Connect with us

BIG BOSS

BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

Published

on

BBK12: ಶನಿವಾರ ಬಂತು ಅಂದರೆ ಸಾಕು ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾದು ಕುಳಿತಿರುತ್ತಾರೆ. ಅದರಲ್ಲೂ ಕಿಚ್ಚನ ಕ್ಲಾಸ್‌ಗೆ ಹಲವರು ವೈಟ್ ಮಾಡುತ್ತಿರುತ್ತಾರೆ. ಆದರೆ ಇಂದಿನ ಪಂಚಾಯ್ತಿ ಸ್ವಲ್ಪ ಡಿಫರೇಂಟ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.


ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಮತ್ತೊಂದು ವಾರಾಂತ್ಯದ ಪಂಚಾಯಿತಿ ಬಂದಿದೆ. ಈ ವಾರ ಮನೆಯಲ್ಲಿ ಸಾಕಷ್ಟು ಘಟನೆಗಳು, ಜಗಳ, ಕಣ್ಣೀರು, ನಗು ಎಲ್ಲವೂ ನಡೆದಿದೆ. ಅದರಲ್ಲೂ ಈ ಬಾರಿ ಮನೆಯಲ್ಲಿ ಗ್ರೂಪಿಸಂ ನಡೆದಿದೆ. ಈ ಬಗ್ಗೆ ವೀಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದು ನಡೆಯುವ ಸುದೀಪನ ಪಂಚಾಯ್ತಿಯಲ್ಲಿ ಈ ವಿಷಯ ಪ್ರಸ್ತಾಪ ಆಗುವ ಲಕ್ಷಣ ಕಾಣಿಸುತ್ತಿದೆ.

ಮನೆಯಲ್ಲಿ ಗ್ರೂಪಿಸಂ!
ಈ ವಾರವೆಲ್ಲ ಮನೆಯಲ್ಲಿ ಹೆಚ್ಚು ಹೈಲೈಟ್ ಆಗಿದ್ದು ಗಿಲ್ಲಿ ನಟ. ಮೊದಲನೆಯದಾಗಿ ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ನಡೆಸಿರುವ ವಿಚಾರದ ಬಗ್ಗೆ ಸುದೀಪ್ ಮಾತನಾಡುವ ಸಾಧ್ಯತೆ ಇದೆ. ಆದರೆ ಶುಕ್ರವಾರ ನಡೆದ ಉತ್ತಮ ಮತ್ತು ಕಳಪೆ ಪ್ರಕ್ರಿಯೆಯಲ್ಲಿ ಗುಂಪುಗಾರಿಕೆ ನಡೆದಿದೆ ಎಂಬ ಅಸಮಾಧಾನ ವೀಕ್ಷಕರಲ್ಲಿ ಮೂಡಿದೆ. ಇದಕ್ಕೆ ಕಾರಣಗಳು ಹಲವಾರು ಇವೆ.

ಗಿಲ್ಲಿಗೆ ಕಳಪೆ ಕೊಡುವ ವಿಚಾರದಲ್ಲಿ ಮೂವರ ನಡುವೆ ಮೊದಲೇ ಚರ್ಚೆ ನಡೆದಿತ್ತು. ರಾಶಿಕಾ, ಅಶ್ವಿನಿ ಗೌಡ ಹಾಗೂ ಕಾಕ್ರೋಚ್ ಸುಧಿ ನಡುವೆ ಕಳಪೆಗಾಗಿ ಗಿಲ್ಲಿ ಅವರ ಹೆಸರು ಮುನ್ನಲೆಗೆ ಬರುತ್ತೆ. ಆದರೆ ಕಾಕ್ರೋಚ್ ಸುಧಿ ಅವರು, ನಾನು ಗಿಲ್ಲಿಗೆ ಕಳಪೆ ಕೊಡೋದಿಲ್ಲ. ಯಾಕೆಂದರೆ ಇದೇ ಒಂದು ವಿಷಯವನ್ನು ಇಡಿದುಕೊಂಡು ವಾರವೆಲ್ಲ ಮಾತನಾಡುತ್ತಿರುತ್ತಾನೆ ಎಂದು ಹೇಳಿದ್ದರು. ಆದರೆ ಕೊನೆಗೆ ಆಗಿದ್ದೆ ಬೇರೆ. ಸುಧಿ ಅವರು ಕಳಪೆ ಕೊಟ್ಟಿದ್ದೆ ಗಿಲ್ಲಿಗೆ. ಇದೇ ರೀತಿ ಅಶ್ವಿನಿ ಹಾಗೂ ರಾಶಿಕಾ ಕೂಡ ಗಿಲ್ಲಿಗೆ ಕಳಪೆ ಕೊಡುತ್ತಾರೆ. ಇದೆಲ್ಲ ಒಂದು ಕಡೆಯಾದರೆ..  ಅಶ್ವಿನಿ ಅವರು ಮತ್ತೊಂದು ಕಡೆ ಇನ್ನೊಂದು ನಾಟಕವನ್ನ ಶುರು ಮಾಡಿದ್ದರು.

