Connect with us

BIG BOSS

ಬ್ಲಾಕ್ ಅಂಡ್ ವೈಟ್ ಥೀಮ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಗ್‌ಬಾಸ್ ಬೆಡಗಿ ಭವ್ಯ ಗೌಡ

Published

on

ಬೆಂಗಳೂರು: ತನ್ನ ಕ್ಯೂಟ್ ಎಕ್ಸ್‌ಪ್ರೇಷನ್ ಮೂಲಕವೇ ಬಿಗ್‌ಬಾಸ್ ಮನೆಯಲ್ಲಿ ಸಖತ್ ಫೇಮಸ್ ಆಗಿದ್ದ ಭವ್ಯ ಗೌಡ ತನ್ನ 26ನೇ ವರ್ಷದ ಹುಟ್ಟುಹಬ್ಬವನ್ನು ಭರ್ಜರಿಯಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಭವ್ಯಾ ಗೌಡ ಫ್ಯಾಮಿಲಿ ಹಾಗೂ ಆಕೆಯ ಅಭಿಮಾನಿಗಳು ಈ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದರು.

 

ಫೆಬ್ರವರಿ 26, 1999 ರಂದು ಭವ್ಯ ಗೌಡ ಜನಿಸಿದ್ದಾರೆ. ಬ್ಲಾಕ್ ಅಂಡ್ ವೈಟ್ ಥೀಮ್‌ನಲ್ಲಿ ಭವ್ಯಾ ಗೌಡ ಬರ್ತ್‌ಡೇ ಸೆಲೆಬ್ರೇಷನ್ ನಡೆಯಿತು. ಇದರಲ್ಲಿ ಅವರು ಬರ್ತ್​ ಡೇ ಪಾರ್ಟಿಗೆ ಬ್ಲಾಕ್​ ಟಾಪ್​ ಧರಿಸಿಕೊಂಡು ಫುಲ್​ ಮಿಂಚಿದ್ದಾರೆ.

ಬರ್ತ್​ ಡೇ ಪಾರ್ಟಿಯಲ್ಲಿ ಖುಷಿ ಖುಷಿಯಿಂದ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ. ಜೊತೆಗೆ ಬರ್ತ್​ ಡೇ ಸೆಲೆಬ್ರೇಷನ್​ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ಭವ್ಯಾ ಗೌಡ ಗೀತಾ ಸೀರಿಯಲ್​ ಮೂಲಕ ಸಖತ್ ಫೇಮಸ್​ ಆಗಿದ್ದರು. ಬಿಗ್​ಬಾಸ್​ನಿಂದ ಅಪಾಯ ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟಿ ಎಂದರೆ ಅದು ಭವ್ಯಾ ಗೌಡ.

BIG BOSS

ಮತ್ತೆ ಲಾಕ್ ಆದ ಬಿಗ್‌ ಬಾಸ್ ಮಾಜಿ ಸ್ಪರ್ಧಿ ರಜತ್; ಕಾರಣವೇನು?

Published

on

ಮಂಗಳೂರು/ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಬಂಧನಕ್ಕೊಳಗಾಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕಾರಣಕ್ಕೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಖಾಸಗಿ ಕಾರ್ಯಕ್ರಮ ಮುಗಿದ ಬಳಿಕ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವೀಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಇಬ್ಬರನ್ನು ಬಂಧಿಸಿದ್ದರು.

ರೀಲ್ಸ್​ಗೆ ಬಳಕೆ ಮಾಡಿದ್ದ ಶಸ್ತ್ರಾಸ್ತ್ರವನ್ನು ಒಪ್ಪಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಈ ವೇಳೆ ರಬ್ಬರ್ ಮಚ್ಚು ನೀಡಲಾಯಿತು. ಇದು ಕಣ್ತಪ್ಪಿನಿಂದ ಆಗಿದ್ದು, ನಿಜವಾದ ಮಚ್ಚನ್ನು ನೀಡುತ್ತೇವೆ ಎಂದಿದ್ದರು. ಆ ಬಳಿಕ ರೀಲ್ಸ್​ಗೆ ಬಳಕೆ ಮಾಡಿದ್ದ ಮಚ್ಚನ್ನು ಎಸೆದಿದ್ದಾಗಿ ರಜತ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮಚ್ಚಿನ ಗುಟ್ಟು ರಟ್ಟು..! ವಿನಯ್ ಗೌಡ, ರಜತ್‌ಗೆ ಮತ್ತೆ ಕಾನೂನು ಕಗ್ಗಂಟು!

ರಜತ್ ಮತ್ತೆ ಲಾಕ್‌ ಆಗಲು ಕಾರಣವೇನು?
ಕೇಸ್​ನಲ್ಲಿ ಇದುವರೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರವನ್ನು ಪೊಲೀಸರ ಎದುರು ಹಾಜರು ಪಡಿಸಿಲ್ಲ. ಹೀಗಾಗಿ ಸಾಕ್ಷಿನಾಶ ಎಂದು ಸಹ ಪೋಲಿಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅತ್ತ ಕೋರ್ಟ್​ನಲ್ಲಿ ರಜತ್​ಗೆ ಜಾಮೀನು ನೀಡಲಾಗಿದೆ. ಈ ವೇಳೆ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಅವರು ವಿಚಾರಣೆಗೆ ಹಾಜರಿ ಹಾಕಲೇಬೇಕು ಎಂಬುದು ಕೂಡ ಆಗಿತ್ತು.

