Connect with us

LATEST NEWS

ಕಾಪು: ಟಿಪ್ಪರ್ ಹಿಂಬದಿಯ ಚಕ್ರದಡಿಗೆ ಸಿಲುಕಿ ಬೈಕ್ ನಜ್ಜು ಗುಜ್ಜು- ಸವಾರ ಸ್ಥಳದಲ್ಲೇ ಸಾವು

Published

on

ಕಾಪು: ಇನ್ನಂಜೆ‌ – ಕಲ್ಲುಗುಡ್ಡೆ ರಸ್ತೆಯಲ್ಲಿ ಟಿಪ್ಪರ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ‌ ಮೃತಪಟ್ಟ ಘಟನೆ ಇನ್ನಂಜೆ‌ ಕಲ್ಲುಗುಡ್ಡೆ ಬಂಟಕಲ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.


ಬೈಕ್ ಸವಾರ ಕಾಪು ಕೋತಲಕಟ್ಟೆ ದಂಡತೀರ್ಥ ನಿವಾಸಿ ಸುನೀಲ್ ಕುಮಾರ್ (31) ಮೃತ‌ ಪಟ್ಟಿರುವುದಾಗಿ ತಿಳಿದು ಬಂದಿದೆ.

ಅಪಘಾತದಲ್ಲಿ ಟಿಪ್ಪರ್‌ನ ಹಿಂಬದಿಯ ಚಕ್ರದಡಿಗೆ ಸಿಲುಕಿದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ತಲೆಗೆ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

LATEST NEWS

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರು

Published

on

ಮಂಗಳೂರು/ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕಳಕ್ಕೆ ಬೇಸತ್ತು ಅನೇಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೆಷ್ಟೋ ಜನರು ಬೀದಿಗೆ ಬಿದ್ದಿದ್ದರು. ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ವಾಪಾಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

“ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ ಮೂರು ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ” ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾಗೆ ಹೊಸ ಮೆರಗು; ಖ್ಯಾತ ಸೆಲೆಬ್ರಿಟಿಗಳಿಂದ ಸಲಹೆ, ಮಾರ್ಗದರ್ಶನ

“ಸಾಲ ಪಡೆಯುವವನ ಬಳಿ ಏನೂ ದಾಖಲೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದೀರಾ, ಆದರೆ ಇದು ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಶಿಕ್ಷೆ ಪ್ರಮಾಣ ಹತ್ತು ವರ್ಷ ವಿಧಿಸಲಾಗಿದೆ. ಶಿಕ್ಷೆ ಪ್ರಮಾಣ ವಿಪರೀತವಾಗಿದೆ. ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೂ ಇದು ಪರಿಣಾಮ ಬೀರಲಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ಸಮಸ್ಯೆ ಆಗಲಿದೆ ಎಂದಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಸಾದಕ-ಬಾಧಕ ಚರ್ಚಿಸಿ. ಈಗ ಇರುವ ಕಾನೂನುಗಳಲ್ಲೇ ಪೊಲೀಸರು ನಿಯಂತ್ರಿಸಬಹುದು. ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ” ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

