Connect with us

ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ ಮಾಡಿ ಮಾರಾಟ: ನಾಲ್ವರ ಬಂಧನ

Published

on

ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ ಮಾಡಿ ಮಾರಾಟ: ನಾಲ್ವರ ಬಂಧನ

ಚಿಕ್ಕಮಗಳೂರು: ಲಾಕ್ ಡೌನ್ ವೇಳೆ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆ ಕುರಿ ಮಾಂಸಕ್ಕೆ ದನದ ಮಾಂಸವನ್ನು ಮಿಕ್ಸ್ ಮಾಡಿ ನಾಲ್ವರು ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ ಸಿರಾಜ್, ಅನಿಲ್ ಡಿಮೆಲ್ಲೊ, ಡೆಂನ್ಜಿಲ್, ಡೆಮಿಸ್ ಡಿಸೋಜ ಎಂಬವರನ್ನು ಬಂಧಿಸಲಾಗಿದೆ.

ಕೊರೊನಾ ಆತಂಕದಿಂದ ಪ್ರತಿದಿನ ಜನಸಾಮಾನ್ಯರು ಆತಂಕದಿಂದ ಬದುಕುತ್ತಿದ್ದಾರೆ. ಜನರಿಗೆ ಊಟ-ತಿಂಡಿಗೆ ಸಮಸ್ಯೆ ಆಗಬಾರದೆಂದು ಸರ್ಕಾರ ಮಾಂಸವನ್ನು ಅತ್ಯಾವಶ್ಯಕ ಎಂದು ಪರಿಗಣಿಸಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.

ಈ ನಡುವೆ ಮಾಂಸದ ದರ ಕೆ.ಜಿ ಗೆ 600-800ರವರೆಗೂ ಇದೆ.ಮಾಂಸಕ್ಕೆ ಭಾರೀ ಬೇಡಿಕೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಕೊಪ್ಪ ತಾಲೂಕಿನ ಜಯಪುರದ ಬಸ್ ನಿಲ್ದಾಣದ ಕೋಳಿ ಅಂಗಡಿಯಲ್ಲಿ ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ ಮಾಡಿ ಮಾರಲು ಮುಂದಾಗಿದ್ದಾರೆ.

ಸುಮಾರು ಒಂದೂವರೆ ಎರಡು ವರ್ಷ ಪ್ರಾಯದ ಹಸುವನ್ನು ಕದ್ದು, ಕೊಂದು, ಡೆಮಿಸ್ ಡಿಸೋಜನ ತೋಟದಲ್ಲಿ ಅದನ್ನು ಕಡಿದು ಅದರ ಚರ್ಮವನ್ನು ತೋಟದೊಳಗೆ ಹೂತು ಮಾಂಸವನ್ನ ತಂದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಯಪುರ ಬಸ್ ನಿಲ್ದಾಣದ ಎಸ್.ಆರ್ ಚಿಕನ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ.

ಈ ವೇಳೆ ಅಂಗಡಿಯಲ್ಲಿ ಸುಮಾರು 40 ಕೆ.ಜಿಯಷ್ಟು ದನದ ಮಾಂಸವೂ ಸಿಕ್ಕಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉಡುಪಿ: ಬಾವಿಗೆ ಹಾರಿ ಜೀವಾಂತ್ಯಗೊಳಿಸಿದ ಬಸ್ ಏಜೆಂಟ್

Published

on

ಉಡುಪಿ: ಬಸ್ ಏಜೆಂಟ್ ಓರ್ವರು ಮನೆಯ‌ ಹತ್ತಿರದ ಬಾವಿಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬನ್ನಂಜೆ ಗರಡಿ ಸಂಪರ್ಕಿಸುವ ರಸ್ತೆ ಸಮೀಪ ಬುಧವಾರ ನಡೆದಿದೆ.

ಬಸ್ ಏಜೆಂಟ್ ಕೆ. ರಾಜೇಶ್ ಶೆಣೈ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.  ಸಮಾಜಸೇವಕ ಈಶ್ವರ್ ಮಲ್ಪೆ ತಂಡದವರು ಕಾರ್ಯಾಚರಣೆ ಮೂಲಕ ಶವವನ್ನು ಬಾವಿಯಿಂದ ಮೇಲೆತ್ತಿದರು.

ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಸಹಕರಿಸಿದರು. ನಗರ ಪೋಲಿಸ್ ಠಾಣೆಯ ಎಸ್. ಐ ನಾರಾಯಣ, ಹೆಡ್  ಕಾನ್ಸ್ಟೇಬಲ್  ನೇತಾವತಿ ಕಾನೂನು ಪ್ರಕ್ರಿಯೆ ನಡೆಸಿದರು.

Continue Reading

LATEST NEWS

ಹೆಲ್ಮೆಟ್‌ ಧರಿಸದ ಸವಾರನನ್ನು ನಿಲ್ಲಿಸಿ ದಂಡ ಹಾಕದೇ ಕಳುಹಿಸಿದ ಪೊಲೀಸ್‌ ಸಿಬ್ಬಂದಿ!

Published

on

ಶಹದೋಲ್: ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಚಾಲನೆ ಹಾಗೂ ಅಪಘಾತಗಳಾಗುವ ಸಂದರ್ಭದಲ್ಲಿ ತಲೆಗೆ ಏಟು ಬೀಳಬಾರದೆನ್ನುವ ಕಾರಣಕ್ಕೆ ಹೆಲ್ಮೆಟ್‌ ಖಡ್ಡಾಯಗೊಳಿಸಿ ಸರಕಾರವೇ ಆದೇಶ ಹೊರಡಿಸಿದೆ. ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ.

ಆದರೆ, ಮಧ್ಯಪ್ರದೇಶದ ಶಹದೋಲ್‌ನಲ್ಲಿ ಸಂಚಾರಿ ಪೊಲೀಸ್ ಹೆಲ್ಮೆಟ್ ಧರಿಸದೇ ಬಂದ ಬೈಕ್ ಸವಾರರನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಉತ್ತರ ಕೇಳಿ ಕಕ್ಕಾಬಿಕ್ಕಿಯಾಗಿದ್ದಾರೆ.

ತನ್ನ ದೊಡ್ಡ ತಲೆಗೆ ಚಿಕ್ಕ ಹೆಲ್ಮೆಟ್ ಸರಿಹೊಂದುವುದಿಲ್ಲ ಎಂದಾಗ ಪೊಲೀಸ್‌ ತನ್ನದೇ ಹೆಲ್ಮೆಟ್‌ ತೆಗೆದು ಸವಾರನ ತಲೆಗೆ ಇಟ್ಟು ನೋಡಿದ್ದಾರೆ. ಆದರೂ ಹೆಲ್ಮೆಟ್‌ ಅವರ ತಲೆಗೆ ಸರಿಹೊಂದಿಲ್ಲ. ಇವರಿಬ್ಬರ ನಡುವಿನ ಸಂವಾದ ಇದೀಗ ಭಾರೀ ವೈರಲ್‌ ಆಗಿದೆ.

“ದಿ ಟ್ರಾಫಿಕ್ ಕಾಪ್” ಎಂದು ಜನಪ್ರಿಯವಾಗಿರುವ ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್ ಮತ್ತು ಸೋಶಿಯಲ್ ಇನ್ಫ್ಲುಯೆನ್ಸರ್ ಆಗಿರುವ ವಿವೇಕಾನಂದ ತಿವಾರಿ, ಹೆಲ್ಮೆಟ್ ಇಲ್ಲದೆ ಮೋಟಾರ್‌ಸೈಕಲ್ ಸವಾರಿ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ತಡೆದಿದ್ದಾರೆ.

ಸುರಕ್ಷತಾ ಉಲ್ಲಂಘನೆಯ ಬಗ್ಗೆ ಪ್ರಶ್ನಿಸಿದಾಗ, ಸವಾರ ಬೈಕ್‌ನಿಂದ ಇಳಿದು ಮಾರುಕಟ್ಟೆಯಲ್ಲಿ ತನ್ನ ಗಾತ್ರದ ಹೆಲ್ಮೆಟ್ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಆರಂಭದಲ್ಲಿ ಸಂಶಯ ವ್ಯಕ್ತಪಡಿಸಿದ ತಿವಾರಿ, ಸವಾರನ ತಲೆಯ ಮೇಲೆ ತನ್ನದೇ ಆದ ಹೆಲ್ಮೆಟ್ ಹಾಕಲು ಪ್ರಯತ್ನಿಸಿದ್ದಾರೆ. ಹೆಲ್ಮೆಟ್ ಹೊಂದಿಕೆಯಾಗಲಿಲ್ಲ, ನಿಜವಾದ ಕಷ್ಟವನ್ನು ಅರಿತುಕೊಂಡ ಅಧಿಕಾರಿ, ದಂಡ ವಿಧಿಸಲ್ಲ ಎಂದರು.

