Connect with us

LATEST NEWS

ಭೀಕರ ದೋಣಿ ದುರಂತ;25ಮಂದಿಯ ದಾರುಣ ಸಾವು ..!

Published

on

ಬಾಂಗ್ಲಾದೇಶ:ಎರಡು ದೋಣಿಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಕನಿಷ್ಠ 25 ಜನರು ಮೃತಪಟ್ಟ ದಾರುಣ ಘಟನೆ  ಮಧ್ಯ ಬಾಂಗ್ಲಾದೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಐವರನ್ನು ರಕ್ಷಿಸಲಾಗಿದೆ..  25 ಶವಗಳನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 30 ಪ್ರಯಾಣಿಕರನ್ನು ಹೊತ್ತ  ದೋಣಿ ಮತ್ತು ಶಿಬ್ಚಾರ್ ಪಟ್ಟಣದ ಬಳಿಯ ಪದ್ಮಾ ನದಿಯಲ್ಲಿ ಮರಳು ಸಾಗಿಸುತ್ತಿದ್ದ ಹಡಗಿನ ನಡುವೆ ಘರ್ಷಣೆ ಸಂಭವಿಸಿ, ಈ ದುರಂತ ನಡೆದಿದೆ.ಅಗ್ನಿಶಾಮಕ ಸೇವಾ ಅಧಿಕಾರಿಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ನೂರಾರು ನದಿಗಳು  ಕೂಡಿರುವಂತ ಡೆಲ್ಟಾ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಕಡಲ ಅಪಘಾತಗಳು ಸಾಮಾನ್ಯವಾಗಿದೆ.

ಕಳಪೆ ನಿರ್ವಹಣೆ, ಹಡಗುಕಟ್ಟೆಗಳಲ್ಲಿ ಸಡಿಲ ಸುರಕ್ಷತಾ ಮಾನದಂಡಗಳು ಅನೇಕ ಅಪಘಾತಗಳಿಗೆ ಕಾರಣ ಎಂದು ತಜ್ಞರು ಆರೋಪಿಸಿದ್ದಾರೆ.

BELTHANGADY

ಪುರುಷ ಕಟ್ಟುವ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮಕ್ಕೆ ಅವಮಾನ; ಪ್ರಕರಣ ದಾಖಲು

Published

on

ಬೆಳ್ತಂಗಡಿ : ‘ಪುರುಷ ಕಟ್ಟುವ’ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್‌ (ಸ.ಅ) ಮತ್ತು ಪವಿತ್ರವಾದ ಅಝಾನ್‌ ಅನ್ನು ಅವಹೇಳನ ಮಾಡಿದ ಘಟನೆ ಬೆಳ್ತಂಗಡಿಯ ಪೆರಾಡಿ ಗ್ರಾಮದಲ್ಲಿ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ಮಂದಿ ಆರೋಪಿಗಳ ವಿರುದ್ಧ ಹಾಗೂ ಇದಕ್ಕೆ ಸಹಕರಿಸಿದ ಇತರ 20 ರಿಂದ 30 ಮಂದಿಯ ವಿರುದ್ಧ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ಮನೆ ನಿವಾಸಿ ಮಹಮ್ಮದ್ ರಫೀಕ್ ನೀಡಿರುವ ದೂರಿನಂತೆ ಆರೋಪಿಗಳಾದ ಸಾವ್ಯ ನಿವಾಸಿಗಳಾದ ವಸಂತ, ರಾಜೇಶ್, ಹರೀಶ್, ಪೆರಾಡಿ ನಿವಾಸಿಗಳಾದ ದಯಾನಂದ, ರಂಗನಾಥ ಮೋಹನ್, ಶಮಿತ್, ರವಿ, ರಮೇಶ್ ಕುಲಾಲ್, ಸುರೇಶ್, ಅಶೋಕ ಕುಲಾಲ್, ಧನುಷ್ ಹರದೊಟ್ಟು, ಹರೀಶ್ ಬಂತೊಟ್ಟು, ರಮೇಶ್ ಆರ್.ಕೆ, ಸುರೇಶ್ ಬರೊಟ್ಟು, ಪ್ರಮೋದ್, ಪ್ರಕಾಶ್ ಪೆರಾಡಿ ಮತ್ತು ಇತರ 20 ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇಸ್ಲಾಂ ಧರ್ಮವನ್ನು ಅವಮಾನಿಸುವ ವೀಡಿಯೋ ಹರಿಬಿಟ್ಟ ಬಗ್ಗೆ, ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಇದೀಗ ವೇಣೂರು ಪೊಲೋಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎ.14 ರಂದು ರಾತ್ರಿಯ ವೇಳೆ ಪುರುಷ ಕಟ್ಟುನ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿಕೊಂಡು ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಪವಿತ್ರವಾದ ಆಝಾನ್ ಅನ್ನು ಅವಹೇಳನ ಮಾಡಿ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ವೈಷಮ್ಯದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ವಿಡಿಯೋವನ್ನು ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಮಾಡಿದ್ದ ಬಗ್ಗೆ ಕಲಂ 353(2) ಜೊತೆಗೆ 3(5) ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದೆ.

