Connect with us

BIG BOSS

ಸೀರೆಯಲ್ಲಿ ಫೋಟೊ ಹಂಚಿಕೊಂಡು ತನ್ನ ಲವ್ ಸ್ಟೋರಿ ಹೇಳಿದ ಮೋಕ್ಷಿತಾ

Published

on

ಬೆಂಗಳೂರು/ಮಂಗಳೂರು: ಬಿಗ್‌ಬಾಸ್ ಸೀಸನ್ 11 ರಲ್ಲಿ ಮಿಂಚಿ ಟಾಪ್ 4 ಸ್ಪರ್ಧಿಯಾಗಿ ಹೊರಬಂದ ಮೋಕ್ಷಿತಾ ಈಗ ಏನು ಮಾಡುತ್ತಿರಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗೆ ನಿನ್ನೆಯ ದಿನ ಮೋಕ್ಷಿತಾ ಸೀರೆಯುಟ್ಟ ಫೋಟೊ ಹಂಚಿಕೊಂಡಿದ್ದು, ಪ್ರೀತಿಯ ಕಥೆಯನ್ನು ಹೇಳಿದ್ದಾರೆ.

ಸೀರೆಯಲ್ಲಿ ಅಪ್ಸರೆಯಂತೆ ಕಂಡ ಮೋಕ್ಷಿತಾಳ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಿಂಕ್ ಬ್ಲೌಸ್ ಮತ್ತು ಪಿಸ್ತಾ ಬಣ್ಣದ ಸೀರೆಯುಟ್ಟ 5 ಫೋಟೊವನ್ನು ಅಪ್‌ಲೋಡ್ ಮಾಡಿದ್ದಾರೆ. ಇನ್ನು ಆ ಪೋಸ್ಟ್‌ನಲ್ಲಿ ಪ್ರೀತಿ ಮತ್ತು ನಂಬಿಕೆಯ ಬಗ್ಗೆ ಕನ್ನಡದಲ್ಲೇ ಶೀರ್ಷಿಕೆ ಬರೆದಿದ್ದಾರೆ.

“ಪ್ರೀತಿ ಇದ್ದಲ್ಲಿ ನಂಬಿಕೆ ಇರಲೇ ಬೇಕೆಂದಿಲ್ಲ ಆದರೆ ನಂಬಿಕೆ ಇದ್ದಲ್ಲ ಪ್ರೀತಿ ಇದ್ದೇ ಇರುವುದು, ನಿಮ್ಮ ಪ್ರೀತಿಯ ಪಾರು ಅಂತಾ ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೊವನ್ನು ನೋಡಿದ ಆಕೆಯ ಫಾಲೋವರ್ಸ್​ ವಿಧ ವಿಧವಾಗಿ ಕಾಮೆಂಟ್ಸ್​ ಹಾಕುತ್ತಿದ್ದಾರೆ. ಬಿಗ್‌ಬಾಸ್ ಶೋ ನಲ್ಲಿ 120 ದಿನಗಳ ವರೆಗೆ ದೊಡ್ಮನೆಯಲ್ಲಿ ಇದ್ದ ಮೋಕ್ಷಿ ಸಾಕಾಷ್ಟು ಜನಪ್ರಿಯರೆ ಪಡೆದಿದ್ದರು.

BIG BOSS

ಬಿಗ್‌ ಬಾಸ್‌ ವಿನ್ನರ್‌ಗೆ ಕೈ ಸೇರದ ವಿನ್ನಿಂಗ್‌ ಅಮೌಂಟ್‌! ಕಾರಣವೇನು?

