Connect with us

BELTHANGADY

ಬೆಳ್ತಂಗಡಿ ಹಾಲಿ ಶಾಸಕರ ಮೇಲೆ ಏರಿ ಹೋದ ಮಾಜಿ ಶಾಸಕ

Published

on

ಬೆಳ್ತಂಗಡಿ: ತಾಲೂಕಿನಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಮದ್ಯ ಮಾರಾಟಗಾರರು, ವ್ಯಾಪಾರಿಗಳು, ಅಧಿಕಾರಿ ವರ್ಗದಿಂದ ಹಪ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಗಂಭೀರ ಆರೋಪ ಮಾಡಿದ್ದಾರೆ.


ಈ ಬಗ್ಗೆ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂತಹ ವಸೂಲಿ ಮೂಲಕ ಅಮೃತಮಹೋತ್ಸವದ ಕಾರ್ಯಕ್ರಮಕ್ಕೆ ಮಾಡುತ್ತೇನೆಂದರೆ ನಮ್ಮ ದೇಶಕ್ಕೆ ನಾಚಿಕೆ ಹಾಗೂ ಅವಮಾನ ಎಂದರು. ಒಂದು ಬಾರಿ ಶಾಸಕರಾಗಿ ಮಾಡಿದ ಕಾರು ಬಾರು ಐದು ಬಾರಿ ಶಾಸಕನಾದರೂ ನನ್ನಿಂದ ಆಗಲಿಲ್ಲ.

ನನ್ನಿಂದ ಆಗೋದು ಇಲ್ಲ. ಮಾಡೋದು ಇಲ್ಲ. ಅಮೃತ ಮಹೋತ್ಸವ ಪ್ರಯುಕ್ತ ಇತ್ತಿಚೆಗೆ ನನ್ನನ್ನು ಸನ್ಮಾನ ಮಾಡಬೇಕೆಂದು ಆಹ್ವಾನಿಸಲು ಕಚೇರಿಗೆ ತಹಶೀಲ್ದಾರ್‌ ಸಹಿತ ಹಲವು ಅಧಿಕಾರಿಗಳು ಬಂದಿದ್ದರು. ನಾನು ಆಹ್ವಾನ ಪತ್ರಿಕೆ ಸ್ವೀಕರಿಸಿ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳಿದ್ದೇನೆ.

ಇಂದು ಬೆಳ್ತಂಗಡಿಗೆ ವರ್ಗಾವಣೆಯಾಗಿ ಬರುವ ಮತ್ತು ಹೋಗುವ ಅಧಿಕಾರಿಗಳು ಹಣ ಕೊಡಬೇಕು. ಬೆಳ್ತಂಗಡಿಯಲ್ಲಿ ದೊಡ್ಡದಾದ ಸರ್ಕಾರಿ ಕಚೇರಿ ಇದ್ದರೂ ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳನ್ನು ಗುರುವಾಯನಕೆರೆಯ ಬಾರ್‌ಗೆ ಕರೆದುಕೊಂಡು ಹೋಗಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಇಂತಹ ಕಾರ್ಯವನ್ನು ಯಾವ ಶಾಸಕನೂ ಮಾಡಬಾರದು. ಅಕ್ರಮ ಸಕ್ರಮ ಆಸ್ತಿ ಮಂಜೂರಿಗೆ ಒಂದು ಎಕರೆಗೆ ಶಾಸಕರು ಒಂದು ಲಕ್ಷ ರೂ ಡಿಮ್ಯಾಂಡ್‌ ಮಾಡುತ್ತಿದ್ದಾರೆ. ಶಕ್ತಿ ಕೇಂದ್ರ ಮುಖಂಡ ಹಾಗೂ ಗ್ರಾಮ ಪಂಚಾಯತ್‌ನ ಗ್ರಾಮಕರಣಿಕನ ಮೂಲಕ ಈ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಇನ್ನು 15 ದಿನದೊಳಗೆ ನೊಟೀಸ್‌ ಮಾಡಿ ಅಕ್ರಮ ಸಕ್ರಮ ಬೈಠಕ್‌ ಪ್ರಾರಂಭ ಮಾಡಿದ್ದರೆ ತಾಲೂಕು ಆಫೀಸ್‌ಗೆ ನುಗ್ಗುತ್ತೇನೆ ಎಂದು ಎಚ್ಚರಿಕೆ ನೀಡಿದ ಅವರು, ತಾಲೂಕು ಆಫೀಸಿನಲ್ಲಿ ಶಾಸಕರ ಪಿಎ ಎಂದು ಹೇಳಿಕೊಂಡು ಒಬ್ಬ ವಸೂಲಿ ಮಾಡುತ್ತಿದ್ದಾನೆ.

