ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆ ಸಮೀಪಿಸಿದೆ. ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೊಂದು ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ.

ಗ್ರ್ಯಾಂಡ್ ಫಿನಾಲೆಗೆ ಹತ್ತಿರ ಇರುವಾಗಲೇ ಗೌತಮಿ ಜಾಧವ್ ಮತ್ತು ಧನರಾಜ್ ಆಚಾರ್ ಆಚೆ ಬಂದಿದ್ದಾರೆ. ಹೀಗಾಗಿ ಫಿನಾಲೆ ವಾರಕ್ಕೆ 6 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಆರು ಮಂದಿ ಸ್ಪರ್ಧಿಗಳಲ್ಲಿ ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೂ ಶುರುವಾಗಿದೆ. ಇದಕ್ಕೆ ಒಂದಿಷ್ಟು ಕಾರಣಗಳನ್ನು ನೋಡುವುದಾದರೆ, ಬಿಗ್ ಬಾಸ್ ಸೀಸನ್ 11 ಅನ್ನು ವಿಶ್ಲೇಷಣೆ ಮಾಡಿದಾಗ ಕೆಲವೊಂದಿಷ್ಟು ಸುಳಿವುಗಳು ಸಿಗುತ್ತವೆ. ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲೇ ಬಿಟ್ಟ ಪ್ರೋಮೋದಲ್ಲಿ ಈ ಬಾರಿ ಎಲ್ಲವೂ ಎರಡೆರಡು ಇರಲಿವೆ ಎನ್ನುವ ಸಂಗತಿಯನ್ನು ತಿಳಿಸಿದ್ದರು.
ಈ ಮಾದರಿಯಲ್ಲಿ ನೋಡುವುದಾದರೆ, ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲಿ ಯಾವ ಸೀಸನ್‌ಗಳಲ್ಲೂ ಇಲ್ಲದ ಸ್ವರ್ಗ ಮತ್ತು ನರಕ ಎಂಬ ಎರಡು ಎರಡು ಮನೆಗಳನ್ನು ಮಾಡಲಾಗಿತ್ತು. ಎರಡರಲ್ಲೂ ಸ್ಪರ್ಧಿಗಳನ್ನು ಹಾಕಲಾಗಿತ್ತು. ಇಬ್ಬರಿಗೂ ಟಾಸ್ಕ್‌ಗಳನ್ನು ಮತ್ತು ಮನೆಯ ಕೆಲಸಗಳಲ್ಲಿಯೂ ವ್ಯತ್ಯಾಸವಿತ್ತು.
ಆರಂಭದಲ್ಲಿ ಬಿಗ್ ಬಾಸ್ ಎರಡು ಮನೆಗಳಿಂದ ಶುರುವಾದ ಕಾರಣ ಈ ಸಲ ವಿನ್ನರ್ ಕೂಡ ಇಬ್ಬರು ಆಗಬಹುದೆಂಬ ಅನುಮಾನ ಹೆಚ್ಚಾಗಿತ್ತು. ಸ್ವರ್ಗ ವಾಸಿಗಳಲ್ಲಿ ಒಬ್ಬರನ್ನು ಮತ್ತು ನರಕ ವಾಸಿಗಳಲ್ಲಿ ಒಬ್ಬರನ್ನು ಸೇರಿ ಇಬ್ಬರು ಸ್ಪರ್ಧಿಗಳನ್ನು ವಿನ್ನರ್ ಮಾಡಬಹುದೆಂಬ ಅನುಮಾನ ಮೂಡಿತ್ತು.
ಆ ಪ್ರಕಾರ ನೋಡುವುದಾದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ನರಕವಾಸಿಗಳಲ್ಲಿ ಮೋಕ್ಷಿತಾ ಪೈ ಒಬ್ಬರೇ ಈಗ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಫಿನಾಲೆ ಹಂತದಲ್ಲಿದ್ದಾರೆ. ಇನ್ನುಳಿದ ಹನುಮಂತ ಮತ್ತು ರಜತ್ ವೈಲ್ಡ್ ಕಾರ್ಡ್ ಎಂಟ್ರಿಗಳಾಗಿದ್ದಾರೆ.
