Connect with us

FILM

ನಮೃತಾ ಗೌಡ ಆವಾಜ್ ಗೆ ಸಂಗೀತಾ ಕಣ್ಣೀರು

Published

on

ಬೆಂಗಳೂರು : ಸಂಗೀತಾ ಶೃಂಗೇರಿ ಅವರಿಗೆ ನಮ್ರತಾ ಗೌಡ ಆವಾಜ್ ಹಾಕಿರುವ ಪ್ರೋಮೋ ಔಟ್ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಈ ವಾರ ರಾಕ್ಷಸರು ವರ್ಸಸ್​ ಗಂಧರ್ವರು ಟಾಸ್ಕ್ ನೀಡಲಾಗಿದೆ.


ಟಾಸ್ಕ್​ನಲ್ಲಿ ಎರಡು ತಂಡಗಳ ನಡುವೆ ತೀವ್ರ ಜಗಳವಾಗುತ್ತಿದ್ದು, ಮನೆ ರಣ ರಂಗವಾಗಿದೆ.


ರಾಕ್ಷಸರಾಗಿದ್ದಾಗ ಗಂಧರ್ವರಿಗೆ ಶಿಕ್ಷೆ ನೀಡುತ್ತಿದ್ದ ಸಂಗೀತ ಟೀಮ್, ಈಗ ಗಂಧರ್ವರೂ ರಾಕ್ಷಸರಾಗಿರುವ ಸಮಯದಲ್ಲಿ ಶಿಕ್ಷೆಯನ್ನು ಸ್ವೀಕರಿಸಲು ತಯಾರಿಲ್ಲ.


ಟಾಸ್ಕ್​ ವಿಚಾರದಲ್ಲಿ ಸಂಗೀತ ಅವರೊಂದಿಗೆ ಕಿರಿಕ್​ ಆದಾಗ ನಮ್ರತಾ ಜೋರಾಗಿ ಕಿರುಚಾಡಿದ್ದಾರೆ. ಈ ಸಂದರ್ಭ ಸಂಗೀತ ಶೃಂಗೇರಿ ಕಣ್ಣೀರು ಹಾಕಿದ್ದಾರೆ.

 

FILM

ಹ*ಲ್ಲೆಗೊಳಗಾದಾಗ ಆಟೋದಲ್ಲಿ ಹೋಗಿದ್ಯಾಕೆ ? ಘಟನೆಯ ಬಗ್ಗೆ ಸೈಫ್ ಬಿಚ್ಚಿಟ್ರು ಸತ್ಯ!

Published

on

ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ಜ.16 ರಂದು ದಾ*ಳಿ ನಡೆದಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ನಡೆದ ಹ*ಲ್ಲೆ ಪ್ರಕರಣದ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದ್ದವು. ಭದ್ರತೆಯ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದ್ದವು. ಅದರಲ್ಲಿ ಪ್ರಮುಖವಾಗಿ ಹ*ಲ್ಲೆಗೊಳಗಾದ ಸೈಫ್‌ನನ್ನುಆಟೋದಲ್ಲಿ ಆಸ್ಪತ್ರೆಯಲ್ಲಿ ಸಾಗಿಸಿದ್ಯಾಕೆ? ಐಷಾರಾಮಿ ಕಾರುಗಳ ಒಡೆಯನಾಗಿರುವ ಸೈಫ್‌ ಯಾಕೆ ಆಟೋದಲ್ಲಿ ಹೋದ್ರು? ಅನ್ನೋದು. ಇದಕ್ಕೆಲ್ಲ ಇದೀಗ ಸೈಫ್ ಉತ್ತರ ನೀಡಿದ್ದಾರೆ.

ದಾ*ಳಿಯ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಸೈಫ್ ಮಾತಾನಾಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹ*ಲ್ಲೆಗೊಳಗಾದ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.

