Connect with us

FILM

ಬರಲಿದೆ ಬಿಗ್ ಬಾಸ್…ಮುಕ್ತಾಯಗೊಳ್ಳಲಿವೆ ಈ ಮೂರು ಜನಪ್ರಿಯ ಧಾರಾವಾಹಿಗಳು!

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12 ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಪ್ರೋಮೋ ಮೂಲಕ ಸದ್ದು ಮಾಡುತ್ತಿರುವ ಬಿಗ್ ಬಾಸ್  ಬಗ್ಗೆ ಭಾರೀ ಕುತೂಹಲವಿದೆ. ಯಾರು  ಈ ಬಾರಿಯ ಸ್ಪರ್ಧಿಗಳು? ಹೇಗಿರಲಿದೆ ಬಿಗ್ ಬಾಸ್ ಮನೆ? ಎಂಬಿತ್ಯಾದಿ ಪ್ರಶ್ನೆಗಳು ಬಿಗ್ ಬಾಸ್ ಅಭಿಮಾನಿಗಳಲ್ಲಿದೆ. ಅಷ್ಟೆ ಅಲ್ಲದೆ, ಬಿಗ್ ಬಾಸ್ ಎಂಟ್ರಿ ಕೊಡುವಾಗ ಯಾವ ಧಾರಾವಾಹಿ ಅಂತ್ಯ ಹಾಡಲಿವೆ ಎಂಬ ಪ್ರಶ್ನೆಯೂ ಇದೆ.

ಈ ನಡುವೆ ಜನಪ್ರಿಯ ಧಾರಾವಾಹಿಗಳು ಮುಗಿಯಲಿವೆ ಎಂಬ ಸುದ್ದಿಯೊಂದು ಹರಿದಾಡುತ್ತಿವೆ. ರಾಮಾಚಾರಿ ಹಾಗೂ ದೃಷ್ಟಿಬೊಟ್ಟು ಧಾರಾವಾಹಿಗಳು ಮುಗಿಯಲಿವೆ ಎನ್ನಲಾಗಿದೆ. ಈಗಾಗಲೇ ಕೊನೆಯ ಸಂಚಿಕೆಗಳ ಶೂಟಿಂಗ್ ಮುಗಿದಿದೆಯಂತೆ.

ಸೆ.21 ರಂದು ದೃಷ್ಟಿಬೊಟ್ಟು ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ ಎನ್ನಲಾಗಿದೆ. ಅಂದ್ಹಾಗೆ ಈ ಧಾರಾವಾಹಿಯಿಂದ ಈಗಾಗಲೇ ಹೊರಬಂದಿರುವ ವಿಜಯ್ ಸೂರ್ಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ರಾಮಾಚಾರಿ ಇನ್ನು ಸ್ವಲ್ಪ ದಿನಗಳ ಕಾಲ ಪ್ರಸಾರವಾಗಲಿದೆ ಎನ್ನಲಾಗಿದೆ.

ಮತ್ತೊಂದು ಜನಪ್ರಿಯ ಧಾರಾವಾಹಿ  ಮುಕ್ತಾಯ ಕಾಣಲಿದೆ. ಆ ಧಾರಾವಾಹಿಯೇ ‘ನಿನಗಾಗಿ’. ರಿತ್ವಿಕ್ ಮಠದ್ ಮತ್ತು ದಿವ್ಯಾ ಉರುಡುಗ ಮುಖ್ಯ ಭೂಮಿಕೆಯಲ್ಲಿರುವ ನಿನಗಾಗಿ ಧಾರಾವಾಹಿ ಆರಂಭವಾದಾಗಿನಿಂದ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಹಲವು ತಿರುವುಗಳನ್ನು ಒಳಗೊಂಡಿರುವ ಈ ಧಾರಾವಾಹಿಯ ಕಥೆ ವೇಗ ಪಡೆದಿದೆ.

ರಚನಾ ಸದ್ಯ ವಿಲನ್ ದೇವಿಯ ಸತ್ಯ ಬಯಲು ಮಾಡುತ್ತಿದ್ದಾಳೆ. ಅತ್ತ ಬ್ಯುಸಿನೆಸ್‌ನಲ್ಲಿ ನಡೆಯುತ್ತಿರುವ ಕಳ್ಳಾಟಗಳೂ ಜೀವ ಮುಂದೆ ಬಯಲಾಗುತ್ತಿದೆ. ಹೀಗಾಗಿ ಈ ಧಾರಾವಾಹಿ ಮುಗಿಯಬಹುದು ಎಂಬ ಅನುಮಾನವಿದೆ.

