Connect with us

BIG BOSS

ಈ ವಾರ ಮನೆಯಿಂದ ಹೊರ ಬರುವ ಕಂಟೆಸ್ಟೆಂಟ್ಸ್‌ಗಳು ಇವರೇ ?

Published

on

ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇದೀಗ ಸೆಮಿ ಫಿನಾಲೆ ವಾರ ಮುಕ್ತಾಯವಾಗುತ್ತಾ ಬಂದಿದೆ. ಇಂದು ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯ್ತಿ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಆಟವನ್ನು ನಿರ್ಧಾರ ಮಾಡಲಿದೆ.

 

ಇನ್ನೊಂದು ಕಡೆ ಮಧ್ಯವಾರದಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈಗ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಇಂದು (ಜ.18) ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಹೊರ ಹೋಗುವುದು ಪಕ್ಕಾ ಎನ್ನಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳಲು ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಮುಂದಿನ ವೀಕೆಂಡ್‌ನಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಇರುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕೂಡ ಕಷ್ಟ ಎಂಬಂತಾಗಿದೆ. ಹೀಗಿರುವಾಗಲೇ ಶನಿವಾರ ಸ್ಪರ್ಧಿಗಳಿಗೆ ಒಂದು ಶಾಕಿಂಗ್ ವಿಚಾರ ಇರಲಿದೆ ಎಂದು ಹೇಳಲಾಗುತ್ತಿದೆ.

ಕೆಲವು ವರದಿಗಳ ಪ್ರಕಾರ ಇಂದು ಶೋ ಆರಂಭಕ್ಕೂ ಮೊದಲೇ ಅಥವಾ ಶೋ ಕೊನೆಯಲ್ಲಿ ಎಲಿಮಿನೇಷನ್ ನಡೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾನುವಾರ ಕೂಡ ಒಂದು ಎಲಿಮಿನೇಷನ್ ನಡೆಯಲಿದೆ. ಈ ವಾರ ಒಟ್ಟಾರೆ ಇಬ್ಬರು ಅಥವಾ ಮೂವರು ಹೊರ ಹೋಗಲಿದ್ದಾರೆ.

ಇದನ್ನೂ ಓದಿ: ಮಂಥರೆಯಾಗಿ ಮೊದಲ ಬಾರಿ ಯಕ್ಷಗಾನದಲ್ಲಿ ಮಿಂಚಿದ ನಟಿ ಉಮಾಶ್ರೀ

ಸದ್ಯ ಹನುಮಂತ ಅವರು ಎಲಿಮಿನೇಷನ್‌ನಿಂದ ಬಚವ್ ಆಗಿದ್ದಾರೆ. ಮೋಕ್ಷಿತಾ ಪೈ ಅವರನ್ನು ಹನುಮಂತ ಸೇವ್ ಮಾಡಿದ್ದು, ಫಿನಾಲೆ ವಾರ ತಲುಪಿದ್ದಾರೆ. ಇನ್ನು ಡಬಲ್ ಎಲಿಮಿನೇಷನ್ ಇರುವ ಕಾರಣ ನಾಮಿನೇಟ್ ಆಗಿರುವ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ಮೊಗದಲ್ಲಿ ಆತಂಕ ಕಾಡುತ್ತಿದೆ. ನಗು ಎನ್ನುವುದು ಮಾಯವಾಗಿ ಕಣ್ಣೀರು ಬಾಕಿ ಉಳಿದಿದೆ. ಕೊನೆ ಹಂತಕ್ಕೆ ಬಂದು ಹೊರ ನಡೆದರೆ ಹೇಗೆ ಎಂದು ಯೋಚನೆಯಲ್ಲಿ ತೊಡಗಿದ್ದಾರೆ. ಹನುಮಂತು, ಮೋಕ್ಷಿತಾ ಅವರನ್ನು ಉಳಿಸಿಕೊಂಡಿದ್ದು ಧನರಾಜ್‌ಗೆ ಕೈಕೊಟ್ಟಿದ್ದಾರೆ.

ಈ ವಾರ ಯಾರಿಗೆ ಮನೆಯಿಂದ ಗೇಟ್‌ಪಾಸ್ ?
ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಆಟಕ್ಕೆ ಹೋಲಿಕೆ ಮಾಡಿದರೆ ಗೌತಮಿ ಈ ವಾರ ಹೊರ ಹೋಗೋದು ಬಹುತೇಕ ಖಚಿತ. ಅಷ್ಟೇ ಅಲ್ಲದೆ, ಅವರಿಗೆ ಫ್ಯಾನ್ಸ್ ಫಾಲೋವಿಂಗ್ ಕೂಡ ತೀರಾ ಕಡಿಮೆ ಇದೆ. ಇನ್ನು ಇವರನ್ನು ಹೊರತುಪಡಿಸಿ ಧನರಾಜ್ ಅವರು ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.

ಆಟದ ವೈಖರಿ, ಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಇವೆಲ್ಲವನ್ನೂ ಗಮನಿಸಿದರೆ ಧನರಾಜ್ ಉತ್ತಮವಾಗಿದ್ದಾರೆ. ಆದರೆ ಈ ವಾರದ ಟಾಸ್ಕ್ ಒಂದರಲ್ಲಿ ನಿಯಮದ ಅರಿವಿಲ್ಲದೆ, ಕನ್ನಡಿ ನೋಡಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಈ ಒಂದು ತಪ್ಪಿನಿಂದಾಗಿ ಅವರಿಗೆ ಓಟಿಂಗ್ ವ್ಯವಸ್ಥೆಯಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ.

ಅಲ್ಲದೆ ನಾಮಿನೇಟ್ ಆದ ಪ್ರತಿ ಸ್ಪರ್ಧಿಗಳಿಗೆ ವಾರದಲ್ಲಿ 5 ದಿನ ಓಟ್ ಮಾಡುವ ಅವಕಾಶವಿರುತ್ತದೆ. ಆದರೆ ಈ ಬಾರಿ ಧನರಾಜ್ ಅವರಿಗೆ 3 ದಿನವಷ್ಟೇ ಅದರ ಅವಕಾಶ ಸಿಗಲಿದೆ. ಹೀಗಾಗಿ ಕಡಿಮೆ ಓಟ್ ಇವರ ಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಾರ ಗೌತಮಿ ಮತ್ತು ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ.

BIG BOSS

ಮದುವೆಯ ಬಗ್ಗೆ ಕ್ಲೂ ನೀಡಿದ ಬಿಗ್ ಬಾಸ್ ಐಶ್ವರ್ಯ

Published

on

ಬೆಂಗಳೂರು: ಬಿಗ್ ಬಾಸ್ ಸೀಸನ್ 11 ರಲ್ಲಿ ತನ್ನ ಕ್ಯೂಟ್ ಎಕ್ಸ್‌ಪ್ರೇಶನ್ ಮೂಲಕ ಕನ್ನಡ ಜನಮನ ಗೆದ್ದಿದ್ದಲ್ಲದೆ ಕರ್ನಾಟಕದ ಮನೆಮಗಳು ಎಂದೆನಿಸಿಕೊಂಡಿದ್ದಾರೆ. ಬಿಗ್ ಮನೆಯಲ್ಲಿ ಇವರ ಆಟ ನಡೆ ನುಡಿ ಜೊತೆಗೆ ಇವರ ಡ್ರೆಸ್ಸಿಂಗ್ ಸೆನ್ಸ್ ಬಹಳಷ್ಟು ಗಮನ ಸೆಳೆದಿತ್ತು. ಬರೋಬ್ಬರಿ 91 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗಿದ್ದ ಐಶ್ವರ್ಯ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇದೀಗ ಐಶ್ವರ್ಯನಲ್ಲಿ ಪ್ರತಿಯೊಬ್ಬರೂ ನಿಮಗೆ ಮದುವೆ ಯಾವಾಗ? ಬಾಯ್‌ಫ್ರೆಂಡ್ ಇದ್ದಾರಾ? ಶಿಶಿರ್‌ನ ಲವ್ ಮಾಡ್ತಿದ್ದೀರಾ? ಶಿಶಿರ್‌ ಕಡೆಯಿಂದ ಪ್ರಪೋಸಲ್ ಬಂದರೆ ನೀವು ಒಪ್ಪಿಕೊಳ್ಳುತ್ತೀರಾ ? ಹೀಗೆ ಹಲವು ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಈಗ ಅದಕ್ಕೆಲ್ಲಾ ಸ್ವತಃ ಐಶ್ವರ್ಯ ಅವರೇ ಉತ್ತರ ನೀಡಿದ್ದಾರೆ.

