Connect with us

LATEST NEWS

ಉಡುಪಿಯಲ್ಲಿ ಹೆಗಡೆ ಭಾವಚಿತ್ರವಿಟ್ಟು ಬೀಡ ಉಗಿದ ಬಿಜೆಪಿ ಕಾರ್ಯಕರ್ತರು

Published

on

ಉಡುಪಿ: ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ಉಡುಪಿಯ ಅಜ್ಜರಕಾಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡನ ಭಾವಚಿತ್ರಕ್ಕೆ ಉಗಿದು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿರುವ ಎಂ.ಜಿ.ಹೆಗಡೆ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಉಗಿದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಶಕ್ತಿ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಉಡುಪಿಯ ಅಜ್ಜರಕಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಎಂ.ಜಿ. ಹೆಗಡೆಯವರ ವಿರುದ್ಧ ಕಾರ್ಯಕರ್ತರು ಈ ರೀತಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ಪರ ಘೋಷಣೆ ಕೂಗಿದವರ ಪರ ವಾದಿಸಿದ್ದ ಹೆಗಡೆ ಇದನ್ನು ಪ್ರಸಾರ ಮಾಡಿದ್ದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆರೋಪ ಸಾಬೀತಾಗದೆ ಇದ್ರೆ ಮಾಧ್ಯಮದವರ ಮುಖಕ್ಕೆ ಉಗಿಯಿರಿ ಎಂದು ಬಹಿರಂಗವಾಗಿ ಹೇಳಿದ್ದರು. ಮಾಧ್ಯಮವೊಂದರ ಸಂದರ್ಶನ ವೇಳೆ ಈ ಹೇಳಿಕೆ ನೀಡಿದ್ದ ಎಂ.ಜಿ.ಹೆಗಡೆ ಆರೋಪ ಸಾಬೀತು ಪಡಿಸಿ ಎಂದು ಸವಾಲು ಕುಡಾ ಹಾಕಿದ್ದರು. ಹೆಗಡೆಯವರ ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದು ಆರೋಪಿಗಳು ಬಂಧನವಾಗುತ್ತಲೇ ಎಂ.ಜಿ.ಹೆಗಡೆ ಟ್ರೋಲ್ ಆಗಿದ್ದರು. ಇದೀಗ ಉಡುಪಿಯಲ್ಲಿ ಅವರ ಭಾವ ಚಿತ್ರಕ್ಕೆ ಎಲೆ ಅಡಿಕೆ ಜಗಿದು ಉಗಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಬೀಡ ಜಗಿದು ಎಂ.ಜಿ.ಹೆಗಡೆ ಭಾವಚಿತ್ರಕ್ಕೆ ಉಗಿದಿದ್ದಾರೆ.

DAKSHINA KANNADA

ಉಳ್ಳಾಲ: ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ

Published

on

ಉಳ್ಳಾಲದ ಕಡಲ್ಕೊರೆತ ಪೀಡಿತ ಐದು ಪ್ರದೇಶಗಳಲ್ಲಿ ಕಲ್ಲು ಹಾಕುವ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಊರವರು ಹಾಗೂ ನಗರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕಾಮಗಾರಿಗಳ ಪರಿಶೀಲನೆ ನಡೆಸಬೇಕು. ತದನಂತರವೂ ದೂರುಗಳು ಬಂದಲ್ಲಿ ಮೂರನೇ ನಿಯೋಗವನ್ನು ರಚಿಸಿ ಪರಿಶೀಲನೆ ನಡೆಸಿದ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗುವುದು ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ.

ಉಳ್ಳಾಲದ ಕಡಲ್ಕೊರೆತ ಬಾಧಿತ ಕೋಟೆಪುರ, ಕೋಡಿ, ಮೊಗವೀರಪಟ್ನ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು. ಹಿಲೆರಿಯಾನಗರ, ಕೈಕೋ, ಸೋಮೇಶ್ವರ ಬೆಟ್ಟಂಪಾಡಿ, ಕೋಡಿ, ಮೊಗವೀರಪಟ್ನ ಮತ್ತು ಉಚ್ಚಿಲ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ.