ತಹಶೀಲ್ದಾರರು ಆತನನ್ನು ತುಳಿದು ಹೊರಗೆ ಹಾಕಬೇಕು. ಮರ, ಮರಳು ಸಾಗಾಟ ನಡೆಯುತ್ತಿದೆ. ಅದ್ಯಾವೂದನ್ನು ಕೇಳುತ್ತಿಲ್ಲ. ನಾನು ಈ ಹಿಂದೆ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿದ್ದರೆ ನಿಮ್ಮ ಚಪ್ಪಲಿ ಹೊತ್ತು ತಿರುಗುತ್ತೇನೆ. ಪತ್ರಿಕಾ ಮಾಧ್ಯಮದವರು ಇಂತಹ ಹಲವು ಭ್ರಷ್ಟಾಚಾರಗಳನ್ನು ಸುದ್ದಿ ಮಾಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಮುಖಂಡ ಬಿ.ಎಂ ಭಟ್‌, ಶೇಖರ್‌ ಲಾಯಿಲ, ಮನೋಹರ್‌ ಮತ್ತಿರರು ಇದ್ದರು.

BELTHANGADY

ಚಿನ್ನಾಭರಣ ಪಾಲೀಶ್ ಮಾಡುವುದಾಗಿ ನಂಬಿಸಿ ವಂಚನೆ; ಆರೋಪಿ ಬಂಧನ

Published

on

ಬೆಳ್ತಂಗಡಿ: ಚಿನ್ನಾಭರಣ ಪಾಲಿಶ್ ಮಾಡಿ ಕೊಡುವುದಾಗಿ ನಂಬಿಸಿ ವಂಚಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿ ಪಟ್ಣ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.


ಕಾಶಿಪಟ್ಲ ಗ್ರಾಮದ ಪಣಿಲಾಜೆ ಎಂಬಲ್ಲಿ 90 ವರ್ಷ ಪ್ರಾಯದ ವೃದ್ಧ ಮಹಿಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭದಲ್ಲಿ ಸೇಲ್ಸ್ ಮ್ಯಾನ್ ಎಂಬುದಾಗಿ ಹೇಳಿಕೊಂಡು ಬಂದಿದ್ದ ಬಿಹಾರದ ಸುಪೋಲ್ ಜಿಲ್ಲೆಯ ತ್ರಿವೇಣಿಗಂಜ್ ತಾಲೂಕಿನ ರಘನಾಥಪುರ ಗ್ರಾಮ ನಿವಾಸಿ 30 ವರ್ಷ ಪ್ರಾಯದ ಚಂದನ್ ಕುಮಾರ್ ಎಂಬಾತ ಚಿನ್ನವನ್ನು ತೊಳೆದು ಕೊಡುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಮಹಿಳೆ ಕಪಾಟಿನ ಲಾಕರಿನಲ್ಲಿದ್ದ ಲಕ್ಷ್ಮೀ ಪದಕ ಇರುವ ಎರಡು ಮುಕ್ಕಾಲು ಪವನ್ ತೂಕದ ಚಿನ್ನದ ಸರವನ್ನು ತಂದು ಕೊಟ್ಟಿದ್ದಾರೆ.

ಆರೋಪಿಯು ಅಂಗಳದಲ್ಲಿದ್ದ ನಳ್ಳಿಯಿಂದ ಮಗ್ ಗೆ ನೀರು ಹಾಕಿ ಬ್ರಶ್ ನಿಂದ ಸರವನ್ನು ತೊಳೆಯುವ ನಾಟಕ ಮಾಡಿದ್ದಾನೆ. ಬಳಿಕ ಪೇಪರ್ ನಲ್ಲಿ ಸುತ್ತಿ ಕೊಟ್ಟಿದ್ದು, ಫ್ಯಾನ್ ಗಾಳಿಗೆ ಇಟ್ಟು ಒಣಗಿಸುವಂತೆ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ. ಅವರು ಪೇಪರ್ ತೆರೆದು ನೋಡಿದಾಗ ಅರಶಿನ ಪುಡಿಯಂತೆ ಕಾಣುವ ಪುಡಿ ಇದ್ದು, ಚಿನ್ನದ ಸರದ ಸಣ್ಣ ಸಣ್ಣ ತುಂಡುಗಳು, ತಾಮ್ರದ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪದಕ ಕಂಡು ಬಂದಿತ್ತು. ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾದ ಮಹಿಳೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಯುವಕನ ಹತ್ಯೆಗೈದ ಪ್ರಿಯಕರ!

