Connect with us

LATEST NEWS

ತನ್ನನ್ನು ತಾನೇ ಮದುವೆಯಾಗಲು ಹೊರಟ ಯುವತಿಗೆ ಎದುರಾದ ಸಂಕಷ್ಟ

Published

on

ಗಾಂಧಿನಗರ: ಜೂನ್ 11 ರಂದು ದೇವಸ್ಥಾನದಲ್ಲಿ ತನ್ನನ್ನು ತಾನೇ ಮದುವೆ ಆಗುವುದಾಗಿ ಹೇಳಿರುವ ವಡೋದರಾ ಮೂಲದ ಯುವತಿ ವಿರುದ್ಧ ವಡೋದರಾ ನಗರ ಘಟಕದ ಬಿಜೆಪಿ ಅಧ್ಯಕ್ಷೆ ಸುನಿತಾ ಶುಕ್ಲಾ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.


ಕ್ಷಮಾ ಬಿಂದು (24) ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿರುವ ಯುವತಿ.
ಈ ಬಗ್ಗೆ ಮಾತನಾಡಿರುವ ಸುನಿತಾ ಶುಕ್ಲ ‘ಇಂತಹ ಮದುವೆಗಳು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿದೆ. ಆಕೆ ದೇಗುದಲ್ಲಿ ಮದುವೆ ಆಗುವುದಾದರೆ ನಾವು ಅದಕ್ಕೆ ಖಂಡಿತ ಅನುಮತಿ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ಇನ್ನು ‘ಬಿಂದು ಓರ್ವ ಮಾನಸಿಕ ಅಸ್ವಸ್ಥೆ. ಹೆಣ್ಣು ಹೆಣ್ಣನ್ನೇ ಹಾಗೂ ಗಂಡು ಗಂಡನ್ನೇ ಮದುವೆಯಾಗಬಹುದು ಎಂದು ಹಿಂದು ಸಂಸ್ಕೃತಿಯಲ್ಲಿ ಎಲ್ಲಾದರೂ ಬರೆದಿದೆಯಾ? ಅವಳು ಬೇಕಾದರೆ ಮದುವೆಯಾಗಲಿ.

ಆದರೆ ದೇವಸ್ಥಾನದಲ್ಲಿ ಮದುವೆಯಾಗುವುದಕ್ಕೆ ನಮ್ಮ ಆಕ್ಷೇಪವಿದೆ. ಏಕೆಂದರೆ ಇಂತಹ ಮದುವೆಗಳನ್ನು ಪ್ರಚೋದಿಸಿದರೆ ಹಿಂದು ಧರ್ಮದ ಜನಸಂಖ್ಯೆ ಕ್ಷೀಣಿಸುತ್ತದೆ.

ಧರ್ಮಕ್ಕೆ ವಿರುದ್ಧವಾಗಿ ನಡೆದರೆ ಯಾವುದೇ ಕಾನೂನು ಜಾರಿಯಾಗುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ಇದೀಗ ಕ್ಷಮಾ ಬಿಂದುವಿಗೆ ಸಂಕಷ್ಟ ಎದುರಾಗಿದೆ.

bangalore

ಗೂಗಲ್ ಮ್ಯಾಪ್ ನೋಡಿಕೊಂಡು ಹೋದ ವೈದ್ಯ ಸೇರಿದ್ದು ಸಾವಿನ ಮನೆಗೆ

Published

on

ಮಂಗಳೂರು/ಬೆಂಗಳೂರು: ದಾರಿ ತೋರಿಸುವ ಗೆಳೆಯ ಗೂಗಲ್‌ ಮ್ಯಾಪ್‌ ಎಂದು ಹೇಳುತ್ತಾರೆ. ಆದರೆ, ಅದೇ ಮ್ಯಾಪ್‌ನಲ್ಲಿ ಮಗ್ನನಾಗಿದ್ದ ಕಾರು ಚಾಲಕ ದುರಂತ ಸಾವು ಕಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಸಂಭವಿಸಿದೆ.

ಕಾರು ಚಾಲಕ ಗೂಗಲ್‌ ಮ್ಯಾಪ್‌ ಮಗ್ನನಾಗಿದ್ದು ಶರವೇಗದಲ್ಲಿ ಹೋಗಿ ಸೈಡ್‌ನಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿ ಮೂರು ಪಲ್ಟಿ ಹೊಡೆದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ವೈದ್ಯ ಸ್ಥಳದಲ್ಲೇ ಸಾವಿನ ಮನೆ ಸೇರಿದ್ದಾನೆ.

ಹೈದರಬಾದ್‌ ಮೂಲದ ಅಮರ್ ಪ್ರಸಾದ್, ವೇಣು ಮತ್ತು ಪ್ರವಳಿಕಾ ಅನ್ನೋ ಮೂವರು ಸ್ನೇಹಿತರು ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೋಗಬೇಕು ಎಂದುನಿನ್ನೆ (ಫೆ.6) ಬೆಳಗಿನಜಾವ 2 ಗಂಟೆಗೆ ಹೈದ್ರಾಬಾದ್‌ನಿಂದ ಹೊರಡು, ಬೆಳಗ್ಗೆ 10 ಗಂಟೆ ಹೊತ್ತಿಗೆ ಹೊಸಕೋಟೆ ಬಳಿ ತಲುಪಿದ್ದರು. ದೇವನಹಳ್ಳಿ ಮೂಲಕ ಹೊಸಕೋಟೆಗೆ ಬರುತ್ತಿದ್ದ ಕಾರು, ಕೋಲಾರದ ಹೆದ್ದಾರಿಯಲ್ಲಿ ಯೂಟರ್ನ್ ತೆಗೆಯಲು ಮುಂದಾಗಿದ್ದ ವೇಳೆ ಮ್ಯಾಪ್‌ ನೋಡುತ್ತ ಕಾರು ಚಾಲನೆ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ : ಸುರತ್ಕಲ್ : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಹೊಂಡಕ್ಕೆ ; ದಂಪತಿಗೆ ಗಾಯ