ಕರೀನಾ ಊಟಕ್ಕಾಗಿ ಹೊರಗೆ ಹೋಗಿದ್ದು, ನನಗೆ ಬೆಳಗ್ಗೆ ಸ್ವಲ್ಪ ಮುಖ್ಯವಾದ ಕೆಲಸವಿದ್ದ ಕಾರಣ ಮನೆಯಲ್ಲೇ ಇದ್ದೆ. ಊಟ ಮುಗಿಸಿ ಕರೀನಾ ಮನೆಗೆ ವಾಪಾಸಾಗಿದ್ದಳು. ನಾವು ಸ್ವಲ್ಪ ಹೊತ್ತು ಮಾತಾಡಿ ಮಲಗಿದೆವು. ಅಷ್ಟರಲ್ಲಿ ಮನೆಯ ಸಹಾಯಕನೊಬ್ಬ ಯಾರೋ ಒಬ್ಬ ಮನೆಗೆ ನುಸುಳಿರುವ ಬಗ್ಗೆ ತಿಳಿಸಿದ. ಆತ ಜೆಹ್‌ನ ಕೋಣೆಯಲ್ಲಿದ್ದು, ಚಾ*ಕು ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಹೇಳಿದ.

ತಕ್ಷಣ  ನಾವು ಅಲ್ಲಿಗೆ ಓಡಿದೆವು. ಜೆಹ್‌ನ ಹಾಸಿಗೆಯ ಮೇಲಿದ್ದ ಅವನನ್ನು ಎಳೆದೆ. ಬಳಿಕ ಇಬ್ಬರ ನಡುವೆ ಫೈ*ಟ್ ನಡೆಯಿತು. ಈ ವೇಳೆ ಆತ ನನ್ನ ಬೆನ್ನಿಗೆ ಬ*ಡಿಯುತ್ತಿದ್ದ. ಕುತ್ತಿಗೆ ಸೀ*ಳಲು ಯತ್ನಿಸಿದಾಗ ನಾನು ತಡೆದೆ. ನನ್ನ ಅಂಗೈ, ಮಣಿಕಟ್ಟು ಮತ್ತು ತೋಳಿಗೆ ಆತ ಚಾ*ಕುವಿನಿಂದ ಚು*ಚ್ಚಿದ. ಆತ ಎರಡೂ ಕೈಗಳಿಂದ ದಾ*ಳಿ ನಡೆಸುತ್ತಿದ್ದ. ಈ ಸಂದರ್ಭ ಮನೆ ಕೆಲಸಗಾರ್ತಿ ಗೀತಾ ಅವನನ್ನು ನನ್ನಿಂದ ಎಳೆದು ದೂರ ತಳ್ಳಿದಳು. ಬಳಿಕ ನಾವಿಬ್ಬರೂ ಬಾಗಿಲು ಮುಚ್ಚಿದೆವು. ಆ ಸಮಯದಲ್ಲಿ ನಾನು ರ*ಕ್ತದಲ್ಲಿ ಮುಳುಗಿದ್ದೆ. ಬಲಗಾಲಿನ ಸಂವೇದನೆ ಕಳೆದುಕೊಂಡಿದ್ದೆ. ಯಾಕೆಂದರೆ, ಆತನ ಬೆನ್ನುಮೂಳೆಗೆ ಚಾ*ಕುವಿನಿಂದ ಇರಿದಿದ್ದ. ಆತ ಬಂದ ದಾರಿಯಿಂದ ತಪ್ಪಿಸಿಕೊಂಡ. ಕರೀನಾ ರಿಕ್ಷಾಗಾಗಿ ಕೂಗಿದಳು. ರಿಕ್ಷಾದವನು ಬಂದು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದ ಎಂದಿದ್ದಾರೆ.

ಶಾಕ್ ಕೊಟ್ಟ ತೈಮೂರ್ ಪ್ರಶ್ನೆ!

