Connect with us

FILM

ಬಿಗ್ ಬಿ ಆರೋಗ್ಯಕ್ಕೆ ಏನಾಗಿತ್ತು? ಅವರು ಆಸ್ಪತ್ರೆ ಸೇರಿದ್ದು ಹೌದಾ? ಏನಂದ್ರು ಬಚ್ಚನ್?

Published

on

ಮುಂಬೈ : ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಮುಂಬೈನ ಕೋಕಿಲಾಬೇನ್ ಧೀರುಬಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿಯೊಂದು ಹರಿದಾಡಿತ್ತು. ಇದು ಬಚ್ಚನ್ ಅಭಿಮಾನಿಗಳಲ್ಲಿ ಆತಂಕವನ್ನೂ ಸೃಷ್ಟಿಸಿತ್ತು. ಆದರೆ, ಈ ಬಗ್ಗೆ ಬಿಗ್ ಬಿ ಕುಟುಂಬ ಎಲ್ಲೂ ಅಧಿಕೃತ ಹೇಳಿಕೆ ನೀಡಿರಲಿಲ್ಲ.

ಅಮಿತಾಭ್ ಬಚ್ಚನ್ ದಿಢೀರನೇ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದು ಓಡಾಡಿತ್ತು. ಆದರೆ, ಶುಕ್ರವಾರ ನಡೆದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ISPL) ಬಿಗ್ ಬಿ ಕಾಣಿಸಿಕೊಂಡಿದ್ದಾರೆ. ಇದು ಅಚ್ಚರಿಯನ್ನುಂಟು ಮಾಡಿತ್ತು.

ಅನಾರೋಗ್ಯಕ್ಕೆ ಒಳಗಾದ ಅಮಿತಾಭ್ ಬಚ್ಚನ್‌ರನ್ನು ISPL ಕಂಡವರು ಒಮ್ಮೆ ಶಾಕ್ ಆಗಿದ್ದರು. ಬಳಿಕ ISPL ಮುಗಿಸಿ ಹೋಗುವಾಗ ಅಲ್ಲಿದ್ದವರೊಬ್ಬರು ಬಿಗ್‌ಬಿಯ ಆರೋಗ್ಯವನ್ನು ವಿಚಾರಿಸಿದ್ದರು. ಆ ವೇಳೆ ಅಮಿತಾಭ್ ಬಚ್ಚನ್ ನಾನು ಆರೋಗ್ಯವಾಗಿದ್ದೇನೆ ಇದು ಸುಳ್ಳು ಸುದ್ದಿ ಎಂದು ಹೇಳಿ ಹೊರಟು ಹೋದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುಳ್ಳು ಸುದ್ದಿ ಎಂದ ಬಿಗ್ ಬಿ :


ಅಮಿತಾಭ್ ಬಚ್ಚನ್ ಆರೋಗ್ಯವಾಗಿದ್ದಾರೆ. ಅವರು ಯಾವುದೇ ಆಸ್ಪತ್ರೆಗೂ ದಾಖಲಾಗಿರಲಿಲ್ಲ. ಅವರಿಗೆ ವೈದ್ಯರು ಆಂಜಿಯೋಪ್ಲಾಸ್ಟಿಯನ್ನೂ ಮಾಡಿಲ್ಲ. ಅಮಿತಾಭ್ ಬಚ್ಚನ್ ಮುಂಬೈನಲ್ಲಿ ಐಎಸ್‌ಪಿಲ್ ಫೈನಲ್ ಮುಗಿಸಿ ಮನೆಗೆ ಹೋಗುವಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.
ಈ ವೇಳೆ ಅದೇ ಗುಂಪಿನಲ್ಲಿದ್ದವರೊಬ್ಬರು ಬಿಗ್ ಬಿಗೆ “ಹೇಗಿದ್ದೀರಾ.. ಎಲ್ಲಾ ಕ್ಷೇಮವೇ” ಎಂದು ಆರೋಗ್ಯದ ಬಗ್ಗೆ ಕೇಳಿದ್ದಾರೆ. ತಕ್ಷಣ ನಿಂತ ಬಿಗ್ ಬಿ ಅವರೆಡೆಗೆ ಕೈ ಮಾಡಿ “ಸುಳ್ಳು ಸುದ್ದಿ” ಎಂದು ಮುಂದಕ್ಕೆ ಹೋಗುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಅಮಿತಾಭ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಫೋಟೋ  ವೈರಲ್:


