Connect with us

bangalore

ಬೆಂಗಳೂರು: ಮಹಿಳೆಯ ಬರ್ಬರ ಕೊಲೆ- ಕೈ ಕಾಲು, ರುಂಡ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಮೃತ ದೇಹ ಪತ್ತೆ..!

Published

on

ಮಹಿಳೆಯೋರ್ವರ ಮೃತ ದೇಹ ಕೈ ಕಾಲು ಮತ್ತು ರುಂಡವನ್ನು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.

ಬೆಂಗಳೂರು: ಮಹಿಳೆಯೋರ್ವರ ಮೃತ ದೇಹ ಕೈ ಕಾಲು ಮತ್ತು ರುಂಡವನ್ನು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಬನ್ನೇರುಘಟ್ಟದ ಜನತಾ ಕಾಲೋನಿ ನಿವಾಸಿ ಗೀತಾ ಎಂದು ಗುರುತಿಸಲಾಗಿದೆ.

ಇವರು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಆರು ವರ್ಷಗಳ ಹಿಂದೆ ಪತಿ ತೀರಿಕೊಂಡ ನಂತರ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾದ ನಂತರ ಇವರು ಒಂಟಿ ಜೀವನ ನಡೆಸುತ್ತಿದ್ದರು.

ನಾಲ್ಕು ದಿನಗಳ ಹಿಂದೆ ಗೀತಾ ಅವರಿಗೆ ಮಗಳು ಕರೆ ಮಾಡಿದಾಗ ಕರೆ ಸಿಗುತ್ತಿಲ್ಲ ಎಂದು ತಿಳಿದು ಬಂದಿತ್ತು.

ಹೀಗಾಗಿ ಬುಧವಾರ ರಾತ್ರಿ ತನ್ನ ತಾಯಿಯನ್ನು ನೋಡಲೆಂದು ಮಗಳು ಮನೆಗೆ ಬಂದಿದ್ದರು. ಆದರೆ ಮನೆಗೆ ಬೀಗ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮುಂಜಾನೆ ವೇಳೆಗೆ ಗೀತಾ ಅವರ ಮನೆಯ ಮುಂದಿನ ಕೌಂಪೌಂಡ್ ಬಳಿ ದುರ್ವಾಸನೆ ಕಂಡು ಬರುತ್ತಿದೆ ಎಂದು ನೆರೆಹೊರೆಯವರು ಹೇಳಿದ್ದರು.

ಬಳಿಕ ಹೋಗಿ ನೊಡಿದಾಗ ರುಂಡ ಹಾಗೂ ಕೈ ಕಾಲು ಇಲ್ಲದ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡಾಗ ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ.

ತಕ್ಷಣ ಅವರು ಪೋಲಿಸರಿಗೆ ಮಾಹಿತಿ ನೀಡಿದ್ದರು.

ಬಳಿಕ ಕುಟುಂಬಸ್ಥರು ಬಂದು ನೋಡಿದಾಗ ಇದು ಗೀತಾಳ ಶವವೆಂದು ಪತ್ತೆ ಹಚ್ಚಿದ್ದಾರೆ.

ಹುಡುಕಾಟ ನಡೆಸಿದರೂ ತಲೆ ಅಥವಾ ಕೈಕಾಲುಗಳು ಪತ್ತೆಯಾಗಿಲ್ಲ. ಮೃತ ದೇಹ ಬಹುತೇಕ ಕೊಳೆತು ಹೋಗಿತ್ತು.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

3-4 ದಿನಗಳ ಹಿಂದೆ ಮನೆ ಖಾಲಿ ಮಾಡಿದ ಪಕ್ಕದ ಮನೆಯಲ್ಲಿ ವಾಸವಿದ್ದ ಮೂವರು ಯುವಕರ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇದೀಗ ಪ್ರಾಥಮಿಕ ತನಿಖೆಯಲ್ಲಿ ಮೇ 28 ಅಥವಾ 29 ರಂದು ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಮೂವರು ಯುವಕರ ಪಾತ್ರದ ಬಗ್ಗೆ ಬಲವಾಗಿ ಶಂಕಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಕೊಲೆ ಪ್ರಕರಣವನ್ನು ಬನ್ನೇರುಘಟ್ಟದ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎನ್ನಲಾಗಿದೆ.

