Connect with us

DAKSHINA KANNADA

ಕರಾವಳಿಗೂ ಕಾಲಿಟ್ಟ ಬ್ಲ್ಯಾಕ್ ಫಂಗಸ್ ;ಉಡುಪಿಯಲ್ಲಿ 7ಕೋವಿಡ್ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ..!

Published

on

ಉಡುಪಿ: ಕೊರೊನಾ ಸೋಂಕಿನ ಜೊತೆಗೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ದೊಡ್ಡ ಆತಂಕ ಸೃಷ್ಟಿ ಮಾಡಿದ್ದು, ಇದೀಗ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲೂ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆಯಾಗಿದ್ದಾರೆ.ಕೋವಿಡ್ ರೋಗಿಗಳಲ್ಲಿ ಏಳು ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಹೊರ ಜಿಲ್ಲೆಗಳಿಂದ ಚಿಕಿತ್ಸೆ ಪಡೆಯಲು ಕೆ.ಎಂ.ಸಿ ಗೆ ದಾಖಲಾಗಿದ್ದ  ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.ಧಾರವಾಡ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹರಿಹರ ಮೂಲದ ರೋಗಿಗಳಲ್ಲಿ  ಬ್ಲ್ಯಾಕ್ ಫಂಗಸ್ ರೋಗ ಇರುವುದು ಪತ್ತೆಯಾಗಿದೆ. ಈಗಾಗ್ಲೇ ಈ ಆರು ಮಂದಿಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು,

ಅನ್ಯ ಚಿಕಿತ್ಸೆಗೆ ದಾಖಲಾದವರಲ್ಲಿ ಸೋಂಕು ಕಂಡು ಬಂದಿದೆ. ಮಧುಮೇಹ  ಕಾಯಿಲೆಯಿಂದ ಬಳಲುತ್ತಿದ್ದ ಕೊರೊನಾ ರೋಗಿಗಳಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಹೇಳಿದ್ದಾರೆ.

DAKSHINA KANNADA

ವಾಮಂಜೂರು ತಿರುವೈಲುಗುತ್ತು “ಸಂಕಪೂಂಜ-ದೇವುಪೂಂಜ” ಜೋಡುಕೆರೆ ಕಂಬಳ ಕೂಟದ ಫಲಿತಾಂಶ ಪ್ರಕಟ

Published

on

ಮಂಗಳೂರು : ವಾಮಂಜೂರು ತಿರುವೈಲುಗುತ್ತು ಸಂಕಪೂಂಜ – ದೇವುಪೂಂಜ ಜೋಡುಕೆರೆ ಕಂಬಳ ಟ್ರಸ್ಟ್‌ನಿಂದ 13ನೇ ವರ್ಷದ ತುಳುನಾಡಿನ ಕಂಬಳ ತಿರುವೈಲೋತ್ಸವಕ್ಕೆ ನಿನ್ನೆ ಮುಂಜಾನೆ (ಶನಿವಾರ) ಚಾಲನೆ ಸಿಕ್ಕಿದ್ದು, ಇಂದು ಮಧ್ಯಾಹ್ನ ಕೊನೆಗೊಂಡಿದೆ.

ಈ ಬಾರಿಯ ಕಂಬಳ ಕೂಟದಲ್ಲಿ 151 ಜೊತೆ ಕೋಣಗಳು ಭಾಗವಹಿಸಿದ್ದವು. ಕೆನೆ ಹಲಗೆ 8 ಜೊತೆ, ಅಡ್ಡ ಹಲಗೆ ಜೊತೆ 6 ಜೊತೆ, ಹಗ್ಗ ಹಿರಿಯ 23 ಜೊತೆ, ನೇಗಿಲು ಹಿರಿಯ 23 ಜೊತೆ, ಹಗ್ಗ ಕಿರಿಯ 26 ಜೊತೆ,  ನೆಗಿಲು ಕಿರಿಯ 65 ಜೊತೆ ಕೋಣಗಳು ಭಾಗವಹಿಸಿದ್ದವು. ಇದೀಗ ತಿರುವೈಲುಗುತ್ತು  “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪ್ರಕಟವಾಗಿದೆ.