Continue Reading

LATEST NEWS

ವರದಕ್ಷಿಣೆ ಕಿರುಕುಳ; ನೇಣುಬಿಗಿದುಕೊಂಡು ಮಹಿಳೆ ಆತ್ಮಹ*ತ್ಯೆ

Published

on

ಮಂಗಳೂರು/ಹಾಸನ: ಪತಿ ಮನೆಯವರಿಂದ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಿರುವ ಹಿನ್ನೆಲೆ ನೇಣುಬಿಗಿದುಕೊಂಡು ವಿವಾಹಿತೆ ಮಹಿಳೆ ಆತ್ಮಹ*ತ್ಯೆ ಮಾಡಿಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದಿದೆ.

ರಕ್ಷಿತಾ (21) ನೇಣಿಗೆ ಶರಣಾದ ವಿವಾಹಿತೆ. ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಕಣದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಹಳೇಪಾಳ್ಯ ಗ್ರಾಮದ ರಕ್ಷಿತಾ ಮೂರು ವರ್ಷದ ಹಿಂದೆ ಅದೇ ಗ್ರಾಮದ ಪುನೀತ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ವಿವಾಹದ ಬಳಿಕ ಪತಿ ಮನೆಯವರು ವರದಕ್ಷಿಣೆ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದರು. ಇದರಿಂದ ಮನನೊಂದಿದ್ದ ರಕ್ಷಿತಾ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಉಡುಪಿ: ಹೃದಯಾಘಾತದಿಂದ ಮಹಿಳೆ ಸಾವು

ಆಲೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಮಂಗಳೂರು : ವಕ್ಫ್ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ; ರಸ್ತೆ ಬಂದ್ ಮಾಡದಂತೆ ಹೈಕೋರ್ಟ್ ಆದೆಶ

Published

on

ಮಂಗಳೂರು : ಮುಸ್ಲಿಂ ಸಂಘಟನೆಗಳು ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು (ಏ.18) ಮಂಗಳೂರು ಹೊರವಲಯದ ಅಡ್ಯಾರ್‌ ಕಣ್ಣೂರು ಶಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದೆ. ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡುವಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಆದೇಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ರಸ್ತೆ ಸಂಚಾರ ವಿಚಾರದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದೂ ಹೈಕೋರ್ಟ್ ತಿಳಿಸಿದೆ.

ಪಡೀಲ್‌-ಕಣ್ಣೂರು-ಅಡ್ಯಾರ್‌-ಸಹ್ಯಾದ್ರಿ-ಅರ್ಕುಳ ಭಾಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಅಡ್ಯಾರ್‌ ಕಣ್ಣೂರು ಬಳಿಯ ಷಾ ಗಾರ್ಡನ್‌ ಮೈದಾನದಲ್ಲಿ ಇಂದು (ಎ.18) ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ಉಲಮಾ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದೆ.

“ವಕ್ಫ್‌ ತಿದ್ದುಪಡಿ ವಿಚಾರ ಸುಪ್ರೀಂ ಕೋರ್ಟ್‌ ಪರಿಗಣಿಸುವಾಗ ಪ್ರತಿಭಟನೆ ಸರಿಯಲ್ಲ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್‌ 73 ಬಂದ್‌ ಮಾಡಿ ಪ್ರತಿಭಟನೆ ಮಾಡುವಂತಿಲ್ಲ. ಸರಕಾರ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು” ಎಂದು ಮಂಗಳೂರಿನ ರಾಜೇಶ್ ಅರ್ಕುಳ ಎಂಬುವವರು ನೀಡಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್‌ ಪೀಠ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page