Published

on

BIGG BOSS: ಬಿಗ್‌ ಬಾಸ್‌ ರಿಯಾಲಿಟಿ ಶೋನ ಹಲವಾರು ಪ್ರತಿಭೆಗಳಿಗೆ, ಕಲಾವಿದರಿಗೆ ಹೊಸ ಗುರುತನ್ನ ನೀಡಿದೆ. ಈ ಕಾರ್ಯಕ್ರಮಕ್ಕೆ ಅನೇಕ ಅಭಿಮಾನಿಗಳಿದ್ದಾರೆ. ಆದರೆ ಇಂತಹ ಶೋ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ಮಾಡಿದ್ದು ಬೇರೆ ಯಾರು ಅಲ್ಲ.. ಬಿಗ್‌ ಬಾಸ್‌ ವಿನ್ನರ್..!‌

ಹೌದು.. ಬಿಗ್‌ ಬಾಸ್‌ ಕಾರ್ಯಕ್ರಮ ಮುಗಿದು ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೂ ವಿಜೇತ ಸ್ಪರ್ಧಿಗೆ ವಿನ್ನಿಂಗ್‌ ಅಮೌಂಟ್‌ ಬಂದಿಲ್ಲವಂತೆ. ಹೀಗಾಗಿ ಬಿಗ್‌ ಬಾಸ್‌ ನಡೆಗೆ ವಿನ್ನರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಗ್‌ ಬಾಸ್‌ ಹಿಂದಿ ಸೀಸನ್‌-19ರ ಟ್ರೋಫಿ ಮುಡಿಗೇರಿಸಿಕೊಂಡ ನಟ ಗೌರವ್‌ ಖನ್ನಾ ಈಗ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ನಡೆದ ಅದ್ದೂರಿ ಫಿನಾಲೆಯಲ್ಲಿ ಗೌರವ್‌ ವಿನ್ನರ್‌ ಎಂದು ಸಲ್ಮಾನ್‌ ಖಾನ್‌ ಘೋಷಿಸಿದ್ದರು. ಆದರೆ ಮೂರು ತಿಂಗಳು ಕಳೆದರೂ ಕೂಡ ತಮಗೆ ಇನ್ನೂ ಶೋನ ಬಹುಮಾನದ ಮೊತ್ತ ತಲುಪಿಲ್ಲ ಎಂಬ ವಿಷಯವನ್ನು ಗೌರವ್‌ ಖನ್ನಾ ಬಹಿರಂಗಪಡಿಸಿದ್ದಾರೆ.

ಗೌರವ್‌ ಖನ್ನಾ ಇತ್ತೀಚೆಗೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಅವರು ಅಭಿಮಾನಿಗಳಪ್ರಶ್ನೆಗೆ ಉತ್ತರಿಸಿದ್ದರು.

ಇದನ್ನೂ ಓದಿ: ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ ‘ಬಿಂದಾಸ್‌’ ನಟಿ

ಈ ವೇಳೆ ಅಭಿಮಾನಿಯೊಬ್ಬರು.. ಬಿಗ್‌ ಬಾಸ್‌ ಗೆದ್ದ ನಂತರ ಘೋಷಿಸಲಾದ ಬಹುಮಾನ ಬಂತಾ ಎಂದು ಪ್ರಶ್ನೆ ಕೇಳಿದ್ದರು. “ಇಲ್ಲ ನನಗೆ ಇನ್ನೂ ಅದು ಸಿಕ್ಕಿಲ್ಲ.. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಾನು ಟಿವಿಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ಇದರ ಬಗ್ಗೆ ನನಗೆ ಗೊತ್ತಿದೆ. ಅದಕ್ಕೆ ತುಂಬಾ ಪ್ರಕ್ರಿಯೆಗಳು ಇರುತ್ತವೆ” ಎಂದು ಸ್ಪಷ್ಟಪಡಿಸಿದರು.

ಬಿಗ್ ಬಾಸ್ ಮನೆಯಲ್ಲಿ ಗೌರವ್ ತೋರಿದ ಸಂಯಮದ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ತಾವು ಈ ಹಿಂದೆ ಮಾಡಿದ ಎಲ್ಲಾ ಶೋಗಳಿಗಿಂತಲೂ ಬಿಗ್ ಬಾಸ್ ಮೂಲಕ ಸಿಕ್ಕಿರುವ ಖ್ಯಾತಿ ಮತ್ತು ಪ್ರೀತಿ ದೊಡ್ಡದು ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Continue Reading

BIG BOSS

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರಕ್ಷಿತಾ ಶೆಟ್ಟಿ!