ಇದನ್ನೂ ಓದಿ : ಕತ್ರಿನಾ ಕೈಫ್ – ವಿಕ್ಕಿ ಕೌಶಲ್ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ನಿಜಾನಾ?

ಸದ್ಯದಲ್ಲೇ ಯಾವ ಧಾರಾವಾಹಿ ಅಂತ್ಯ ಕಾಣಲಿದೆ ಎಂಬುದು ಗೊತ್ತಾಗಲಿದೆ.  ಅಂದ್ಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸೆ.28 ರಂದು ಅದ್ದೂರಿ ಚಾಲನೆ ಸಿಗಲಿದೆ.  ಈ ಬಾರಿಯೂ ಕಿಚ್ಚ ಸುದೀಪ್ ನಿರೂಪಕರಾಗಿ ಮುಂದುವರಿಯಲಿದ್ದಾರೆ.

FILM

WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

Published

on

ಮಂಗಳೂರು/ಹೈದರಾಬಾದ್ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗೆಗಿನ ಸುದ್ದಿಯೇನು ಹೊಸತಲ್ಲ.  ಇವರಿಬ್ಬರ ಪ್ರೀತಿ, ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಇದೀಗ ಈ ಗಾಸಿಪ್‌ಗೆ ಪುಷ್ಠಿ ಕೊಡುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಚಿತ್ರ ತಂಡ ನವೆಂಬರ್ 12 ರಂದು ಹೈದರಾಬಾದ್​ನಲ್ಲಿ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು. ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ರಶ್ಮಿಕಾ ಕಾಣುತ್ತಿದ್ದಂತೆ ವಿಜಯ್ ದೇವರಕೊಂಡ ನಕ್ಕಿದ್ದಾರೆ. ರಶ್ಮಿಕಾ ಕೈ ಹಿಡಿದು ಕುಲುಕಿದ್ದಾರೆ. ಬಳಿಕ ಕೈಗೆ ಮುತ್ತಿಕ್ಕಿದ್ದಾರೆ. ಇದರಿಂದ ರಶ್ಮಿಕಾ ಮತ್ತಷ್ಟು ಖುಷಿಕೊಂಡರು. ಸದ್ಯ  ಈ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ :  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

ಈ ವೀಡಿಯೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇವರದ್ದು ಬೆಸ್ಟ್ ಜೋಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

Continue Reading

FILM

ಕುಟುಂಬ ಸಮೇತರಾಗಿ ಕಾಪು ಕ್ಷೇತ್ರಕ್ಕೆ ನಟಿ ಶ್ರುತಿ ಭೇಟಿ

Published

on

ಕಾಪು : ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರುತಿ ಕುಟುಂಬ ಸಮೇತರಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ದ ದೇಗುಲಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.

ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಬಳಿಕ ಮಾತನಾಡಿದ ನಟಿ, ನಾನು ಇಲ್ಲಿನ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುವುದಿತ್ತು. ಜೊತೆಗೆ ಇಲ್ಲಿನ ಕಾಪು ಮಾರಿಯಮ್ಮ ದೇವಸ್ಥಾನದ ಬಗ್ಗೆ ಕೇಳಿದ್ದೆ. ದೇಗುಲ ಬಹಳ ಸುಂದರವಾಗಿ ಮೂಡಿ ಬಂದಿದೆ. ಕರಾವಳಿ ಭಾಗಕ್ಕೆ ಭೇಟಿ ನೀಡುವ ಯಾತ್ರಿಗಳು, ಪ್ರವಾಸಿಗರು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಿ ಎಂದರು.

