Connect with us

DAKSHINA KANNADA

ಬಿಲ್ಲವ ಈಡಿಗ, ನಾಮಧಾರಿ ಸಮುದಾಯದ ಐತಿಹಾಸಿಕ ಪಾದಯಾತ್ರೆಗೆ ಮಂಗ್ಳೂರಲ್ಲಿ ಚಾಲನೆ

Published

on

ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ವಿವಿಧ 10 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲಬುರಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ।ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಐತಿಹಾಸಿಕ ಪಾದಯಾತ್ರೆ’ಗೆ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ಚಾಲನೆ ನೀಡಲಾಯಿತು.


ಕುದ್ರೋಳಿ ಕ್ಷೇತ್ರದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ನಡೆಯುವ ಈ 41 ದಿನಗಳ 658 ಕಿಲೋ ಮೀಟರ್ ಹಾದಿಯ ಪಾದಯಾತ್ರೆಗೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ‌ ಗುರುಗಳ ಚಿತ್ರಕ್ಕೆ ಹೂ ಹಾರ ಹಾಕಿ ದೀಪ ಬೆಳಗಿಸಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿ ಶುಭ ಹಾರೈಸಿದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಶ್ರೀ ವಿಶುದಾನಂದಾ, ಶ್ರೀ ಸಂಗಮಾನಂದ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ದೊಡ್ಡಬಳ್ಳಾಪುರ ಶ್ರೀ ದೇಸಿ ಕೇಂದ್ರದ ಶ್ರೀ ನಿಶ್ಚಲ ನಿರಂಜನ ಸ್ವಾಮೀಜಿ, ಸಿಗಂದೂರು ಮಠದ ಧರ್ಮದರ್ಶಿ ರಾಮಪ್ಪ ಅಜ್ಜ, ಶಾಸಕ ಹರೀಶ್ ಕುಮಾರ್,
ತೆಲಂಗಾಣದ ಅಬಕಾರಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಶ್ರೀನಿವಾಸ ಗೌಡ್, ಚಲನಚಿತ್ರ ನಟ ಸುಮನ್ ತಳ್ವಾರ್, ಬಿಲ್ಲವ ಮುಖಂಡರಾದ ರಾಜಶೇಖರ ಕೋಟ್ಯಾನ್, ನಿತಿನ್ ಗುತ್ತಿಗೆ ದಾರ,

ಬಾಲರಾಜ್ ಗುತ್ತಿಗೆದಾರ, ಎಚ್.ಆರ್.ಶ್ರೀನಾಥ್ ,ಅರ್ಚನಾ ಜೈಸ್ವಾಲ್, ಎಚ್.ಎಸ್.ಸಾಯಿರಾಮ್ , ಪದ್ಮರಾಜ್, ಪುರುಷೋತ್ತಮ ಚಿತ್ರಾಪುರ, ವಿಶುಕುಮಾರ್, ಅನಿಲ್ ಕುಮಾರ್, ಸತ್ಯಜಿತ್ ಸುರತ್ಕಲ್, ಪೀತಾಂಬರ ಹೇರಾಜೆ, ಮಂಜೇ ಗೌಡ, ಪಾದಯಾತ್ರೆ ಸಮಿತಿಯ ಅಧ್ಯಕ್ಷ ಜಿತೇಂದ್ರ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಸನಿಲ್,

ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಪ್ರೇಮನಾಥ್, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸತೀಶ್ ಕೆದಿಂಜ, ಬೆಳ್ತಂಗಡಿ ತಾಲೂಕು ಪಾದಯಾತ್ರೆ ಸಮಿತಿಯ ಅಧ್ಯಕ್ಷ ಚಿದಾನಂದ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

ಮಂಗಳೂರಿನಿಂದ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲಪುವ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಭಾಗವಹಿಸಲಿದ್ದಾರೆ.

ಮೊದಲ ದಿನ ಕುಳಾಯಿಯಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಬೆಳಗ್ಗೆ ಕುಳಾಯಿಯಿಂದ ಆರಂಭಗೊಳ್ಳುವ ಪಾದಯಾತ್ರೆ ಸಂಜೆ ಹೆಜಮಾಡಿ ತಲುಪಲಿದೆ.

ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಇದು ಸಮುದಾಯದ ಹಿತಕ್ಕಾಗಿ, ಹತ್ತು ಅವಶ್ಯಕ ಬೇಡಿಕೆಗಳ ಈಡೇರಿಕೆಗಾಗಿ ನಡೆಯುವ ಹೋರಾಟ. ನಮ್ಮ ಬೇಡಿಕೆಗಳಲ್ಲಿ ಯಾವುದೇ ಒಂದನ್ನು ಸರಕಾರ ಪರಿಗಣಿಸದೆ ಇದ್ದರೂ ನಮ್ಮ ಹೋರಾಟ ನಿಲ್ಲದು.

