Connect with us

LATEST NEWS

ಅಡಿಕೆ ಹಾಳೆಯ ಬ್ಯಾಗ್‌-ಕೇವಲ 20 ರೂಪಾಯಿ..!

Published

on

ದಾವಣಗೆರೆ: ಹಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಡಿಕೆ ಮರದ ಹಾಳೆಯಿಂದ ತಯಾರಿಸಿದ ಬ್ಯಾಗ್‌ ಸದ್ಯ ಸುದ್ದಿ ಮಾಡುತ್ತಿದೆ.

ಒಮ್ಮೆ ನೀವು 20 ರೂಪಾಯಿ ಇನ್‌ವೆಸ್ಟ್‌ಮೆಂಟ್‌ ಹಾಕಿದರೆ ಸಾಕು ಆರು ತಿಂಗಳಿಯಿಂದ ಮೂರು ವರ್ಷದ ವರೆಗೆ ನಿಶ್ಚಿಂತೆಯಿಂದ ಇರಬಹುದು.


ದಾವಣಗೆರೆ ಬಿಐಟಿ ಇಂಜಿನೀಯರಿಂಗ್ ಕಾಲೇಜು ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುನಿಲ್.ಎಸ್ ಹಾಗೂ ಮಂಜುನಾಥ. ಎಚ್ ಸಿದ್ಧಪಡಿಸಿದ ಬ್ಯಾಗ್​ಗಳು ಸುದ್ದಿ ಮಾಡುತ್ತಿವೆ.

ಸುನೀಲ್ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದ ನಿವಾಸಿ. ಮಂಜುನಾಥ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಾಜನಹಟ್ಟಿ ಗ್ರಾಮದ ನಿವಾಸಿ. ಇವರಿಬ್ಬರು ಸೇರಿ ಅಡಿಕೆ ಮರದ

ತ್ಯಾಜ್ಯದಿಂದ ಇಂತಹ ಬ್ಯಾಗ್​ಗಳನ್ನು ಸಿದ್ಧಮಾಡಿದ್ದಾರೆ.
ಆಕರ್ಷಕ ಬಣ್ಣದಿಂದ ಕೂಡಿದ ಈ ಚೀಲಗಳನ್ನು ಅಡಿಕೆ ಮರದ ತ್ಯಾಜ್ಯದಿಂದ ತಯಾರಿಸಲಾಗಿದೆ. ನೂರಾರು ರೂಪಾಯಿ ವೆಚ್ಚ ಮಾಡಿ ತಂದ ಚೀಲಗಳಿಗೆ ಸವಾಲು ಎನ್ನುವಂತಿವೆ ಈ ಬ್ಯಾಗ್​ಗಳು. ನಾಲ್ಕು ಮಾದರಿಯಲ್ಲಿ ಈ ಬ್ಯಾಗ್​ಗಳು ಸದ್ಯಕೆ ಸಜ್ಜಾಗಿವೆ.

ಜತೆಗೆ ಈ ಸುಂದರ ಬ್ಯಾಗ್​ಗಳ ಬೆಲೆ ಕೇವಲ 20 ರೂಪಾಯಿ ಮಾತ್ರ. ರೈತರು ಅಡಿಕೆ ಮರದ ತ್ಯಾಜ್ಯಗಳನ್ನು ಸುಮ್ಮನೆ ಸುಟ್ಟು ಹಾಕುತ್ತಾರೆ.

ಇದನ್ನು ಬಳಸಿಕೊಂಡು ಈ ರೀತಿಯಾದ ಬ್ಯಾಗ್ ಮಾಡಿದ್ದು, ಪ್ಲಾಸ್ಟಿಕ್​ಗೆ ಸವಾಲ್ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಪರ್ಯಾಯ ಏನು ಎಂಬುವುದಕ್ಕೆ ಉತ್ತರವಾಗಿದೆ ಎಂದು ಇಂಜಿನೀಯರಿಂಗ್ ವಿದ್ಯಾರ್ಥಿ ಸುನೀಲ್. ಎಸ್ ತಿಳಿಸಿದ್ದಾರೆ.


ಈ ಬ್ಯಾಗ್ ಆರು ತಿಂಗಳಿಂದ ಮೂರು ವರ್ಷದವರೆಗೆ ತರಕಾರಿ ಹಾಕಲು, ಸಣ್ಣ ಪುಟ್ಟ ಸಂತೆಗಳಿಗೆ ಹೋಗುವಾಗ ಬಳಸಬಹುದು. ಮೇಲಾಗಿ ಇದನ್ನು ನೀರಿನಲ್ಲಿ ಅದ್ದಿದರು ಸಹ ಹಾಳಾಗದಂತೆ ಕೆಮಿಕಲ್ ಬಳಸಲಾಗಿದೆ.