Published

on

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ 12ರಲ್ಲಿ ತಮ್ಮ ಮುಗ್ಧ ಮತ್ತು ನೇರ ಸ್ವಭಾವದಿಂದಾಗಿ ‘ತುಳುನಾಡಿನ ಬೆಡಗಿ’ ಎಂದು ಮನೆಮಾತಾಗಿದ್ದರು. ಇದೀಗ ತಮ್ಮ ಅಜ್ಜಿಯ ವಯಸ್ಸಿನ ಹಿರಿಯ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಅವರ ಆಸೆಯನ್ನು ಈಡೇರಿಸಿದ್ದಾರೆ.


ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ರಕ್ಷಿತಾ ಅವರು ತಮ್ಮನ್ನು ನೋಡಬೇಕೆಂಬ ಹಂಬಲ ಹೊಂದಿದ್ದ ಅಜ್ಜಿಯ ವಯಸ್ಸಿನ ಅಭಿಮಾನಿಯ ಮನೆಗೆ ಭೇಟಿ ನೀಡಿದರು. ಈ ಕ್ಷಣದ ವೀಡಿಯೋವವನ್ನು ಸಿಂಚು ಶೆಟ್ಟಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.


ಇ ಸಿಂಚ್ ಶೆಟ್ಟಿ ಎಂಬುವವರು ಅಜ್ಜಿ ಬಿಗ್ಬಾಸ್ ದಿನವೂ ನೋಡುತ್ತಿದ್ದು, ಬಿಗ್ಬಾಸ್ ಮುಗಿದ ನಂತರ ಅವರು, ಆ ಕಾರ್ಯಕ್ರಮ ಮುಗಿದಿರುವುದರ ಅರಿವಿಲ್ಲದೇ ತಮ್ಮ ಮೊಮ್ಮಗಳ ಬಳಿ ಆ ಬಗ್ಗೆ ಕೇಳುತ್ತಾರೆ. ಮೊಮ್ಮಗಳು ಯಾರು ಬೇಕು ನಿಮಗೆ ಎಂದು ಕೇಳಿದಾಗ, ತಮ್ಮ ಕುಂದಾಪುರ ಭಾಷೆಯಲ್ಲಿ ಅದೊಂದು ಹೆಣ್ ಬರ್ತಲೆ ಎಂದು ಹೇಳುತ್ತಾರೆ.


ಯಾವ್ ಹೆಣ್ಣ್ ಎಂದು ಕೇಳಿದಾಗ, ಶೆಟ್ರ ಹೆಣ್ ಜೋರಿತ್ತಲ್ಲ ಎಂದಾಗ ಮೊಮ್ಮಗಳು ಆ ಕಾರ್ಯಕ್ರಮ ಮುಗಿತು ಎಂದು ಹೇಳುತ್ತಾರೆ. ಅದಕ್ಕೆ ಅವರು ಮೊಮ್ಮಗಳಿಗೆ ನೀನು ಸುಳ್ಳು ಹೇಳುವುದು ನನಗೆ ಆ ಕಾರ್ಯಕ್ರಮ ಮುಗಿದಿಲ್ಲ ಎಂದು ಹೇಳುತ್ತಾರೆ. ನಿಜವಾಗಿಯೂ ಆ ಕಾರ್ಯಕ್ರಮ ಮುಗಿತು ಎಂದು ನಂತರ ಅವರ ಮೊಮ್ಮಗಳು ಅವರಿಗೆ ಮನವರಿಕೆ ಮಾಡುತ್ತಾರೆ. ನಂತರ ಹೋ ಹೌದಾ ಎಂದು ಅವರು ಬೇಜಾರಾಗಿದ್ದಾರೆ.