ಸರಕಾರ ಈಗ ಆರಂಭಿಸಲುದ್ದೇಶಿಸಿರುವ ನಿಗಮದ ವಿವರ ನೀಡಿಲ್ಲ. ಈ ಹಿಂದೆ ಇದೇ ಸರಕಾರ ನಮ್ಮ ಸಮುದಾಯಕ್ಕೆ ಕೋಶ ಮಾಡಿ ನಮಗೆ ಮೋಸ ಮಾಡಿದೆ. ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಸ್ತ ಸಮುದಾಯದ ಹಿತಾಸಕ್ತಿಯ ವಿರುದ್ಧವಾಗಿ ಸರಕಾರದ ನಿಗಮ ಕಾರ್ಯ ನಿರ್ವಹಿಸಿದರೆ ಆ ನಿಗಮವನ್ನು ಬಂದ್ ಮಾಡಲು ಹೋರಾಟ ನಡೆಯಲಿದೆ ಎಚ್ಚರಿಸಿದರು.

ರಾಜಕೀಯ ಕ್ಕಾಗಿ 21 ಬಿಲ್ಲವರ ಹತ್ಯೆಯಾಗಿದೆ. ಈ ರೀತಿ ನಮ್ಮ ಸಮುದಾಯ ದವರು ಬಲಿಯಾಗಬಾರದು. ನಮ್ಮ ಹೋರಾ ಟ ಸಮುದಾಯದ ಹಿತಾಸಕ್ತಿ ಗಳ ರಕ್ಷಣೆ ಗಾಗಿ ಎಂದು ಹೇಳಿದರು.

ಜನಾರ್ದನ ಪೂಜಾರಿ ಮಾತನಾಡಿ, ಈ ಪಾದಯಾತ್ರೆ ವ್ಯವಸ್ಥೆ ಕುರಿತಂತೆ ನನಗೆ ಬಹಳಷ್ಟು ಸಂತೋಷವಾಗಿದೆ. ಅದಕ್ಕಾಗಿ ಸಮಾಜದ ಎಲ್ಲಾ ಬಾಂಧವರಿಗೆ ವಂದನೆಗಳು. ಪರಮಾತ್ಮ ಒಳ್ಳೆಯದನ್ನು ಮಾಡಲಿ. ಹೊಸ ವರ್ಷದ ಶುಭಾಶಯಗಳು ಎಂದರು.

DAKSHINA KANNADA

ಕಲ್ಲರ್ಪೆಯಲ್ಲಿ ಮತ್ತೊಂದು ಅಪಘಾತ; ಕಾರು ಬೈಕ್ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಗಂಭೀರ

Published

on

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಕಾರು ಬೈಕ್ ಮುಖಾಮುಖಿ ಡಿಕ್ಕಿಯೂ ಆ ಭಾಗದಲ್ಲಿನ ರಸ್ತೆ ಸುರಕ್ಷ ತಾ ಕ್ರಮಗಳ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯೂ ಇದೇ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾಗಿತ್ತು. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಲರ್ಪೆ ವಲಯವು ಅಪಘಾತಗಳ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

Continue Reading

DAKSHINA KANNADA

ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸಮಗ್ರ ತನಿಖೆ ನಡೆಸುವಂತೆ ಶಾಸಕ ಹರೀಶ್‌ ಪೂಂಜಾ ಒತ್ತಾಯ

Published

on

ಬೆಳ್ತಂಗಡಿ: ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆಳ್ತಂಗಡಿಯ ವಿದ್ಯಾಥಿಧನಿ ಆಕಾಂಕ್ಷ ಮೃತದೇಹ ಇಂದು ಬೆಳಗ್ಗೆ ಆಕೆಯ ಬೊಳಿಯಾರ್ ಮನೆಗೆ ತಲುಪಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

 

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸ ಬೇಕು. ಆಕಾಂಕ್ಷಳ ಸಾವಿಗೆ ನ್ಯಾಯ ಸಿಗ ಬೇಕು. ಕರ್ನಾಟಕದ ಗೃಹ ಸಚಿವರಿಗೆ ಆಗ್ರಹ ಮಾಡ್ತೇನೆ ಎಂದರು. ಪ್ರಕರಣದ ಸಮಗ್ರ ತನಿಖೆ ನಡೆಸಿ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಪತ್ತೆ ಮಾಡುವಂತೆ ಕರ್ನಾಟಕ ಸರಕಾರವು ಪಂಜಾಬ್ ಸರಕಾರವನ್ನು ಆಗ್ರಹಿಸ ಬೇಕೆಂದು ಒತ್ತಾಯಿಸಿದರು.

 

Continue Reading

DAKSHINA KANNADA

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ರಿಕ್ಷಾ

Published

on

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ರಿಕ್ಷಾ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿ ರಾತ್ರಿ 10.30ರ ವೇಳೆಗೆ ಪರ್ಪುಂಜ ಭಾಗದಿಂದ ಆಗಮಿಸಿದ ರಿಕ್ಷಾ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪಲ್ಟಿಯಾದ ರಿಕ್ಷಾ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿ ಬಿದ್ದಿದೆ.

ಇದನ್ನೂ ಓದಿ: ಕಂಡೆಕ್ಟರ್ ಜೊತೆಗೂಡಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ತಳ್ಳಿದ ಮಹಿಳೆಯರು

ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ವಲ್ಪವಾಲಿದೆ. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page