Connect with us

LATEST NEWS

ಭಟ್ಕಳದಲ್ಲಿ ಭಾರೀ ಮಳೆ: 4 ಬೋಟ್‌ಗಳು ಮುಳುಗಡೆಯಿಂದ ಲಕ್ಷಾಂತರ ಹಾನಿ

Published

on

ಭಟ್ಕಳ: ಲಂಗರು ಹಾಕಿದ್ದ 4 ಬೋಟುಗಳು ಪಲ್ಟಿಯಾಗಿ ಮುಳುಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.


ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದು ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಮತ್ತಷ್ಟು ಹೂಳು ಸಂಗ್ರಹವಾಗಿದ್ದು, ಭಟ್ಕಳದ ದುರ್ಗಾಂಬಿಕಾ ದೇವಿ, ಶ್ರೀ ನಿತ್ಯಾನಂದ, ಜೈನ ಜಟಗಾ, ಗಗನ 3 ಹೆಸರಿನ ಬೋಟುಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.


ಮುಳುಗಿದ ಬೋಟುಗಳನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಒಂದು ಬೋಟ್‌ನ್ನು ರಕ್ಷಣೆ ಮಾಡಲಾಗಿದೆ.

BELTHANGADY

ಬೆಳ್ತಂಗಡಿ : ಏಕಕಾಲದಲ್ಲಿ ಒಂಬತ್ತು ಗುಳಿಗ ದೈವಗಳ ನರ್ತನ ಕಂಡು ಕಣ್ತುಂಬಿಸಿಕೊಂಡ ಭಕ್ತರು

Published

on

ಬೆಳ್ತಂಗಡಿ : ದೈವಾರಾಧನೆಯನ್ನು ಕರಾವಳಿ ಜನತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುವ ಕಾರಣಕ್ಕಾಗಿಯೇ ಇಲ್ಲಿ ದೈವಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಹಾಗಾಗಿ ಇಂದಿಗೂ ಸುಮಾರು 500 ಕ್ಕೂ ಹೆಚ್ಚು ದೈವಗಳನ್ನು ಆರಾಧಿಸಲಾಗುತ್ತದೆ. ಇದೀಗ ಬೆಳ್ತಂಗಡಿ ತಾಲೂಕಿನ ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಗುಳಿಗ ದೈವಗಳಿಗೆ ಏಕಕಾಲದಲ್ಲಿ ನಡೆದ ನರ್ತನ ಸೇವೆ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡಿದ್ದು, ಈ ಅಪರೂಪದ ಸೇವೆ ಇಡೀ ಕರಾವಳಿಯಲ್ಲಿಯೇ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

“ಐದು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ” ಎಂಬುವುದು ಆಡಳಿತ ಮುಖ್ಯಸ್ಥರ ಮಾತು. ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ಮಾತ್ರ ನರ್ತನ ಸೇವೆ ನಡೆಯುತ್ತವೆ. ಆದರೆ, ಬರ್ಕಜೆಯಲ್ಲಿ ಒಂಬತ್ತು ಗುಳಿಗ ದೈವಗಳಿಗೆ ನರ್ತನ ಸೇವೆ ನೆರವೇರಿದೆ.

ಇದನ್ನೂ ಓದಿ : ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

ಗುಳಿಗ ದೈವದ ಆರಾಧನೆ ಕರಾವಳಿ ಭಾಗದಲ್ಲಿ ಬಹು ಆಕರ್ಷಕ. ಅದರ ರೋಷಾವೇಷ ನೋಡೋದೇ ಒಂದು ರೋಮಾಂಚಕ ಅನುಭವ. ತುಳುನಾಡಿನಾದ್ಯಂತ ಆರಾಧಿಸಲ್ಪಡುವ ಗುಳಿಗ ದೈವಗಳು, ಕ್ಷೇತ್ರಪಾಲಕರಾಗಿ ನೆಲೆಸಿ, ಜನರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಒಂದೇ ದಿನ ಒಂದೇ ಬಾರಿ ಈ ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದ್ದು, ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಈ ಬಾರಿಯ ವಾರ್ಷಿಕ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು. ಒಂಬತ್ತು ಮಂದಿ ದೈವ ನರ್ತಕರು ಏಕಕಾಲದಲ್ಲಿ ನವ ಗುಳಿಗನ ನೇಮೋತ್ಸವ ನಡೆಸಿಕೊಟ್ಟಿದ್ದು, ಈ ಅದ್ಭುತವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

