Connect with us

BIG BOSS

BIGG BOSS; ಗೆದ್ದವರಿಗೆ ಗ್ರ್ಯಾಂಡ್​ ಫಿನಾಲೆ ಟಿಕೆಟ್.. ಬಿಗ್ ಬಾಸ್ ಕೊಟ್ಟ ಟಾಸ್ಕ್ ಹೇಗಿದೆ?

Published

on

ಕನ್ನಡದ ಬಿಗ್​​ ಬಾಸ್​ ಶೋನಲ್ಲಿ ಕಳೆದ ವಾರ ಯಾರನ್ನೂ ಮನೆಯಿಂದ ಆಚೆ ಕಳಿಸಿಲ್ಲ. ಆದರೆ ಈ ವಾರ 9 ಸ್ಪರ್ಧಿಗಳಲ್ಲಿ ಯಾರದರೂ ಗೇಟ್ ಪಾಸ್ ಪಡೆದುಕೊಳ್ಳುತ್ತಾರೆ. ಅದು ಯಾರು ಎಂಬುದೇ ಪ್ರೇಕ್ಷಕರ ಕುತೂಹಲವಾಗಿತ್ತದೆ. ಹೀಗಾಗಿಯೇ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಯನ್ನು ಹೊರಗೆ ಕಳಿಸಿಕೊಡುತ್ತಾರೆ. ಗ್ರ್ಯಾಂಡ್ ಫಿನಾಲೆ ಸಮೀಪಿಸುತ್ತಿದ್ದು ಸ್ಪರ್ಧಿಗಳಿಗೆ ಒತ್ತಡ ಹೆಚ್ಚಾಗಿದೆ. ಇದರ ಜೊತೆ ಟಾಸ್ಕ್​ಗಳಲ್ಲೂ ಗೆಲುವು ಪಡೆಯಬೇಕಾಗಿದೆ.

ಮನೆಯಲ್ಲಿನ ಸದಸ್ಯರಿಗೆ ಇಂದು ನೀಡಿರುವ ಟಾಸ್ಕ್​ನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದೆ ಹೆಚ್ಚು ಕಾಣುತ್ತದೆ. ಟಾಸ್ಕ್​ ಪ್ರಕಾರ ಒಂದು ಕೈಯಲ್ಲಿ ಪೋಲ್ ಮತ್ತೊಂದು ಕೈಯಲ್ಲಿ ಬಣ್ಣದ ನೀರಿನ ಬಾಟಲ್ ಕೊಟ್ಟಿರುತ್ತಾರೆ. ಒಂದು ಬಾರಿಗೆ ಇಬ್ಬರು ಸ್ಪರ್ಧಿಗಳು ಆಡಬೇಕು. ಕೈಯಲ್ಲಿರುವ ಪೋಲ್​ನಿಂದ ಹೊಡೆದು ಬಾಟಲ್ ಒಳಗಿನ ಬಣ್ಣದ ನೀರಿನ್ನು ಚೆಲ್ಲಬೇಕು. ಯಾರ ನೀರು ಹೆಚ್ಚಿಗೆ ಚೆಲ್ಲುತ್ತಾವೋ ಅವರು ಸೋತಂತೆ. ಒಂದು ವೇಳೆ ಬಾಟಲ್ ಕೆಳಗೆ ಬಿದ್ದರೂ ಸ್ಪರ್ಧಿ ಸೋತಾಗೆ.