ಅದು ಕೂಡ ಕಣ್ಸನ್ನೆ ಮೂಲಕ. ಒಂದು ಕಡೆ ರಿಷಾ ಅವರ ಪಕ್ಕ ಗಿಲ್ಲಿ ನಟ, ಚಂದ್ರಪ್ರಭ ಹಾಗೂ ಧ್ರುವಂತ್ ಕುಳಿತಿರುತ್ತಾರೆ. ಜೊತೆಗೆ ಜಾನ್ವಿ ಅವರು ಇರುತ್ತಾರೆ. ಈ ಸಮಯದಲ್ಲಿ ಚರ್ಚೆ ನಡೆಯುತ್ತೆ.

ಅದುವೇ ಗಿಲ್ಲಿಗೆ ಯಾವ ರೀತಿಯಾದಂತ ಟೈಟಲ್ ಕೊಡಬಹುದು ಎಂದು ಮಾತುಕತೆ ನಡೆಯುತ್ತದೆ. ಈ ಕುರಿತು ಮೊದಲು ಮಾತನಾಡಿದ ಅಶ್ವಿನಿ ಅವರು, ಗಿಲ್ಲಿಗೆ ವೇಸ್ಟ್ ಅಂತ ಕೊಡಬಹುದು, ಮೈಗಳ್ಳ ಕೊಡಬಹುದು, ಕಳಪೆ ಕೊಡಬಹುದು. ಇದೆಲ್ಲ ಚರ್ಚೆ ನಡೆದಿರೋದು ಶುಕ್ರವಾರ ಬೆಳಗ್ಗೆ. ಯಾಕೆಂದರೆ ಸಂಜೆ ವೇಳೆ ಕಳಪೆ ಪ್ರಕ್ರಿಯೆ ಇರುವಾಗ ಗಿಲ್ಲಿ ಹೆಸರು ಕಳಪೆಯಲ್ಲಿ ಮುನ್ನಲೆಗೆ ಬರಲಿ ಎನ್ನುವ ಉದ್ದೇಶದಿಂದ ಈ ರೀತಿ ಹೇಳಿರಬಹುದು ಎಂದು ವೀಕ್ಷಕರು ಊಹಿಸಿದ್ದರು. ಇದು ಕಳಪೆ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ನಿಜವಾದಂತೆ ಎಲ್ಲರಿಗೂ ಭಾಸವಾಗಿದೆ.

ಇದನ್ನೂ ಓದಿ: BBK12: ಮಾಳುಗೆ ಕ್ಯಾಪ್ಟನ್ ಪಟ್ಟ; ಗಿಲ್ಲಿಗೆ ಕಳಪೆ.. ವೀಕ್ಷಕರ ಅಸಮಾಧಾನ!

ಮತ್ತೊಂದು ಕಡೆ ಅಶ್ವಿನಿ ಗೌಡ ಹಾಗೂ ರಾಶಿಕಾ ಅವರು ಮಾತನಾಡುತ್ತಿರುತ್ತಾರೆ. ಈ ವೇಳೆ ಗಿಲ್ಲಿ ಮತ್ತು ಕಾವ್ಯಾಗೆ ಒಂದು ಸಲನೂ ಕಳಪೆ ಬಂದಿಲ್ವಲ್ಲ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ವೀಕ್ಷಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಪರ್ಧಿಗೆ ಅವನ ಆಟದ ಮೂಲಕವೇ ಉತ್ತಮ ಅಥವಾ ಕಳಪೆ ನಿರ್ಧರಿಸಬೇಕೆ ವಿನಃ ಗುಂಪುಗಾರಿಕೆಯಿಂದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಗಿಲ್ಲಿಗೆ ಗುಂಪುಗಾರಿಕೆಯಿಂದ ಕೊಟ್ಟಿರುವ ಕಳಪೆ ವಿಚಾರವೇ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

