Connect with us

NATIONAL

ಕಾಸರಗೋಡಿಗೆ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ನೇಮಕ..

Published

on

ಕಾಸರಗೋಡು :ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ನೇಮಕಗೊಂಡಿದ್ದಾರೆ.

ಕಾಸರಗೋಡಿನ 24ನೇ ಜಿಲ್ಲಾಧಿಕಾರಿ ಮತ್ತು ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಅವರು ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

2010ರ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಅವರು ನಾಗರಿಕ ಸೇವೆ ಪರೀಕ್ಷೆಯಲ್ಲಿ 69ನೇ ಶ್ರೇಯಾಂಕ ಪಡೆದಿದ್ದಾರೆ.

ಕಾಸರಗೋಡಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ.ಡಿ. ಸಜಿತ್ ಬಾಬು ಅವರನ್ನು ಕೇರಳ ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

 

LATEST NEWS

ಹನುಮಾನ್ ಪ್ರತಿಮೆಗೆ ನಿರಂತರ ಪ್ರದಕ್ಷಿಣೆ ಹಾಕಿದ್ದ ಶ್ವಾನ ಅಸ್ವಸ್ಥ

Published

on

ಮಂಗಳೂರು/ಉತ್ತರ ಪ್ರದೇಶ :  ಬಿಜ್ನೋರ್ ಜಿಲ್ಲೆಯ ನಂದಪುರ ಗ್ರಾಮದ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುವ ವೀಡಿಯೋವೊಂದು ವೈರಲ್ ಆಗಿತ್ತು.  ನಾಯಿ ಸತತ ಮೂರು ನಾಲ್ಕು ದಿನಗಳ ಕಾಲ ವಿಗ್ರಹಕ್ಕೆ ಸುತ್ತು ಬಂದಿತ್ತು, ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಅಪರೂಪದ ದೃಶ್ಯ ನೋಡಲು ಜನರು ಆಗಮಿಸಲಾರಂಭಿಸಿದ್ದರು.

ಬೀದಿ ನಾಯಿಯೊಂದು ಹನುಮಾನ್ ಮತ್ತು ಮಾ ದುರ್ಗಾ ದೇವರ ವಿಗ್ರಹಗಳನ್ನು ಪದೇ ಪದೇ ಸುತ್ತುತ್ತಿರುವುದು ಆಶ್ಚರ್ಯವನ್ನುಂಟು ಮಾಡಿತ್ತು. ಆ ನಾಯಿಗೆ ಭೈರವ ಎಂದು ಜನರು ನಾಮಕರಣವನ್ನೂ ಮಾಡಿದ್ದರು. ಸುಮಾರು 3 ದಿನಗಳ ಕಾಲ ನಾಯಿ ಹೀಗೆ ವಿಗ್ರಹಕ್ಕೆ ನಿರಂತರ ಪ್ರದಕ್ಷಿಣೆ ಹಾಕಿತ್ತು. ಪವಾಡವೆಂದು ನಂಬಿ ಈ ನಾಯಿಯನ್ನು ಭಕ್ತರು ಪೂಜಿಸುತ್ತಿದ್ದರು.

ಈ ವೈರಲ್ ವೀಡಿಯೋ ಕಂಡ ಶ್ವಾನ ಪ್ರಿಯರು ಈ ಶ್ವಾನದಲ್ಲಿ ಏನೋ ಸಮಸ್ಯೆಯಿದೆ ಎಂಬುದನ್ನು ಅರಿತು  ಅದನ್ನು ನೋಯ್ಡಾದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಪಶುವೈದ್ಯರು ನಾಯಿಯನ್ನು ತಪಾಸಣೆ ನಡೆಸಿದ್ದಾರೆ.

