Connect with us

BIG BOSS

BBK12: ಅಣ್ಣಯ್ಯಾ..ಹೃದಯವಂತ..ಹಾಡಿದ ಕಾವ್ಯ! ಬೇಸರಗೊಂಡ ಗಿಲ್ಲಿ!

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ಅನೇಕ ಲವ್‌ ಸ್ಟೋರಿಗಳು ಹುಟ್ಟಿಕೊಂಡಿವೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋ ಕೂಡ ಇದಕ್ಕೆ ಹೊರತಲ್ಲ. ಗಿಲ್ಲಿ ನಟ ಅವರು ಕಾವ್ಯ ಶೈವ ಎದುರು ಹಲವು ಬಾರಿ ಐ ಲವ್‌ ಯೂ ಎಂದು ಹೇಳಿಕೊಂಡರೂ ಕಾವ್ಯ ಅವರು ಒಪ್ಪಿಕೊಳ್ಳುತ್ತಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಅದೆಷ್ಟೋ ಬಾರಿ ಮಾತಿನ ಚಕಮಕಿ ನಡೆದಿದೆ. ನವೆಂಬರ್‌ 28ರ ಸಂಚಿಕೆಯಲ್ಲಿ ಕೂಡ ಅದೇ ರೀತಿ ಆಗಿದೆ. ಕಾವ್ಯ ಅವರು ಗಿಲ್ಲಿಯನ್ನು ಅಣ್ಣ ಎಂದು ಕರೆದಿದ್ದಕ್ಕೆ ಗಿಲ್ಲಿ ಅವರು ಐ ಲವ್‌ ಯೂ ಎಂದು ಕೂಗಾಡಿಕೊಂಡಿದ್ದಾರೆ.


ಬಿಗ್‌ಬಾಸ್‌ ಮನೆಗೆ ಅತಿಥಿಗಳಾಗಿ ಬಂದಂತಹ ಮೋಕ್ಷಿತಾ ಪೈ, ರಜತ್‌ ಕಿಶಾನ್‌, ಉಗ್ರಂ ಮಂಜು, ಚೈತ್ರಾ ಕುಂದಾಪುರ, ತ್ರಿವಿಕ್ರಮ್‌ ಅವರ ಜತೆ ಕಾವ್ಯ, ಗಿಲ್ಲಿ ಮುಂತಾದವರು ಮಾತನಾಡುತ್ತಾ ಕುಳಿತಿದ್ದರು. ಆ ವೇಳೆ ಕಾವ್ಯ ಅವರು ಮೈಕ್‌ ಧರಿಸಿರಲಿಲ್ಲ. ಆಗ ಬಿಗ್‌ಬಾಸ್‌ ಎಚ್ಚರಿಕೆ ನೀಡಿದ್ದು, ಕಾವ್ಯ ಅವರು ಮನೆಯ ಎಲ್ಲ ಸದಸ್ಯರ ಬಳಿ ಕ್ಷಮೆ ಕೇಳಬೇಕಾಯಿತು.

ಕಾವ್ಯ ಅವರು ಎಲ್ಲರ ಬಳಿ ಕ್ಷಮೆ ಕೇಳಲು ಬರುವ ಮುನ್ನವೇ ಗಿಲ್ಲಿ ನಟ ಒಂದು ಕಿತಾಪತಿ ಮಾಡಿದರು. ಯಾರೂ ಕೂಡ ಕಾವ್ಯನನ್ನು ಕ್ಷಮಿಸಬೇಡಿ ಎಂದು ಎಲ್ಲರಿಗೂ ಗಿಲ್ಲಿ ಹೇಳಿದರು. ವಿಷಯ ಗೊತ್ತಾದ ಕಾವ್ಯ ಕೋಪಗೊಂಡು, ಅಣ್ಣಯ್ಯಾ..ಹೃದಯವಂತ.. ಎಂದು ಜೋರಾಗಿ ಹಾಡು ಹೇಳಿದರು. ಅದರಿಂದ ಗಿಲ್ಲಿಗೆ ಬೇಸರ ಆಯಿತು.