ಕೇಸು ದಾಖಲಿಸಿಕೊಂಡ ಪೊಲೀಸರು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದ ಆರೋಪಿಯ ಫೋಟೊ ಆಧಾರದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಫೆಬ್ರವರಿ 28 ರಂದು ಮೂಡುಬಿದಿರೆಯ ಗಂಟಾಲ್‌ ಕಟ್ಟೆ ಎಂಬಲ್ಲಿ ಬಂಧಿಸಿದ್ದಾರೆ. ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಮತ್ತು ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ಮಾರ್ಗದರ್ಶನದಲ್ಲಿ ವೇಣೂರು ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಅಕ್ಷಯ್ ಡವಗಿ, ಓಮನಾ ಎನ್. ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತ್ತು.

Continue Reading

BELTHANGADY

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ಅಗ್ನಿ ದುರಂತ; ಬೆಂಕಿಯಲ್ಲಿ ಸುಟ್ಟು ಕರಕಲಾದ ಅಂಗಡಿ

Published

on

ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿಯಿಂದ ಅಂಗಡಿ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ನಡೆದಿದೆ.


ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ ಕೆಎಎಫ್ ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಇಬ್ಬರು ಕೆಲಸದವರು ಫೆ.14 ರಂದು ಬೆಳಗ್ಗೆ 7:30 ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್ ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ.

ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು ತಕ್ಷಣ ಹೊರಗಡೆ ಓಡಿಬಂದಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿ ಕೆನ್ನಲಿಗೆ ಅಕ್ಕಪಕ್ಕದ ಶಾಪ್ ಗಳಿಗೂ ಹಾನಿಯಾಗಿದೆ.

ಇದನ್ನೂ ಓದಿ: ಮಂಗಳೂರು: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಘಟನೆಯನ್ನು ನೋಡಲು ನೂರಾರು ಮಂದಿ ಜಾಮಾಯಿಸಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ತಕ್ಷಣ ಬೆಳ್ತಂಗಡಿ ಪೊಲೀಸರು ಮತ್ತು ಸಂಚಾರಿ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದೆ ವೇಳೆ ಬೆಂಕಿ ಹೊತ್ತುವ ಘಟನೆಯನ್ನು ನೋಡುತ್ತಿದ್ದ ಶಾಪ್ ಕೆಲಸದಾಕೆ ಮೂರ್ಛೆ ಹೋದ ಘಟನೆ ನಡೆಯಿತು ಬಳಿಕ ಸ್ಥಳೀಯರೆಲ್ಲ ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Continue Reading

BELTHANGADY

ಮಂಗಳೂರು: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Published

on

ಮಂಗಳೂರು: ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಚಿತ್ರಶೇಖರ ಎಂಬವರಿಗೆ 2013 ರಲ್ಲಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಬೆಳ್ತಂಗಡಿಯ ಪಾರೆಂಕಿ ಗ್ರಾಮದ 53 ವರ್ಷ ಪ್ರಾಯದ ಆಲ್ವಿನ್ ರೊಡ್ರಿಗಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಚಿತ್ರಶೇಖರ ಎಂಬವರಿಗೆ ಹಲ್ಲೆ ನಡೆಸಿದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ನಮ್ಮ ಕುಟುಂಬದ ಮಕ್ಕಳನ್ನ ನಾವೇ ಸರಿಯಾಗಿ ಗಮನಿಸಬೇಕು: ಲವ್ ಜಿಹಾದ್ ಕುರಿತು ಶಾಸಕ ಯತ್ನಾಳ್ ಹೇಳಿಕೆ

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಆಲ್ವಿನ್ ರೊಡ್ರಿಗಸ್‌ನನ್ನು ಬೆಂಗಳೂರು ನಗರ ವ್ಯಾಪ್ತಿಯ ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page