ಈ ವೇಳೆ ಶ್ವಾನವೂ ತೀವ್ರವಾಗಿ ನಿರ್ಜಲೀಕರಣಗೊಂಡಿದ್ದು ಮತ್ತು ಕಡಿಮೆ ರಕ್ತದೊತ್ತಡ, ನಿಧಾನ ಹೃದಯ ಬಡಿತ ಮತ್ತು ವೀಡಿಯೋಗಳಲ್ಲಿ ಕಂಡುಬರುವ ನಿರಂತರ ವೃತ್ತಾಕಾರದ ಚಲನೆಗೆ ಕಾರಣವಾದ ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಶ್ವಾನದ ಸ್ಥಿತಿ ಬೇಗನೆ ಹದಗೆಡುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪಿಲಿಕುಳ ಪ್ರಾಣಿ ಸಂಗ್ರಹಾಲಯ ಮುಚ್ಚಲು ಹೈಕೋರ್ಟ್ ಆದೇಶ ನೀಡಿದ್ಯಾ? ಈ ಬಗ್ಗೆ ಡಿಸಿ ಏನಂದ್ರು?

ಸದ್ಯ ಚಿಕಿತ್ಸೆ ಪಡೆದಿರುವ ಭೈರವ ಚೇತರಿಸಿಕೊಂಡಿದ್ದು, ನೋಯ್ಡಾದಿಂದ ಬಿಜ್ನೋರ್‌ನ ತನ್ನ ಊರಿಗೆ ಮರಳಿದ್ದಾನೆಂದು ತಿಳಿದುಬಂದಿದೆ.

Continue Reading

LATEST NEWS

6 ವರ್ಷಗಳಲ್ಲಿ 3 ಮದುವೆ…4ನೇ ಮದುವೆ ತಯಾರಿಯಲ್ಲಿದ್ದಾತ ಸಿಕ್ಕಿ ಬಿದ್ದಿದ್ದು ಹೇಗೆ?

Published

on

ಮಂಗಳೂರು/ಉ.ಪ್ರ : ಸಾವಿರ ಸುಳ್ಳು ಹೇಳಿ ಒಂದು ಮದುವೆಯಾಗು ಅಂತಾರೆ, ಆದ್ರೆ, ಇಲ್ಲೊಬ್ಬ ಭೂಪ ಒಂದಲ್ಲ, ಎರಡಲ್ಲ ಬರೋಬ್ಬರಿ 3 ಮದುವೆಯಾಗಿದ್ದಾನೆ. ಅದು ಕೇವಲ 6 ವರ್ಷಗಳಲ್ಲಿ. ಇದೀಗ 4 ನೇ ಮದುವೆಗೆ ಸಜ್ಜಾಗುತ್ತಿರುವಾಗ ಆತನ ಲೀಲೆಗಳು ಹೊರಬಿದ್ದಿವೆ. ಆತನ ಮೂವರು ಪತ್ನಿಯರು ಒಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಏನಿದು ಕಥೆ?

ಉತ್ತರ ಪ್ರದೇಶದ ಲಲಿತ್‌ ಪುರ ಜಿಲ್ಲೆಯ ನಿವಾಸಿ, ಸುನಿಲ್ ಕುಮಾರ್ ಆ ಮಹಾನುಭಾವ.  ಸುನೀಲ್ ಗೆ ಯಾವುದೇ ಸ್ಥಿರವಾದ ಉದ್ಯೋಗವಿರಲಿಲ್ಲ.   2019ರಲ್ಲಿ ಮೊದಲ ಮದುವೆ ನಡೆದಿತ್ತು. ಮೊದಲ ಪತ್ನಿಯ ಕುಟುಂಬದವರು 5 ಲಕ್ಷ ನಗದು, ಒಡವೆ ಸೇರಿ ಒಟ್ಟು 8 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.

ಮತ್ತಷ್ಟು ವರದಕ್ಷಿಣೆಗಾಗಿ ಕಾಟ ಕೊಡುತ್ತಿದ್ದ ಸುನಿಲ್, ಆಕೆಯನ್ನು ತವರಿಗೆ ಕಳುಹಿಸಿದ್ದ, ಡಿವೋರ್ಸ್ ನೋಟಿಸ್ ಕೂಡ ಕೊಟ್ಟಿದ್ದ.