ಗಿಲ್ಲಿ ಅವರಿಗೆ ಕಾವ್ಯ ಅಣ್ಣ ಎಂದು ಕರೆಯುವುದು ಇಷ್ಟ ಇಲ್ಲ. ಕಾವ್ಯ ಅವರು ಅಣ್ಣ ಎಂದು ಕರೆದ ತಕ್ಷಣ ಗಿಲ್ಲಿ, ಐ ಲವ್‌ ಯೂ ಎಂದು ಕೂಗಲು ಆರಂಭಿಸಿದರು. ಅವರಿಬ್ಬರ ನಡುವೆ ಶುರುವಾದ ಸಂಭಾಷಣೆ ತುಂಬಾ ತಮಾಷೆ ಆಗಿತ್ತು, ಇಂತಹ ಅನೇಕ ತಮಾಷೆಗಳ ಪ್ರಸಂಗಗಳ ಮೂಲಕ ಗಿಲ್ಲಿ ನಟ ಅವರು ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.

ಇದನ್ನೂ ಓದಿ: BBK12 ಇನ್ಮುಂದೆ ನೋ ಫ್ರೆಂಡ್‌ಶಿಪ್… ಇಲ್ಲಿ ಫರ್ಫಾಮೆನ್ಸ್ ಮುಖ್ಯ-ಕಾವು ಹೀಗಂದಿದ್ದು ಯಾಕೆ..?

ಬಿಗ್‌ಬಾಸ್‌ ಮನೆಯಲ್ಲಿ ಯಾರ ಜತೆಯಾದರೂ ಹೆಚ್ಚು ಬಾಂಧವ್ಯ ಬೆಳೆಸಿಕೊಂಡರೆ ಆಟಕ್ಕೆ ತೊಂದರೆ ಆಗುತ್ತದೆ. ಈ ಮೊದಲಿನ ಸಂಚಿಕೆಗಳಲ್ಲಿ ಅದು ಸಾಬೀತಾಗಿದೆ. ಆರಂಭದಲ್ಲಿ ಎಲ್ಲ ಸಂಬಂಧವೂ ಚೆನ್ನಾಗಿ ಇರುತ್ತದೆ. ಆದರೆ ಆಟದಲ್ಲಿ ಪೈಪೋಟಿ ಹೆಚ್ಚಿಸಿದಾಗ ಸಂಬಂಧಕ್ಕೆ ಬೆಲೆ ಕೊಟ್ಟುಕೊಂಡು ಕೂರುವುದು ಕಷ್ಟ ಆಗುತ್ತದೆ ಎಂದು ಕಾವ್ಯ ಅವರು ಹೇಳಿಕೊಂಡಿದ್ದಾರೆ.

BIG BOSS

ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

Published

on

BBK12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋ ಮೂಲಕ ಎಲ್ಲರ ಗಿಲ್ಲಿ ನಟ ಎಲ್ಲರ ಗಮನ ಸೆಳೆದಿದ್ದಾರೆ. ಜತೆಗೆ ಪಳಾರ್‌ ಗಿಲ್ಲಿ ಎಂದು ಟೈಟಲ್‌ ಕೂಡ ಪಡೆದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಹೇಳಿರುವ ಪ್ರತಿಯೊಂದು ಡೈಲಾಗ್‌ಗಳು ಕೂಡ ಟ್ರೆಂಡ್‌ ಆಗಿವೆ. ಅಷ್ಟೇ ಅಲ್ಲದೇ, ಗಿಲ್ಲಿ ನಟರ ಭಾವಚಿತ್ರವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಫಿನಾಲೆ ತಲುಪಿರುವ ಆರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದರೆ ಕ್ರೇಜ್‌ ಹೇಗಿರುತ್ತದೆ ಎಂಬುದನ್ನು ಕಿಚ್ಚ ಸುದೀಪ್‌ ಫ್ರೀ-ಫಿನಾಲೆ ಸಂಚಿಕೆಯಲ್ಲಿ ಹೇಳಿದರು.