ಇದನ್ನೂ ಓದಿ: ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

ಅಲ್ಲದೆ ದೊಡ್ಡ ತಲೆಗೆ ಸರಿ ಹೊಂದುವ ಹೆಲ್ಮೆಟ್‌ಗಳನ್ನು ತಯಾರಿಸಿ ಎಂದು ಕಂಪೆನಿಗಳಿಗೆ ಮನವಿ ಮಾಡಿದರು. ಈ ವಿಡಿಯೋ ವೈರಲ್‌ ಆಗಿದ್ದು, ಸ್ಟೀಲ್‌ಬರ್ಡ್ ಕಂಪೆನಿ ಹೆಲ್ಮೆಟ್ಸ್ ಕೂಡ ಪ್ರತಿಕ್ರಿಯೆ ನೀಡಿದೆ. ದೊಡ್ಡ ಹೆಲ್ಮೆಟ್‌ಗಳನ್ನು ತಯಾರಿಸುವುದಾಗಿ ಹೇಳಿದೆ.

Continue Reading

LATEST NEWS

ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

Published

on

ಕೇವಲ 10 ರೂಪಾಯಿಗೆ ಒಂದು ಬಟ್ಟೆ ಇಸ್ತ್ರಿ ಮಾಡುವ ಸಣ್ಣ ಉದ್ಯಮದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.


ನಳಿನಿ ಉನಾಗರ್ ಎಂಬುವವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ಮನೆಯ ಬಳಿಯಿರುವ ಡ್ರೈ ಕ್ಲೀನರ್ ಅಂಗಡಿಯ ಮಾಲೀಕರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಸಹಾಯಕರ ನೆರವಿನೊಂದಿಗೆ ಈ ಸಾಧನೆ ಮಾಡುತ್ತಿದ್ದಾರೆ.

ಪ್ರತಿದಿನ ಸುಮಾರು 350 ಬಟ್ಟೆಗಳನ್ನು ತಲಾ 10 ರೂಪಾಯಿಯಂತೆ ಇಸ್ತ್ರಿ ಮಾಡುತ್ತಾರೆ. ಇದರಿಂದ ದಿನಕ್ಕೆ 3,500 ರೂ. ಆದಾಯ ಬರುತ್ತದೆ. ಪ್ರತಿದಿನ ಸರಿಸುಮಾರು 20 ಭಾರೀ ಬಟ್ಟೆಗಳನ್ನು ತಲಾ 350 ರೂ. ರಂತೆ ಡ್ರೈ ಕ್ಲೀನ್ ಮಾಡುತ್ತಾರೆ. ಇದರಿಂದ ದಿನಕ್ಕೆ 7,000 ರೂ. ಆದಾಯ ಬರುತ್ತದೆ. ಎಲ್ಲಾ ಸೇರಿ ದಿನಕ್ಕೆ ಸುಮಾರು 10,500 ರೂಪಾಯಿ ಗಳಿಸುತ್ತಾರೆ. ತಿಂಗಳಿಗೆ 27 ದಿನ ಕೆಲ್ಸ ಮಾಡಿದ್ರೂ ಒಟ್ಟು ಆದಾಯ ಸುಮಾರು 2.8 ಲಕ್ಷ ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

ಅಂಗಡಿ ಅವರದ್ದೇ ಆದ ಕಾರಣ ಬಾಡಿಗೆ ಇರುವುದಿಲ್ಲ. ವಿದ್ಯುತ್ ಬಿಲ್ ಸುಮಾರು 6,000 ರೂ. ಮತ್ತು ಇಬ್ಬರು ಸಹಾಯಕರ ಸಂಬಳ 40,000 ರೂ. ಕಳೆದರೆ, ಅವರಿಗೆ ತಿಂಗಳಿಗೆ ಅಂದಾಜು 2.3 ಲಕ್ಷ ರೂಪಾಯಿ ಉಳಿಯುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page