ಬೆನ್ನಿನಲ್ಲಿ ಏನೋ ತೊಂದರೆ ಇರುವಂತೆ ನನಗೆ ಅನಿಸಿತ್ತು. ಇದನ್ನು ಕರೀನಾಳಲ್ಲೂ ಹೇಳಿದೆ. ಅದಕ್ಕವಳು ಆಸ್ಪತ್ರೆಗೆ ಹೋಗು. ನಾನು ಸಹೋದರಿಯ ಮನೆಗೆ ಹೋಗುತ್ತೇನೆ ಎಂದಳು. ನಾನು ಚೆನ್ನಾಗಿದ್ದೇನೆ, ಸಾ*ಯುವುದಿಲ್ಲ ಎಂದು ಆಕೆಯನ್ನು ಸಂತೈಸಿದೆ. ಆಗ ಮಗ ತೈಮೂರ್, ನೀನು ಸಾ*ಯುತ್ತೀಯಾ ಎಂದು ಕೇಳಿದ. ನಾನು ‘ಇಲ್ಲ’ ಎಂದು ಹೇಳಿದೆ.

ಇದನ್ನೂ ಓದಿ : ತಾನು ಪ್ರೀತಿಸುವ ಪುರುಷನ ಬಳಿ ಮಾತ್ರ ಮಹಿಳೆ ಈ ರೀತಿ ಇರುತ್ತಾಳೆ..

ಆಟೋದಲ್ಲಿ ಹೋಗಿದ್ಯಾಕೆ?

ಸೈಫ್ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ, ಹ*ಲ್ಲೆಗೊಳಗಾದಾಗ ಆಟೋದಲ್ಲಿ ಯಾಕೆ ಹೋದರು ಎಂಬುದು ಬಹುದೊಡ್ಡ ಪ್ರಶ್ನೆ. ಇದಕ್ಕೂ ಸೈಫ್ ಉತ್ತರಿಸಿದ್ದಾರೆ. ರಾತ್ರಿಯಿಡೀ ಯಾರೂ ಉಳಿಯುವುದಿಲ್ಲ. ಎಲ್ಲರಿಗೂ ಮನೆ ಇರುತ್ತೆ ಅಲ್ವಾ? ಅವರು ಮನೆಗೆ ಹೋಗುತ್ತಾರೆ. ನಮ್ಮ ಮನೆಯಲ್ಲಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಅವರು ಚಾಲಕರಲ್ಲ. ರಾತ್ರಿ ಹೊರಗೆ ಹೋಗುವುದಿದ್ದರೆ ಅಥವಾ ಏನಾದರೂ ಅಗತ್ಯವಿದ್ದರೆ ಚಾಲಕರನ್ನು ಉಳಿದುಕೊಳ್ಳಲು ಹೇಳುವುದು. ಆದರೆ, ಅಂದು ಅಗತ್ಯವಿರಲಿಲ್ಲ. ಅವತ್ತು ಕಾರಿನ ಕೀ ಸಿಕ್ಕಿದ್ದರೆ ನಾನೇ ಕಾರು ಓಡಿಸುತ್ತಿದ್ದೆ. ಅದೃಷ್ಟವಶಾತ್ ನಾನು ಹಾಗೆ ಮಾಡಲಿಲ್ಲ. ಏಕೆಂದರೆ, ನನ್ನ ಬೆನ್ನನ್ನು ಹೆಚ್ಚು ಅಲುಗಾಡಿಸಬಾರದಿತ್ತು. ಕರೆ ಮಾಡಿ ಡ್ರೈವರ್‌ನ್ನು ಕರೆಯಬಹುದಿತ್ತು. ಆದರೆ, ಆತ ಅಲ್ಲಿಗೆ ಬರಲು ಸಮಯವಾಗುತ್ತದೆ ಎಂದು ತಿಳಿದು ಬೇಗನೆ ಆಸ್ಪತ್ರೆಗೆ ಹೋಗುವ ಉದ್ದೇಶದಿಂದ ಆಟೋದಲ್ಲಿ ಹೋದೆ ಎಂದಿದ್ದಾರೆ.

