Connect with us

BIG BOSS

ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ

Published

on

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನ ಬಿಗ್ ಬಾಸ್‌ ನಲ್ಲಿ ನಿಯಮಗಳನ್ನು ಫಾಲೋ ಮಾಡೋ ವಿಚಾರದಲ್ಲೇ ಹಲವು ವಾಗ್ವಾದಗಳು ನಡೆದವು. ಬಿಗ್‌ಬಾಸ್ ನಿಯಮವನ್ನು ಅರ್ಥ ಮಾಡಿಕೊಳ್ಳವಲ್ಲೇ ಮನೆ ಮಂದಿ ಸೋತರು. ಸ್ವರ್ಗ ಮತ್ತು ನರಕದಲ್ಲಿ ಯಾರು ಯಾವ ನಿಯಮ ಫಾಲೋ ಮಾಡಬೇಕೆನ್ನುವುದರ ಬದಲಾಗಿ ಹಲವಾರು ಗೊಂದಲಗಳೇ ಹೆಚ್ಚಾಯ್ತು.

ಸ್ವರ್ಗದ ಇಡೀ ಮನೆಯನ್ನು ಕ್ಲೀನ್ ಮಾಡಲು ಚೈತ್ರಾ ಕುಂದಾಪುರ ಮತ್ತು ಸುರೇಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ನರಕ ನಿವಾಸಿಗಳು ಇಷ್ಟನ್ನೂ ನಾವು ಸರಿಯಾಗಿ ಮಾಡಿಲ್ಲವೆಂದರೆ ಸ್ವರ್ಗ ನಿವಾಸಿಗಳೇ ಹೊಣೆ ಆಗುತ್ತಾರೆ. ಕೆಲಸ ಕರೆಕ್ಟ್ ಮಾಡದೆ ಟೈಂ ವೇಸ್ಟ್ ಮಾಡಬೇಕು ಎಂದು ಮಾತನಾಡಿಕೊಂಡರು. ಇತ್ತ ಸ್ವರ್ಗದಲ್ಲಿ ನರಕ ವಾಸಿಗಳು ಮಿಸ್ಟೇಕ್ ಮಾಡಲು ಪ್ರಯತ್ನ ಪಡಬಹುದು ಎಂದು ಮಾತನಾಡಿಕೊಂಡರು.

ಈ ಮಧ್ಯೆ ಲಾಯರ್ ಜಗದೀಶ್ ಬಂದು ಸ್ವರ್ಗದ ವಾತಾವರಣ ಹಾಳಾಗಿದೆ. ಮೆಲ್ಲಗೆ ಮಾತನಾಡಬೇಕು ಎಂಬ ಆದೇಶ ಬಂದಿದೆ ಎಂದು ಹೇಳಿದ್ದಾರೆ ಎಂದು ಪಿನ್ ಇಟ್ಟರು. ಇದಕ್ಕೆ ಚೈತ್ರಾ ಕುಂದಾಪುರ ಒಂದೋ ಪ್ರತಿಯಲ್ಲಿ ಬರಬೇಕು ಇಲ್ಲವೇ ಬಿಗ್ಬಾಸ್‌ ಅನೌನ್ಸ್ ಮಾಡಬೇಕು ಅಂದರು. ಇದು ಅಡುಗೆ ಮನೆಯಲ್ಲಿ ಯಮುನಾ ಮತ್ತು ಚೈತ್ರಾ ಮಧ್ಯೆ ದೊಡ್ಡ ಗಲಾಟೆಗೆ ಕಾರಣವಾಯ್ತು. ಎಷ್ಟು ಮಾತನಾಡಬೇಕು ಅಷ್ಟೇ ಮಾತನಾಡಿದರೆ ಒಳ್ಳೆಯದು ಎಂದು ಇಬ್ಬರ ನಡುವೆ ಗಲಾಟೆ ಆಯ್ತು. ನೀವು ತುಂಬಾ ಮಾತನಾಡುತ್ತೀರಿ ಎಂದು ಚೈತ್ರಾ ಎಂದು ಯಮುನಾ ಆರೋಪಿಸಿದರು. ನಾನು ಮಾತನಾಡಬಾರದು ಎಂದು ನೀವು ಹೇಳುವ ಹಾಗಿಲ್ಲ ಎಂದು ಚೈತ್ರ ಎದುರುತ್ತರ ನೀಡಿದರು. ಅಡುಗೆ ಮನೆಯಲ್ಲಿ ಕಾವು ಹೆಚ್ಚಾಯ್ತು. ಇತ್ತ ನರಕವಾಸಿಗಳ ಬಳಿ ಬಂದು ಜಗದೀಶ್ ನಗುತ್ತಿದ್ದರು.