ಮೊದಲನೇ ಮದುವೆ ವಿಚಾರ ಮುಚ್ಚಿಟ್ಟು 2021 ರಲ್ಲಿ ಎರಡನೇ ಮದುವೆಯಾಗಿದ್ದ. 8 ಲಕ್ಷ ವರದಕ್ಷಿಣೆ ಪಡೆದಿದ್ದ.  ಕೆಲವೇ ತಿಂಗಳಲ್ಲಿ ಚಿನ್ನದ ಸರ ಮತ್ತು ಬುಲೆಟ್ ಬೈಕ್ ಬೇಕೆಂದು ಹಲ್ಲೆ ನಡೆಸಿ, ಆಕೆಯನ್ನು ಮನೆಯಿಂದ ಹೊರ ಹಾಕಿದ್ದ.

2023ರಲ್ಲಿ ಮೂರನೇ ಮದುವೆಯಾದ ಭೂಪ ತನ್ನ ಹಳೇ ಚಾಳಿ ಮುಂದುವರಿಸಿದ್ದ. 8 ಲಕ್ಷ ವರದಕ್ಷಿಣೆ, ಒಡವೆ ಪಡೆದಿದ್ದ. ಆಕೆ ಗರ್ಭಿಣಿಯಾದಾಗ ಹ*ಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದ. ಸದ್ಯ ಆಕೆಗೆ ಒಂದು ಹೆಣ್ಣು ಮಗುವಿದೆ. ಇಷ್ಟಕ್ಕೆ ಮುಗಿದಿಲ್ಲ ಆತನ ಕಥೆ, ಈಗ ನಾಲ್ಕನೇ ಮದುವೆಗೆ ಸಿದ್ಧನಾಗ್ತಿದ್ದಾನೆ.

ಇದನ್ನೂ ಓದಿ : ಮಹಿಳಾ ಅಧಿಕಾರಿಯ ಮನೆಯಲ್ಲೇ ಗುಪ್ತ ಕ್ಯಾಮರಾ ಅಳವಡಿಕೆ: ಖತರ್ನಾಕ್ ನಕಲಿ ಪತ್ರಕರ್ತರು ಅರೆಸ್ಟ್‌!

ಈ ವಿಚಾರ ಅದು ಹೇಗೋ ಮೂವರು ಮಡದಿಯರಿಗೂ ಗೊತ್ತಾಗಿದ್ದು,  ಝಾನ್ಸಿಯ ಬಬಿನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

LATEST NEWS

ವೆನೆಜುವೆಲಾದಿಂದ ಭಾರತ ತೈಲ ಖರೀದಿ ವಿಚಾರ; ರಷ್ಯಾ ಪ್ರತಿಕ್ರಿಯೆ

Published

on

ನವದೆಹಲಿ: ಇನ್ಮುಂದೆ ಅಮೆರಿಕ ಮತ್ತು ವೆನೆಜುವೆಲಾದಿಂದ ಭಾರತ ತೈಲ ಖರೀದಿ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದರು. ಈ ಹೇಳಿಕೆಗೆ ರಷ್ಯಾ ಪ್ರತಿಕ್ರಿಯಿಸಿದೆ.


ಹೌದು.. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ಬದಲಿಗೆ ಅಮೆರಿಕ ಮತ್ತು ಬಹುಶಃ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು.

ಟ್ರಂಪ್‌ ಹೇಳಿಕೆ ನೀಡಿದ ಕೆಲವು ದಿನಗಳ ನಂತರ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಮಾತನಾಡಿದ್ದು, ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಂತೆ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಭಾರತವು ಯಾವಾಗಲೂ ಈ ಉತ್ಪನ್ನಗಳನ್ನು ಇತರ ದೇಶಗಳಿಂದಲೂ ಖರೀದಿಸಿದೆ. ಆದ್ದರಿಂದ, ಇದರಲ್ಲಿ ನಮಗೆ ಹೊಸದಾಗಿ ಏನೂ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂರಾರು ಕೋಟಿ ಹೂಡಿಕೆ ಮಾಡಿಸಿ ವಂಚನೆ ಮಾಡಿದ ಖತರ್ನಾಕ್ ಗಳು ಅರೆಸ್ಟ್-ಪೊಲೀಸ್ ಕಮಿಷನರ್

ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಮಾಸ್ಕೋಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಷ್ಯಾದ ವಕ್ತಾರ ಪೆಸ್ಕೋವ್‌ ಒತ್ತಿ ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page