ಬಿಗ್ ಬಾಸ್ ಸೀಸನ್ 3 ರಲ್ಲಿ ನಟಿ ಶೃತಿ ಹೊರತು ಪಡಿಸಿದರೆ ಬೇರೆ ಯಾವ ಸೀಸನ್‌ನಲ್ಲೂ ಮಹಿಳಾ ಸ್ಪರ್ಧಿಗಳು ವಿನ್ನರ್ ಆಗಿರಲಿಲ್ಲ. ಹೀಗಾಗಿ ಈ ಬಾರಿ ನರಕವಾಸಿಗಳಲ್ಲಿ ಫಿನಾಲೆ ಹಂತಕ್ಕೆ ಬಂದ ಒನ್ ಆಂಡ್ ಓನ್ಲಿ ಸ್ಪರ್ಧಿ ಮೋಕ್ಷಿತಾ ಅವರಿಗೆ ಗೆಲುವಿನ ಸಿಹಿ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
ಇನ್ನು ಬಿಗ್ ಬಾಸ್ ವೀಕ್ಷಕರ ಪ್ರಕಾರ ಸ್ವರ್ಗವಾಸಿಗಳಲ್ಲಿ ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಈ ಮೂವರಲ್ಲಿ ಮಂಜು ಅವರನ್ನು ವಿನ್ನರ್ ಮಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11 ರಲ್ಲಿ ಉಗ್ರಂ ಮಂಜು ಕ್ಯಾಪ್ಟನ್ ಆದ ವೇಳೆ ರಾಜನ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅಲ್ಲಿ ಮಂಜು ರಾಜನಾಗಿದ್ದರು. ಇವರಿಗೆ ತಂಗಿಯಾಗಿದ್ದ ಮೋಕ್ಷಿತಾ ಯುವರಾಣಿಯಾಗಿದ್ದರು. ಈ ಟಾಸ್ಕ್ ಮೂಲಕ ಇವರಿಬ್ಬರು ವಿನ್ನರ್ ಎಂಬ ಸುಳಿವನ್ನು ಮೊದಲೇ ನೀಡಿದ್ದರಾ ಎಂಬ ಡೌಟ್ ವೀಕ್ಷಕರ ಮನದಲ್ಲಿ ಮೂಡಿದೆಯಂತೆ.

ಈ ಕಾರಣದಿಂದ ಮೋಕ್ಷಿತಾ ಮತ್ತು ಮಂಜು ಇಬ್ಬರೂ ಬಿಗ್ ಬಾಸ್ ವಿನ್ನರ್ ಆಗಬಹುದು ಅಥವಾ ಉಗ್ರಂ ಮಂಜು ವಿನ್ನರ್ ಆಗಿ ಮೋಕ್ಷಿತಾ ರನ್ನರ್ ಆಗಬಹುದು ಇಲ್ಲವೇ ಮೋಕ್ಷಿತಾ ವಿನ್ನರ್ ಆಗಿ ಮಂಜು ರನ್ನರ್ ಆಗಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಟ್ರೋಫಿ ನೀಡಿದ ಸುಳಿವೇನು ?
ಈ ಬಾರಿಯ ಬಿಗ್ ಬಾಸ್ ಟ್ರೋಫಿ ಕೂಡ ತುಂಬಾ ಡಿಫರೆಂಟ್ ಆಗಿದೆ. ಪ್ರತಿ ಬಾರಿ ಕಣ್ಣನ್ನು ಹೊಂದಿರುತ್ತಿದ್ದ ಬಿಗ್ ಬಾಸ್ ಟ್ರೋಫಿ ಈ ಬಾರಿ ಎರಡು ರೆಕ್ಕೆಗಳನ್ನು ಹೊಂದಿದೆ. ಎರಡು ರೆಕ್ಕೆಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಎಂದು ಬರೆದಿದ್ದು, ಇದು ಡಬಲ್ ವಿನ್ನರ್ ಸುಳಿವಿರಬಹುದು ಎನ್ನಲಾಗ್ತಿದೆ.
ಈ ಎಲ್ಲಾ ವೈರಲ್ ಸಂಗತಿಗಳು ಬಿಗ್ ಬಾಸ್ ವೀಕ್ಷಕರಲ್ಲಿ ಮೂಡಿರುವ ಅನುಮಾನವಾಗಿದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಸಿಗಲಿದೆ.