Connect with us

DAKSHINA KANNADA

ಊರೂರು ಅಲೆಯುತ್ತಿದ್ದ ಬಿಹಾರದ ಧನಂಜಯರನ್ನು ಆರೈಕೆ ಮಾಡಿ ಮರಳಿ ಮನೆಗೆ ಕಳಿಸಿದ ವೈಟ್‌ ಡೌವ್ಸ್ ..! 

Published

on

ಅಶಕ್ತರ, ಅಂಧರ, ದೀನದಲಿತರ ಬಾಳಿಗೆ ಸದಾ ಬೆಳಕಾಗುವ ಮಂಗಳೂರಿನ ವೈಟ್ ಡೌವ್ಸ್ ಸೇವಾ ಸಂಸ್ಥೆ ಇದೀಗ ಇನ್ನೊಂದು ಮಹತ್ತರವಾದ ಸಾಧನೆ ಮೂಲಕ ಒಂದು ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡಿದೆ.

ಮಂಗಳೂರು : ಅಶಕ್ತರ, ಅಂಧರ, ದೀನದಲಿತರ ಬಾಳಿಗೆ ಸದಾ ಬೆಳಕಾಗುವ ಮಂಗಳೂರಿನ ವೈಟ್ ಡೌವ್ಸ್ ಸೇವಾ ಸಂಸ್ಥೆ ಇದೀಗ ಇನ್ನೊಂದು ಮಹತ್ತರವಾದ ಸಾಧನೆ ಮೂಲಕ ಒಂದು ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡಿದೆ.

ಮಂಗಳೂರಿನ ಹಲವು ಸೇವಾ ಸಂಸ್ಥೆಗಳಲ್ಲಿ ಮರೋಳಿಯಲ್ಲಿರುವ ವೈಟ್‌ ಡೌವ್ಸ್ ಸೇವಾ ಸಂಸ್ಥೆಯೂ ಒಂದಾಗೊದ್ದಿ. ಮನೆ ಬಿಟ್ಟು ಬರುವ, ಹಾದಿ ತಪ್ಪಿ ಬರುವ ಅದೆಷ್ಟೋ ಮಂದಿಯನ್ನು ಮತ್ತೆ ಅವರ ಮನೆ ಮಂದಿ ಜೊತೆಗೆ, ಹೆಂಡತಿ, ಮಕ್ಕಳೊಂದಿಗೆ ಒಂದಾಗುವಂತೆ ಮಾಡಿದೆ. ಕುಟುಂಬದ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ.

ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೋಪಿಷ್ಟ, ಬಿಹಾರದ ಬರಿಹಾರ್‌ ಪೂರ್‌ ಠಾಣಾ ವ್ಯಾಪ್ತಿಯ ರೋಥಾನ್‌ನ ಧನಂಜಯ(35) ಮನೆ ಬಿಟ್ಟು ಬಂದಿದ್ದಾತ ಮಂಗಳೂರು ತಲುಪಿದ್ದ. ಆದರೆ ತೀವ್ರ ಮಾನಸಿಕ ಖಿನ್ನತೆಗೊಳಗಾಗಿ ಈತನಿಗೆ ಚಿಕಿತ್ಸೆ ಕೊಡಿಸಬೇಕಾಗಿತ್ತು.

ನಗರದ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಈತನನ್ನು ಕಂಡವೈಟ್‌ ಡೌವ್ಸ್ನ ಸಂಸ್ಥಾಪಕಿ ಕೊರಿನ್ನಾ ರಸ್ಕಿನಾ ಸೇವಾ ಸಂಸ್ಥೆ ಸದಸ್ಯರು ಇಲ್ಲಿಗೆ ಸೇರ್ಪಡೆಗೊಳಿಸಿದ್ದರು. ಆತನಿಗೆ ಚಿಕಿತ್ಸೆ ನೀಡಿದ ಬಳಿಕ ಗುಣಮುಖನಾಗಿದ್ದ.

ಈ ನಡುವೆ ಧನಂಜಯನಿಗೆ ಹೆಂಡತಿ ಮಕ್ಕಳ ನೆನಪಾಗಿದೆ. ಕೊನೆಗೆ ಕೊರಿನಾ ಅವರು ಮನೆ ಮಂದಿ ವಿಳಾಸ ಬಿಹಾರದ ರೋಥಾನ್‌ಗೆ ಠಾಣಾ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲಿಂದ ಬಂದ ಧನಂಜಯನ ಇಬ್ಬರು ಸಹೋದರರು ಮತ್ತು ಭಾವನನ್ನು ಕಂಡು ಧನಂಜಯ ಭಾವುಕನಾಗಿದ್ದಾನೆ.

ಧನಂಜಯ ತನ್ನ ಹೆಂಡತಿ, ಮಕ್ಕಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾನೆ. ಈತನಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ.

