Connect with us

MANGALORE

ವೃಂದಾವನಸ್ಥ ವಿಶ್ವೇಶ ತೀರ್ಥ ಸ್ವಾಮೀಜಿ ಪುಣ್ಯತಿಥಿ ಅಂಗವಾಗಿ ರಕ್ತದಾನ ಶಿಬಿರ

Published

on

ಮಂಗಳೂರು: ವೃಂದಾವನಸ್ಥ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಎರಡನೇ ಪುಣ್ಯತಿಥಿಯ ಅಂಗವಾಗಿ ಶಿವಳ್ಳಿ ಸ್ಪಂದನ ಮಂಗಳೂರು, ಇದರ ವತಿಯಿಂದ ಜ.2ರಂದು ಎರಡನೇ ವರ್ಷದ ಬೃಹತ್ ರಕ್ತದಾನ ಶಿಬಿರ ಕದ್ರಿಯ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು.


ಶಿವಳ್ಳಿ ಸ್ಪಂದನ ದೇರೇಬೈಲು ವಲಯದ ಸಹಭಾಗಿತ್ವದಲ್ಲಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ಪೇಜಾವರ ಶ್ರೀಗಳ ಪುಣ್ಯಸ್ಮರಣೆಗಾಗಿ ಆಯೋಜಿಸಿದ್ದ

ಈ ರಕ್ತದಾನ ಶಿಬಿರವನ್ನು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ‌ ಪ್ರಾಂಶುಪಾಲರಾದ ಹರೀಶ ಶೆಟ್ಟಿ ಉದ್ಘಾಟಿಸಿದರು.
ನಂತರ ನಡೆದ ವಿಶ್ವೇಶ ತೀರ್ಥ ಶ್ರೀಪಾದರ ದ್ವಿತೀಯ ಸಂಸ್ಮರಣಾ ಕಾರ್ಯಕ್ರಮ‌ ಕಾಲೇಜಿನ‌ ಆಡಿಟೋರಿಯಂ‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಯಮಿ ರಮೇಶ ರಾವ್, ಹಿರಿಯ ಜ್ಯೋತಿಷಿ ನವೀನ ಚಂದ್ರ ಭಟ್ ಅತಿಥಿಗಳಾಗಿ ಆಗಮಿಸಿದ್ದರು.

ರೆಡ್‌ಕ್ರಾಸ್‌ನ ಹಿರಿಯ ವೈದ್ಯಾಧಿಕಾರಿ ಡಾ. ಜೆ ಎನ್ ಭಟ್‌ರಿಗೆ ಅವರ ನಿಸ್ವಾರ್ಥ ಸೇವೆಗಾಗಿ ಗೌರವಾಭಿನಂದನೆ ಸಲ್ಲಿಸಲಾಯಿತು.

ನಂತರ ಮಾತನಾಡಿದ ಡಾ ಭಟ್, ರಕ್ತದಾನದ ಮಹತ್ವ ಹಾಗೂ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಎಲ್ಲರಿಗೂ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ನೀಟ್ ಪಿಜಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 103ನೇ ರಾಂಕ್ ಗಳಿಸಿದ ಡಾ. ರಕ್ಷಾ ಅವರನ್ನೂ ಸನ್ಮಾನಿಸಲಾಯಿತು.

ಹೊಸ ವರುಷದ ಈ ಸಂದರ್ಭದಲ್ಲಿ, ಶಿವಳ್ಳಿ ಸ್ಪಂದನದ ವರ್ಣಮಯ ಕ್ಯಾಲೆಂಡರನ್ನೂ ಬಿಡುಗಡೆಗೊಳಿಸಲಾಯಿತು.


ಪ್ರಾಸ್ತಾವಿಕ ಭಾಷ‌ಣ ಮಾಡಿದ ಶಿವಳ್ಳಿ ಸ್ಪಂದನ ತಾಲೂಕು ಕಾರ್ಯದರ್ಶಿ, ಗಣೇಶ ಹೆಬ್ಬಾರ್, ಸ್ವಾಮೀಜಿಯವರ ಸಮಾಜಸೇವೆಯೇ ಈ ರಕ್ತದಾನ ಶಿಬಿರಕ್ಕೆ ಪ್ರೇರಣೆ ಎಂದರು.