‘ನೀವು ಹೊರಗಡೆ ಬಂದಾಗ ಎಲ್ಲಿಲ್ಲದ ಪ್ರೀತಿ, ಎಲ್ಲಿಲ್ಲದ ಪ್ರಶಂಸೆ, ಆ ಜನಬೀಡು ನಿಮಗೋಸ್ಕರ ಬಂದಾಗ ನಿಮ್ಮ ತಲೆಯಲ್ಲಿ ಏನು ಓಡಬೇಕು? ನಿಮ್ಮ ಜೀವನದಲ್ಲಿ ಏನು ಬದಲಾವಣೆ ಆಯಿತು ಅಂತ ನಿಮಗೆ ಅನಿಸುತ್ತದೆ’ ಎಂದು ಕಿಚ್ಚ ಸುದೀಪ್‌ ಹೇಳಿದರು. ಅದಕ್ಕೆ ಉತ್ತರ ಕೊಟ್ಟ ಗಿಲ್ಲಿ ನಟ, ‘ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳು ನನಗೆ ಒಂದು ಮಾತು ಹೇಳಿದರು. ನೀವು ಸಖತ್ತಾಗಿ ಆಡುತ್ತಿದ್ದೀರಿ, ಹೊರಗೆ ಬಂದು ನೋಡಿ ಅಂದರು. ಆ ಕ್ಷಣದಲ್ಲಿ ನನಗೆ ರಿಯಲ್ ಎನಿಸಿತು’ ಎಂದು ಹೇಳಿದರು.

‘ತಕ್ಷಣಕ್ಕೆ ಅಷ್ಟೋಂದು ಪ್ರೀತಿ ಬಂದರೆ ನಿಜವೋ ಸುಳ್ಳೋ ಅಂತ ನಂಬೋಕೆ ಆಗಲ್ಲ. ಈ ಬದಲಾವಣೆ ಆಗಿದ್ದು ಬಿಗ್ ಬಾಸ್ ಶೋನಿಂದ. ಸಿನಿಮಾದಲ್ಲಿನ ಡೈಲಾಗ್​ಗಳನ್ನು ಹೇಳಿ ಅಂತ ಜನರು ವೇದಿಕೆಯಲ್ಲಿ ಕೇಳುತ್ತಾರೆ. ಆದರೆ ಇಲ್ಲಿಗೆ ಬಂದ ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ನನ್ನ ಡೈಲಾಗ್ ಹೇಳಿ ಅಂತ ಡಿಮ್ಯಾಂಡ್ ಮಾಡಿದರು. ಅದು ನನಗೆ ಖುಷಿ ಆಯಿತು’ ಎಂದು ಗಿಲ್ಲಿ ಹೇಳಿದರು.

‘ನೀವು ಜನರನ್ನು ಸಂಪಾದಿಸಿರುವುದು, ಜನರು ನಿಮ್ಮನ್ನು ಇಷ್ಟಪಡುತ್ತಿರುವುದು ಬಿಗ್‌ಬಾಸ್‌ ವೇದಿಕೆಯ ಕಾರಣಕ್ಕೆ. ವೇದಿಕೆಯೇ ಇಲ್ಲ ಎಂದರೆ ಏನೂ ಇಲ್ಲ. ಬಿಗ್ ಬಾಸ್ ಇಲ್ಲದೇ ನಿಮ್ಮ ಜೀವನವನ್ನು ಊಹಿಸಿಕೊಂಡರೆ ಒಂದು ಖಾಲಿತನ ಕಾಣಿಸುತ್ತದೆ. ಹೊರಗಡೆ ಬಂದಾಗ ಪ್ರಪಂಚ ಏನೆಲ್ಲ ಆಗಿದೆ ಅನ್ನೋದನ್ನು ನೋಡಿ. ಆದರೆ ಇಂದು ನೀವು ಮಾತನಾಡಿದ್ದನ್ನು ಮರೆಯಬೇಡಿ’ ಎಂದು ಕಿಚ್ಚ ಸುದೀಪ್‌ ಹೇಳಿದರು.

ಇದನ್ನೂ ಓದಿ: ಎಲಿಮಿನೇಷನ್ ಬೆನ್ನಲ್ಲೇ ಹೊಸ ಪ್ಲ್ಯಾನ್ ರಿವೀಲ್ ಮಾಡಿದ ಧ್ರುವಂತ್

ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಅಶ್ವಿನಿ ಗೌಡ, ಮ್ಯೂಟೆಂಟ್‌ ರಘು, ಧನುಷ್‌ ಗೌಡ ಮತ್ತು ಗಿಲ್ಲಿ ನಟ ಬಿಗ್‌ಬಾಸ್‌ ಫಿನಾಲೆ ಹಂತವನ್ನು ತಲುಪಿದ್ದಾರೆ. ಇಂದು (ಜ.18) ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಯಾರು ಕಪ್‌ ಗೆಲ್ಲುತ್ತಾರೆ ಎಂಬುವುದೇ ಕುತೂಹಲ.

