Connect with us

BIG BOSS

BBK12: ಮಾಳುಗೆ ಕ್ಯಾಪ್ಟನ್ ಪಟ್ಟ; ಗಿಲ್ಲಿಗೆ ಕಳಪೆ.. ವೀಕ್ಷಕರ ಅಸಮಾಧಾನ!

Published

on

ಬಿಗ್‌ ಬಾಸ್ ಸೀಸನ್-12 ರೋಚಕ ಘಟ್ಟ ತಲುಪುತ್ತಿದೆ. ವೀಕ್ಷಕರ ನೆಚ್ಚಿನ ಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಗಿಲ್ಲಿ ನಟನಿಗೆ ಈ ವಾರದ ಕಳಪೆ ಸಿಕ್ಕಿದೆ. ಇದರ ನಡುವೆ ಜನರ ವೋಟಿಂಗ್ ಮುಖಾಂತರ ನಡೆದ ಚುನಾವಣೆಯಲ್ಲಿ ಮಾಳು ಅವರು ಗೆದ್ದಿದ್ದು ಮನೆಯ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ. ಆದರೆ ಬಿಗ್ ಬಾಸ್ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಗಿಲ್ಲಿ ಈ ವಾರ ಕಳಪೆ ಆದರೆ, ಚಂದ್ರಪ್ರಭ ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಗಿಲ್ಲಿ ನಟನಿಗೆ ಕಳಪೆ ಪಟ್ಟ ಸಿಕ್ಕ ಖುಷಿಯಲ್ಲಿದ್ದಾರೆ ‘ಬಿಗ್ ಸ್ಪರ್ಧಿಗಳು. ಆದರೆ ಈ ಬಗ್ಗೆ ವೀಕ್ಷಕರು ಭಾರೀ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಗಿಲ್ಲಿ ಕಳಪೆ ಅನೌನ್ಸ್ ಆದ ಬೆನ್ನಲ್ಲೇ ನೆಟ್ಟಿಗರು ಹಲವಾರು ರೀತಿಯ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮನೆಯಲ್ಲಿ ಬೆಳಗ್ಗೆಯಿಂದಲೇ ಗಿಲ್ಲಿಗೆ ಕಳಪೆ ಕೊಡಬೇಕು ಎನ್ನುವ ಚರ್ಚೆ ಆಗುತ್ತಲೇ ಇತ್ತು. ಕಳಪೆಯನ್ನು ಬೆಳಗ್ಗೆಯಿಂದಲೇ ಯೋಜಿಸಲಾಗಿತ್ತು. ವ್ಯಕ್ತಿತ್ವ ವಾರ ಎಂದು ಹೆಸರಿಸಲಾಗಿದ್ದರಿಂದ, ಗಿಲ್ಲಿ ಪತ್ರವನ್ನು ಕಳೆದುಕೊಂಡರು. ಇವೆಲ್ಲದರ ಜೊತೆಗೆ ಮನೆಯನ್ನ ಎಂದಿನಂತೆ ಸಖತ್ ಎಂಟರ್‌ಟೈನಿಂಗ್ ಆಗಿ ಇಟ್ಟುಕೊಂಡಿದ್ದರು. ಆದರೂ, ಗಿಲ್ಲಿಗೆ ಕಳಪೆ ಸಿಕ್ಕಿದ್ದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಗೆ ಹಾಕಿದ್ದಾರೆ.

ಬಿಗ್ ಬಾಸ್ ನೋಡ್ತಾ ಇರೋದು ಗಿಲ್ಲಿ ಮತ್ತು ಕಾವ್ಯಳಿಂದ. ಅವರಿಬ್ಬರ ತಮಾಷೆಯ ಕಚಗುಳಿಗಾಗಿ. ಆದರೆ ಶುಕ್ರವಾರ ಎಪಿಸೋಡ್‌ನಲ್ಲಿ ಏನೂ ಅರ್ಥವೇ ಆಗದ ಚಂದ್ರಪ್ರಭ ಅವರಿಗೆ ಉತ್ತಮ ಅಂತ ಕೊಟ್ಟಿದ್ದಾರೆ. ನಂತರ ಕಳಪೆ ಸುಧಿ ಅವರ ಕಡೆ ಹೋಗಿತ್ತು. ಕೊನೆಗೆ ಎಲ್ಲಿ ಹೆಚ್ಚು ನಮಿಗೆ ಬರುತ್ತೆ ಅನ್ನುವ ಲೆಕ್ಕಾಚಾರದಲ್ಲಿ ಅಶ್ವಿನಿ, ಜಾಹ್ನವಿ ಎಲ್ಲರೂ ಕಣ್ಣೋಟದ ಲೆಕ್ಕಾಚಾರ ಮಾಡಿ ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: BBK12: ಗಿಲ್ಲಿಗೆ ಕಳಪೆ ಪಟ್ಟ ಕೊಟ್ಟ ಧ್ರುವಂತ್; ಕಾವ್ಯಾ ಶೈವ ರೊಚ್ಚಿಗೆದ್ದಿದ್ದೇಕೆ..!?