ಆದ್ರೆ ರಜತ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ರಜತ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಜತ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ರಜತ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಇಂದು ಮಧ್ಯಾಹ್ನ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

Continue Reading

BIG BOSS

ಮಚ್ಚಿನ ಗುಟ್ಟು ರಟ್ಟು..! ವಿನಯ್ ಗೌಡ, ರಜತ್‌ಗೆ ಮತ್ತೆ ಕಾನೂನು ಕಗ್ಗಂಟು!

Published

on

ಮಂಗಳೂರು/ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್‌ ಅವರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ.


ಮಾರ್ಚ್ 25ರಂದು ಇಬ್ಬರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು. ನಂತರ ರಜತ್ ಪತ್ನಿ ಅಕ್ಷತಾ ಫೈಬರ್ ಮಚ್ಚನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ರೀಲ್ಸ್‌ನಲ್ಲಿ ಬಳಸಿದ ಅಸಲಿ ಮಚ್ಚಿಗೂ ಹಾಗೂ ಪೊಲೀಸರಿಗೆ ನೀಡಿದ್ದ ಫೈಬರ್ ಮಚ್ಚಿಗೂ ತುಂಬಾನೇ ವ್ಯತ್ಯಾಸ ಇದ್ದಿದ್ದರಿಂದ ಸಾಕ್ಷಿ ನಾಶದ ಆರೋಪ ಎದುರಾಗಿತ್ತು.

ಹೀಗಾಗಿ ಕೆಲ ಸಮಯ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು. ನಂತರ ಜಾಮೀನು ಪಡೆದು ಹೊರಬಂದ ರಜತ್ ಮತ್ತು ವಿನಯ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಇದೀಗ ರಜತ್ ಹಾಗೂ ವಿನಯ್ ನಡೆದ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಬಿಸಾಡಿದ್ದ ಜಾಗದಲ್ಲೇ ರಜತ್ ಹಾಗೂ ವಿನಯ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚನ್ನೂ ಸುಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರೀಲ್ಸ್‌ ಮಾಡಿ ಅರೆಸ್ಟ್ ಆಗಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌, ರಜತ್‌ ಮಧ್ಯರಾತ್ರಿಯೇ ರಿಲೀಸ್‌

ಹೀಗಾಗಿ ವಿನಯ್, ರಜತ್​ರನ್ನು ಸುಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಮಹಜರ್ ನಡೆಸಿದ್ದಾರೆ. ಆದ್ರೆ, ಪೊಲೀಸರ ಮಹಜರ್ ವೇಳೆಯೂ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ. ಸದ್ಯ ಆರೋಪಿಗಳು ಪೊಲೀಸರಿಗೆ ಮೊದಲು ನೀಡಿದ್ದ ಫೈಬರ್ ಮಚ್ಚನ್ನ ಎಫ್.ಎಸ್.ಎಲ್ ಗೆ ರವಾನೆ ಮಾಡಿದ್ದಾರೆ. ಎಫ್.ಎಸ್.ಎಲ್ ವರದಿ ಬಂದ ನಂತರ ವಿನಯ್ ಹಾಗೂ ರಜತ್ ಭವಿಷ್ಯ ನಿರ್ಧಾರವಾಗಲಿದೆ.

Continue Reading

BIG BOSS

ರೀಲ್ಸ್‌ ಮಾಡಿ ಅರೆಸ್ಟ್ ಆಗಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌, ರಜತ್‌ ಮಧ್ಯರಾತ್ರಿಯೇ ರಿಲೀಸ್‌

Published

on

ಬೆಂಗಳೂರು: ಲಾಂಗ್‌ ಹಿಡಿದು ರೀಲ್ಸ್‌ ಮಾಡಿ ಅರೆಸ್ಟ್ ಆಗಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಮತ್ತು ರಜತ್‌ ಕೇಸ್‌ಗೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಬಸವೇಶ್ವರ ನಗರ ಪೊಲೀಸರು ನಿನ್ನೆ ಮಧ್ಯರಾತ್ರಿಯೇ ಅವರನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಲಾಂಗ್‌ ಹಿಡಿದು 18 ಸೆಕೆಂಡ್‌ಗಳ ಕಾಲ ರೀಲ್ಸ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಹಾಗೂ ವಿನಯ್ ಇವರನ್ನು ನಿನ್ನೆ ಮಧ್ಯಾಹ್ನ ಬಂಧಿಸಿದ್ದರು. ಆದರೆ ಮಧ್ಯರಾತ್ರಿಯೇ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಆದರೆ, ತಾವು ರೀಲ್ಸ್‌ಗೆ ಬಳಸಿರುವುದು ಫೈಬರ್‌ ಮಚ್ಚು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಮಾತನ್ನೇ ನಂಬಿ ಫೈಬರ್ ಮಚ್ಚು ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ಬೆಳಗ್ಗೆ 10:30 ಕ್ಕೆ ಬರುವಂತೆ ನೋಟಿಸ್ ನೀಡಿ ಆರೋಪಿಗಳನ್ನು ಪೊಲೀಸರು ಕಳುಹಿಸಿದ್ದರು. ಸಾಮಾನ್ಯ ಜನರು ಇದ್ದಿದ್ದರೆ ಇದೇ ರೀತಿ ಮಾಡುತ್ತಿದ್ದರಾ ಪೊಲೀಸರು ಎಂಬ ಪ್ರಶ್ನೆ ವ್ಯಕ್ತವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page