ಮುಂದುವರೆದು ಮಂಜು ಕೈನಿಂದ ಚೈತ್ರಾ ಪೇರಳೆಯನ್ನು ಕಿತ್ತುಕೊಂಡು ತಿಂದು ನರಕಕ್ಕೆ ಬಿಸಾಡಿದ್ದು ಅಲ್ಲಿದ್ದವರೆಲ್ಲ ಆ ಹಣ್ಣನ್ನು ತಿಂದರು. ಇದು ಮತ್ತೆ ನಿಯಮ ಉಲ್ಲಂಘಿಸಿದ್ದೀರಿ ಎಂದು ಮನೆಯರ ವಾಗ್ವಾದಕ್ಕೆ ಕಾರಣವಾಯ್ತು. ಇದೇ ವಿಚಾರವಾಗಿ ಮತ್ತೆ ಯಮುನಾ ಮತ್ತು ಚೈತ್ರಾ ನಡುವೆ ಗಲಾಟೆ ನಡೆದು ಚೈತ್ರಾ ರೂಲ್ಸ್ ಬ್ರೇಕ್‌ ಮಾಡಿದ್ರೆ ಬಿಗ್‌ಬಾಸ್‌ ನನಗೆ ಶಿಕ್ಷೆ ನೀಡ್ತಾರೆ ನೀವು ಯಾರು ಎಂದು ವಾಗ್ವದ ನಡೆದು ಕೊನೆಗೆ ಯಮುನಾ ಕ್ಯಾಮರಾ ಮುಂದೆ ಬಂದು ಬಿಗ್‌ಬಾಸ್‌ ಶಿಕ್ಷೆ ನೀಡಿ ಎಂದು ಕೇಳಿಕೊಂಡರು.

BIG BOSS

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್ ಬಾಸ್ ಸ್ಪರ್ಧಿಗಳು

Published

on

ಉಡುಪಿ: ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮೋಕ್ಷಿತಾ, ಐಶ್ವರ್ಯ ಮತ್ತು ಶಿಶಿರ್ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ.

ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಮೋಕ್ಷಿತಾ, ಶಿಶಿರ್, ಐಶ್ವರ್ಯಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿ ರಂಜಿತ್ ಅವರ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಇತ್ತೀಷೆಗಷ್ಟೇ ಇವರು ಮೂವರು ಭಾಗಿಯಾಗಿದ್ದರು. ಬಿಗ್‌ಬಾಸ್ ಸೀಸನ್ 11 ಮುಗಿದ ಬಳಿಕ ಹಲವು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸ್ಪರ್ಧಿಗಳು ಇದೀಗ ಟೆಂಪಲ್ ರನ್ ಮಾಡಿದ್ದಾರೆ.

Continue Reading

BIG BOSS

ಪಿಂಕ್ ಫ್ರಾಕ್ ತೊಟ್ಟು ನಿವಿ ಮಿಂಚಿಂಗ್; ಅಷ್ಟಕ್ಕೂ ನಿವೇದಿತಾಳ ನಿಜವಾದ ವಯಸ್ಸೆಷ್ಟು..?

Published

on

ಟಿಕ್ ಟಾಕ್ ಮುಖಾಂತರವೇ ಪಡ್ಡೇ ಹುಡುಗರ ಹೃದಯ ಕದ್ದ ಚೋರಿ, ತನ್ನ ಕೇಶ ಸೌಂದರ್ಯದ ಮೂಲಕ ಭಾರೀ ಹೆಸರುವಾಸಿಯಾಗಿದ್ದರು.