ಅಮಿತಾಭ್ ಬಚ್ಚನ್ ISPL ಫೈನಲ್‌ನಲ್ಲಿ ಸಿಕ್ಕಾಪಟ್ಟೆ ಜೋಷ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಅಭಿಷೇಕ್ ಬಚ್ಚನ್ ಜೊತೆ ಬಿಗ್‌ ಬಿ ISPLಗೆ ಬಂದಿದ್ದರು. ಇದೇ ವೇಳೆ ಕ್ರಿಕೆಟ್ ಲೆಜೆಂಟ್ ಸಚಿನ್ ತೆಂಡೂಲ್ಕರ್ ಜೊತೆ ಗಂಭೀರವಾದ ಚರ್ಚೆ ಮಾಡುವ ಫೋಟೊಗಳನ್ನು ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಬಿಗ್ ಬಿ ಆರಾಮವಾಗಿದ್ದಾರೆ ಎಂದು ತಿಳಿಯಬಹುದು.

FILM

ರೀಲ್ಸ್ ರಾಣಿ ರೇಷ್ಮಾ ಆಂಟಿ ಕಿಡ್ನಾಪ್

Published

on

ಮಂಗಳೂರು/ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ‘ಹಾಯ್ ಫ್ರೆಂಡ್ಸ್ ಏನ್ ಗೊತ್ತಾ’ ಅಂತ ಹೇಳುತ್ತಲೇ ವಿಡಿಯೋ ಮಾಡಿ ಫೇಮಸ್ ಆಗಿದ್ದ ರೇಷ್ಮಾ ಯಾಸಿನ್ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಗಿಚ್ಚಿ ಗಿಲಿಗಿಲಿ ಸೀಸನ್ 3ರ ಸ್ಪರ್ಧಿಯಾಗಿ ಇಡೀ ಕರ್ನಾಟಕಕ್ಕೆ ಫೇಮಸ್ ಆಗಿರುವ ರೇಷ್ಮಾ ಯಾಸಿನ್ ಅವರು ತಮ್ಮ ವೈರಲ್ ವಿಡಿಯೋಗಳಿಂದಲೇ ಇಂದು ಸೆಲಿಬ್ರಿಟಿಯಾಗಿದ್ದಾರೆ. ಜನರು ಸಹ ರೇಷ್ಮಾ ಅವರ ವಿಡಿಯೋಗಳಿಗೆ ಪ್ರೀತಿಯನ್ನು ನೀಡುತ್ತಿದ್ದು, ಅಧಿಕ ವ್ಯೂವ್ಸ್ ಪಡೆದುಕೊಳ್ಳುತ್ತಿರುತ್ತವೆ. ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದ ರವಿ ಮಂಡ್ಯ
ಸದ್ಯ ವೈರಲ್ ವಿಡಿಯೋದಲ್ಲಿ ಹಾಯ್ ಫ್ರೆಂಡ್ಸ್. ನೀವು ನನ್ನನ್ನು ಎಷ್ಟು ಬೆಳೆಸಿದ್ದೀರಿ ಅಂದ್ರೆ ರವಿ ಮಂಡ್ಯ ಅವರನ್ನು ನಾನು ಪರ್ಸನಲ್ ಮೇಕಪ್ ಮ್ಯಾನ್ ಆಗಿ ಇಟ್ಕೊಂಡಿದ್ದೇನೆ ಎಂದು ರೇಷ್ಮಾ ಆಂಟಿ ಹೇಳುತ್ತಾರೆ. ಇದಕ್ಕೆ ಕೋಪಗೊಳ್ಳುವ ರವಿ ಮಂಡ್ಯ, ಒಮಿನಿ ವ್ಯಾನ್ ಡಿಕ್ಕಿ ಓಪನ್ ಮಾಡುತ್ತಾರೆ. ನಂತರ ರೇಷ್ಮಾ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಡಿಕ್ಕಿಯೊಳಗೆ ಹಾಕುತ್ತಾರೆ. ಬಿದ್ಕೋ ಕಪಿ ಮುಂಡೆದೆ, ಇನ್ನೊಂದ್ ಸಾರಿ ಆ ಕಟ್ಟಪ್ಪನ ಜೊತೆ ನೀನು ವಿಡಿಯೋನೇ ಮಾಡಬಾರದು. ನಿನ್ನನ್ನು ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದು ವ್ಯಾನ್ ಚಾಲನೆ ಮಾಡಿಕೊಂಡು ಹೋಗುತ್ತಾರೆ.

ಇದನ್ನೂ ಓದಿ: ಶ್ರೀಲೀಲಾ ಅಭಿನಯದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್!