ಕೋಪವನ್ನು ಬಿಟ್ಟು ಬಿಡು ಎಂದು ಬುದ್ಧಿವಾದ ಹೇಳಿದ್ದೇವೆ. ಮರಳಿ ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಈತ ಭರವಸೆ ನೀಡಿದ್ದಾನೆ.

ಜುಲೈ 22ರಂದು ನಮಗೆ ಈತ ಸಿಕ್ಕಿದ್ದ ಈಗ ಆತನಿಗೆ ಚಿಕಿತ್ಸೆ ನೀಡಿ ಉಷಾರಾಗಿದ್ದಾನೆ.

ಆತನನ್ನು ಮನೆಗೆ ಕರೆದುಕೊಂಡು ಹೋಗಲು ಅವರ ಸಹೋದರರು , ಭಾವ ಬಂದಿದ್ದಾರೆ. ಇದೊಂದು ನಮಗೆ ಭಾವನಾತ್ಮಕ ಸನ್ನಿವೇಶ ಎನ್ನುತ್ತಾರೆ ಸಂಸ್ಥಾಪಕಿ ಕೊರಿನಾ ರಸ್ಕಿನಾ.
ಕಳೆದ ಆರೇಳು ತಿಂಗಳಿನಿಂದ ಮನೆಮಗನಂತೆ ನೋಡಿಕೊಂಡು ಇದೀಗ ಕುಟುಂಬವನ್ನು ಒಂದುಗೂಡಿಸುತ್ತಿರುವ ಸಮಾಜ ಸೇವಕಿ ವೈಟ್‌ ಡೌವ್ಸ್  ಕೊರಿನಾ ರಸ್ಕಿನಾ ಸೇವಾ ಕಾರ್ಯಕ್ಕೆ ನಾವೆಷ್ಟೇ ಕೃತಜ್ಞತೆ ಹೇಳಿದರೂ ಸಾಲದು.

ಕೇವಲ ಹಣವೊಂದಿದ್ದರೆ ಏನೂ ಮಾಡಬಹುದು ಎನ್ನುವುದು ಬಿಟ್ಟು, ಪ್ರೀತಿ, ಮಾನವೀಯತೆ, ಮಮತೆ ತೋರಿಸುವ ವೈಟ್‌ ವೈಟ್‌ ಡೌವ್ಸ್ ಸೇವಾ ಸಂಸ್ಥೆ ಕಾರ್ಯ ನಿಜಕ್ಕೂ ಪ್ರಶಂಸನೀಯ..

DAKSHINA KANNADA

ಫೆ.14ರಂದು 16ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳ; ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಜಯ-ವಿಜಯ ಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಮಂಗಳೂರು ಇವರ ನೇತೃತ್ವದಲ್ಲಿ ಮನ್ಕು ತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಫೆ.14 ಮತ್ತು 15ರಂದು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ನಡೆಯಿತು. ಸುತೇಜ್ ಎಂಟರ್ ಪ್ರೈಸಸ್ ಮುಂಬಯಿ ಇದರ ಎಂಡಿ, ಹಾಗೂ ಕಂಬಳದ ಮಾರ್ಗದರ್ಶಕ ಎಚ್. ಸುಧಾಕರ್ ಶೆಟ್ಟಿ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುಂದಾಳತ್ವದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು.

ನಂತರ ಈ ಬಗ್ಗೆ ಸುಧಾಕರ್ ಶೆಟ್ಟಿ ಮಾತನಾಡಿ ಜಪ್ಪಿನಮೊಗರುವಿನಲ್ಲಿ ನಡೆಯುತ್ತಿರುವ ಕಂಬಳ ಅತ್ಯಂತ ವಿಶೇಷವಾದದ್ದು. ಯಾಕಂದ್ರೆ ಶಾಸಕ ವೇದವ್ಯಾಸ್ ಕಾಮತ್ ಅವರ ಸಹಕಾರದಿಂದ ವ್ಯವಸ್ಥಿತವಾಗಿ ಈಗ ನಡೆಯುತ್ತಿದೆ. ಕಂಬಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸ್ತಾರೆ. ಕಂಬಳವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: 33ನೇ ವರ್ಷದ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಗೌರವಾಧ್ಯಕ್ಷ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಶ್ರೀ ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ ವೇದಮೂರ್ತಿ ಬ್ರಹ್ಮ ಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳವು ಉದ್ಘಾಟನೆಗೊಳ್ಳಲಿದೆ. ಉದ್ಯಮಿಗಳು ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಕಂಬಳದಲ್ಲಿ 150ಕ್ಕೂ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಯ ವಿಜಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ಕಾರ್ಯಾಧ್ಯಕ್ಷೆ ವೀಣಾಮಂಗಳ, ಮತ್ತೋರ್ವ ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ತಿರುವೈಲುಗುತ್ತು, ಸಂದೀಪ್ ಶೆಟ್ಟಿ ಎಕ್ಕೂರು ಮತ್ತಿತ್ತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೆ ರಾಮ ದೇವರಲ್ಲವೇ: ಕಾಂಗ್ರೆಸ್ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ

Published

on

ಮಂಗಳೂರು: ರಾಮನ ಹೆಸರಿಟ್ಟರೆ ಕಾಂಗ್ರೆಸಿಗರಿಗೆ ಹೊಟ್ಟೆ ಉರಿ ಏಕೆ? ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೆ ರಾಮ ದೇವರಲ್ಲವೇ ಎಂದು ಶಾಸಕ ವೇದವ್ಯಾಸ ಕಾಮತ್‌ ಕೇಂದ್ರ ಸರಕಾರದ ವಿಬಿ- ಜಿ- ರಾಮ್‌- ಜಿ- ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿ ರಾಮನ ಹೆಸರು ಬಂತು ಎಂದಾಗ ಕಾಂಗ್ರೆಸಿಗರು ಅಲರ್ಜಿ ತರ ಮಾತನಾಡುವುದೇಕೆ? ಮನ್ ರೇಗಾ ಹೆಸರನ್ನು ನರೇಗಾ ಎಂದು ಬದಲಿಸಿದ್ದು ಕಾಂಗ್ರೆಸ್ ಅಲ್ಲವೇ ಎಂದರು.

ವೋಟ್‌ ಬ್ಯಾಂಕಿಗಾಗಿ ಕಾಂಗ್ರೆಸ್‌ ಮಾಡುತ್ತಿರುವ ರಾಜಕಾರಣ ಈಗ ಜನರಿಗೆ ಅರ್ಥವಾಗಿದೆ. ದೇಶದ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಆಡಳಿತವಿದೆ. ಕಾಂಗ್ರೆಸಿಗರಿಗೆ ರಾಮನ ಶಾಪ ಇದೆ, ಇದನ್ನು ಸರಿ ಮಾಡಲು ಮೊದಲು ಕಲಿಯಿರಿ ಎಂದವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೇವಸ್ಥಾನದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂಬ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಮಾಜಿ ಸಚಿವ ಬಿ ರಮಾನಾಥ ರೈ

ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ರಾಜ್ಯದಲ್ಲಿ ಅವರದೇ ಸರಕಾರವಿದೆ. ಆವರ ಆಡಳಿತ ವೈಫಲ್ಯಗಳನ್ನು ಸರಿಪಡಿಸುವ ಸಾಮರ್ಥ್ಯ ಅವರಿಗಿಲ್ಲ. ಮಂಗಳೂರಿನಲ್ಲಿ ಈ- ಖಾತಾ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜೈಲಿನ ಜಾಮರ್ ಸಮಸ್ಯೆ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲ. ಮೂಡಾ, ತಾಲೂಕು ಕಚೇರಿಗಳು ಸಮಸ್ಯೆಗಳ ಆಗರವಾಗಿವೆ ಎಂದು ಟೀಕಿಸಿದರು.

Continue Reading

DAKSHINA KANNADA

33ನೇ ವರ್ಷದ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

Published

on

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ 33ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಇಂದು ಬೆಳಿಗ್ಗೆ ಆರಂಭಗೊಂಡಿದೆ.

ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟನೆ ನರೆವೇರಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಗರಸಭೆ ಮುಖ್ಯಾಧಿಕಾರಿ ವಿದ್ಯಾ ಕಾಳೆ, ಪದ್ಮನಾಭ ಶೆಟ್ಟಿ, ಜಯಂತ್ ನಡುಬೈಲು, ಸುಂದರ ಗೌಡ, ಉದ್ಯಮಿ ದಿವ್ಯಾ ಶೆಟ್ಟಿ, ಡಾ ಶರತ್‌ ಶೆಟ್ಟಿ, ಬಾಬು ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಡ್ವೆ ನಂದಿಕೂರು 33ನೇ ವರ್ಷದ “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟ; ಇಲ್ಲಿದೆ ಫಲಿತಾಂಶ

ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ ವಿಭಾಗಗಳಲ್ಲಿ ಕಂಬಳ ನಡೆಯಿತು. ಕಳೆದ ವರ್ಷ ಪುತ್ತೂರು ಕಂಬಳದಲ್ಲಿ ಕರೆಯಲ್ಲೆ ರಾಜ್ಯಮಟ್ಟದ ಕೆಸರು ಗದ್ದೆ ಓಟ ಸ್ಪರ್ಧೆ ಏರ್ಪಡಿಸಲಾಗಿತ್ತು . ಈ ವರ್ಷ ಇದರ ಜೊತೆಗೆ ಮೊದಲ ಬಾರಿ ರಿಲೇ ಸ್ಪರ್ಧೆ ಏರ್ಪಡಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page