ಮಾಳುಗೆ ಕ್ಯಾಪ್ಟನ್ ಪಟ್ಟ
‘ಬಿಗ್ ಬಾಸ್’ ಮನೆಗೆ ಬಂದಿದ್ದ ಜನರ ವೋಟ್‌ನ ಪ್ರಕಾರ ಈ ವಾರದ ಕ್ಯಾಪ್ಟನ್ ಮಾಳು ನಿಪನಾಳ ಆಯ್ಕೆ ಆಗಿದ್ದಾರೆ. ಈ ವಾರ ಅಭಿಷೇಕ್ ಶ್ರೀಕಾಂತ್, ಜಾಹ್ನವಿ, ರಘು, ರಿಷಾ ಗೌಡ, ಮಾಳು ನಿಪನಾಳ್, ಕಾವ್ಯ ಶೈವ ಇವರೆಲ್ಲಾ ಕ್ಯಾಪ್ಟನ್ಸಿ ಓಟದಲ್ಲಿದ್ದರು. ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆ ಮಾಡುವ ಅಧಿಕಾರವನ್ನ ‘ಬಿಗ್ ಬಾಸ್‌’ ವೀಕ್ಷಕರಿಗೆ ನೀಡಿದ್ದರು. ಜನರ ವೋಟ್‌ನ ಪ್ರಕಾರ ಮಾಳು ನಿಪನಾಳ ‘ಬಿಗ್ ಬಾಸ್’ ಮನೆಯ ನೂತನ ಕ್ಯಾಪ್ಟನ್ ಆಗಿದ್ದಾರೆ.

BIG BOSS

ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12ರಲ್ಲಿ ಮನೆ ಸದಸ್ಯರ ನಡುವೆ ಸ್ಪರ್ಧೆ ಜೋರಾಗಿದೆ. ಜಗಳ ಜಟಾಪಟಿಗಳಿಗೇನೂ ಕಮ್ಮಿಯಿಲ್ಲ. ಮಾತು, ನಗು, ಹರಟೆ ಜೊತೆ ಇಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ, ವಾಕ್ಸಮರವೂ ಜೋರಾಗಿಯೇ ಇದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನಾಮಿನೇಶನ್ ಪ್ರಕ್ರಿಯೆ ವೇಳೆ ಮನೆಯಲ್ಲಿ ನಡೆದಿರುವ ಜಗಳವನ್ನು ಕಾಣಬಹುದು.

ಕಾವ್ಯಾ ನಾಮಿನೇಟ್ ಮಾಡಿದ್ದು ಯಾರನ್ನ?

ಬಿಗ್​ ಬಾಸ್​ನಲ್ಲಿ ವಿಲನ್​ ಹೇಳಿದ್ದೇ ಆಟವಾಗಿದೆ. ಇದರಿಂದ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದು, ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಈ ವಾರ ಮನೆಯಿಂದ ಕಳುಹಿಸಲು ಇಚ್ಛಿಸುವ ಸ್ಪರ್ಧಿಗಳು ತಮ್ಮ ಎದುರಾಳಿಗಳನ್ನು ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿ ನಾಮಿನೇಟ್ ಮಾಡಬೇಕೆಂದು ಹೇಳಲಾಗುತ್ತೆ. ಅದರಂತೆ ಸ್ಪರ್ಧಿಗಳು ಕೆಲವೊಂದು ಕಾರಣ ಕೊಟ್ಟು ಕೆಲವರನ್ನು ನಾಮಿನೇಟ್ ಮಾಡಿದ್ದಾರೆ.

ಆಶ್ಚರ್ಯ ಅಂದ್ರೆ, ಕಾವ್ಯಾ ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇನ್ನೊಬ್ಬ ಸ್ಪರ್ಧಿ ರಜತ್​​ ಕಿಶನ್‌ರನ್ನೂ ಕಾವ್ಯ ನಾಮಿನೇಟ್ ಮಾಡಿದ್ದಾರೆ.

