Connect with us

BIG BOSS

ಹನುಮಂತನ ಮೇಲೆ ತಿರುಗಿ ಬಿದ್ದ ಮೂವರು! ಮನೆಯ ಕ್ಯಾಪ್ಟನ್​ ಈಗ ಗೇಮ್​ ಪ್ಲಾನರ್​ ಅಂತೆ!

Published

on

ಬಿಗ್​ ಬಾಸ್​ ಮನೆಯ ಈ ವಾರದ ಕ್ಯಾಪ್ಟನ್​​ ಹನುಮಂತನಿಗೆ ನಾಮಿನೇಟ್​ ಟಾಸ್ಕ್​ ನೀಡಲಾಗಿದೆ. ಅದರಂತೆಯೇ ಹನುಮಂತ ಮೂವರ ಹೆಸರನ್ನು ತೆಗೆದುಕೊಂಡಿದ್ದು, ನಾಮಿನೇಟ್​ ಮಾಡಿದ್ದಾನೆ. ಗೋಲ್ಡ್​ ಸುರೇಶ್​​, ಮಾನಸ ಮತ್ತು ಭವ್ಯ ಗೌಡ ಅವರ ಹೆಸರನ್ನು ಆಯ್ಕೆ ಮಾಡಿದ್ದಾನೆ. ಆದರೀಗ ಆತ ನಾಮಿನೇಟ್​ ವೇಳೆ ನೀಡಿದ ಕಾರಣಕ್ಕೆ ಮೂವರು ಅಸಮಾಧಾನರಾಗಿದ್ದಾರೆ.

ಹನುಮಂತ ಮೊದಲಿಗೆ ಗೋಲ್ಡ್​ ಸುರೇಶ್​​ ಹೆಸರನ್ನು ತೆಗೆದುಕೊಂಡಿದ್ದು, ಆತ ಅಲ್ಲಲ್ಲಿ ಕೋಳಿ ಮಲಗಿಕೊಂಡಂತೆ ಮಲಗುತ್ತಾನೆ. ಭವ್ಯಾ ಗೌಡ ಯಾವುದರಲ್ಲೂ ಹೆಚ್ಚು ಭಾಗವಹಿಸಿಲ್ಲ, ಮಾನಸ ಅದೊಂತರ ಬಾಂಬ್​​ ಇದ್ದಂತೆ ಸೌಂಡ್​ ಮಾಡುವಾಗ ಟುಸುಕ್​ ಅನ್ನುತ್ತೆ ಎಂದು ಕಾರಣ ನೀಡಿದ್ದಾನೆ.

ಹನುಮಂತ ನೀಡಿದ ಕಾರಣಕ್ಕೆ ಮೂವರು ಅಸಾಮಾಧಾನರಾಗಿದ್ದಾರೆ. ಅದಲ್ಲಿ ಭವ್ಯ ನೇರವಾಗಿ ಹನುಮಂತುವಿಗೆ ನೀವು ಕೊಟ್ಟಿರುವ ಕಾರಣ ಚೆನ್ನಾಗಿಲ್ಲ ಎಂದಿದ್ದಾರೆ. ಮಾನಸ ಕಣ್ಣೀರು ಹಾಕಿದ್ದು, ನಿನ್ನಂತ ಗೇಮ್​​ ಪ್ಲಾನರ್​ ನಮ್​ ತಾಯಾಣೆ ಈ ಮನೆಯಲ್ಲಿ ಯಾರು ಇಲ್ಲ ಕಣೋ ಎಂದು ಹೇಳಿದ್ದಾರೆ. ಗೋಲ್ಡ್​ ಸುರೇಶ್​ ಚೈತ್ರಾ ಕುಂದಾಪುರ ಬಳಿ ಆತ ಅನ್ಕೊಂಡಿರುವ ಹಾಗೆ ಇಲ್ಲ ಎಂದು ಹೇಳಿದ್ದಾರೆ.

BIG BOSS

ಈ ಬಾರಿಯ ಬಿಗ್‌ಬಾಸ್ ಸೀಸನ್‌-12ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಗೊತ್ತಾ..?

Published

on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-12 ಕಾರ್ಯಕ್ರಮದ ಸಿದ್ಧತೆಗೆ ಈಗಾಗಲೇ ಚಾಲನೆಸಿಕ್ಕಿದ್ದು, ಈ ಬಾರಿಯೂ ನಿರೂಪಕರಾಗಿ ಕಿಚ್ಚ ಸುದೀಪ್ ಅವರ ಮುಂದುವರೆಯುತ್ತಾರಂತೆ. ಇದಕ್ಕಾಗಿ ಕಿಚ್ಚ ಸುದೀಪ್ ಕೆಲವು ಕಂಡೀಷನ್‌ಗಳನ್ನು ಹಾಕಿದ್ದಾರೆ ಎನ್ನಲಾಗಿದೆ.