ಶಿವಳ್ಳಿ ಸ್ಪಂದನ ಮಂಗಳೂರು‌ ಅಧ್ಯಕ್ಷ ಕೃಷ್ಣ ಭಟ್ ಮಾತನಾಡಿ ಸಂಘಟನೆಯು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು,

ಎರಡು ವರುಷಗಳ ಸಾಧನೆಗೆ ಸದಸ್ಯರನ್ನು ಅಬಿನಂದಿಸಿದರು. ಈ ಕಾರ್ಯಕ್ರಮದ ಆಯೋಜನೆಯ ನೇತೃತ್ವ ವಹಿಸಿದ್ದ ದೇರೇಬೈಲ್ ವಲಯ ಅಧ್ಯಕ್ಷ ಗೋಪಾಲಕೃಷ್ಣ ಎಲ್ಲರನ್ನೂ ಸ್ವಾಗತಿಸಿದರು.

ದೇರೇಬೈಲ್ ವಲಯ ಕಾರ್ಯದರ್ಶಿ ರಘುರಾಮ‌ ರಾವ್ ಧನ್ಯವಾದ‌ ಸಮರ್ಪಿಸಿದರು. ಧನ್ಯಾ ಮತ್ತು ಪ್ರಾಪ್ತಿ ನಿರೂಪಿಸಿದರು.
200 ಅಧಿಕ ಜನರು ರಕ್ತದಾನ ಮಾಡಿದರು.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಕುದುರೆಮುಖ ಅರಣ್ಯವಾಸಿಗಳನ್ನು ಸ್ಥಳಾಂತರ ಮಾಡುವ ಯೋಜನೆ ಇದೆ-ಸಚಿವ ಈಶ್ವರ್ ಖಂಡ್ರೆ

Published

on

ಮಂಗಳೂರು: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು  ಎಲ್ಲ ಕಡೆ ಕಮಾಂಡ್ ಸೆಂಟರ್ ಗಳನ್ನು ಮಾಡಿದ್ದೇವೆ. ಈ ಸೆಂಟರ್ ಗಳು ತತ್ ಕ್ಷಣವೇ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ    ಮಾನವ ಪ್ರಾಣಿ ಸಂಘರ್ಷ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಮಂಗಳೂರಿನಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ನೂತನ ಕಚೇರಿ ಉದ್ಘಾಟಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ ಕುದುರೆಮುಖದ ಅರಣ್ಯವಾಸಿಗಳನ್ನು ಸ್ಥಳಾಂತರ ಮಾಡಲು ಒಂದು ಯೋಜನೆಗಳನ್ನು ರೂಪಿಸಿದ್ದೇವೆ. ಅದನ್ನು ಸಿಎಂ ಗಮನಕ್ಕೆ ತಂದು ಜಾರಿಗೆ ತರಲು ಯೋಚಿಸ್ತೇವೆ.

ಈ ಭಾಗದಲ್ಲಿ ಆನೆಗಳ ಹಾವಳಿ ಬಗ್ಗೆ ಕೂಡಾ ಕ್ರಮ ತೆಗೆದುಕೊಳ್ತೇವೆ. ಎಲಿಫೆಂಟ್ ಟಾಸ್ಕ್ ಪೋರ್ಸ್ ರಚನೆಯಾಗುತ್ತಿದೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ 1926  ಹೆಲ್ಪ್ ಲೈನ್ ಫೋನ್ ಇದೆ. ಇದಕ್ಕೆ ಯಾರೇ ದೂರು ನೀಡಿದರೂ ಸಂಬಂಧಪಟ್ಟವರು  ವಿಭಾಗ ಕ್ರಮ ವಹಿಸ್ತಾರೆ ಎಂದು ಹೇಳಿದರು.

