Connect with us

bangalore

ಬೆಂಗಳೂರು: ಬೈಕ್​ಗೆ ಟಿಪ್ಪರ್ ಡಿಕ್ಕಿ, ತಾಯಿ-ಮಗು ದಾರುಣ ಸಾವು

Published

on

ಬೆಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಡಿಕ್ಕಿ ಹೊಡೆದು ತಾಯಿ-ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಹೊರವರ್ತುಲ ರಸ್ತೆ ಬಳಿ ನಡೆದಿದೆ.

ಕೆ.ಆರ್‌‌.ಪುರ‌ ನಿವಾಸಿಯಾಗಿರುವ ಶಿವಕುಮಾರ್ ತಮ್ಮನಿಗಾಗಿ ನೋಡಿದ್ದ ಹುಡುಗಿಯನ್ನು ಗೊತ್ತುಪಡಿಸಲು ಕುಟುಂಬದ ಜೊತೆ ಬೈಕ್​ನಲ್ಲಿ ಇಂದು ಬೆಳಗ್ಗೆ ಧರ್ಮಪುರಿಗೆ ಹೊರಟಿದ್ದರು.

ಈ ವೇಳೆ ಮಾರತ್​ ಹಳ್ಳಿ ಹೊರವರ್ತುಲ ರಸ್ತೆ ಬಳಿ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಶಿವಕುಮಾರ್ ಎಡಭಾಗದಲ್ಲಿ ಬಿದ್ದಿದ್ದಾರೆ.

ಹಿಂಬದಿ ಸವಾರರಾಗಿದ್ದ ಪತ್ನಿ ಶ್ರೀದೇವಿ ಹಾಗೂ ಒಂದು ವರ್ಷದ ಗಂಡು ಮಗು ದೀಕ್ಷಿತ್ ರಸ್ತೆ ಬಲಭಾಗದಲ್ಲಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅಪಘಾತದ ಬಳಿಕ ಟಿಪ್ಪರ್​ ಚಾಲಕ ಎಸ್ಕೇಪ್ ಆಗಿದ್ದಾನೆ.

ಶಿವಕುಮಾರ್​ ತೀವ್ರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಅವರ ಮೊಬೈಲ್​ ಸಹ ಕಳ್ಳತನವಾಗಿದೆ.ಶಿವಕುಮಾರ್ ಮೂಲತಃ ತಮಿಳುನಾಡಿನ ಧರ್ಮಪುರಿ ಮೂಲದವರಾಗಿದ್ದಾರೆ‌.‌

ಟಿಪ್ಪರ್ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಬೈಕ್​ಗೆ ಗುದ್ದಿದ್ದಾನೆ ಎನ್ನಲಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ ಶಿವಕುಮಾರ್​ ಅವರ ಪತ್ನಿ ಮತ್ತು ಮಗುವಿನ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆಗ ಕಾರಣರಾದ ಟಿಪ್ಪರ್ ಚಾಲಕ ನಾಪತ್ತೆಯಾಗಿದ್ದು, ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.

bangalore

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಜೋಸೈಮನ್ ಇನ್ನಿಲ್ಲ

Published

on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಜೋಸೈಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.


ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಜೋ ಸೈಮನ್ ಸಭೆಯ ಮಧ್ಯೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಮೂಲತಃ ಮಂಡ್ಯದವರಾದ ಜೋಸೈಮನ್ ಚಿತ್ರರಂಗದಲ್ಲಿ ಮೇಕ್ ಅಪ್ ಬಾಯ್ ಆಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ನಿರ್ದೇಶಕರಾಗಿ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಪುಟ್ಟ ಕಂದಮ್ಮ: ದೇಶದ ಅತಿಕಿರಿಯ ಅಂಗಾಂಗ ದಾನಿ ಆಲಿನ್ ಶೆರಿನ್

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ ಸಾಹಸಸಿಂಹ, ರವಿವರ್ಮ ಸೇರಿದಂತೆ ಸಿಂಹದ ಜೋಡಿ, ಮಹಾ ಪ್ರಚಂಡರು, ಏಜೆಂಟ್ ಅಮ‌ರ್ ನಂತಹ ಸಾಹಸ ಪ್ರಧಾನ ಚಿತ್ರಗಳನ್ನು ಜೋಸೈಮನ್ ನಿರ್ದೇಶಿಸಿದ್ದಾರೆ. ನಿರ್ದೇಶಕನಾಗಿ ಮಾತ್ರವಲ್ಲದೆ, ನಟನಾಗಿ, ಗೀತ ಸಾಹಿತಿಯಾಗಿಯೂ ಜನಪ್ರಿಯರಾಗಿದ್ದರು.