ತಕ್ಣವೇ ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ ಕಾರ್‌ನಲ್ಲಿದ್ದ ವೈದ್ಯೆ ಪ್ರವಳಿಕಾ ಮತ್ತು ವೇಣುನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading

FILM

ದೇಶದ್ರೋಹದ ಆರೋಪ; ಖ್ಯಾತ ನಟಿ ಅರೆಸ್ಟ್

Published

on

ಮಂಗಳೂರು/ಬಾಂಗ್ಲಾ : ಮಾಜಿ ಅಧ್ಯಕ್ಷ ಶೇಕ್ ಮುಜಿಬುರ್ ರೆಹಮಾನ್ ಮನೆಗೆ ಬಾಂಗ್ಲಾದೇಶದಲ್ಲಿ ಗಲಭೆ ಮತ್ತೆ ಭುಗಿಲೆದ್ದ ಹಿನ್ನಲೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಇಡೀ ಬಾಂಗ್ಲಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದ್ದು, ಇದೀಗ ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾ ನಟಿ ಮೆಹರ್ ಅಫ್ರೋಜ್ ಶಾನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ದೇಶದ್ರೋಹದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದ ಕಾರಣ ಭಾನುವಾರ (ಫೆ. 2) ರಾತ್ರಿ ಮೆಹರ್‌ನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರೆಜಾಲ್ ಕರೀಂ ಮಲ್ಲಿಕ್ ಹೇಳಿದ್ದಾರೆ. ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಅವರು ಟೀಕಿಸಿದ್ದರು ಎನ್ನಲಾಗಿದ್ದು, ಈ ವಿಷಯದ ಕುರಿತು ಪ್ರಶ್ನೆ ಮಾಡಲಾಗುತ್ತಿದೆ.

 

ಇದನ್ನೂ ಓದಿ : ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

 

ಮನೆ ದಾಳಿ :

ಮೆಹರ್ ಬಂಧನಕ್ಕೂ ಮೊದಲು ಬಾಂಗ್ಲಾದ ಜಮಲ್​ಪುರದ ಮನೆಯ ಮೇಲೆ ದಾಳಿ ನಡೆಸಿ ಎಲ್ಲಾ ವಸ್ತುಗಳನ್ನು ಹಾಳು ಮಾಡಿದ್ದಾರೆ. ಮೆಹರ್ ಅವರ ಕುಟುಂಬ ಆ ಮನೆಯಲ್ಲಿ ವಾಸವಾಗಿದ್ದು, ಮೆಹರ್ ತಂದೆ ಇಂಜಿನಿಯರ್ ಮೊಹಮದ್ ಅಲಿಗೆ ಸೇರಿದೆ. ಸದ್ಯ ಪೊಲೀಸರು ಈ ವಿಷಯವನ್ನು ಸೂಕ್ಷ್ಮ ರೀತಿಯಲ್ಲಿ ತನಿಖೆ ನಡೆದುತ್ತಿದ್ದಾರೆ.

Continue Reading

DAKSHINA KANNADA

ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

Published

on

ಮಂಗಳೂರು: ತನ್ನ ಪತ್ನಿಯನ್ನು ಕುಡಿದ ಅಮಲಿನಲ್ಲಿ ಪತಿ ಕೊಂದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣದ ಮುಖ್ಯ ಆರೋಪಿ ಪತಿಗೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ನಿನ್ನೆ (ಫೆ.6) ತೀರ್ಪು ನೀಡಿದೆ.

ಸುಳ್ಯದ ತೋಡಿಕಾನ ಅಂಡ್ಯಡ್ಕ ಸಿಆರ್‌ಸಿ ಕ್ವಾಟ್ರರ್ಸ್ ನಿವಾಸಿ ರಾಜ (64) ಶಿಕ್ಷೆಗೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.

ರಾಜ ತನ್ನು ಪತ್ನಿ ಕಮಲಾ (57) ಎಂಬಾಕೆಯನ್ನು ಕೊಲೆಗೈದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ. 2022ರ ಸೆ.4ರಂದು ದಂಪತಿ ರಾಜಾ ಮತ್ತು ಕಮಲಾ ರಬ್ಬರ್ ಮ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ಕೊಯೂರು ಗ್ರಾಮದ ಅಲೆಕ್ಕಿ ಎಂಬಲ್ಲಿನಧರ್ಣಪ್ಪ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇವರಿಗೆ ರಬ್ಬರ್ ತೋಟದ ಶೆಡ್‌ನಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು.

 

ಇದನ್ನೂ ಓದಿ : ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

 

ಪ್ರಸ್ತುತ ಆರೋಪಿಗೆ ನ್ಯಾಯಲಯವು ಜಾವಾವಧಿ ಶಿಕ್ಷೆ ವಿಧಿಸಿ ಕಮಲಾ ಸಾವಿಗೆ ನ್ಯಾಯ ನೀಡಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page