Continue Reading

DAKSHINA KANNADA

ದುರ್ಗಮ ಪ್ರದೇಶಗಳಿಗೆ ಸಂಚಾರಿ ಅರೋಗ್ಯ ವಾಹನ-ಚಾಲನೆ ನೀಡಿದ ಸಚಿವ ದಿನೇಶ್ ಗುಂಡೂರಾವ್

Published

on

ಮಂಗಳೂರು: ದುರ್ಗಮ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಬಾಗಿಲಲ್ಲೇ ಅರೋಗ್ಯ ಸೇವೆಗಳನ್ನು ನೀಡುವ  ಉದ್ದೇಶದಿಂದ ಸ್ಥಾಪಿಸಲಾಗಿರುವ ಸಂಚಾರಿ ಅರೋಗ್ಯ ಘಟಕಗಳಿಗೆ ಅರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ 5 ಹಾಗೂ ಉಡುಪಿ ಜಿಲ್ಲೆಯ 4 ಸಂಚಾರಿ ಅರೋಗ್ಯ ಘಟಕ ವಾಹನಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ  ಮಾತನಾಡಿದ ಅವರು, ರಾಜ್ಯಾಧ್ಯoತ ಒಟ್ಟು 81 ಸಂಚಾರಿ ಅರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಇದು ಸರಕಾರದ ಜನಪರ ಯೋಜನೆಗಳ ಭಾಗವಾಗಿದೆ. ಸಂಪರ್ಕ ರಹಿತ ಮತ್ತು ಗುಡ್ಡ ಗಾಡು ಪ್ರದೇಶಗಳಿಗೆ ಈ ಅರೋಗ್ಯ ಸೇತು ವಾಹನಗಳು ತೆರಳಿ ಅರೋಗ್ಯ ಸೇವೆ ನೀಡಲಿದೆ ಎಂದು ಹೇಳಿದರು.

ಈ ವಾಹನದಲ್ಲಿ ಒಬ್ಬ ವೈದ್ಯರು, ಒಬ್ಬರು ನರ್ಸ್ ಮತ್ತು ಒಬ್ಬ ಲ್ಯಾಬ್ ಟೆಕ್ನೆಷಿಯನ್ ಇರಲಿದ್ದಾರೆ. ಅಗತ್ಯವಿರುವ ಔಷದಿಗಳು, ಸಲಕರಣೆಗಳು, ತುರ್ತು ಅರೋಗ್ಯ ಪರಿಸ್ಥಿತಿಯ ನಿರ್ವಹಣೆಗೆ ಜೀವನಾವಶ್ಯಕ ಔಷಧಿಗಳೊಂಧಿಗೆ ಈ ಅರೋಗ್ಯ ಸೇತು ವಾಹನವನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು. ಸ್ಥಳೀಯರಿಗೆ ಮುಂಗಡವಾಗಿ ತಿಳಿಸಿ ಸಂಚಾರಿ ಅರೋಗ್ಯ ಸೇವೆಗಳನ್ನು ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಈ  ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಜಿಲ್ಲಾ ಪಂಚಾಯತ್ ಸಿ ಇ ಓ ವಿನಾಯಕ್ ನರ್ವಡೆ, ಜಿಲ್ಲಾ ಅರೋಗ್ಯಧಿಕಾರಿ ಡಾ ತಿಮ್ಮಯ್ಯ, ವೆನ್ ಲಾಕ್ ಅಧೀಕ್ಷಕ ಡಾ ಶಿವಪ್ರಕಾಶ್, ಲೇಡಿಘೋಷನ್ ಅಧೀಕ್ಷಕ ಡಾ ದುರ್ಗಾ ಪ್ರಸಾದ್ ಮತ್ತಿತರರು ಇದ್ದರು.