Continue Reading

LATEST NEWS

Viral Video: ಓಪನ್ ಜೀಪ್‌ನಲ್ಲಿ ಶ್ವಾನದ ಹುಟ್ಟುಹಬ್ಬ ಆಚರಣೆ ಮಾಡಿದ ಯುವಕರ ತಂಡ

Published

on

ಭೋಪಾಲ್: ಸಾಮಾನ್ಯವಾಗಿ ಜನರ ಬರ್ತ್‌ ಡೇ ಯನ್ನು ಅದ್ದೂರಿಯಾಗಿ ಆಚರಿಸುವುದುಂಟು. ಆದರೆ ಶ್ವಾನದ ಬರ್ತ್‌ ಡೇ ಯನ್ನು ಆಚರಿಸುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ.. ಹೌದು ಇಲ್ಲೊಂದು ನಾಯಿಗೆ ಯುವಕರ ಗುಂಪೊಂದು ಅದರ ಕುತ್ತಿಗೆಗೆ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಬಳಿಕ ಓಪನ್ ಜೀಪ್‌ನಲ್ಲಿ ಊರೆಲ್ಲಾ ಮೆರವಣಿಗೆ ಮಾಡಿ ಬಹಳ ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಲೂಡೋ ಮಧ್ಯಪ್ರದೇಶದ ದೇವಾಸ್ ನಗರದ ಒಂದು ಬೀದಿ ನಾಯಿ. ಬೀದಿಯಲ್ಲಿ ಹುಟ್ಟಿ ಬೆಳೆದ ಲೂಡೋಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಈ ಬೀದಿನಾಯಿ ಲೂಡೋಗಾಗಿ ಅಭಿಮಾನಿಗಳು ತೆರೆದ ಜೀಪಿನಲ್ಲಿ ನಗರ ಪ್ರದಕ್ಷಿಣೆ ಮಾಡಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಯುವಕರ ನಡೆಯನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ. ಈ ಘಟನೆ ಮಧ್ಯಪ್ರದೇಶದ ದೆವಾಸ್‌ನಲ್ಲಿ ನಡೆದಿದೆ. ಅಷ್ಟಕ್ಕೂ ಈ ಬೀದಿ ನಾಯಿಗೆ ಏಕೆ ಇಷ್ಟೊಂದು ಅಭಿಮಾನಿಗಳು ಎನ್ನುವ ಪ್ರಶ್ನೆಯೂ ಕಂಡುಬರುತ್ತದೆ.

ನೋಡಲು ಮುದ್ದಾಗಿರುವ ಈ ಬೀದಿ ನಾಯಿ ಲೂಡೋಗೆ ಯುವಕರ ಗುಂಪಿನ ಸದಸ್ಯರು ಸ್ನೇಹಿತರಾಗಿದ್ದು, ಯಾವಾಗಲೂ ಆಹಾರ ಕೊಡುತ್ತಾ ತಮ್ಮದೇ ಒಬ್ಬ ಸ್ನೇಹಿತನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಲೂಡೋ ಕೂಡ ಅವರೊಂದಿಗೆ ತುಂಬಾ ಆತ್ಮೀಯತೆಯಿಂದ ಇರುತ್ತದೆ.

Watch Video:

Continue Reading

LATEST NEWS

ದೇವಸ್ಥಾನದ ಕಳಸಾರೋಹಣ ವೇಳೆ ದುರಂ*ತ; ಕ್ರೇನ್‌ನಿಂದ ಬಿ*ದ್ದು ವ್ಯಕ್ತಿ ಸಾ*ವು

Published

on

ಮಂಗಳೂರು/ಹಾವೇರಿ : ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ದೇವಸ್ಥಾನದ ಕಳಸಾರೋಹಣ ವೇಳೆ ದುರಂ*ತವೊಂದು ಸಂಭವಿಸಿದೆ.  ಕ್ರೇನ್‌ನಿಂದ ಬಿ*ದ್ದು ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ.

ಮಂಜುನಾಥ ಪಾಟೀಲ (42) ಮೃ*ತ ವ್ಯಕ್ತಿ.  ಶೇಷಗಿರಿ ಗ್ರಾಮದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಂಜುನಾಥ್ ಹಾಗೂ ಇನ್ನೊಬ್ಬ ವ್ಯಕ್ತಿ ಕ್ರೇನ್‌ನ ಮುಂಭಾಗದ ಬುಟ್ಟಿಯಲ್ಲಿ ಹತ್ತಿ ಗೋಪುರಕ್ಕೆ ಕಳಸ ಇರಿಸಲು ಮುಂದಾಗಿದ್ದರು. ಈ ವೇಳೆ ಕ್ರೇನ್‌ನ ಬುಟ್ಟಿ ಏಕಾಏಕಿ ಕಳ*ಚಿ ಬಿದ್ದಿದೆ. ಪರಿಣಾಮ ಇಬ್ಬರೂ ತೀವ್ರ ಗಾ*ಯಗೊಂಡಿದ್ದರು. ಇಬ್ಬರನ್ನು ಹಾನಗಲ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ : ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸಿ ಉರ್ವ ಮಾರಿಯಮ್ಮ ಜಾತ್ರೋತ್ಸವಕ್ಕೆ ಚಾಲನೆ

ತಲೆಗೆ ತೀ*ವ್ರ ಪೆಟ್ಟು ಬಿ*ದ್ದ ಪರಿಣಾಮ ಮಂಜುನಾಥ ಮೃ*ತಪಟ್ಟಿದ್ದಾರೆ. ಮತ್ತೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page