Connect with us

DAKSHINA KANNADA

ಮಂಗಳೂರಿನಲ್ಲಿ ಅ.9ರಂದು ಬಜರಂಗದಳದ ನೇತೃತ್ವದಲ್ಲಿ ಬೃಹತ್ ಶೌರ್ಯ ಜಾಗರಣ ರಥಯಾತ್ರೆ

Published

on

ಮಂಗಳೂರು:  ಬಜರಂಗದಳದ ನೇತೃತ್ವದಲ್ಲಿ ಅ. 9 ರಂದು ಬೃಹತ್ ಶೌರ್ಯ ಜಾಗರಣ ರಥಯಾತ್ರೆ ಮತ್ತು ಬೃಹತ್ ಸಾರ್ವಜನಿಕ ಸಭೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್ ಹೇಳಿದೆ.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖಂಡರು ಈ ಶೌರ್ಯ ಜಾಗರಣ ರಥ ಯಾತ್ರೆಯು ಸೆ.25ರಂದು ಚಿತ್ರದುರ್ಗದಿಂದ ಹೊರಟು ಅ. 9ಕ್ಕೆ ಮಂಗಳೂರಿಗೆ ಆಗಮಿಸಲಿದೆ.

ರಥಕ್ಕೆ ಅದ್ದೂರಿ ಸ್ವಾಗತ ನೀಡಿ ಬಳಿಕ ಮಂಗಳೂರಿನಲ್ಲಿ ಬೃಹತ್ ಶೌರ್ಯ ಜಾಗರಣ ರಥವನ್ನು ಅದ್ದೂರಿ ಸ್ವಾಗತದೊಂದಿಗೆ ನಗರದ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ಸೇರಿದಂತೆ ವಿವಿಧ ಗಣ್ಯರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇಶದ ಮಹಾಪುರುಷರ ,ಶೌರ್ಯ ಪರಾಕ್ರಮಗಳ, ಬಲಿದಾನಗೈದ ವೀರರ ಸ್ತಬ್ದ ಚಿತ್ರಗಳೊಂದಿಗೆ, ಚಂಡೆ, ಕೊಂಬು ವಾದನಗಳೊಂದಿಗೆ ಅದ್ದೂರಿ ಶೋಭಾಯಾತ್ರೆಯು ಕದ್ರಿ ಮೈದಾನಕ್ಕೆ ಸಾಗಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ರಾಷ್ಟ್ರೀಯವಾದಿ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರಾಷ್ಟ್ರ ಕಾರ್ಯದಲ್ಲಿ ಹಿಂದೂಗಳ ಜಾಗೃತಿಗೋಸ್ಕರ ಈ ಶೌರ್ಯ ಜಾಗರಣದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಎಚ್ .ಕೆ ಪುರುಷತ್ತೋಮ, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಸಂಯೋಜಕ ನವೀನ ಮೂಡುಶೆಡ್ಡೆ ಉಪಸ್ಥಿತರಿದ್ದರು.

DAKSHINA KANNADA

ಬಸ್ಸಿನಲ್ಲಿ ಕುಳಿತ ಸೀಟಿನಲ್ಲೇ ಸಾವನ್ನಪ್ಪಿದ ಪ್ರಯಾಣಿಕ

Published

on

ಶಿರ್ವ : ಕೆಎಸ್‌ಆರ್‌ಟಿಸಿ ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಬಸ್ಸಿನ ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಶಿರ್ವ – ಮುಂಬೈನಿಂದ ಉಡುಪಿ-ಶಿರ್ವ-ಮೂಡುಬಿದಿರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ  ಎ. 21 ರಂದು ಮುಂಜಾನೆ ನಡೆದಿದೆ.

ಮೃತರನ್ನು ಕುಮಟಾ ಮೂಲದ ಪ್ರಯಾಣಿಕ ಸುಮಾರು 45 ವರ್ಷ ಪ್ರಾಯದ ಸತ್ಯ ಭಂಡಾರಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸತ್ಯ ಭಂಡಾರಿ ಪ್ರಯಾಣದ ಸಂಧರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.

Continue Reading

BELTHANGADY

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; ಮೂವರು ಗಂಭೀರ

Published

on

ಬೆಳ್ತಂಗಡಿ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮಿಪದ ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ನಿನ್ನೆ (ಏ.21) ಸಂಜೆ ನಡೆದಿದೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣ ಮಾಡುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಗೇರುಕಟ್ಟೆಯ ಕುಸುಮಾವತಿ (75), ಭಾಗ್ಯವತಿ (50), ವೈಭವ್‌ (23) ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಉಡುಪಿ : ಪತ್ರಕರ್ತ ರಾಮ್ ಅಜೆಕಾರ್ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ

Published

on

ಉಡುಪಿ : ಕನ್ನಡ ರಿಪೋರ್ಟರ್ ರಾಮ್ ಅಜೆಕಾರ್‌ ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಆಯಕೆಯಾಗಿದ್ದಾರೆ.

ಹಿರಿಯ ಉದ್ಯಮಿ ಅಶ್ರಫ್ ಷಾ ಮಂತೂರು ಅವರ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗೆ ಪತ್ರಕರ್ತ ರಾಮ್ ಅಜೆಕಾರ್ ವರ ‘ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ?’ ಶೀರ್ಷಿಕೆಯಡಿಯ ಸುದ್ಧಿ ಆಯ್ಕೆಯಾಗಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಈ ಸುದ್ಧಿ ಬಿಡುಗಡೆಯಾಗಿತ್ತು.

ದತ್ತಿನಿಧಿಯಿಂದ ನೀಡಲಾಗುವ ಈ ಪ್ರಶಸ್ತಿಯು ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩ರಂದು ಸೀತಾಂಗೋಳಿಯ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page