ಮದುವೆ ಆಗುವ ಯೋಚನೆ ಸದ್ಯಕ್ಕೆ ಇಲ್ಲ. ಒಳ್ಳೆಯ ಗುಣ, ನಡತೆ, ನನ್ನನ್ನು ಅತಿಯಾಗಿ ಪ್ರೀತಿಸುವ, ಕಾಳಜಿ ವಹಿಸುವ, ಗೌರವಿಸುವ ಹುಡುಗ ನನಗೆ ಬೇಕು. ಈ ಎಲ್ಲಾ ನಡತೆಗಳು ಇರುವ ಹುಡುಗ ಸಿಕ್ಕರೆ ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ತರಹದ ಹುಡುಗ ಸಿಕ್ಕರೆ ಬೇಗನೇ ಅವನ ಹೆಸರನ್ನು ರಿವೀಲ್ ಮಾಡಲ್ಲ ಎಂದು ಹೇಳಿದ್ದಾರೆ.

ಇದೀಗ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆಯೇ ಹೊಸ ರಿಯಾಲಿಟಿ ಶೋನಲ್ಲಿ ಐಶ್ವರ್ಯ ಶಿಂಧೋಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗಂತೂ ಬಹಳ ಸಂತೋಷ ತಂದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಐಶ್ವರ್ಯ ಶಿಂಧೋಗಿ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಆಗಾಗ ತಮ್ಮ ವೃತ್ತಿ ಬದುಕಿನ ಬಗೆಗಿನ ಬಹಳಷ್ಟು ಅಪ್ ಡೇಟ್‌ಗಳನ್ನು ನೀಡುತ್ತಿರುತ್ತಾರೆ.

Continue Reading

BIG BOSS

ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

Published

on

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರ ಹೆಸರು ಇನ್ನಷ್ಟು ಪ್ರಸಿದ್ಧಿಯಾಗುತ್ತದೆ. ದಿನಕ್ಕೊಂದು ಹೊಸ ಹೊಸ ಆಫರ್‌ಗಳು ಬರುತ್ತಲೇ ಇರುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಗ್‌ಬಾಸ್ ಮನೆಗೆ ನನಗೂ ಹೋಗಲು ಅವಕಾಶ ಸಿಗುತ್ತಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತಾರೆ.

ಇನ್ನು ಬಿಗ್‌ಬಾಸ್ ಮನೆಗೆ ಹೋದವರಿಗೆ ಮೊದಲೇ ಪೇಮೆಂಟ್ ವಿಷಯವನ್ನು ಹೇಳುತ್ತಾರೆ. ಈ ಮೊದಲೇ ಹೆಸರು ಗಳಿಸಿದವರಿಗೆ ಸ್ವಲ್ಪ ಜಾಸ್ತಿ ಹಣವಿರುತ್ತದೆ. ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಅವರಿಗೆ ಸಿಗುತ್ತದೆ. ಅಲ್ಲದೇ ಬಿಗ್‌ಬಾಸ್ ಗೆದ್ದರೆ 50 ಲಕ್ಷ ಹಣವಿರುತ್ತದೆ. ಇದೀಗ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಯಾರು ಗೊತ್ತಾ..?

 

ಹೌದು, ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದವರು ಪುತ್ತೂರಿನ ಧನ್‌ರಾಜ್ ಆಚಾರ್ಯ. ಒಂದು ವಾರಕ್ಕೆ 30 ಸಾವಿರ ಸಂಭಾವನೆ ಸಿಗುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಧನರಾಜ್ ಅವರು ಕೊನೆಯವರೆಗೂ ಇದ್ದರು. ಗ್ರ್ಯಾಂಡ್ ಫಿನಾಲೆಗೆ ಹೋಗುವ ಮೊದಲು ಎಲಿಮಿನೇಟ್ ಆದರು.