 

bangalore

ಬರಹದ ಮೂಲಕ ಮಹಿಳೆಯರಿಗೆ ಧೈರ್ಯ ತುಂಬಿದ ಆಟೋ ಡ್ರೈವರ್; ಅಂತದ್ದೇನಿದೆ?

Published

on

ಬೆಂಗಳೂರು: ಇತ್ತೀಚೆಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹಾಗೂ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಇದೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ.


ಇಂತಹ ವಾತಾವರಣದ ನಡುವೆ ಬೆಂಗಳೂರಿನಲ್ಲಿ ಓರ್ವ ಆಟೋ ಚಾಲಕನ ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಚಾಲಕನ ಹಿಂದಿನ ಭಾಗದಲ್ಲಿ, ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಈ ರೀತಿಯ ಬರಹವನ್ನು ಗಮನಿಸಿದ ಯುವತಿಯೊಬ್ಬರು, ರಾತ್ರಿ 12 ಗಂಟೆಗೆ ರ್ಯಾಪಿಡೊ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಆಟೋದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು ಎಂದು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ದೋಚಿದ ಕಳ್ಳರು

ಆದರೆ, ಆಟೋ ಚಾಲಕನ ಹೆಸರು, ವಿವರಗಳನ್ನು ಅವರು ಹಂಚಿಕೊಂಡಿಲ್ಲ. ಆತನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

bangalore

ಲಕ್ಷಾಂತರ ಬೆಲೆ ಬಾಳುವ ಗಿಳಿಯನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

Published

on

ಬೆಂಗಳೂರು : ಹೈಟೆಕ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಸುಮಾರು 2 ಲಕ್ಷ ರೂ. ಬೆಲೆ ಬಾಳುವ ಫಾರಿನ್ ಗಿಳಿಯನ್ನು ಕಾಪಾಡಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಸಾವನ್ನಪ್ಪಿರುವಂತಹ ಘಟನೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.


ಅರುಣ್ ಕುಮಾರ್(32) ಮೃತಪಟ್ಟವರು.

ಗಿಳಿಯೊಂದು ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ ಒಳಭಾಗದಲ್ಲಿರುವ ಹೈಟೆಕ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಅದನ್ನು ಕಂಡ ಅರುಣ್ ಕುಮಾರ್ ಅಪಾರ್ಟ್‌ಮೆಂಟ್‌ ಕಾಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್‌ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ 66 ಸಾವಿರ ಕೆವಿ ವಿದ್ಯುತ್ ವೈರ್‌ನಿಂದ ಹೊಡೆದ ಶಾಕ್‌ಗೆ ಅರುಣ್ ಕಾಪೌಂಡ್‌ನಿಂದ ಕೆಳಗೆ ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯನ್ನು ನಿಂದಿಸಿದ ಅಣ್ಣ; ಕೊಂ*ದೇ ಬಿಟ್ಟ ತಮ್ಮ!

ಘಟನಾ ಸ್ಥಳಕ್ಕೆ ಬೆಸ್ಕಾಂ ಮತ್ತು ಕೆಇಬಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ 65 ಸಾವಿರ ಕೆವಿ ಸಾಮರ್ಥ್ಯದ ವೈರ್​ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

bangalore

ಬೆಂಗಳೂರನ್ನು ಭಾರತದಲ್ಲೇ ಅತ್ಯುತ್ತಮ ಆಹಾರ ನಗರ ಎಂದ ವಿದೇಶಿಗ!