Continue Reading

LATEST NEWS

ರಜೆ ನಿರಾಕರಣೆ; ಮೇಲಾಧಿಕಾರಿ ಹಾಗೂ ನಾಲ್ಕು ಸಹ ಉದ್ಯೋಗಿಗಳಿಗೆ ಚಾಕು ಇರಿದ ನೌಕರ

Published

on

ಪಶ್ಚಿಮ ಬಂಗಾಳ: ಆಫೀಸ್‌ನಲ್ಲಿ ರಜೆ ಕೊಡದೇ ಇದ್ದದ್ದಕ್ಕೆ ಸರ್ಕಾರಿ ನೌಕರನೊಬ್ವ ತನ್ನ ಮೇಲಾಧಿಕಾರಿ ಹಾಗೂ ಇತರ ನಾಲ್ಕು ಸಹ ಉದ್ಯೋಗಿಗಳಿಗೆ ಚಾಕು ಇರಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಅಮಿತ್ ಕುಮಾರ್ ಚಾಕು ಇರಿದ ಸರ್ಕಾರಿ ನೌಕರ. ಈತ ಕೋಲ್ಕತದ ನ್ಯೂ ಟೌನ್ ಟೆಕ್ನಿಕಲ್ ಬಿಲ್ಡಿಂಗ್‌ನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ನನಗೆ ರಜೆ ಅವಶ್ಯಕತೆ ಇದೆ ರಜೆ ಕೊಡಿ ಎಂದು ಕೇಳಿದ್ದಕ್ಕೆ ರಜೆಯ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಮೇಲಾಧಿಕಾರಿ ಮೇಲೆ ಚಾಕು ಇರಿದಿದ್ದಾನೆ.

ನಂತರ ಕಚೇರಿಯೊಳಗೆ ಮೇಲಅಧಿಕಾರಿ ಹಾಗೂ ತನ್ನ 4 ಸಹ ಉದ್ಯೋಗಿಗಳ ಜೊತೆ ವಾಗ್ವಾದ ನಡೆಸಿದರು. ಬಳಿಕ ಅಮಿತ್ ಕೋಪದಿಂದ ತಾಳ್ಮೆ ಕಳೆದುಕೊಂಡು 4 ಜನರ ಮೇಲೂ ಚಾಕು ಇರಿದಿದ್ದಾನೆ.

ಸಂಚಾರ ಪೊಲೀಸ್ ಒಬ್ಬರು ಘಟನಾ ಸ್ಥಳಕ್ಕೆ ಬಂದು ಆರೋಪಿಯಲ್ಲಿ ಚಾಕನ್ನು ಎಸೆಯುವಂತೆ ಹೇಳಿದ್ದಾರೆ. ಈ ಆದೇಶ ಪಾಲಿಸಿದ ಅಮಿತ್ ನಂತರ ಚಾಕುವನ್ನು ಎಸೆದಿದ್ದಾನೆ. ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

Continue Reading

LATEST NEWS

ಸಿಎಂ, ಮಾಜಿ ಸಿಎಂಗೆ ಇಂದು ಬಿಗ್ ಡೇ !

Published

on


ಮಂಗಳೂರು/ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಬದಲು ಸಿಬಿಐಗೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಆದೇಶ ಶುಕ್ರವಾರ ಹೊರಬೀಳಲಿದೆ. ಅದೇ ರೀತಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ಆದೇಶ ಸಹ ಹೊರ ಬೀಳಲಿದೆ.

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದ 14 ಸೈಟ್​ಗಳ ತನಿಖೆಯನ್ನ ಸಿಬಿಐಗೆ ವಹಿಸಬೇಕೇ ಬೇಡವೇ ಎನ್ನುವ ಬಗ್ಗೆ ಧಾರವಾಡ ಹೈಕೋರ್ಟ್ ಪೀಠ ಇಂದು(ಫೆಬ್ರವರಿ 07) ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ಹೈಕೋರ್ಟ್ ಪೀಠ ಇಂದು ಬೆಳಗ್ಗೆ 10.30 ಕ್ಕೆ ತೀರ್ಪು ಪ್ರಕಟಿಸಲಿದ್ದು, ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ ಅಗತ್ಯವೇ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ತೀರ್ಪು ಸಹ ಇಂದೇ ಹೊರಬೀಳಲಿದೆ. ಹೀಗಾಗಿ ಈ ಇಬ್ಬರಿಗೆ ಇಂದು ನಿರ್ಣಾಯಕ ದಿನವಾಗಿದ್ದು, ಎಲ್ಲರ ಚಿತ್ತ ಕೋರ್ಟ್​ನತ್ತ ನೆಟ್ಟಿದೆ.

ಹೈಕೋರ್ಟ್ ನೀಡಲಿರುವ ಆದೇಶ ಸಾಕಷ್ಟು ಕುತೂಹಲ ಕೆರಳಿಸಿದ್ದು, ಒಂದೊಮ್ಮೆ ಸ್ನೇಹಮಯಿ ಕೃಷ್ಣ ಅರ್ಜಿ ಊರ್ಜಿತವಾಗಿ ಪ್ರಕರಣ ಸಿಬಿಐಗೆ ವರ್ಗಾವಣೆ ಆದರೆ ಸಿಎಂ ಸಿದ್ದರಾಮಯ್ಯಗೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ.

 ಇದನ್ನೂ ಓದಿ: ನಟ ಸೋನು ಸೂದ್ ವಿರುದ್ದ ಬಂಧನ ವಾರೆಂಟ್ ಜಾರಿ

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ದು ಕೋರಿದ್ದ ಅರ್ಜಿ ಆದೇಶ ನ್ಯಾ.ನಾಗಪ್ರಸನ್ನ ಅವರಿರುವ ಏಕಸದಸ್ಯ ಪೀಠದಿಂದ ತೀರ್ಪು ಪ್ರಕಟವಾಗಲಿದೆ. ಬಿಎಸ್‌ವೈ ಅರ್ಜಿ ತಿರಸ್ಕೃತವಾದರೆ ಅವರಿಗೂ ಸಹ ಸಂಕಷ್ಟ ಎದುರಾಗಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page