Continue Reading

DAKSHINA KANNADA

ಮಂಗಳೂರು ಕಮಿಷನರ್ ಮತ್ತು ಜಿಲ್ಲಾ ಎಸ್.ಪಿ. ವರ್ಗಾವಣೆಗೆ ಯತ್ನ ಆರೋಪ-ಶಾಸಕ ಕಾಮತ್ ವಿರೋಧ

Published

on

ಮಂಗಳೂರು: ಮಂಗಳೂರಿನ ಪೊಲೀಸ್ ಕಮಿಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ. ಅವರನ್ನು ವರ್ಗಾವಣೆ ಮಾಡಲು ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ ಎಂಬುದಾಗಿ ಕೆಲವು ಸಾಮಾಜಿಕ ಜಾಲತಾಣದಲ್ಲಿ ಊಹಾ ಪೋಹದ ಸುದ್ದಿಗಳು ಹರಿದಾಡುತ್ತಿವೆ. ಒಂದೊಮ್ಮೆ ಈ  ವದಂತಿಗಳು ನಿಜವೇ ಆಗಿದ್ದಲ್ಲಿ ಅದನ್ನು ತಾನು ವಿರೋಧಿಸುತ್ತೇನೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮರಳು ಮಾಫಿಯಾ, ಬಂಡವಾಳ ಶಾಹಿಗಳು ಅಥವಾ ದಂಧೆಕೋರರು ಪೊಲೀಸ್ ಕಮಿಷನರ್ ಮತ್ತು ಎಸ್.ಪಿ. ಅವರ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದಾರೆ. ನನಗೆ ಮತ್ತು ಕಮಿಷನರ್ ಅವರಿಗೆ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಕಮಿಷನರ್ ಮತ್ತು ಎಸ್.ಪಿ ಅವರು ಭ್ರಷ್ಟಾಚಾರ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಡ್ರಗ್ಸ್, ಕಾನೂನು ಸುವ್ಯವಸ್ಥೆ ವಿಷಯಗಳಲ್ಲಿ ಖಡಕ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಿರುವಾಗ ಅವರನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಕಾಮತ್ ತಿಳಿಸಿದರು.

ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಹಜ ಪ್ರಕ್ರಿಯೆ. ಆದರೆ ಅವಧಿ ಪೂರ್ವ ವರ್ಗಾವಣೆ ಮಾಡುವುದು ಸರಿಯಲ್ಲ.  ಸರಕಾರ ಯಾರ ಒತ್ತಡಕ್ಕೆ ಮಣಿಯುತ್ತಿದೆ? ಜೂಜುಕೋರರ, ಅಹಿತಕರ ಘಟನೆ ಮಾಡುವವರ ಅಥವಾ ದಂಧೆಕೋರರ ಒತ್ತಡಕ್ಕೆ ಮಣಿಯುತ್ತಿದೆಯೇ ಎಂದು ಪ್ರಶ್ನಿಸಿದ ಶಾಸಕ ಕಾಮತ್, ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಕಾಂಗ್ರೆಸ್‌ ಸರಕಾರ ಈ ಇಬ್ಬರು ಅಧಿಕಾರಿಗಳನ್ನು ಇಲ್ಲಿ ನಿಯೋಜನೆ ಮಾಡಿತ್ತು. ಆದರೆ ಈಗ ಅವರನ್ನು ವರ್ಗಾವಣೆ ಮಾಡುವುದಾದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರು ಮತ್ತು ಕಾನೂನಿಗೆ ಗೌರವ ಕೊಡದವರೂ ಕಾಂಗ್ರೆಸಿಗರೇ ಎಂದು ಭಾವಿಸ ಬೇಕಾಗುತ್ತದೆ. ಮತ್ತೊಮ್ಮೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಕಾಂಗ್ರೆಸಿಗರೇ ಕಾರಣ ಎಂದರು. ಎಲ್ಲೋ ಹೊರಗೆ ನಿಂತು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಹೇಳುವುದನ್ನು ನಾಯಕರು ಕೇಳುವುದಾದರೆ ಅವರ ಮಾನಸಿಕತೆ ಎಂತಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕೆಂದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page