Published

on

ಬೆಂಗಳೂರು : ಅದೇಷ್ಟೋ ಮಂದಿ ಆಹಾರ ಪ್ರೇಮಿಗಳು ಇದ್ದಾರೆ. ಪ್ರವಾಸಿ ತಾಣ ವೀಕ್ಷಿಸುವ ಜತೆಗೆ ಅಲ್ಲಿಯ ಆಹಾರವನ್ನು ಸವಿಯಲೆಂದು ಪ್ರವಾಸ ಹೋಗುತ್ತಾರೆ. ಅದೇ ರೀತಿ ವಿದೇಶಿ ಪ್ರಜೆಯೊಬ್ಬರು ಬೆಂಗಳೂರಿನ ಗರಿಗರಿಯಾದ ದೋಸೆ ಹಾಗೂ ಮೃದುವಾದ ಇಡ್ಲಿಯನ್ನು ಸವಿದು ಬೆಂಗಳೂರು ಭಾರತದ ಅತ್ಯುತ್ತಮ ಆಹಾರ ನಗರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳಿಗೆ ಫುಲ್ ಫಿದಾ ಆಗಿರುವ ವಿದೇಶಿ ಪ್ರಜೆ ತನ್ನ ಅಭಿಪ್ರಾಯವನ್ನು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ವಿದೇಶಿಗನ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.


ಭಾರತದ ವಿವಿಧ ನಗರಗಳು ಸೇರಿದಂತೆ ಪಾಕಿಸ್ತಾನಕ್ಕೂ ತೆರಳಿ ಅಲ್ಲಿನ ಪ್ರವಾಸಿ ತಾಣಗಳು ಹಾಗೂ ಆಹಾರಗಳನ್ನು ಸವಿದಿದ್ದರು. ಹಗ್ (hugh.abroad) ಹೆಸರಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶ್ನೋತ್ತರ ಸರಣಿಯನ್ನು ನಡೆಸಿದ್ದು, ಈ ವೇಳೆ ಬಳಕೆದಾರರೊಬ್ಬರು ಪ್ರತಿಯೊಂದು ದೇಶದಲ್ಲೂ ಅತ್ಯುತ್ತಮವಾದ ಆಹಾರ ನಗರವನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

ಕೇವಲ ಬೆಳಗ್ಗಿನ ಉಪಾಹಾರ ಸಂಸ್ಕೃತಿಯಿಂದಾಗಿ ಭಾರತದ ಅತ್ಯುತ್ತಮ ಆಹಾರ ನಗರ ಬೆಂಗಳೂರು. ಬೆಂಗಳೂರಿನ ಬೆಳಗ್ಗಿನ ಉಪಾಹಾರವಾದ ಇಡ್ಲಿ ಸಾಂಬಾರ್, ಮಸಾಲಾ ದೋಸೆಯನ್ನು ಫಿಲ್ಟರ್ ಕಾಫಿಯೊಂದಿಗೆ ಸವಿದಿದ್ದಾರೆ. ದೋಸೆಗಳು ತುಂಬಾ ಗರಿಗರಿಯಾಗಿವೆ. ಇಡ್ಲಿಯನ್ನು ಬಾಯಿಲ್ಲಿಟ್ಟರೆ ಕರಗುತ್ತದೆ ಎಂದಿದ್ದಾರೆ. ಇನ್ನು ಕರಾಚಿಯನ್ನು ಪಾಕಿಸ್ತಾನದ ಅತ್ಯುತ್ತಮ ಆಹಾರ ನಗರವೆಂದು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: IND vs SA: ರೋಹಿತ್-ಕೊಹ್ಲಿ ಆರ್ಭಟ; 2ನೇ ODI ಪಂದ್ಯಕ್ಕೂ ಮುನ್ನ ಬಿಸಿಸಿಐ ದಿಢೀರ್ ಸಭೆ!

ಈ ವೀಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಒಮ್ಮೆ ಈ ತಿನಿಸುಗಳನ್ನು ಆಸ್ವಾದಿಸಿದರೆ ಮತ್ತೆ ಮತ್ತೆ ನೀವು ಬರುತ್ತೀರಿ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page