ಇದನ್ನೂ ಓದಿ : ರಿಲೀಸ್ ಗೆ ಮೊದಲೇ ‘ಕಾಂತಾ’ ವಿರುದ್ಧ ದೂರು! ಸಂಕಷ್ಟದಲ್ಲಿ ನಿರ್ಮಾಪಕ ದಗ್ಗುಬಾಟಿ

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Continue Reading

FILM

ರಿಲೀಸ್ ಗೆ ಮೊದಲೇ ‘ಕಾಂತಾ’ ವಿರುದ್ಧ ದೂರು! ಸಂಕಷ್ಟದಲ್ಲಿ ನಿರ್ಮಾಪಕ ದಗ್ಗುಬಾಟಿ

Published

on

ಚೆನ್ನೈ: ರಾಣಾ ದಗ್ಗುಬಾಟಿ ನಿರ್ಮಿಸಿರುವ ‘ಕಾಂತಾ’ ಸಿನಿಮಾ ರಿಲೀಸ್‌ಗೆ ಇನ್ನೆರೆಡು ದಿನಗಳು ಇರುವಾಗಲೇ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ವಿರುದ್ಧ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ.

ಖ್ಯಾತ ನಟ ದುಲ್ಕರ್ ಸಲ್ಮಾನ್ ನಟಿಸಿದ ಕಾಂತಾ ಸಿನಿಮಾ ತಮಿಳು ಚಿತ್ರರಂಗದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಕಮಾಲ್ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಚೆನ್ನೈನಲ್ಲಿ ಕಾಂತಾ ವಿರುದ್ಧ ಕೇಸು ದಾಖಲಾಗಿತ್ತು.

ಯಾಕೆ ಕೇಸ್?

ಕಾಂತಾ ಸಿನಿಮಾ 1955ರ ತಮಿಳು ಚಿತ್ರರಂಗದ ಪ್ರಥಮ ಸೂಪರ್ ಸ್ಟಾರ್ ಎಂ.ಕೆ. ತ್ಯಾಗರಾಜ್ ಭಾಗವತರ್ ಅವರ ಜೀವನ ಕುರಿತಾದ ಕಥೆಯನ್ನು ಹೊಂದಿದೆ ಎಂಬ ಮಾತುಗಳು ಕಿವಿಗೆ ಬಿದ್ದಿವೆ.
ಎಂ.ಕೆ ತ್ಯಾಗರಾಜ ಭಾಗವತರ್ ಅವರ ಜೀವನದ ಕುರಿತು ಸಿನಿಮಾ ಮಾಡುವ ಮೊದಲು ನಮ್ಮಿಂದ ಯಾವುದೇ ರೀತಿಯ ಅನುಮತಿ ಪಡೆದುಕೊಂಡಿಲ್ಲ ಹಾಗೂ ಅದರ ಕುರಿತು ಯಾವುದೇ ಸಂಭಾಷಣೆಯೂ ನಡೆದಿಲ್ಲ. ಆದ ಕಾರಣ ಚಿತ್ರಕ್ಕೆ ತಡೆ ನೀಡಬೇಕು ಎಂದು ತ್ಯಾಗರಾಜರ ಮೊಮ್ಮಗ ಚೆನ್ನೈನ ಸಿವಿಲ್ ನ್ಯಾಯಲಯದಲ್ಲಿ ಕಾಂತಾ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ.

ನಿರ್ಮಾಪಕ ರಾಣಾ ದಗ್ಗುಬಾಟಿ ಅವರ ಕಾಂತಾ ಸಿನಿಮಾವು ಕಾಲ್ಪನಿಕ ಕತೆಯನ್ನು ಹೊಂದಿದೆ. ಬದಲಾಗಿ ಯಾರ ವೈಯಕ್ತಿಕ ಜೀವನದ ಕುರಿತು ಇಲ್ಲ. ಚಿತ್ರವು ಯಾವುದೇ ಅಡೆತಡೆ ಇಲ್ಲದೆ ನವೆಂಬರ್ 14 ಕ್ಕೆ ಬಿಡುಗಡೆ ಆಗಲಿದೆ ಎಂದು ‘ಎಕ್ಸ್’ ನಲ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಓದಿ: 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವುದು ಅನುಮಾನ!?

ನಿರ್ದೇಶಕ ಸೆಲ್ವಮಣಿ ಸೆಲ್ವರಾಜ್ ಅವರ ಕಾಂತಾ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಟೀಕೆ ಮಹಮದ್ ಎಂಬ ಪಾತ್ರ ಮಾಡುತ್ತಿದ್ದು, ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಮುದ್ರಕಣಿ, ಭಾಗ್ಯಶ್ರೀ ಬೋರ್ಸೇ ನಾಯಕಿಯಾಗಿ ನಟಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page