ಶಾಶ್ವತ ಪರಿಹಾರ ಕಂಡುಕೊಂಡ ಹಿನ್ನೆಲೆಯಲ್ಲಿ ಕೆಲಕಾಲ ಸಂರಕ್ಷಿತವಾಗಿತ್ತು. ಕಳೆದ ಬಾರಿ ಊರಿನವರ ಸಮ್ಮುಖದಲ್ಲಿ ಬೇಕಾದ ಅನುದಾನದ ರೂಪುರೇಷೆ ತಯಾರಿಸಿ ಸಂಬಂಧಿಸಿದ ಮೀನುಗಾರಿಕಾ ಮತ್ತು ಬಂದರು ಇಲಾಖೆಗಳ ಸಚಿವ ಮಾಂಕಳ್ ವೈದ್ಯ ಹಾಗೂ ಮುಖ್ಯಮಂತ್ರಿಗೆ ಜೊತೆ ಸಭೆ ನಡೆಸಿ ಒಂದು ವರ್ಷದ ಮುಂಚೆಯೇ ಅನುದಾನ ಬಿಡುಗಡೆ ಮಾಡಿ ಟಂಡರ್ ನಡೆಸಿ ವ್ಯವಸ್ಥಿತವಾಗಿ ಕೋಟೆಪುರ, ಮೊಗವೀರಪಟ್ನ, ಸೀಗ್ರೌಂಡ್, ಬಟ್ಟಂಪಾಡಿ, ಉಚ್ಚಿಲ ಐದು ಕಡೆಗಳಲ್ಲಿ ಕೆಲಸ ಆರಂಭಿಸಲಾಗಿದೆ. ಕಾಮಗಾರಿ ಪರಿಶೀಲನೆಗೆ ಊರವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದರು.

ಇದನ್ನೂ ಓದಿ: ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

ಈ ಸಂದರ್ಭ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸ್ವಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಮೊದಲಾದವರಿದ್ದರು.

Continue Reading

DAKSHINA KANNADA

ರಾಜ್ಯ ಕಾಂಗ್ರೆಸ್‌ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ: ವೇದವ್ಯಾಸ ಕಾಮತ್

Published

on

ಮಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ನೇತೃತ್ವದಲ್ಲಿ ಜೂನ್ 23 ರಂದು ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ತನಕ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 94 ಸಿ ಹಕ್ಕು ಪತ್ರಗಳಿಗೆ 9/11 ನೀಡುತ್ತಿಲ್ಲ. ಇ-ಖಾತಾ ಹೆಸರಿನಲ್ಲಿ ಜನಸಾಮಾನ್ಯರಿಗೆ ಸಂಕಷ್ಟವಾಗಿದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡುತ್ತಿಲ್ಲ. ಅರ್ಹ ಬಿಪಿಎಲ್ ಕಾರ್ಡ್ ಗಳ ರದ್ದತಿ ಮತ್ತು ನೂತನ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕರಿಸುತ್ತಿಲ್ಲ. ಮಂಗಳೂರು ಪಾಲಿಕೆಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರಕಾರ ವಿಶೇಷ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಇದೆಲ್ಲವನ್ನೂ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

Continue Reading

DAKSHINA KANNADA

ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

Published

on

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು (ಜೂನ್.21) ಬೆಳಿಗ್ಗೆ 11.30 ಗಂಟೆಗೆ ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಎಂಜಿನಿಯರಿಂಗ್‌, ಯೋಜನೆ, ಕಂದಾಯ, ಲೆಕ್ಕ ಪತ್ರವಿಭಾಗದಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಉಡುಪಿ: ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ..!

ಲೋಕಾಯುಕ್ತ ಪ್ರಭಾರ ಎಸ್ ಪಿ ಕುಮಾರ ಚಂದ್ರ ಅವರ ನೇತೃತ್ವದಲ್ಲಿ ಇಬ್ಬರು ಡಿವೈಎಸ್‌ಪಿ, ನಾಲ್ಕು ಮಂದಿ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page