ಒಂದು ಬ್ಯಾಗ್ ಸಿದ್ಧ ಪಡಿಸಲು 20 ರೂಪಾಯಿ ಮಾತ್ರ ಎಂಬುವುದೇ ವಿಶೇಷ. ಜನಸಾಮಾನ್ಯರ ಕೈಗೆ ತಲುಪಬೇಕಾದರೆ ಅಲ್ಲಿ ದರ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ.
ಈ ಬ್ಯಾಗ್​ಗಳನ್ನು ಗುಜರಾತ್​ನ ದೇಶಿಕೌಶಲ್ಯ ಕಚೇರಿಗೆ ಕಳುಹಿಸಲಾಗಿದೆ. ಇವರಿಂದಲೇ ಇನ್ನಷ್ಟು ಬೇಡಿಕೆ ಬರುವ ಸಾಧ್ಯತೆಗಳಿವೆ.

ಮೇಲಾಗಿ ಇದನ್ನು ಇಷ್ಟರಲ್ಲಿಯೇ ಪ್ರಧಾನಿ ನರೇಂದ್ರ ಮೋದಿಗೂ ಕಳುಹಿಸಲು ಸಹ ನಿರ್ಧರಿಸಲಾಗಿದೆ. ಅಲ್ಲದೆ ದಾವಣಗೆರೆ ಪ್ರತಿಷ್ಠಿತ ಬಿಐಇಟಿ ಇಂಜಿನೀಯರಿಂಗ್ ಕಾಲೇಜ್​ನ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚಲೇಬೇಕು.
ಹಳ್ಳಿ ಹುಡುಗರು ಅಡಿಕೆ ತೋಟದಲ್ಲಿ ಸುತ್ತಾಡಿ ಕಸದಿಂದ ರಸ ಎಂಬ ಕಲ್ಪನೆಯಲ್ಲಿ ಸಜ್ಜು ಮಾಡಿದ ಬ್ಯಾಗ್​ಗಳು ಜನರ ಗಮನ ಸೆಳೆದಿವೆ.

ಪ್ಲಾಸ್ಟಿಕ್ ನಿಷೇಧ ಮಾಡಿ ಎಂದು ಮಾತ್ರ ಹೇಳುತ್ತಾರೆ. ಆದರೆ ಈ ಯುವಕರು ಅದಕ್ಕೆ ಪಾರ್ಯಾಯ ವ್ಯವಸ್ಥೆ ಕೂಡಾ ಕಂಡು ಕೊಂಡಿದ್ದಾರೆ.

ಮೇಲಾಗಿ ಪ್ಲಾಸ್ಟಿಕ್ ಬಳಸಿ ಬಿಸಾಕಿದರೆ ಇದು ಕರಗಲ್ಲ.

ಆದರೆ ಈ ಅಡಿಕೆ ಬ್ಯಾಗ್ ಮಾತ್ರ ಭೂಮಿಗೆ ಹಾಕಿದರೆ ಗೊಬ್ಬರ ಕೂಡಾ ಆಗುತ್ತದೆ ಎಂಬುವುದು ಒಂದು ರೀತಿ ಮಹತ್ವದ ವಿಚಾರ ಅಂದರೆ ತಪ್ಪಾಗಲಿಕ್ಕಿಲ್ಲ.

DAKSHINA KANNADA

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

Published

on

ಸುಬ್ರಹ್ಮಣ್ಯ: ಬಹುಭಾಷಾ ನಟಿ ನಯನ ತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆವ ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗಿಯಾದರು.

ಪತಿ ವಿಘ್ನೇಶ್‌ ಶಿವನ್ ಜೊತೆ ಆಗಮಿಸಿದ ನಯನ್ ತಾರಾ ದಂಪತಿಗೆ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಉಪಸ್ಥಿತಿಯಲ್ಲಿ ಸಮಿತಿ ಪ್ರಮುಖರು ಸೇರಿ ಗೌರವ ಸಲ್ಲಿಸಿದರು.

 

Continue Reading

BIG BOSS

BBK12: ಟಾಸ್ಕ್‌ನಲ್ಲಿ ಸೋತು ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದ ಗಿಲ್ಲಿ!?

Published

on

BBK12: ಬಿಗ್‌ ಬಾಸ್‌ ಸೀಸನ್ 12ರಲ್ಲಿ ಗಿಲ್ಲಿ ಬೆಸ್ಟ್ ಎಂಟರ್‌ಟೈನರ್ ಅನ್ನೊದರಲ್ಲಿ ಎರಡು ಮಾತಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಬಂದಾಗ ಎಲ್ಲೋ ಒಂದು ಕಡೆ ಎಡವಿ ಬೀಳುತ್ತಿರುತ್ತಾರೆ. ಅದು ಈ ವಾರದ ಟಾಸ್ಕ್‌ನಲ್ಲಿಯೂ ರೀಪಿಟ್ ಆಗಿದೆ. ಈ ಬಾರಿ ಗಿಲ್ಲಿ ಟಾಸ್ಕ್‌ನಲ್ಲಿ ಸೋತಿರುವ ಕಾರಣ ಇಡೀ ತಂಡನೇ ಬೆಲೆ ತೆರಬೇಕಿದೆ.

