Connect with us

BELTHANGADY

ಮಾಲಾಡಿ ಮನೆಯ ದೆವ್ವದ ರಹಸ್ಯವೇನು ಗೊತ್ತಾ..?

Published

on

ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬ ಗ್ರಾಮದಲ್ಲಿ ಭೂತದ ಕಾಟ ನಡೆಯುತ್ತಿರುವುದು ಈಗ ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದು ಭೂತದ ಚೇಷ್ಟೆ ಎಂದು ಮನೆಯವರು ಹೇಳಿಕೊಂಡಿದ್ದಾರೆ.

ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿಯುವ ಬಟ್ಟೆಗಳು.. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗುವ ಜೋಡಿಸಿಟ್ಟ ಅಡುಗೆ ಪಾತ್ರೆಗಳು… ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಇನ್ಯಾರೋ ಓಡಾಡಿದಂತೆ ಆಗುವ ಅನುಭವ. ಹೌದು ಇಂತಹ ಒಂದು ಘಟನೆ ಮನೆಯೊಂದರಲ್ಲಿ ನಡೆಯುತ್ತಿದ್ದು ಕಳೆದ ಮೂರು ತಿಂಗಳಿನಿಂದ ಮನೆಯವರು ನಿದ್ರೆಯನ್ನೇ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆಯಂತೆ.

ಮೊಬೈಲ್‌ನಲ್ಲಿ ದೆವ್ವದ ಫೋಟೊ ಸೆರೆ

ಕತ್ತಲು ಆವರಿಸುತ್ತಿದ್ದಂತೆ ನಡೆಯುವ ಈ ವಿಚಿತ್ರಕಾರಿ ಘಟನೆಯಿಂದ ಮಾಲಾಡಿಯ ಈ ಮನೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಉಮೇಶ್ ಶೆಟ್ಟಿ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಾಗಿದ್ದು, ಕಳೆದ ಮೂರು ತಿಂಗಳಿನಿಂದ ಈ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಉಮೇಶ್ ಶೆಟ್ಟಿ ಅವರ ಮಗಳು ತನ್ನ ಮೊಬೈಲ್ ಮೂಲಕ ಈ ವಿಚಿತ್ರ ಘಟನೆಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಮುಖವನ್ನು ಹೋಲುವ ಆಕೃತಿಯೊಂದು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಹೀಗಾಗಿ ಇದು ಭೂತದ ಚೇಷ್ಟೆ ಅಂತ ಹೇಳಲಾಗಿದ್ದು, ಗ್ರಾಮದ ಜನರು ಇದರ ಪರಿಶೀಲನೆ ನಡೆಸಲು ಈ ಮನೆಗೆ ಬರ್ತಾ ಇದ್ದಾರೆ.

ಕೇವಲ ಮನೆಯವರಷ್ಟೇ ಇರುವಾಗ ಇಂತಹ ವಿಚಿತ್ರಕಾರಿ ಘಟನೆಗಳು ನಡೆದಿದೆ ಅನ್ನುವುದು ಇಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಊರಿನ ಜನರು ಬಂದು ಇದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ನಡೆಸಿದ್ದಾರೆಯಾದ್ರೂ ಯಾರಿಗೂ ಇಂತಹ ಅನುಭವ ಉಂಟಾಗಿಲ್ಲ. ಹಾಗಂತ ಉಮೇಶ್ ಅವರ ಪತ್ನಿಗೆ ಉಸಿರುಗಟ್ಟಿದಂತಹ ಅನುಭವ ಹೊರತು ಪಡಿಸಿದ್ರೆ ಬೇರೆ ಏನು ಇಲ್ಲಿ ಕಂಡು ಬಂದಿಲ್ಲ. ಆದ್ರೆ ಅವರ ಉಸಿರುಗಟ್ಟುವಿಕೆಗೂ ಭೂತಕ್ಕೂ ಸಂಬಂಧ ಇದೆಯಾ ಅನ್ನೋದು ಕೂಡಾ ಖಚಿತವಾಗಿಲ್ಲ.

ಯಾವಾಗ ಇವರು ಮೊಬೈಲ್‌ನಲ್ಲಿ ವಿಚಿತ್ರ ಆಕೃತಿಯ ಫೋಟೊ ತೆಗೆದು ಊರ ಜನರಿಗೆ ತೋರಿಸಿದ್ರೋ ಆವಾಗಿನಿಂದ ಇಲ್ಲಿಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ಜನರು ಬರಲು ಆರಂಭಿಸಿದ್ದಾರೆ. ಆದ್ರೆ ಊರವರ ಮುಂದೆ ಭೂತ ಪ್ರತ್ಯಕ್ಷವಾಗದೇ ಇರೋ ಕಾರಣ ಈ ಕಥೆಯ ಬಗ್ಗೆಯೇ ಜನರಿಗೆ ಅನುಮಾನ ಆರಂಭವಾಗಿದೆ. ಅಸಲಿಗೆ ಇಲ್ಲಿ ನಡೆಯುತ್ತಿರುವುದು ಭೂತದ ಚೇಷ್ಟೆಯೋ ಅಥವಾ ಮನುಷ್ಯ ನಿರ್ಮಿತ ಚೇಷ್ಟೆಯೋ ಅನ್ನೋ ಅನುಮಾನಗಳು ಜನರಿಗೆ ಕಾಡಿದೆ.