Continue Reading

bangalore

ಹೊಸಕೋಟೆಯ ಹೆದ್ದಾರಿಯಲ್ಲಿ ಸರಣಿ ಅಪಘಾತ; 7 ಮಂದಿ ಸ್ಥಳದಲ್ಲೇ ದುರ್ಮರಣ

Published

on

ಹೊಸಕೋಟೆ/ಬೆಂಗಳೂರು: ಬೆಂಗಳೂರು ಗ್ರಾಮಂತರ ಜಿಲ್ಲೆಯ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅತಿವೇಗವಾಗಿ ಬಂದ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ನಿಯಂತ್ರಣ ತಪ್ಪಿದ ಕಾರು ಎದುರಿಗೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ 6 ಜನ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಕೊತ್ತನೂರಿನಿಂದ ದೇವನಹಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಉಡುಪಿ: ಪಿಕಪ್ ವಾಹನ ಹರಿದು ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ


ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್​​ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ.

Continue Reading

bangalore

ಮದುವೆ ಮನೆ ಬಫೆ ಆ್ಯಪ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಯುವಕನಿಗೆ ಕೊಲೆ ಬೆದರಿಕೆ!

Published

on

ಬೆಂಗಳೂರು: ಬೆಂಗಳೂರಿನ ಟೆಕ್ಕಿಯೊಬ್ಬರು ತಮಾಷೆಗಾಗಿ ರೂಪಿಸಿದ AI ಆಧಾರಿತ ಬಫೆ ಆ್ಯಪ್ ಆನ್‌ಲೈನ್‌ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅವರಿಗೆ ಕೊಲೆ ಬೆದರಿಕೆಗಳು ಬಂದಿರುವ ಘಟನೆ ವರದಿಯಾಗಿದೆ.


ಬೆಂಗಳೂರಿನ ಪಂಕಜ್ ಎಂಬ ಟೆಕ್ಕಿ, ತಮಾಷೆಯಾಗಿ ಭಾರತೀಯ ವಿವಾಹಗಳ ಸಂಭ್ರಮಗಳಲ್ಲಿ ಬೃಹತ್ ಬಫೆ ವ್ಯವಸ್ಥೆ ನಿರ್ಹಿಸಿ, ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂದು ನಿರ್ಧರಿಸಲು ಸಹಾಯ ಮಾಡುವ ಬಫೆಟ್‌ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಉಪಕರಣವನ್ನು ಅಭಿವೃದ್ಧಿಪಡಿಸಿದ್ದರು.

ಈ ಎಐ ಮಾದರಿಗಳನ್ನು ತರಬೇತುಗೊಳಿಸಲು ಹಾಗೂ ಬಳಸಲು ಹೆಚ್ಚಿನ ವಿದ್ಯುತ್ ಮತ್ತು ನೀರಿನ ಅಗತ್ಯವಿರುತ್ತದೆ. ಇಂತಹ ಉಪಯೋಗವಿಲ್ಲದ ಕೆಲಸಗಳಿಗೆ ಎಐ ಬಳಸುವ ಮೂಲಕ ಪರಿಸರವನ್ನು ಹಾನಿಮಾಡುತ್ತಿದ್ದೀರಿ ಎಂದು ಕೆಲವರು ಆರೋಪಿದ್ದಾರೆ. ಇನ್ನು ಕೆಲವರು AI ತಂತ್ರಜ್ಞಾನವನ್ನು ಇಂತಹ ಅತಿ ಸಣ್ಣ ಕೆಲಸಕ್ಕೆ ವ್ಯರ್ಥ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

ತನಗೆ ಮತ್ತು ತನ್ನ ಕುಟುಂಬಕ್ಕೆ ಹತ್ತಾರು ಜನರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಂಕಜ್ X ಪೇಜ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. “ಕೇವಲ ವಾರಾಂತ್ಯದ ಒಂದು ಸಣ್ಣ ಪ್ರಾಜೆಕ್ಟ್‌ಗಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page