿಸ್, ಮಿಸ್ಟರ್ ಯುಎಇ ವಿನ್ನರ್ ಗೌತಮ್ ಬಂಗೇರ, ವಿಷ್ಣುವರ್ಧನ್ ಭಟ್ ಇದ್ದರು.

Continue Reading

LATEST NEWS

ಆರ್ ಎಸ್ ಎಸ್ ಕುರಿತು ಯಾರೂ ಲಘುವಾಗಿ ಮಾತನಾಡುವುದು ಬೇಡ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Published

on

ಉಡುಪಿ: ಆರ್ ಎಸ್ ಎಸ್ ಕುರಿತಂತೆ ಯಾರೂ ಕೂಡಾ ಲಘುವಾಗಿ ಮಾತನಾಡುವುದು ಸರಿಯಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಲೋಚನೆ, ರಾಷ್ಟ್ರೀಯತೆ, ರಾಷ್ಟ್ರ ಭಕ್ತಿಯ ಬಗ್ಗೆ ಶಾಖೆಗೆ ಬಂದು ಗಮನಿಸಿ ಬಳಿಕ ಮಾತನಾಡ ಬೇಕು. ಕಾಂಗ್ರೆಸ್‌ ನಾಯಕರು ಆರೆಸ್ಸೆಸ್‌ ಶಾಖೆಗೆ ಬಂದು ವಿಷಯ ತಿಳಿದುಕೊಳ್ಳಲಿ ಎಂದು ಸಂಸದ ಕೊಟ ಶ್ರೀನಿವಾಸ ಪೂಜಾರಿ ಆಹ್ವಾನ ನೀಡಿದ್ದಾರೆ.

ಉಡುಪಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆರ್ ಎಸ್ ಎಸ್ ನಿಷೇಧಿಸುವ ಕುರಿತಂತೆ ದಿನಕ್ಕೊಂದು ಹೇಳಿಕೆ ಕೇಳಿ ಬರುತ್ತಿದೆ. ಜವಾಹರಲಾಲ್‌ ನೆಹರೂ ಅವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಬರುವಂತೆ ಆರ್ ಎಸ್ ಎಸ್ ಗೆ ಆಹ್ವಾನ ನೀಡಿದ್ದರು.

ಇದನ್ನೂ ಓದಿ: ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ದ ಮಸೂದೆ ಮಂಡನೆ ಮಾಡ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇನ್ನು ಅಂಬೇಡ್ಕರ್ ಅವರು ಆರ್ ಎಸ್ ಎಸ್ ಅಸ್ಪೃಶ್ಯತೆ- ಜಾತೀಯತೆ ಇಲ್ಲದ ಸಂಘಟನೆ ಎಂದಿದ್ದರು. ಆರ್ ಎಸ್ ಎಸ್ ನಿಷೇಧಕ್ಕೆ ಸ್ವತಃ ನೆಹರೂ ಅವರೇ ಒಮ್ಮೆ ಪ್ರಯತ್ನ ಮಾಡಿದ್ದರೂ ಪ್ರಯತ್ನ ಕೈಗೂಡದೇ ಇದ್ದಾಗ ನೆಹರೂ ಅವರೇ ಆರೆಸ್ಸೆಸ್‌ ನ್ನು ಸ್ವಾಗತಿಸಿದ್ದರು. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಂದಲೂ ಆರೆಸ್ಸೆಸ್‌ ನಿಷೇಧಿಸುವ ಪ್ರಯತ್ನ ಫಲಿಸಿಲ್ಲ. ರಾಹುಲ್ ಗಾಂಧಿ ಕೂಡಾ ಅದೇ ಮಾತನ್ನ ಆಡಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಅವರಿಂದಲೂ ಸಾಧ್ಯವಾಗದು. ಹಾಗಾಗಿ ಇಂತಹ ಗೊಂದಲಗಳ ಬಗ್ಗೆ ಸಮಯ ವ್ಯರ್ಥ ಮಾಡುವ ಬದಲು ಕಾಂಗ್ರೆಸ್ ಮುಖಂಡರು ತಮ್ಮ ಇಲಾಖೆಗಳ ಅಭಿವೃದ್ಧಿ, ಬಡವರ ಕಲ್ಯಾಣದ ಕಡೆಗೆ ಗಮನ ಹರಿಸಲಿ ಎಂದು ಸಲಹೆ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page