Continue Reading

FILM

ಕಾರ್ ರೇಸಿಂಗ್ ವೇಳೆ ಮತ್ತೆ ಅಪ*ಘಾತಕ್ಕೊಳಗಾದ ನಟ ಅಜಿತ್

Published

on

ಮಂಗಳೂರು/ಚೆನ್ನೈ : ನಟ ಅಜಿತ್ ಕೇವಲ ನಟನಾಗಿ ಮಾತ್ರವಲ್ಲ ಕಾರ್ ರೇಸರ್ ಆಗಿಯೂ ಸಾಧನೆ ಮಾಡುತ್ತಿರುವವರು. ಸಿನಿಮಾಗಳ ಜೊತೆಗೆ ಮೋಟರ್ ಸ್ಪೋರ್ಟ್ಸ್‌ನತ್ತಲೂ ಚಿತ್ತ ಹರಿಸುತ್ತಿದ್ದಾರೆ. ಅಜಿತ್, ಸಿನಿಮಾ ಹಾಗೂ ತನ್ನ ಫ್ಯಾಷನ್ ಎರಡನ್ನೂ ಜೊತೆಯಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಒಂದೆಡೆ ಅವರ ‘ವಿದಾಮುಯರ್ಜಿ’ ಚಿತ್ರ ಬಿಡುಗಡೆಯಾಗಿದ್ದರೆ, ಮತ್ತೊಂದೆಡೆ ಅವರು ಕಾರು ರೇಸಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ . ಪೋರ್ಚುಗಲ್‌ಗೆ ತೆರಳಿರುವ ಅವರು ರೇಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ದು*ರ್ಘಟನೆಯೊಂದು ಸಂಭವಿಸಿದೆ. ಮೋಟರ್ ಸ್ಫೋರ್ಟ್ಸ್ ತರಬೇತಿಯಲ್ಲಿ ಅವರು ನಿರತರಾಗಿದ್ದ ವೇಳೆ ಅಪ*ಘಾತವಾಗಿದೆ ಎಂದು ವರದಿಯಾಗಿದೆ.

ಪೋರ್ಚುಗಲ್‌ನ ಎಸ್ಟೊರಿಲ್‌ನಲ್ಲಿ ಟ್ರ್ಯಾಕ್ ಒಂದರಲ್ಲಿ ಅಜಿತ್ ಟ್ರೈನಿಂಗ್ ಸೆಷನ್ ನಡೆಸುತ್ತಿದ್ದರು. ಈ ವೇಳೆ ಕಾರು ಅಪ*ಘಾತವಾಗಿದೆ ಎಂದು ತಿಳಿದುಬಂದಿದೆ. ಪರಿಣಾಮ ಕಾರಿಗೆ ಹಾನಿ ಆಗಿದೆ. ಆದರೆ, ಅಜಿತ್‌ಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ. ಇದೊಂದು ಸಣ್ಣ ಅಪ*ಘಾತ. ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಜಿತ್ ಹೇಳಿರುವ ಬಗ್ಗೆ ವರದಿಯಾಗಿದೆ.

ನಾವು ಸಣ್ಣ ಅಪ*ಘಾತಕ್ಕೊಳಗಾಗಿದ್ದು, ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಸಮಯ ನನ್ನ ಪರವಾಗಿತ್ತು. ಮತ್ತೊಮ್ಮೆ ಕಾರ್ ರೇಸ್‌ನಲ್ಲಿ ಗೆಲ್ಲುತ್ತೇವೆ. ಅಪ*ಘಾತದ ವೇಳೆ ಬೆಂಬಲ ನೀಡಿದ ಸ್ನೇಹಿತರಿಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಅಜಿತ್ ತಿಳಿಸಿದ್ದಾರೆ.