ಭಯದ ವಾತವಾರಣರದಲ್ಲಿ ಕತ್ತಲಲ್ಲಿ ಮೊಬೈಲ್ ಹಿಡಿದು ಭೂತದ ಫೋಟೊ ಹೇಗೆ ತೆಗೆದರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹಾಗಂತ ಈ ರೀತಿ ಭೂತ ಇದೆ ಅಂತ ಸುಳ್ಳು ಹೇಳುವುದರಿಂದಲೂ ಇವರಿಗೇನು ಸಿಗುತ್ತದೆ ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಈ ವಿಚಾರದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಭೂತದ ಹುಟುಕಾಟಕ್ಕೆ ಜನರು ಮುಂದಾಗಿದ್ದಾರೆ. ಕೆಲವರು ಇದು ಹೌದು ಅಂದ್ರೆ ಇನ್ನೂ ಕಲವರು ಇದು ಸುಳ್ಳು ಅಂದಿದ್ದು, ಇದರ ಹಿಂದೆ ಏನೋ ಮಸಲತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಅಸಲಿ ಸತ್ಯ ಏನು ಅನ್ನೋ ಬಗ್ಗೆ ಈ ಮನೆಯವರ ಕೌನ್ಸಿಲಿಂಗ್ ಮಾಡಿದ್ರಷ್ಟೇ ಗೊತ್ತಾಗಬಹುದು ಅನ್ನೋದು ಹಲವರ ಅಭಿಪ್ರಾಯ.

BELTHANGADY

ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರ ಸಾವು

Published

on

ಬೆಳ್ತಂಗಡಿ : ಬೈಕ್ ಮೇಲೆ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಿನ್ನೆ (ಮಾ.20) ರಾತ್ರಿ ಬೆಳ್ತಂಗಡಿಯ ಗೇರುಕಟ್ಟೆ ಜಾರಿಗೆಬೈಲಿನ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಬೆಳಾಲು ಗ್ರಾಮದ ನಿವಾಸಿ ಪ್ರವೀಣ್‌ (25) ಮೃತ ಯುವಕ ಎಂದು ಗುರುತಿಸಲಾಗಿದೆ.

ಮಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಮರದ ಗೆಲ್ಲು ಮುರಿದು ಅವರ ಬೈಕ್ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಪ್ರವೀಣ್‌ನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅದಾಗಲೇ ಪ್ರವೀಣ್ ಮೃತಪಟ್ಟಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

BELTHANGADY

ಬೆಳ್ತಂಗಡಿಯ 15 ಆದಿವಾಸಿ ಸಹಿತ 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ

Published

on

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ 15 ಆದಿವಾಸಿ ಕುಟುಂಬ ಸೇರಿದಂತೆ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 27ರಂದು ನಡೆದ ಸಭೆಯಲ್ಲಿ ಆದಿವಾಸಿಗಳು ನೆಲೆಸಿರುವ ಅರಣ್ಯ ಪ್ರದೇಶದ ವಸತಿ ಪ್ರದೇಶಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ, ವಿದ್ಯುತ್ ಮಾರ್ಗ ಅಳವಡಿಕೆಗೆ ಅರಣ್ಯ ಭೂಮಿ ಪರಿವರ್ತನೆಗಾಗಿ ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಹಾಕಿಸಿ, ಅನುಮತಿ ಪಡೆಯಲು ಕ್ರಮ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.

Continue Reading

BELTHANGADY

ಭಾರೀ ಮಳೆಗೆ ಬೆಳ್ತಂಗಡಿಯಲ್ಲಿ ಧರೆಗುರುಳಿದ 131 ವಿದ್ಯುತ್ ಕಂಬಗಳು

Published

on

ಬೆಳ್ತಂಗಡಿ: ಕಳೆದ ಒಂದು ವಾರದಿಂದ ವಾತಾವರಣದ ಉಷ್ಣತೆಯು ವಿಪರೀತ ಏರಿಕೆಯಾಗಿತ್ತು. ಆದರೆ ಬಿಸಿಯ ಗಾಳಿಗೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಈಗ ಮಳೆಯ ಆರ್ಭಟ ಜೋರಾಗಿದೆ.

ಕರಾವಳಿಯಲ್ಲೂ ಮಳೆಯ ಸಿಂಚನವಾಗಿದ್ದು, ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೆಲ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ರಭಸಕ್ಕೆ 131 ವಿದ್ಯುತ್ ಕಂಬಗಳು ಧರೆಗುರುಳಿದೆ.

ರಭಸದ ಗಾಳಿಯೊಂದಿಗೆ ಆರ್ಭಟಿಸಿದ ವರ್ಷದ ಮೊದಲ ಮಳೆಗೆ ಬೆಳ್ತಂಗಡಿಯಲ್ಲಿ ಒಟ್ಟು 131 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಕರೆಂಟ್ ಇಲ್ಲದೇ ಜನರು ಪರದಾಡುವಂತೆ ಆಗಿದೆ. ಅಪಾರ ಸಂಖ್ಯೆಯಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ತುಂಡಾಗಿ ಅಪಾರ ಪ್ರಮಾಣದ ಕೃಷಿನಷ್ಟ ಉಂಟಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page