ಸದ್ಯ ಈ ರೀತಿಯ ಗೇಮ್ ಆಡುವಾಗ ತ್ರಿವಿಕ್ರಮ್ ಮುಖ, ಮುಖಕ್ಕೆ ಮಂಜು ಪೋಲ್​ನಿಂದ ಹೊಡೆದರು. ಹೆಂಗೆ ಬಿತ್ತು, ಹೇಗೆ ಬಿತ್ತು ಎಂದು ಹೇಳಿದರೆ, ಹೀಗೆ ಹೊಡೆದರೆ ಹೆಂಗೆ?. ನಾನು ಹೊಡೆಯುತ್ತೇನೆ ಎಂದು 2 ಸೆಕೆಂಡ್​ಗೆ ಮಂಜು ಕೈಯಲ್ಲಿನ ಬಾಟಲ್ ಬೀಳಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಪೋಲ್​ನಿಂದ ತ್ರಿವಿಕ್ರಮ್ ಹೊಡೆದಿರುವುದು ವಿಡಿಯೋದಲ್ಲಿದೆ. ಆದರೆ ಮಂಜು ಕೈಯಿಂದ ಬಾಟಲ್ ಕೆಳಗೆ ಬಿದ್ದಿಲ್ಲ. ಆಡುವಾಗ ಎಲ್ಲ ಸ್ಪರ್ಧಿಗಳು ನಿಯಮ ಮೀರಿದ್ದಾರೆ ಎನ್ನಲಾಗಿದೆ. ಆದರೆ ಈ ಟಾಸ್ಕ್​ನಲ್ಲಿ ಯಾರು ಗೆದ್ದಿದಾರೆ ಎನ್ನುವುದು ಕುತೂಹಲ ವಿದೆ.

ಇನ್ನು ತ್ರಿವಿಕ್ರಮ್ ಹಾಗೂ ಮಂಜು ನಡುವೆ ಮಾತಿನ ಸಮರ ನಡೆದಿದ್ದು ಟಾಸ್ಕ್​ನಲ್ಲೂ ಇಬ್ಬರು ಕೋಪದಲ್ಲೇ ಆಡಿದ್ದಾರೆ. ಮನೆ ಕ್ಯಾಪ್ಟನ್ ಆಗಿರುವ ರಜತ್ ಅವರು ಏನು ಮಾಡೋಕೆ ಆಗಲ್ಲ ಗುರು, ಕಾಪಾಡಿಕೋ ಎಂದು ಮಂಜುಗೆ ಹೇಳಿದ್ದಾರೆ. ಬಿಗ್​ಬಾಸ್ ಪ್ರಕಾರ ಯಾರು ಟಾಸ್ಕ್​ ಚೆನ್ನಾಗಿ ಪೂರ್ಣಗೊಳಿಸಿ ಗೆಲವು ಪಡೆಯುತ್ತಾರೋ ಅವರಿಗೆ ಫಿನಾಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರು ಆ ಅದೃಷ್ಣಶಾಲಿಗಳು ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

BIG BOSS

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್ ಬಾಸ್ ಸ್ಪರ್ಧಿಗಳು

Published

on

ಉಡುಪಿ: ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮೋಕ್ಷಿತಾ, ಐಶ್ವರ್ಯ ಮತ್ತು ಶಿಶಿರ್ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ.

ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಮೋಕ್ಷಿತಾ, ಶಿಶಿರ್, ಐಶ್ವರ್ಯಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿ ರಂಜಿತ್ ಅವರ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಇತ್ತೀಷೆಗಷ್ಟೇ ಇವರು ಮೂವರು ಭಾಗಿಯಾಗಿದ್ದರು. ಬಿಗ್‌ಬಾಸ್ ಸೀಸನ್ 11 ಮುಗಿದ ಬಳಿಕ ಹಲವು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸ್ಪರ್ಧಿಗಳು ಇದೀಗ ಟೆಂಪಲ್ ರನ್ ಮಾಡಿದ್ದಾರೆ.

Continue Reading

BIG BOSS

ಪಿಂಕ್ ಫ್ರಾಕ್ ತೊಟ್ಟು ನಿವಿ ಮಿಂಚಿಂಗ್; ಅಷ್ಟಕ್ಕೂ ನಿವೇದಿತಾಳ ನಿಜವಾದ ವಯಸ್ಸೆಷ್ಟು..?

Published

on

ಟಿಕ್ ಟಾಕ್ ಮುಖಾಂತರವೇ ಪಡ್ಡೇ ಹುಡುಗರ ಹೃದಯ ಕದ್ದ ಚೋರಿ, ತನ್ನ ಕೇಶ ಸೌಂದರ್ಯದ ಮೂಲಕ ಭಾರೀ ಹೆಸರುವಾಸಿಯಾಗಿದ್ದರು.