 

ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಹೋಗುತ್ತಾರೆ ಎಂಬ ಡೌಟ್‌ ವೀಕ್ಷಕರಿಗೆ ಕಾಡುತ್ತಿದೆ. ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಇಲ್ಲಿಯವರೆಗೆ ಮೂರು ತಿಂಗಳು ನಡೆಯುತ್ತಿತ್ತು. 15ರಿಂದ 20 ಸ್ಪರ್ಧಿಗಳು ಇರುತ್ತಿದ್ದರು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಕಾರ್ಯಕ್ರಮ ಶುರುವಾಗುತ್ತಿತ್ತು. ಆದರೆ ಈ ವರ್ಷ ವಿಭಿನ್ನವಾಗಿರಲಿದೆ.

ಇದನ್ನೂ ಓದಿ: ಉಡುಪಿ: ಅಕ್ರಮ ಮದ್ಯ ಮಾರಾಟ ಪ್ರಕರಣ, ಓರ್ವ ಆರೋಪಿ ಬಂಧನ

ಈ ಸಲ ಭಾರೀ ಬದಲಾವಣೆಯೊಂದಿಗೆ ಬಿಗ್ ಬಾಸ್ ಜನರ ಎದುರು ಬರಲಿದೆ. ವರದಿಯ ಪ್ರಕಾರ ಈ ಬಾರಿ ಐದೂವರೆ ತಿಂಗಳು ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ಜುಲೈ 30 ರಿಂದ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲಿದೆ ಎನ್ನಲಾಗಿದೆ.

ಸಂಭಾವ್ಯ ಸ್ಪರ್ಧಿಗಳು?

ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳ ಹುಡುಕಾಟ ಶುರುವಾಗಿದ್ದು 7 ಸ್ಪರ್ಧಿಗಳ ಹೆಸರನ್ನು ಬಹಿರಂಗಗೊಳಿಸಿದ. ಆ ಪ್ರಕಾರ, ಯೂಟ್ಯೂಬರ್ ಗೌರವ್ ತನೇಜಾ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಒಂದು ಕಾಲದ ಖ್ಯಾತ ಹೀರೋಯಿನ್ ಬಣ್ಣದ ಲೋಕದಿಂದ ದೂರವಾಗಿ ಸನ್ಯಾಸ ದೀಕ್ಷೆ ಪಡೆದ ಮಮತಾ ಕುಲಕರ್ಣಿ ಕೂಡ ಈ ಬಾರಿ ಬಿಗ್ ಬಾಸ್ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಕೃಷ್ಮಾ ಶ್ರಾಫ್, ಮಿಕ್ಕಿ ಮೇಕ್ ಓವರ್, ಫೈಸಲ್ ಶೇಖ್, ಧೀರಜ್ ಧೂಪರ್ ಕೂಡ ಬಿಗ್ ಬಾಸ್ ಮನೆಗೆ ಈ ಸಲ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.

ಬಿಗ್ ಬಾಸ್ ಗೆ ಪ್ರವೇಶಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಕೇಳಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಶುರುವಾಗಿದೆ. ಈ 7 ಜನರ ಜೊತೆ ಮತ್ತೆ ಯಾರೆಲ್ಲಾ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಎಂಟ್ರಿ ಪಡೆಯಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Continue Reading

BIG BOSS

ಲಕ್ಸುರಿ ಕಾರನ್ನು ಖರೀದಿ ಮಾಡಿದ ಬಿಗ್‌ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ

Published

on

ಬೆಂಗಳೂರು: ಬಿಗ್​ಬಾಸ್​ ಮೂಲಕ ಫೇಮಸ್​ ಆದ ನಟಿ ಐಶ್ವರ್ಯ ಸಿಂಧೋಗಿ ಇದೀಗ ಲಕ್ಸುರಿ ಕಾರು ಒಂದನ್ನು ಖರೀದಿ ಮಾಡಿದ್ದಾರೆ. ಈ ಮುಕೇನ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

ಐಶ್ವರ್ಯ ಸಿಂಧೋಗಿ MG ಹೆಕ್ಟರ್ ಪ್ಲಸ್ ಕಾರನ್ನು ಖರೀದಿ ಮಾಡಿದ್ದಾರೆ. ಹೊಚ್ಚ ಹೊಸ ಕಾರನ್ನು ಖರೀದಿ ಸಮಯದಲ್ಲಿ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಶಿಶಿರ್​ ಶಾಸ್ತ್ರಿ ಇದ್ದರು.