Continue Reading

BIG BOSS

ಎಲಿಮಿನೇಷನ್ ಬೆನ್ನಲ್ಲೇ ಹೊಸ ಪ್ಲ್ಯಾನ್ ರಿವೀಲ್ ಮಾಡಿದ ಧ್ರುವಂತ್

Published

on

BBK12: ಬಿಗ್‌ಬಾಸ್ ಕನ್ನಡ ಸೀಸನ್‌ 12ರಲ್ಲಿ ಫಿನಾಲೆಯ ಕೊನೆಯ ವಾರದ ಮಧ್ಯೆ ಧ್ರುವಂತ್‌ ಎಲಿಮಿನೇಟ್‌ ಆಗಿದ್ದರು. ಆ ವೇಳೆ ಇವರಿಗೆ ಮನೆಯ ಉಳಿದ ಸ್ಪರ್ಧಿಗಳ ಜತೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಹೋರಹೋದ ಬಳಿಕ ತಮ್ಮ ಸ್ಟೈಲನ್ನು ಬದಲಾಯಿಸಿದ್ದಾರೆ. ಅವರ ಲುಕ್‌ ಗಮನ ಸೆಳೆಯುವಂತಿದೆ. ಇದಕ್ಕೆ ಕಾರಣದ ಜತೆಗೆ ಭವಿಷ್ಯದ ಪ್ಲ್ಯಾನ್‌ ಏನೆಂಬುದನ್ನು ಧ್ರುವಂತ್‌ ಸುದೀಪ್‌ ಮುಂದೆ ಹೇಳಿದ್ದಾರೆ.


ಎಲಿಮಿನೇಷನ್‌ ಆದ ಬಳಿಕ ಎವಿಕ್ಟ್‌ ಆದ ಸ್ಪರ್ಧಿಯನ್ನು ಬಿಗ್‌ಬಾಸ್‌ ವೇದಿಕೆ ಮೇಲೆ ಕರೆಸಲಾಗುತ್ತದೆ. ವಾರದ ಮಧ್ಯೆ ಮನೆಯಿಂದ ಹೊರಹೋಗಿರುವ ಧ್ರುವಂತ್‌ನನ್ನು ನಿನ್ನೆಯ ಸಂಚಿಕೆಯಲ್ಲಿ ವೇದಿಕೆ ಮೇಲೆ ಕರೆಸಲಾಯಿತು. ಆ ವೇಳೆ ಸುದೀಪ್‌ ಜತೆ ಮಾತನಾಡಿದರು.

‘ಇಲ್ಲಿಂದ ಹೊರ ಹೋಗುತ್ತಿದ್ದಂತೆ ಗಾಡಿನ ಚೇಸ್‌ ಮಾಡಿಕೊಂಡು ಬಂದರು. ಇದೊಂದು ಬ್ಯೂಟಿಫುಲ್‌ ಅನುಭವ. 10 ವರ್ಷದ ತಪಸ್ಸು ನಾಲ್ಕು ತಿಂಗಳಲ್ಲಿ ಸಾಕಷ್ಟು ಸಿಕ್ಕಿತು. ಒಳಗೆ ಕಟಿಂಗ್‌ ಮಾಡಬೇಕು ಎಂದುಕೊಂಡಿದ್ದೆ ಆಗಿಲ್ಲ. ಹೀಗಾಗಿ ಹೊರಗೆ ಈ ಹೇರ್‌ಸ್ಟೈಲ್‌ ಮಾಡಿಸಿದೆ’ ಎಂದು ಧ್ರುವಂತ್‌ ಹೇಳಿದ್ದಾರೆ.

ಇದನ್ನೂ ಓದಿ: ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

‘ಜನರ ಪ್ರತಿಕ್ರಿಯೆ ಬಗ್ಗೆ ನನಗೆ ಸಂತೋಷ ಇದೆ. ಜೈ ಮಹಾಕಾಲ್‌ ಬ್ರ್ಯಾಂಡ್‌ ಮಾಡಿದೀರಾ. ನಾನು ಒಳ್ಳೆಯ ಫಿಲ್ಮ್‌ ಮೇಕರ್‌ ಆಗಬೇಕು. ಸಿನಿಮಾ ರಂಗದಲ್ಲಿ ಮತ್ತಷ್ಟು ಕೆಲಸ ಮಾಡಬೇಕು’ ಎಂದು ಸುದೀಪ್‌ ಮುಂದೆ ಧ್ರುವಂತ್‌ ತಮ್ಮ ಮುಂದಿನ ಪ್ಲ್ಯಾನ್‌ ಬಗ್ಗೆ ಹೇಳಿಕೊಂಡಿದ್ದಾರೆ.