20 ವರ್ಷ ತುಂಬುವ ಮನ್ನವೇ, ಅಂದರೆ ಅತೀ ಚಿಕ್ಕ ಪ್ರಾಯದಲ್ಲಿಯೇ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಸುಂದರಿ ನಿವೇದಿತಾ ಗೌಡ ಸದ್ಯ ದಿನಕ್ಕೊಂದು ಪೋಸ್ಟ್ ಹಾಕುವ ಮೂಲಕ ಭಾರೀ ಜನಪ್ರಿಯರಾಗಿದ್ದಾರೆ.

ನಿವೇದಿತಾ ಗೌಡ ಅವರು ಬಿಗ್‌ ಬಾಸ್‌ ಸಹಸ್ಪರ್ಧಿ ಚಂದನ್‌ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. ಹೊಂದಾಣಿಕೆ ಸಮಸ್ಯೆಯಿಂದ ಈ ಜೋಡಿ ಡಿವೋರ್ಸ್‌ ಪಡೆದಿದೆ.

ಸದ್ಯ ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಅವರು ʼಬಾಯ್ಸ್‌ v/s ಗರ್ಲ್ಸ್ʼ‌ ಶೋ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಈಗ ನಿವಿಗೆ 26 ವರ್ಷ ವಯಸ್ಸಂತೆ. 1998ರಲ್ಲಿ ಜನಿಸಿದರು ಎನ್ನಲಾಗಿದೆ.

Continue Reading

BIG BOSS

ಮಹಾರಾಷ್ಟ್ರದ ಲುಕ್‌ನಲ್ಲಿ ಮಿಂಚುತ್ತಿದ್ದಾರೆ ಬಿಗ್‌ಬಾಸ್ ಚೈತ್ರಾ ಕುಂದಾಪುರ

Published

on

ಬೆಂಗಳೂರು: ಬಿಗ್‌ಬಾಸ್ ಚೈತ್ರಾ ಕುಂದಾಪುರ ಇದೀಗ ದಿನಕ್ಕೊಂದು ಹೊಸ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇವರ ಲುಕ್ ಅನ್ನು ನೋಡಿದ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಅಲ್ಲದೇ ಈ ಮೊದಲು ಫೈರ್ ಬ್ರಾಂಡ್ ಆಗಿದ್ದ ಚೈತ್ರಾ ಮೇಲೆ ಈಗ ಎಲ್ಲಾರಿಗೂ ಸಾಫ್ಟ್ ಕಾರ್ನರ್ ಹುಟ್ಟಿದೆ. ಸೋಷಿಯಾಲ್ ಮೀಡಿಯಾದಲ್ಲೂ ತುಂಬಾನೇ ಆಕ್ಟಿವ್ ಆಗಿದ್ದಾರೆ. ಇದೀಗ ಚೈತ್ರಾ ಕುಂದಾಪುರ ಮಹಾರಾಷ್ಟ್ರದ ಬೆಡಗಿಯಾಗಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೋಳಿಗೆ ಬೆನ್ನಲ್ಲೇ ಟೊಮೇಟೋ ಸಾಸ್, ಬೆಲ್ಲದಲ್ಲೂ ಕೆಮಿಕಲ್!

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡಿರುವ ಚೈತ್ರಾ, ಕೆಂಪು ಬಣ್ಣದ ಬಾರ್ಡರ್ ಹಾಗೂ ಪಲ್ಲು ಇರುವ, ಹಸಿರು ಬಣ್ಣದ ಸೀರೆ, ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿ ಮಹಾರಾಷ್ಟ್ರ, ಸ್ಟೈಲಿನಲ್ಲಿ ಸೀರೆಯುಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಮಹಾರಾಷ್ಟ್ರದ ಒಡವೆಗಳನ್ನು ಧರಿಸಿ, ಸಖತ್ ಆಗಿ ಫೋಸ್ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಈ ಲುಕ್ ಸದ್ಯ ಸಖತ್ ವೈರಲ್ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page