ಹೌದು, ಬಿಗ್ ಬಾಸ್‌ನಲ್ಲಿ ಈ ವಾರ ಮಾಳು ಕ್ಯಾಪ್ಟನ್ ಆಗಿದ್ದು, ಟಾಸ್ಕ್‌ಗಳ ಅಬ್ಬರ ಜೋರಾಗಿದೆ. ಮನೆಯಲ್ಲಿ ನಾಮಿನೇಟ್ ಟೀಮ್ ಹಾಗೂ ಸೇಫ್‌ ಟೀಮ್ ಎಂಬ ಎರಡು ಗುಂಪುಗಳಾಗಿದ್ದು, ಟಾಸ್ಕ್‌ನಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ಆದರೆ ಸೇಫ್ ಟೀಮ್‌ ಸೋತು ಹೋಗಿದೆ. ಇದಕ್ಕೆ ಕಾರಣ ಗಿಲ್ಲಿ ಮಾಡಿಕೊಂಡಿರುವ ಎಡವಟ್ಟು. ಈ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: BBK12: ‘ನಾಮಿನೇಟೆಡ್’ ತಂಡಕ್ಕೆ ಹೊಸ ಚಾಲೆಂಜ್ ನೀಡಿದ ಬಿಗ್ ಬಾಸ್; ರಾಶಿಕಾ ವಿರುದ್ದ ತಿರುಗಿಬಿದ್ದ ರಕ್ಷಿತಾ!

ಮೊದಲು ತಂಡದ ಪರವಾಗಿ ನಾನೇ ಆಡೋಕೆ ಹೊಗ್ತೀನಿ ಅಂತ ಮುಂದೆ ಹೋಗಿದ್ದಾರೆ. ಆದರೆ ಆಟದ ಮಧ್ಯದಲ್ಲಿ ಎಡವಟ್ಟು ಮಾಡಿಕೊಂಡು ಸೋತು ಹೋಗಿದ್ದಾರೆ. ಈ ಬಗ್ಗೆ ಗಿಲ್ಲಿ ‘ನಾನು ಹೋದ ಟೀಮ್ ಸೋಲುತ್ತೆ ಅಂತ ಎಲ್ಲರೂ ಹೇಳ್ತಿದ್ರು, ನನಗೂ ಈಗ ನಿಜ ಅನಿಸ್ತಿದೆ. ಎಷ್ಟು ಸ್ಟಾಂಗ್ ಇದ್ರೂ ಸೋಲುತ್ತಿದ್ದೇವೆ ಅಂದ್ರೆ ನನ್ನಲ್ಲೇ ಏನೋ ಸಮಸ್ಯೆ ಇರಬೇಕೆಂದು’ ತಂಡದ ಜೊತೆ ತಮಾಷೆಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಗಿಲ್ಲಿಗೆ ನಾಮಿನೇಟ್ ಆಗುವ ಆತಂಕ ಎದುರಾಗಿದೆ.

Continue Reading

FILM

ಕುಟುಂಬ ಸಮೇತರಾಗಿ ಕಾಪು ಕ್ಷೇತ್ರಕ್ಕೆ ನಟಿ ಶ್ರುತಿ ಭೇಟಿ

Published

on

ಕಾಪು : ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರುತಿ ಕುಟುಂಬ ಸಮೇತರಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ದ ದೇಗುಲಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.

ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಬಳಿಕ ಮಾತನಾಡಿದ ನಟಿ, ನಾನು ಇಲ್ಲಿನ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುವುದಿತ್ತು. ಜೊತೆಗೆ ಇಲ್ಲಿನ ಕಾಪು ಮಾರಿಯಮ್ಮ ದೇವಸ್ಥಾನದ ಬಗ್ಗೆ ಕೇಳಿದ್ದೆ. ದೇಗುಲ ಬಹಳ ಸುಂದರವಾಗಿ ಮೂಡಿ ಬಂದಿದೆ. ಕರಾವಳಿ ಭಾಗಕ್ಕೆ ಭೇಟಿ ನೀಡುವ ಯಾತ್ರಿಗಳು, ಪ್ರವಾಸಿಗರು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಿ ಎಂದರು.

ಇದನ್ನೂ ಓದಿ : ರಿಲೀಸ್ ಗೆ ಮೊದಲೇ ‘ಕಾಂತಾ’ ವಿರುದ್ಧ ದೂರು! ಸಂಕಷ್ಟದಲ್ಲಿ ನಿರ್ಮಾಪಕ ದಗ್ಗುಬಾಟಿ

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page