Continue Reading

BIG BOSS

ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12 ಮುಕ್ತಾಯದ ಹಂತದಲ್ಲಿದೆ. ಒಬ್ಬೊಬ್ಬರೇ ಹೊರ ನಡೆದಿದ್ದಾರೆ. ಈಗ ಉಳಿದಿರೋದು ಕೇವಲ ಐದು ಮಂದಿ. ಮಿಡ್ ವೀಕ್ ಎಲಿಮಿನೇಷನ್‌ ಮೂಲಕ ಧ್ರುವಂತ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಲೇ ಧ್ರುವಂತ್ ಬದಲಾಗಿದ್ದಾರೆ.

ಬದಲಾಯ್ತು ಗೆಟಪ್:

ಬಿಗ್ ಬಾಸ್ ಮನೆಯೊಳಗಿದ್ದಾಗ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ಧ್ರುವಂತ್. ಚರ್ಚೆ, ಜಗಳ, ವಾದದಲ್ಲೂ ಧ್ರುವಂತ್ ಇದ್ದರು. ಎಲ್ಲರೊಂದಿಗೆ ಜಗಳವಾಡುತ್ತಿದ್ದ ಧ್ರುವಂತ್‌ರನ್ನು ಕಿಚ್ಚ ಕ್ಲಾಸ ತೆಗೆದುಕೊಂಡಿದ್ದೂ ಇದೆ. ದೊಡ್ಮನೆಯೊಳಗೆ ‘ಜೈ ಮಹಾಕಾಳ್’ ಎನ್ನುತ್ತಾ ಖ್ಯಾತರಾಗಿದ್ದ ಧ್ರುವಂತ್ ಸೀಕ್ರೆಟ್ ರೂಮಿಗೂ ಹೋಗಿದ್ದರು. ಅಲ್ಲೂ ರಕ್ಷಿತಾ ಶೆಟ್ಟಿ ಜೊತೆ ಅವರ ಜಗಳ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಬಿಗ್ ಬಾಸ್ ಮನೆಯಲ್ಲಿ ತನ್ನ ಉದ್ದ ಕೂದಲನ್ನು ಜುಟ್ಟು ಕಟ್ಟಿಕೊಂಡು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವಂತ್, ಇದೀಗ ಜುಟ್ಟಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಣ್ಣು ಬಣ್ಣದ ಥಾರ್‌ನಲ್ಲಿ ಬಂದಿಳಿದ ಧ್ರುವಂತ್, ಅಭಿಮಾನಿಗಳನ್ನು ಭೇಟಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಳಿಕ ಸೆಲೂನ್‌ಗೆ ಹೋದ ಅವರು ಕೂದಲು ಕತ್ತರಿಸಿಕೊಂಡಿದ್ದಾರೆ. ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಕೊಂಡು ಡಿಫರೆಂಟ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಅಂತ್ಯ ಅಲ್ಲ….ಇದು ಹೊಸ ಆರಂಭ ಎಂಬುದಾಗಿ ಟ್ಯಾಗ್ ಲೈನ್‌ನೊಂದಿಗೆ ವೀಡಿಯೋ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : ‘ಅಶ್ವಿನಿ ಗೌಡಗೆ ಕನ್ನಡ ಬರೆಯೋಕೆ ಬರಲ್ಲ’ ಎಂಬ ಟೀಕೆಗೆ ಸ್ಪಷ್ಟೀಕರಣ ಕೊಟ್ಟ ಕರವೇ ನಾರಾಯಣ ಗೌಡ!

ಅಂದಹಾಗೆ, ಇಂದು(ಜ.17) ಬಿಗ್ ಬಾಸ್ ಪ್ರಿ ಫಿನಾಲೆ ನಡೆಯಲಿದೆ. ನಾಳೆ(ಜ.18) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ,ರಘು, ಧನುಷ್, ಅಶ್ವಿನಿ ಗೌಡರಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ತಾರೆ ಅನ್ನೋದು ಸದ್ಯದ ಕುತೂಹಲ.

Continue Reading
Advertisement

Trending

Copyright © 2025 Namma Kudla News

You cannot copy content of this page