ಈ ರೀಲ್ಸ್‌ ನೋಡಿದ ನೆಟ್ಟಿಗರು, ಅಣ್ಣ ತುಂಬಾ ಉಪಕಾರ ಮಾಡಿದ್ರಿ, ಫಸ್ಟ್ ತಗೊಂಡ್ ಹೋಗಿ ಕೆಆರ್‌ಎಸ್ ಡ್ಯಾಮ್‌ಗೆ ಆಕ್ಬಿಡು ದೇವರು ಒಳ್ಳೇದ್ ಮಾಡ್ತಾನೆ ನಿನಗೆ ಎಂದು ತಮ್ಮ ಗೋಳು ತೋಡಿಕೊಂಡಿದ್ದಾರೆ. ಇವ್ಳ ಕರ್ಕೊಂಡು ಹೋಗಿ ಕಾಡಲ್ಲಿ ಬಿಟ್ ಬಂದ್ಬಿಡು ಇಲ್ಲಿ ಇವರ ಕಾಟ ತಡೆಯೋಕೆ ಆಗ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Continue Reading

FILM

ಉಡುಪಿ ಶ್ರೀಕೃಷ್ಣ ಮಠಕ್ಕೆ ಲವ್ಲಿ ಸ್ಟಾರ್ ಪ್ರೇಮ್, ನಟಿ ಶರಣ್ಯ ಭೇಟಿ

Published

on

ಉಡುಪಿ :  ಶ್ರೀ ಕೃಷ್ಣ ಮಠಕ್ಕೆ  ಲವ್ಲಿ ಸ್ಟಾರ್ ಪ್ರೇಮ್ ಭೇಟಿ ನೀಡಿದರು. ಪ್ರಾತಃ ಕಾಲದಲ್ಲಿ ನಡೆಯುವ ವಿಶೇಷ ಪೂಜೆಯನ್ನು ಕಣ್ತುಂಬಿ ಕೊಂಡರು.  ಈ ವೇಳೆ ನಟಿ ಶರಣ್ಯ ಶೆಟ್ಟಿ ಕೂಡ ಜೊತೆಗಿದ್ದರು.

ಪ್ರಾತ:ಕಾಲದಲ್ಲಿ ಉಡುಪಿ ಶ್ರೀ ಕೃಷ್ಣನ ವಿಶ್ವರೂಪದರ್ಶನ ಪಡೆದು ಸಂತೋಷ ವ್ಯಕ್ತಪಡಿಸಿದರು. ಪರ್ಯಾಯ ಪುತ್ತಿಗೆ ಶ್ರೀ  ಶ್ರೀ ಸುಗುಣೇಂದ್ರತೀರ್ಥರಿಂದ  ಕೋಟಿಗೀತಾಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿದರು.

ಈ ವೇಳೆ ಮಠದ ವತಿಯಿಂದ ಪ್ರೇಮ್ ಅವರನ್ನು ಗೌರವಿಸಲಾಯಿತು.

Continue Reading

DAKSHINA KANNADA

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಪ್ರಭುದೇವ

Published

on

ಕಡಬ : ಇತ್ತೀಚೆಗೆ ಕರಾವಳಿಯ ದೇಗುಲಗಳಿಗೆ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇಂದು (ಮಾ.15) ಖ್ಯಾತ ನಟ ಪ್ರಭುದೇವ ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.

ಪತ್ನಿ ಹಾಗೂ ಕುಟುಂಬ ವರ್ಗದವರ ಜೊತೆಗೂಡಿ ಆಗಮಿಸಿದ್ದ ಪ್ರಭುದೇವ ಮಹಾಭಿಷೇಕ ಪೂಜೆಯನ್ನು ನೆರವೇರಿಸಿ, ಶ್ರೀ ದೇವರ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ಸಂಪುಟ ನರಸಿಂಹಸ್ವಾಮಿ ಮಠಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ : “ಗೋಲ್ಡನ್ ಮ್ಯಾಜಿಷಿಯನ್” ರಾಷ್ಟ್ರೀಯ ಜಾದೂ ಪ್ರಶಸ್ತಿ ಪಡೆದ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌

ಈ ಸಂದರ್ಭ ದೇವಳದ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ  ಸುತಗುಂಡಿ ಅವರು ಪ್ರಭುದೇವ ದಂಪತಿಯನ್ನು ಶಾಲು ಹೊಂದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಈ ವೇಳೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಮುಂತಾದವರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page