20 ವರ್ಷ ತುಂಬುವ ಮನ್ನವೇ, ಅಂದರೆ ಅತೀ ಚಿಕ್ಕ ಪ್ರಾಯದಲ್ಲಿಯೇ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಸುಂದರಿ ನಿವೇದಿತಾ ಗೌಡ ಸದ್ಯ ದಿನಕ್ಕೊಂದು ಪೋಸ್ಟ್ ಹಾಕುವ ಮೂಲಕ ಭಾರೀ ಜನಪ್ರಿಯರಾಗಿದ್ದಾರೆ.

ನಿವೇದಿತಾ ಗೌಡ ಅವರು ಬಿಗ್‌ ಬಾಸ್‌ ಸಹಸ್ಪರ್ಧಿ ಚಂದನ್‌ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. ಹೊಂದಾಣಿಕೆ ಸಮಸ್ಯೆಯಿಂದ ಈ ಜೋಡಿ ಡಿವೋರ್ಸ್‌ ಪಡೆದಿದೆ.

ಸದ್ಯ ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಅವರು ʼಬಾಯ್ಸ್‌ v/s ಗರ್ಲ್ಸ್ʼ‌ ಶೋ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಈಗ ನಿವಿಗೆ 26 ವರ್ಷ ವಯಸ್ಸಂತೆ. 1998ರಲ್ಲಿ ಜನಿಸಿದರು ಎನ್ನಲಾಗಿದೆ.

Continue Reading

BIG BOSS

ಮಹಾರಾಷ್ಟ್ರದ ಲುಕ್‌ನಲ್ಲಿ ಮಿಂಚುತ್ತಿದ್ದಾರೆ ಬಿಗ್‌ಬಾಸ್ ಚೈತ್ರಾ ಕುಂದಾಪುರ

Published

on

ಬೆಂಗಳೂರು: ಬಿಗ್‌ಬಾಸ್ ಚೈತ್ರಾ ಕುಂದಾಪುರ ಇದೀಗ ದಿನಕ್ಕೊಂದು ಹೊಸ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇವರ ಲುಕ್ ಅನ್ನು ನೋಡಿದ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಅಲ್ಲದೇ ಈ ಮೊದಲು ಫೈರ್ ಬ್ರಾಂಡ್ ಆಗಿದ್ದ ಚೈತ್ರಾ ಮೇಲೆ ಈಗ ಎಲ್ಲಾರಿಗೂ ಸಾಫ್ಟ್ ಕಾರ್ನರ್ ಹುಟ್ಟಿದೆ. ಸೋಷಿಯಾಲ್ ಮೀಡಿಯಾದಲ್ಲೂ ತುಂಬಾನೇ ಆಕ್ಟಿವ್ ಆಗಿದ್ದಾರೆ. ಇದೀಗ ಚೈತ್ರಾ ಕುಂದಾಪುರ ಮಹಾರಾಷ್ಟ್ರದ ಬೆಡಗಿಯಾಗಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೋಳಿಗೆ ಬೆನ್ನಲ್ಲೇ ಟೊಮೇಟೋ ಸಾಸ್, ಬೆಲ್ಲದಲ್ಲೂ ಕೆಮಿಕಲ್!

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡಿರುವ ಚೈತ್ರಾ, ಕೆಂಪು ಬಣ್ಣದ ಬಾರ್ಡರ್ ಹಾಗೂ ಪಲ್ಲು ಇರುವ, ಹಸಿರು ಬಣ್ಣದ ಸೀರೆ, ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿ ಮಹಾರಾಷ್ಟ್ರ, ಸ್ಟೈಲಿನಲ್ಲಿ ಸೀರೆಯುಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಮಹಾರಾಷ್ಟ್ರದ ಒಡವೆಗಳನ್ನು ಧರಿಸಿ, ಸಖತ್ ಆಗಿ ಫೋಸ್ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಈ ಲುಕ್ ಸದ್ಯ ಸಖತ್ ವೈರಲ್ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page