BIG BOSS

ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12ರಲ್ಲಿ ಮನೆ ಸದಸ್ಯರ ನಡುವೆ ಸ್ಪರ್ಧೆ ಜೋರಾಗಿದೆ. ಜಗಳ ಜಟಾಪಟಿಗಳಿಗೇನೂ ಕಮ್ಮಿಯಿಲ್ಲ. ಮಾತು, ನಗು, ಹರಟೆ ಜೊತೆ ಇಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ, ವಾಕ್ಸಮರವೂ ಜೋರಾಗಿಯೇ ಇದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನಾಮಿನೇಶನ್ ಪ್ರಕ್ರಿಯೆ ವೇಳೆ ಮನೆಯಲ್ಲಿ ನಡೆದಿರುವ ಜಗಳವನ್ನು ಕಾಣಬಹುದು.

ಕಾವ್ಯಾ ನಾಮಿನೇಟ್ ಮಾಡಿದ್ದು ಯಾರನ್ನ?

ಬಿಗ್​ ಬಾಸ್​ನಲ್ಲಿ ವಿಲನ್​ ಹೇಳಿದ್ದೇ ಆಟವಾಗಿದೆ. ಇದರಿಂದ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದು, ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಈ ವಾರ ಮನೆಯಿಂದ ಕಳುಹಿಸಲು ಇಚ್ಛಿಸುವ ಸ್ಪರ್ಧಿಗಳು ತಮ್ಮ ಎದುರಾಳಿಗಳನ್ನು ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿ ನಾಮಿನೇಟ್ ಮಾಡಬೇಕೆಂದು ಹೇಳಲಾಗುತ್ತೆ. ಅದರಂತೆ ಸ್ಪರ್ಧಿಗಳು ಕೆಲವೊಂದು ಕಾರಣ ಕೊಟ್ಟು ಕೆಲವರನ್ನು ನಾಮಿನೇಟ್ ಮಾಡಿದ್ದಾರೆ.

ಆಶ್ಚರ್ಯ ಅಂದ್ರೆ, ಕಾವ್ಯಾ ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇನ್ನೊಬ್ಬ ಸ್ಪರ್ಧಿ ರಜತ್​​ ಕಿಶನ್‌ರನ್ನೂ ಕಾವ್ಯ ನಾಮಿನೇಟ್ ಮಾಡಿದ್ದಾರೆ.

ಇದನ್ನೂ ಓದಿ : ಲವ್, ಸೆ*ಕ್ಸ್, ದೋಖಾ… ಪ್ರೀತಿಸಿದ ಯುವಕನ ಮೋಸದಾಟಕ್ಕೆ ಯುವತಿ ಬ*ಲಿ

ರಣರಂಗವಾಯ್ತು ‘ಬಿಗ್’ ಮನೆ :

ಕಾವ್ಯಾ ನಾಮಿನೇಟ್ ಮಾಡುತ್ತಿದ್ದಂತೆ ಗಿಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿದಂತೆ ಕಂಡಿಲ್ಲ. ಆದರೆ, ರಜತ್ ಕಾವ್ಯಾ ಜೊತೆ ಜಗಳವಾಡಿದ್ದಾರೆ.   ಕೊನೆಗೆ ರಜತ್ ಹಾಗೂ ಧ್ರುವಂತ್ ಮಧ್ಯೆ ಗಲಾಟೆಯಾಗಿದೆ. ಇಬ್ಬರು ಸ್ಪರ್ಧಿಗಳು ಜೋರಾಗಿ ಜಗಳ ಮಾಡಿಕೊಂಡಿದ್ದಾರೆ. ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ. ಇತರೆ ಸ್ಪರ್ಧಿಗಳು ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ವಿಲನ್ ಆಟ ಇನ್ನು ಹೇಗಿರುತ್ತೆ ಅನ್ನೋದು ಸದ್ಯದ ಕುತೂಹಲ.