ಇದನ್ನೂ ಓದಿ : ಲವ್, ಸೆ*ಕ್ಸ್, ದೋಖಾ… ಪ್ರೀತಿಸಿದ ಯುವಕನ ಮೋಸದಾಟಕ್ಕೆ ಯುವತಿ ಬ*ಲಿ

ರಣರಂಗವಾಯ್ತು ‘ಬಿಗ್’ ಮನೆ :

ಕಾವ್ಯಾ ನಾಮಿನೇಟ್ ಮಾಡುತ್ತಿದ್ದಂತೆ ಗಿಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿದಂತೆ ಕಂಡಿಲ್ಲ. ಆದರೆ, ರಜತ್ ಕಾವ್ಯಾ ಜೊತೆ ಜಗಳವಾಡಿದ್ದಾರೆ.   ಕೊನೆಗೆ ರಜತ್ ಹಾಗೂ ಧ್ರುವಂತ್ ಮಧ್ಯೆ ಗಲಾಟೆಯಾಗಿದೆ. ಇಬ್ಬರು ಸ್ಪರ್ಧಿಗಳು ಜೋರಾಗಿ ಜಗಳ ಮಾಡಿಕೊಂಡಿದ್ದಾರೆ. ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ. ಇತರೆ ಸ್ಪರ್ಧಿಗಳು ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ವಿಲನ್ ಆಟ ಇನ್ನು ಹೇಗಿರುತ್ತೆ ಅನ್ನೋದು ಸದ್ಯದ ಕುತೂಹಲ.

Continue Reading

BIG BOSS

ಬಿಗ್ ಬಾಸ್ ಮನೆಯೀಗ ‘ವಿಲನ್’ ತೆಕ್ಕೆಗೆ…ಚೈತ್ರಾ ಕಿರುಚಿದ್ದೇಕೆ!?

Published

on

BBK12 : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಅಭಿಷೇಕ್ ಎಲಿಮಿನೇಟ್ ಆಗಿದ್ದರು. ಈ ನಡುವೆ ಈ ವಾರ ದೊಡ್ಮನೆ ಮಂದಿಗೆ ಶಾ*ಕ್ ಕೊಟ್ಟಿದ್ದಾರೆ ಬಿಗ್ ಬಾಸ್. ಹೌದು, ಬಿಗ್ ಬಾಸ್ ಮನೆಯನ್ನು ಬಿಗ್ ಬಾಸ್ ಅಲ್ಲ, ವಿಲನ್ ಆಳಲು ಶುರು ಮಾಡಿದ್ದಾರೆ. ಮನೆಯನ್ನು  ವಿಲನ್ ಕಂಟ್ರೋಲ್ ಮಾಡಲಿದ್ದಾರೆಂದು ಅನೌನ್ಸ್ ಆಗುತ್ತಿದ್ದಂತೆ ಸ್ಪರ್ಧಿಗಳು ಶಾ*ಕ್ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಗ್ ಬಾಸ್ ಅನೌನ್ಸ್ ಮಾಡುತ್ತಿದ್ದಂತೆ ಕೇಳಿಬಂದ ಅಟ್ಟಹಾಸಕ್ಕೆ ಮನೆಮಂದಿ ಗಾಬರಿಗೊಂಡಿದ್ದಾರೆ. ವಿಲನ್ ಜೋರಾಗಿ ನಗುತ್ತಿದ್ದಂತೆ ಚೈತ್ರಾ ಚೀರಿದ್ದಾರೆ. ಈ ಮನೆಯಲ್ಲಿ ಎಲ್ಲರ ನಿರ್ಧಾರಗಳು ನಂದೇ, ಅಬ್ಬರನೂ ನಂದೇ…ಈಗ ಈ ಮನೆಯನ್ನು ಕಂಟ್ರೋಲ್ ಮಾಡೋದು ಆ ನಿಮ್ಮ ಬಿಗ್ ಬಾಸ್ ಅಲ್ಲ, ನಾನು…ವಿಲನ್ ಎಂಬ ಧ್ವನಿ ಕೇಳಿ ಸ್ಪರ್ಧಿಗಳು ಭಯಭೀತರಾಗಿದ್ದಾರೆ.

ಇದನ್ನೂ ಓದಿ : ಅತ್ತ ಥಿಯೇಟರ್‌ಗೆ ಬರ್ತಾ ಇದ್ದೀನಿ ಚಿನ್ನ…ಇತ್ತ ಜೈಲಿನಲ್ಲಿ ಖೈದಿಗಳಿಗೆ ‘ಡೆವಿಲ್’ ಕಾಟ

ಮನೆಯಲ್ಲಿ ಕಂಡು ಬಂದ ಮುಖವಾಡ, ಪ್ರತಿಕೃತಿಗಳು ಮನೆಮಂದಿಯನ್ನು ಬೆಚ್ಚಿಬೀಳಿಸಿದೆ. ಯಾರು ಈ ವಿಲನ್‌ ಎಂಬ ಆತಂಕ ಉಂಟಾಗಿದೆ. ಎಚ್ಚರ…ನಾಳೆ ಬಾ ಎಂಬ ಬರಹಗಳು ಕಾಣಿಸಿಕೊಂಡಿವೆ. ಮನೆಯ ಸ್ಪರ್ಧಿಗಳು ಕೂಡ ವಿಲನ್‌ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರೋದು ಕುತೂಹಲ ಹುಟ್ಟಿಸಿದೆ.