ಕನೆ ಹಲಗೆ:

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

 

ವಾಮಂಜೂರು ತಿರುವೈಲು ಗುತ್ತು ನವೀನ್ಚಂದ್ರ ಆಳ್ವ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

 

ಅಡ್ಡ ಹಲಗೆ:

 

ಪ್ರಥಮ: ನಾರಾವಿ ಯುವರಾಜ್ ಜೈನ್ (11.10)

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

 

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (11.98)

ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

 

ಹಗ್ಗ ಹಿರಿಯ:

 

ಪ್ರಥಮ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ (11.18)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

 

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಬಿ” (11.33)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ಹಗ್ಗ ಕಿರಿಯ:

 

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (11.33)

ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

 

ದ್ವಿತೀಯ: ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ (11.75)

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

 

ನೇಗಿಲು ಹಿರಿಯ:

 

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.18)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ದ್ವಿತೀಯ: ಮೂಡಾರ್ ಕೊಂಡಿಬೆಟ್ಟು ಶರಣ್ ಪೂಜಾರಿ (11.33)

ಓಡಿಸಿದವರು: ಆದಿ ಉಡುಪಿ ಜಿತೇಶ್

 

ನೇಗಿಲು ಕಿರಿಯ:

 

ಪ್ರಥಮ: ಪಡೀಲು ಕಬತ್ತಾರು ಗುತ್ತು ದಿನಕರ್ ಜಯರಾಜ್ ಶೆಟ್ಟಿ “ಎ”  (11.18)

ಓಡಿಸಿದವರು: ಬಾರಾಡಿ ನತೀಶ್

 

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಬಿ” (11.39)

ಓಡಿಸಿದವರು: ಸೂರಾಲ್ ಪ್ರದೀಪ್

 

Continue Reading

DAKSHINA KANNADA

ಮಂಗಳೂರು : ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪೊಲೀಸ್ ಚೆಕ್ ಪೋಸ್ಟ್

Published

on

ಮಂಗಳೂರು: ನಗರದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಹೊಸ ಪೊಲೀಸ್ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಉದ್ಘಾಟನೆ ಮಾಡಿದ್ದಾರೆ.

ನಿನ್ನೆ (ಫೆ.16) ಇದರ ಉದ್ಘಾಟನೆ ನೆರವೇರಿದ್ದು, ಮಂಗಳೂರು ನಗರ ಪೊಲೀಸರ ಸಹಯೋಗದೊಂದಿಗೆ ಈ ಚೆಕ್‌ಪೋಸ್ಟ್ ಕಾರ್ಯರಂಭಿಸಿದೆ. ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಈ ಚೆಕ್‌ಪೋಸ್ಟ್ ಹೊಂದಿದೆ. 

ಉತ್ತಮ ತರಬೇತಿ ಪಡೆದ ಸಿಬ್ಬಂದಿ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯೂ ಕಾರ್ಯನಿರತರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Continue Reading

DAKSHINA KANNADA

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ; ಬಂಟ್ವಾಳ ಮೂಲಕ ಆರೋಪಿ ಅರೆಸ್ಟ್

Published

on

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಬಂಟ್ವಾಳ ಮೂಲದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶ ವಿನಯ್ ದೇವರಾಜ್ 5 ವರ್ಷಗಳ ಶಿಕ್ಷೆ ವಿಧಿಸಿ ನಿನ್ನೆ (ಫೆ.15) ತೀರ್ಪು ನೀಡಿದ್ದಾರೆ.

ಅಬ್ದುಲ್ ಅಶ್ರಫ್ (42) ಶಿಕ್ಷೆಗೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ ?

ಆರೋಪಿತು 2024ರ ಆ.11ರಂದು ತನ್ನ ಅಂಗಡಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದದೆ. ಮನೆಯಲ್ಲಿ ನೊಂದು ಕುಳಿತಿದ್ದ ಬಾಲಕಿಯನ್ನು ತಾಯಿ ಪ್ರಶ್ನಿಸಿದಾಗ ನಡೆದ ಘಟನೆಗಳನ್ನು ವಿವರಿಸಿದ್ದಳು. ಘಟನೆಯ ಕುರಿತು ಆ.12ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಸೈ ರತನ್ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವೇಳೆ ನ್ಯಾಯಾಧೀಶರು ಆರೋಪಿ ಅಶ್ರಫ್ ಗೆ ಬಿಎನ್‌ಎಸ್ ಕಲಂ 74ರಡಿ 3 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪೊಕ್ಸೊ ಕಾಯ್ದೆಯ ಕಲಂ 10ರಡಿ 5 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪೊಕ್ಸೊ ಕಲಂ 12ರ ಪ್ರಕಾರ 3 ತಿಂಗಳ ಸಾದಾ ಸಜೆ ಮತ್ತು 10,000 ರೂ.ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ ; ಗಾಂಜಾ ಸೇವನೆ ಆರೋಪ; ಮೂವರು ಆರೋಪಿಗಳು ಪೊಲೀಸರ ಕೈವಶ

ನೊಂದ ಬಾಲಕಿಗೆ 1.ಲ.ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page