Continue Reading

BIG BOSS

ಬಿಗ್ ಬಾಸ್ ಮನೆಯೀಗ ‘ವಿಲನ್’ ತೆಕ್ಕೆಗೆ…ಚೈತ್ರಾ ಕಿರುಚಿದ್ದೇಕೆ!?

Published

on

BBK12 : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಅಭಿಷೇಕ್ ಎಲಿಮಿನೇಟ್ ಆಗಿದ್ದರು. ಈ ನಡುವೆ ಈ ವಾರ ದೊಡ್ಮನೆ ಮಂದಿಗೆ ಶಾ*ಕ್ ಕೊಟ್ಟಿದ್ದಾರೆ ಬಿಗ್ ಬಾಸ್. ಹೌದು, ಬಿಗ್ ಬಾಸ್ ಮನೆಯನ್ನು ಬಿಗ್ ಬಾಸ್ ಅಲ್ಲ, ವಿಲನ್ ಆಳಲು ಶುರು ಮಾಡಿದ್ದಾರೆ. ಮನೆಯನ್ನು  ವಿಲನ್ ಕಂಟ್ರೋಲ್ ಮಾಡಲಿದ್ದಾರೆಂದು ಅನೌನ್ಸ್ ಆಗುತ್ತಿದ್ದಂತೆ ಸ್ಪರ್ಧಿಗಳು ಶಾ*ಕ್ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಗ್ ಬಾಸ್ ಅನೌನ್ಸ್ ಮಾಡುತ್ತಿದ್ದಂತೆ ಕೇಳಿಬಂದ ಅಟ್ಟಹಾಸಕ್ಕೆ ಮನೆಮಂದಿ ಗಾಬರಿಗೊಂಡಿದ್ದಾರೆ. ವಿಲನ್ ಜೋರಾಗಿ ನಗುತ್ತಿದ್ದಂತೆ ಚೈತ್ರಾ ಚೀರಿದ್ದಾರೆ. ಈ ಮನೆಯಲ್ಲಿ ಎಲ್ಲರ ನಿರ್ಧಾರಗಳು ನಂದೇ, ಅಬ್ಬರನೂ ನಂದೇ…ಈಗ ಈ ಮನೆಯನ್ನು ಕಂಟ್ರೋಲ್ ಮಾಡೋದು ಆ ನಿಮ್ಮ ಬಿಗ್ ಬಾಸ್ ಅಲ್ಲ, ನಾನು…ವಿಲನ್ ಎಂಬ ಧ್ವನಿ ಕೇಳಿ ಸ್ಪರ್ಧಿಗಳು ಭಯಭೀತರಾಗಿದ್ದಾರೆ.

ಇದನ್ನೂ ಓದಿ : ಅತ್ತ ಥಿಯೇಟರ್‌ಗೆ ಬರ್ತಾ ಇದ್ದೀನಿ ಚಿನ್ನ…ಇತ್ತ ಜೈಲಿನಲ್ಲಿ ಖೈದಿಗಳಿಗೆ ‘ಡೆವಿಲ್’ ಕಾಟ

ಮನೆಯಲ್ಲಿ ಕಂಡು ಬಂದ ಮುಖವಾಡ, ಪ್ರತಿಕೃತಿಗಳು ಮನೆಮಂದಿಯನ್ನು ಬೆಚ್ಚಿಬೀಳಿಸಿದೆ. ಯಾರು ಈ ವಿಲನ್‌ ಎಂಬ ಆತಂಕ ಉಂಟಾಗಿದೆ. ಎಚ್ಚರ…ನಾಳೆ ಬಾ ಎಂಬ ಬರಹಗಳು ಕಾಣಿಸಿಕೊಂಡಿವೆ. ಮನೆಯ ಸ್ಪರ್ಧಿಗಳು ಕೂಡ ವಿಲನ್‌ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರೋದು ಕುತೂಹಲ ಹುಟ್ಟಿಸಿದೆ.

Continue Reading

BIG BOSS

BBK12: ಗಿಲ್ಲಿ ಜಿಗಣೆ ಥರ ಎಂದ ಧ್ರುವಂತ್; ಕಿಚ್ಚ ಏನಂದ್ರು?