ಅಲ್ಲದೇ ಬಿಗ್‌ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದು ಸತ್ಯ ಧಾರಾವಾಹಿಯ ಗೌತಮಿ ಜಾದವ್ ಎಂದು ತಿಳಿದುಬಂದಿದೆ. ಬಿಗ್ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಅವರ ಸ್ನೇಹ ಎಂಥದ್ದು ಎಲ್ಲರಿಗೂ ತಿಳಿದಿದೆ. ಇಬ್ಬರು ಕೂಡ ಜೀವಕ್ಕೆ ಜೀವದಂತೆ ಇದ್ದರು. ಹಾಗೆಯೇ ತನ್ನ ಕಾಮಿಡಿ ಮಾತುಗಳ ಮೂಲಕ ಧನ್‌ರಾಜ್ ವೀಕ್ಷಕರನ್ನು ಮನೋರಂಜಿಸುತ್ತಿದ್ದರು.

Continue Reading

BIG BOSS

ಹನುಮಂತನಿಗೆ SSLC ಅಲ್ಲಿ ಸಿಕ್ಕಿರೋ ಅಂಕ ಎಷ್ಟು ಗೊತ್ತಾ..?

Published

on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಟೈಟಲ್ ಗೆದ್ದ ಹನುಮಂತ ಇದೀಗ ಕನ್ನಡಿಗರ ಮನೆಮಾತಾಗಿದ್ದಾನೆ. ಈ ಮೊದಲು ಹಲವು ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದರು. ಬಳಿಕ ಅವರಿಗೆ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಅವರ ಸರಳತೆ, ನೇರ ನಡೆ-ನುಡಿಗೆ, ಮತ್ತೆ ಮನಸ್ಸಿಗೆ ನಾಡಿನ ಜನ ಫಿದಾ ಆಗಿದ್ದಾರೆ. ಈ ರಿಯಾಲಿಟಿ ಶೋ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬಿಗ್‌ಬಾಸ್ ಬಳಿಕ ಹನುಮಂತ ಅವರಿಗೆ ಸಾಕಷ್ಟು ರಿಯಾಲಿಟಿ ಶೋಗಳ ಆಫರ್ ಬಂದಿದೆ. ಅಲ್ಲದೇ ಸಿನಿಮಾದಲ್ಲೂ ಆಫರ್ ಬಂದಿರುವುದು ವಿಶೇಷವೇ ಸರಿ. ಆದರೆ ಸಿನಿಮಾಗಳಿಗೆ ಮಾತ್ರ ಹನುಮಂತ ಡೊಂಟ್ ಕೇರ್ ಎಂದಿದ್ದಾನೆ. ಎಲ್ಲ ಬೆಳವಣಿಗೆಗಳ ನಡುವೆಯೂ ಹನುಮಂತು ಅವರ ವಿದ್ಯಾಭ್ಯಾಸ ಏನು ಎಂಬುದು ಚರ್ಚೆಯಾಗುತ್ತಿದೆ.

ಇವರ ಸಾಧನೆ ಅಂತಿಂತದ್ದಲ್ಲ. ಸಾಧನೆ ಹಿಂದೆ ಪರಿಶ್ರಮವೂ ಇದೆ. ಅಲ್ಲದೇ ಅವರ ಕಲಿಕೆಯ ಬಗ್ಗೆಯೂ ಸಾಕಷ್ಟು ಜನರು ಕೇಳಿಕೊಂಡಿದ್ದಾರೆ. ಹನುಮಂತ ಏನು ಓದಿದ್ದಾರೆ ಎಂದು ನೋಡುವುದಾದರೆ ಅವರು ಎಸ್ ಎಸ್ ಎಲ್ ಸಿ ಮಾಡಿದ್ದಾರೆ. ಹಾಗಿದ್ರೆ ಹನುಮಂತ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕ ಎಷ್ಟು? ಇಲ್ಲಿದೆ ನೋಡಿ.

ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಯಲ್ಲಿ ಹನುಮಂತು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. 2020-21ನೇ ಸಾಲಿನಲ್ಲಿ ನಡೆದ SSLC ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರಂತೆ.

ಈತನ ಓದು, ಕಲಿಕೆ ಹಾಗೂ ಗುಣದ ಬಗ್ಗೆ ಶಾಲಾ ಶಿಕ್ಷಕರು ಹೊಗಳುತ್ತಿದ್ದಾರೆ. ಹನುಮಂತನ ಬಗ್ಗೆ ಶಿಕ್ಷಕರಿಗೂ ಹೆಮ್ಮೆ ಇದೆ. ಇದೀಗ ಹನುಮಂತ ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್‌ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page