ಮೊಮ್ಮಗಳು, ರಕ್ಷಿತಾ ನಿಮ್ಮನ್ನು ಭೇಟಿ ಮಾಡುವುದಕ್ಕೆ ಬರುತ್ತಿದ್ದಾಳೆ ಎಂದಾಗ, ಅಜ್ಜಿ ಅವರು ಖುಷಿಯಿಂದ ಬರಲಿ ಬರಲಿ ಎಂದು ಹೇಳುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ. ಬಳಿಕ ಅಜ್ಜಿ ತಲೆಬಾಚಿ ರೆಡಿಯಾಗಿದ್ದು, ರಕ್ಷಿತಾ ಅಜ್ಜಿಯನ್ನು ಭೇಟಿ ಮಾಡಿದ್ದು, ಅವರನ್ನು ತಬ್ಬಿಹಿಡಿದುಕೊಂಡು ಪ್ರೀತಿಯಿಂದ ಮಾತನಾಡಿಸುವ ವೀಡಿಯೋವನ್ನು ಕೂಡ ಅವರ ಮೊಮ್ಮಗಳು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್ ಹೆಸರು ಚೇಂಜ್ ಮಾಡಿದ ರಕ್ಷಿತಾ ಶೆಟ್ಟಿ; ವೈರಲ್ ಆಯ್ತು ಹೊಸ ಹೆಸರು!

ಈ ಹಿರಿಯ ಅಭಿಮಾನಿ ರಕ್ಷಿತಾ ಅವರ ಮಾತು ಮತ್ತು ಸ್ವಭಾವಕ್ಕೆ ಮಾರುಹೋಗಿದ್ದರು. ರಕ್ಷಿತಾ ಅವರನ್ನು ಖುದ್ದಾಗಿ ಭೇಟಿ ಮಾಡುವುದು ಅವರ ದೊಡ್ಡ ಆಸೆಯಾಗಿತ್ತು, ಅದನ್ನು ರಕ್ಷಿತಾ ಈಡೇರಿಸಿದ್ದಾರೆ. ಈ ಭೇಟಿಯ ಸಮಯದಲ್ಲಿ ರಕ್ಷಿತಾ ಅವರು ಆ ಅಜ್ಜಿಯೊಂದಿಗೆ ಸಮಯ ಕಳೆದು, ಅವರ ಆಶೀರ್ವಾದ ಪಡೆದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

bangalore

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ ಎಫ್‌ಐಆರ್ ದಾಖಲು

Published

on

ಬೆಂಗಳೂರು: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಬೆದರಿಕೆ ಮತ್ತು ನಿಂದನೆ ಆರೋಪದಡಿ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(2) ಮತ್ತು 352 ಅಡಿ ರಜತ್ (A1) ಮತ್ತು ಕಿರಣ್ (A2) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ‘ಡಾಗ್’ ಸತೀಶ್ ಜೊತೆಗಿನ ಸ್ನೇಹವನ್ನು ಬಿಡಬೇಕು ಎಂದು ರಜತ್ ಫೋನ್ ಕರೆ ಮತ್ತು ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ದೂರುದಾರರ ಕಾರಿನ ಫೋಟೋ ಕಳಿಸಿ, ‘ಇದು ರಜತ್ ಬುಜ್ಜಿ… ವಾಪಸ್ ಕಾಲ್ ಮಾಡ್ತೀರಾ ಇಲ್ಲ ನಾವೇ ಒಳಗೆ ನುಗ್ಗಬೇಕಾ?” ಎಂದು ಸಂದೇಶ ಕಳಿಸಿರುವುದು ಮತ್ತು ಕಾನ್ಫರೆನ್ಸ್ ಕಾಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!

ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನ ಆಧಾರದ ಮೇಲೆ ರಜತ್ ಮತ್ತು ಕಿರಣ್ ಮೇಲೆ FIR ದಾಖಲು ಮಾಡಿಕೊಂಡಿರುವ ಕೆ.ಆರ್.ಪುರಂ ಪೊಲೀಸರು ಘಟನೆ ಸಂಬಂಧ ವಿಚಾರಣೆಗೆ ಬರುವಂತೆ ರಜತ್ ಹಾಗೂ ಕಿರಣ್ ಎಂಬುವವರಿಗೆ ನೋಟಿಸ್ ನೀಡಿ, ವಿಚಾರಣೆ ಕರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page