ಇನ್ನು ಈ ಕಾರಿನ ಬೆಲೆಯೂ ಭಾರತದಲ್ಲಿ ₹17.50 ಲಕ್ಷದಿಂದ ₹23.67 ಲಕ್ಷದವರೆಗೆ ಇದೆ. ಇದೀಗ ಹೊಸ ಕಾರನ್ನು ಖರೀದಿ ಮಾಡಿರೋ ಖುಷಿಯಲ್ಲಿ ಐಶ್ವರ್ಯ ಶಿಂಧೋಗಿ ಇದ್ದಾರೆ.

ಇದನ್ನೂ ಓದಿ: ಚೈತ್ರಾ ತಂದೆಯ ಹೇಳಿಕೆಗಳಿಗೆ ತಾಯಿ ರೋಹಿಣಿ ಕೌಂಟರ್

ಕಾರು ಪರ್ಚೇಸ್ ಮಾಡಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ.

Continue Reading

BIG BOSS

ದೇವರ ಮುಂದೆ ಅಪ್ಪ ಕುಡುಕ‌ ಎಂದು ಪ್ರಮಾಣ‌ ಮಾಡಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು

Published

on

ಉಡುಪಿ: ಚೈತ್ರಾ ಕುಂದಾಪುರ ಮದುವೆ ವಿಚಾರದಲ್ಲಿ ವಿರೋಧ ಹೊರ ಹಾಕಿದ್ದ ತಂದೆ ಬಾಲಕೃಷ್ಣ ನಾಯ್ಕ್ ಅವರಿಗೆ ಪುತ್ರಿ ಚೈತ್ರಾ ಸಾಮಾಜಿಕ ಜಾಲ ತಾಣದಲ್ಲಿ ನೀಡಿರುವ ಪ್ರತಿಕ್ರಿಯೆ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್‌ ಕೆಂಡಾಮಂಡಲರಾಗಿದ್ದಾರೆ.

‘ಕುಡುಕ‌ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೆ ಗೊತ್ತು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರು’ ಎಂಬುದಾಗಿ ಚೈತ್ರಾ ಕುಂದಾಪುರ ನಿನ್ನೆ ಸಾಮಾಜಿಕ‌ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ಇದನ್ನೂ ಓದಿ: ತಂದೆಯನ್ನೇ ಮದುವೆಗೆ ಕರೆದಿಲ್ವಾ? ಚೈತ್ರಾ ಕುಂದಾಪುರ ವಿರುದ್ಧ ಕೇಳಿ ಬಂತು ಗಂಭೀರ ಆರೋಪ!

ಈ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್ ಇದೀಗ ಕೆಂಡಾಮಂಡಲ‌ರಾಗಿದ್ದು ‘ನಾನು ಕುಡುಕ ಎಂದು ಚೈತ್ರಾ ಸಾಬೀತು ಪಡಿಸಲಿ. ಗೋವಿಂದ ಬಾಬು ಪೂಜಾರಿಯಿಂದ ಕೋಟಿ ಪಡೆದದ್ದು ಸಾಬೀತಾಗಿದೆ. ಹಾಗೆ ನಾನು ಕುಡಿಯುವುದು ಸಾಬೀತು ಪಡಿಸಲಿ. ಸರಕಾರಿ ವೈದ್ಯರಿಂದ ರಕ್ತ ಪರೀಕ್ಷೆ ಮಾಡಿಸಿ ಸರ್ಟಿಫಿಕೇಟ್ ‌ತೋರಿಸಲಿ. ಯಾವುದೇ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ‌ ಮಾಡಲಿ. ಮಂಜುನಾಥ, ಸುಬ್ರಹ್ಮಣ್ಯ, ಕುಲದೇವರ ಮುಂದೆ ‌ಪ್ರಮಾಣ ಮಾಡಬೇಕು. ವೈದ್ಯರ ಸರ್ಟಿಫಿಕೇಟ್ ಜತೆ ಬಂದು ದೇವರ ಮುಂದೆ ಅಪ್ಪ ಕುಡುಕ‌ ಎಂದು ಪ್ರಮಾಣ‌ ಮಾಡಲಿ. ಸುಖಾ ಸುಮ್ಮನೆ ಬಾಯಿಗೆ ಬಂದ ಹಾಗೆ ಅಪ್ಪ ಕುಡುಕ ಎಂದು ಹೇಳುವುದಲ್ಲ’ ಎಂದು ನೇರವಾಗಿ ಸವಾಲು ಹಾಕಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page