Continue Reading

BIG BOSS

BBK12: ಗಿಲ್ಲಿ ಜಿಗಣೆ ಥರ ಎಂದ ಧ್ರುವಂತ್; ಕಿಚ್ಚ ಏನಂದ್ರು?

Published

on

BBK12: ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟನ ಹವಾ ಜೋರಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಹ ಸ್ಪರ್ಧಿಗಳ ಕಾಲೆಳೆಯುವ ಗಿಲ್ಲಿ, ಕಿಚ್ಚನ ಪಂಚಾಯ್ತಿಯಲ್ಲೂ ಇದನ್ನ ಮರೆಯೋದಿಲ್ಲ. ಅದರಲ್ಲೂ ಈ ವಾರ ಸುದೀಪ್ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ್ದಾರೆ ಗಿಲ್ಲಿ.


ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಎದುರಲ್ಲೇ ತಮಾಷೆ ಮಾಡಿದ್ದಾರೆ.

ಸುದೀಪ್‌ ಅವರು ಗಿಲ್ಲಿಯವರೇ ನಿಮಗೆ ಪುಸ್ತಕ ಬರಿಯೋಕೆ ಕೊಟ್ಟರೆ ಯಾರ ಬಗ್ಗೆ ಬರೆಯುತ್ತೀರಾ ಅಂತಾ ಸುದೀಪ್‌ ಕೇಳ್ತಾರೆ.. ಅದಕ್ಕೆ ಮೊದಲಿಗೆ ಧ್ರುವಂತ್‌ ಬಗ್ಗೆ ನಾ ಕಂಡ ಧ್ರುವಂತ ಅಂತಾ ಬರೆಯುತ್ತೀನಿ. ಯಾಕಂದ್ರೆ ನಾಮಿನೇಶನ್‌ ಅಂತಾ ಬಂದ್ರೆ ಧ್ರುವಂತ್‌ ನಾಗವಲ್ಲಿಯಾಗಿ ಬದಲಾಗ್ತಾರೆ..ಅವರ ಎಕ್ಸ್‌ಪ್ರೆಶನ್‌ ಚೇಂಜ್‌ ಆಗ್ತದೆ ಅಂತಾ ಗಿಲ್ಲಿ ಹೇಳಿದರು..ಇನ್ನು, ಈ ಕಥೆಯ ನಾಯಕ ಸೂರಜ್‌ ಸರ್‌ ಅವರು ಮೊದಲಿಗೆ ಸ್ವಿಮ್ಮಿಂಗ್‌ ಪೂಲಿನಿಂದ ಎದ್ದು ಬಂದಿದ್ದಾರೆ. ಅದಾದ್ಮೇಲೆ ಒಂದು ಕಡೆ ಬಿದ್ದೋರು ಇನ್ನೂ ಎದ್ದೆ ಇಲ್ಲ ಅಂತಾರೆ. ಆವಾಗ ಸೂರಜ್‌ ಹಾಗೂ ರಾಶಿಕಾ ರಿಯಾಕ್ಷನ್‌ ಚೇಂಜ್‌ ಆಗುತ್ತೆ, ಆದ್ರೆ ಸುದೀಪ್‌ ಮಾತ್ರ ಸಖತ್‌ ಮಜಾ ಮಾಡುತ್ತಾರೆ.

ಕೊನೆಯದಾಗಿ, ರಘು ಇಂದ ಫೈಟ್‌, ಆಕ್ಷನ್‌, ಎಲ್ಲ ಎಕ್ಸ್‌ಪೆಕ್ಟ್‌ ಮಾಡಿದ್ದೆ. ಆದರೆ ಕಿಚನ್‌ ಅಲ್ಲಿ ಬೆಳ್ಳುಳ್ಳಿ ಬಿಡಿಸೋದು ಈರುಳ್ಳಿ ಕಟ್‌ ಮಾಡೋದು ನೋಡಿದೆ ಎಂದು ರಘು ಅವರ ಕಾಲೆಳೆದಿದ್ದಾರೆ.

ಇದನ್ನೂ ಓದಿ: BBK12: ಎಲಿಮಿನೇಟ್‌ ವೇಳೆ ಟ್ವಿಸ್ಟ್; ದೊಡ್ಮನೆಯ ನೆಚ್ಚಿನ ಸ್ಪರ್ಧಿಯೇ ಔಟ್!?

ಗಿಲ್ಲಿ ನಟ ತಿಗಣೆ ಥರ
ಧ್ರುವಂತ್‌ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದು, “ಅವರು ತಿಗಣೆ ಥರ, ತಾನು ಬದುಕಬೇಕು ಎಂದಾಗ ಯಾರನ್ನಾದರೂ ಕಚ್ಚುತ್ತಾ ಇರಬೇಕು” ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page