ಅಜಿತ್ ಕಾರ್ ರೇಸಿಂಗ್‌ನಲ್ಲಿ ತಮ್ಮದೇ ಆದ ತಂಡ ಹೊಂದಿದ್ದಾರೆ. ಈ ಹಿಂದೆ ದುಬೈ 24H ರೇಸಿಂಗ್ ಈವೆಂಟ್‌ನಲ್ಲಿ ಟ್ರೈನಿಂಗ್ ಮಾಡುವಾಗ ಅವರು ಅಪಘಾ*ತಕ್ಕೊಳಗಾಗಿದ್ದರು.  ಅಪ*ಘಾತದ ದೃಶ್ಯ ವೈರಲ್ ಆಗಿತ್ತು.

ಇದನ್ನೂ ಓದಿ : ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ!?

ಅಜಿತ್‌ ನಟನೆಯ ‘ವಿದಾಮುಯಾರ್ಚಿ’ ಚಿತ್ರ ಬಿಡುಗಡೆಗೊಂಡಿದೆ. ಬಿಗ್ ಬಜೆಟ್ ಚಿತ್ರ ಇದಾಗಿದ್ದು, ಆದರೆ, ಕಲೆಕ್ಷನ್ ವಿಷಯದಲ್ಲಿ ಮುಗ್ಗರಿಸಿದೆ. ಮಾಗಿಜ್ ತಿರುಮೇನಿ ನಿರ್ದೇಶನದ ಈ ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ರೆಜಿನಾ ಕ್ಯಾಸಂಡ್ರಾ ಮೊದಲಾವರು ಪಾತ್ರವಾಗಿದ್ದಾರೆ. ಸದ್ಯ ಅಜಿತ್ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಮಾಡುತ್ತಿದ್ದಾರೆ. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರ ಎಪ್ರಿಲ್ 10 ರಂದು ತೆರೆಗೆ ಬರಲಿದೆ.

Continue Reading

FILM

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೀತಾರಾಮ ಸೀರಿಯಲ್ ನಟಿ ಮೇಘನಾ

Published

on

ಬೆಂಗಳೂರು/ಮಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾರಾಮ ಸೀರಿಯಲ್‌ನಲ್ಲಿ ಪ್ರೀಯಾ ಪಾತ್ರದಲ್ಲಿ ನಟಿಸುತ್ತಿದ್ದ ಮೇಘನಾ ಶಂಕರಪ್ಪ ಅವರು ಜಯಂತ್ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಫೆ.9 ರಂದು ಬೆಂಗಳೂರಿನಲ್ಲಿ ಮದುವೆ ನಡೆದಿದೆ. ಇದು ಅರೇಂಜ್ ಮ್ಯಾರೇಜ್ ಕೂಡ ಹೌದು. ವೃತ್ತಿಯಲ್ಲಿ ಇಂಜಿನಿಯರ್ ಆದ ಜಯಂತ್ ಮೂಲತಃ ಬೆಂಗಳೂರಿನವರು. ಇದೀಗ ಮದುವೆಯ ಫೋಟೋಗಳು ವೈರಲ್‌ ಆಗಿದ್ದು, ನಟಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಮೇಘನಾ ಅವರು ಈ ಹಿಂದೆ ಪ್ರಿ ವೆಡ್ಡಿಂಗ್‌, ಅರಿಶಿಣ ಶಾಸ್ತ್ರ, ಮೆಹೆಂದಿ, ಸಂಗೀತದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇನ್ನು ವರದಿಯ ಪ್ರಕಾರ ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು ಎನ್ನಲಾಗಿದೆ.

ಇವರ ಸಂಗೀತ ಕಾರ್ಯಕ್ರಮದಲ್ಲಿ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ, ಸಿಂಧು ರಾವ್‌, ಪೂಜಾ ಲೋಕೇಶ್‌, ರೀತು ಸಿಂಗ್‌ ಮುಂತಾದವರು ಭಾಗವಹಿಸಿ ಭರ್ಜರಿ ಡ್ಯಾನ್ಸ್‌ ಮಾಡಿದ್ದರು. ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರದಲ್ಲಿ ಮಿಂಚಿ ಜನರ ಮೆಚ್ಚುಗೆಯನ್ನು ಗಳಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page