Published

on

BBK12: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟನ ಹವಾ ಜೋರಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಹ ಸ್ಪರ್ಧಿಗಳ ಕಾಲೆಳೆಯುವ ಗಿಲ್ಲಿ, ಕಿಚ್ಚನ ಪಂಚಾಯ್ತಿಯಲ್ಲೂ ಇದನ್ನ ಮರೆಯೋದಿಲ್ಲ. ಅದರಲ್ಲೂ ಈ ವಾರ ಸುದೀಪ್ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ್ದಾರೆ ಗಿಲ್ಲಿ.


ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಎದುರಲ್ಲೇ ತಮಾಷೆ ಮಾಡಿದ್ದಾರೆ.

ಸುದೀಪ್‌ ಅವರು ಗಿಲ್ಲಿಯವರೇ ನಿಮಗೆ ಪುಸ್ತಕ ಬರಿಯೋಕೆ ಕೊಟ್ಟರೆ ಯಾರ ಬಗ್ಗೆ ಬರೆಯುತ್ತೀರಾ ಅಂತಾ ಸುದೀಪ್‌ ಕೇಳ್ತಾರೆ.. ಅದಕ್ಕೆ ಮೊದಲಿಗೆ ಧ್ರುವಂತ್‌ ಬಗ್ಗೆ ನಾ ಕಂಡ ಧ್ರುವಂತ ಅಂತಾ ಬರೆಯುತ್ತೀನಿ. ಯಾಕಂದ್ರೆ ನಾಮಿನೇಶನ್‌ ಅಂತಾ ಬಂದ್ರೆ ಧ್ರುವಂತ್‌ ನಾಗವಲ್ಲಿಯಾಗಿ ಬದಲಾಗ್ತಾರೆ..ಅವರ ಎಕ್ಸ್‌ಪ್ರೆಶನ್‌ ಚೇಂಜ್‌ ಆಗ್ತದೆ ಅಂತಾ ಗಿಲ್ಲಿ ಹೇಳಿದರು..ಇನ್ನು, ಈ ಕಥೆಯ ನಾಯಕ ಸೂರಜ್‌ ಸರ್‌ ಅವರು ಮೊದಲಿಗೆ ಸ್ವಿಮ್ಮಿಂಗ್‌ ಪೂಲಿನಿಂದ ಎದ್ದು ಬಂದಿದ್ದಾರೆ. ಅದಾದ್ಮೇಲೆ ಒಂದು ಕಡೆ ಬಿದ್ದೋರು ಇನ್ನೂ ಎದ್ದೆ ಇಲ್ಲ ಅಂತಾರೆ. ಆವಾಗ ಸೂರಜ್‌ ಹಾಗೂ ರಾಶಿಕಾ ರಿಯಾಕ್ಷನ್‌ ಚೇಂಜ್‌ ಆಗುತ್ತೆ, ಆದ್ರೆ ಸುದೀಪ್‌ ಮಾತ್ರ ಸಖತ್‌ ಮಜಾ ಮಾಡುತ್ತಾರೆ.

ಕೊನೆಯದಾಗಿ, ರಘು ಇಂದ ಫೈಟ್‌, ಆಕ್ಷನ್‌, ಎಲ್ಲ ಎಕ್ಸ್‌ಪೆಕ್ಟ್‌ ಮಾಡಿದ್ದೆ. ಆದರೆ ಕಿಚನ್‌ ಅಲ್ಲಿ ಬೆಳ್ಳುಳ್ಳಿ ಬಿಡಿಸೋದು ಈರುಳ್ಳಿ ಕಟ್‌ ಮಾಡೋದು ನೋಡಿದೆ ಎಂದು ರಘು ಅವರ ಕಾಲೆಳೆದಿದ್ದಾರೆ.

ಇದನ್ನೂ ಓದಿ: BBK12: ಎಲಿಮಿನೇಟ್‌ ವೇಳೆ ಟ್ವಿಸ್ಟ್; ದೊಡ್ಮನೆಯ ನೆಚ್ಚಿನ ಸ್ಪರ್ಧಿಯೇ ಔಟ್!?

ಗಿಲ್ಲಿ ನಟ ತಿಗಣೆ ಥರ
ಧ್ರುವಂತ್‌ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದು, “ಅವರು ತಿಗಣೆ ಥರ, ತಾನು ಬದುಕಬೇಕು ಎಂದಾಗ ಯಾರನ್ನಾದರೂ ಕಚ್ಚುತ್ತಾ ಇರಬೇಕು” ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page