Connect with us

BIG BOSS

ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಚೈತ್ರಾ ಕುಂದಾಪುರ ಬಿಗ್​ಬಾಸ್​ ಮನೆಯ ಜೈಲು ಪಾಲಾಗಿದ್ದಾರೆ. ಬಿಗ್​ಬಾಸ್​ ಮನೆಗೆ ಕಾಲಿಟ್ಟಿದ್ದ ಚೈತ್ರಾ ಕುಂದಾಪುರ ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದರು.

ಬಿಗ್‌ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ ಅವರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ. ಮೂರನೇ ವಾರದಲ್ಲಿ ಮನೆಯಲ್ಲಿದ್ದ 14 ಸ್ಪರ್ಧಿಗಳಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ನೀಡಿದ್ದರು. ಬಿಗ್​ಬಾಸ್​ ಮನೆಯಲ್ಲಿ ಅಪ್ರಾಮಾ ಣಿಕ ಯಾರು ಹಾಗೂ ಕುತಂತ್ರಿ ಯಾರು ಅಂತ ಹೇಳಿ ಎಂದಿದ್ದರು.

ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅತಿ ಹೆಚ್ಚಾಗಿ ಹಣೆ ಪಟ್ಟಿಯನ್ನು ಚೈತ್ರಾ ಕುಂದಾಪುರ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕ್ರಿಯೆಯ ಅನುಸಾರ ಚೈತ್ರಾ ಕುಂದಾಪುರ ಬಿಗ್​ಬಾಸ್​ ಜೈಲಿಗೆ ಹೋಗಿದ್ದಾರೆ. ಬಿಗ್​ಬಾಸ್​ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.

BIG BOSS

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರಕ್ಷಿತಾ ಶೆಟ್ಟಿ!

Published

on

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ 12ರಲ್ಲಿ ತಮ್ಮ ಮುಗ್ಧ ಮತ್ತು ನೇರ ಸ್ವಭಾವದಿಂದಾಗಿ ‘ತುಳುನಾಡಿನ ಬೆಡಗಿ’ ಎಂದು ಮನೆಮಾತಾಗಿದ್ದರು. ಇದೀಗ ತಮ್ಮ ಅಜ್ಜಿಯ ವಯಸ್ಸಿನ ಹಿರಿಯ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಅವರ ಆಸೆಯನ್ನು ಈಡೇರಿಸಿದ್ದಾರೆ.


ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ರಕ್ಷಿತಾ ಅವರು ತಮ್ಮನ್ನು ನೋಡಬೇಕೆಂಬ ಹಂಬಲ ಹೊಂದಿದ್ದ ಅಜ್ಜಿಯ ವಯಸ್ಸಿನ ಅಭಿಮಾನಿಯ ಮನೆಗೆ ಭೇಟಿ ನೀಡಿದರು. ಈ ಕ್ಷಣದ ವೀಡಿಯೋವವನ್ನು ಸಿಂಚು ಶೆಟ್ಟಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.


ಇ ಸಿಂಚ್ ಶೆಟ್ಟಿ ಎಂಬುವವರು ಅಜ್ಜಿ ಬಿಗ್ಬಾಸ್ ದಿನವೂ ನೋಡುತ್ತಿದ್ದು, ಬಿಗ್ಬಾಸ್ ಮುಗಿದ ನಂತರ ಅವರು, ಆ ಕಾರ್ಯಕ್ರಮ ಮುಗಿದಿರುವುದರ ಅರಿವಿಲ್ಲದೇ ತಮ್ಮ ಮೊಮ್ಮಗಳ ಬಳಿ ಆ ಬಗ್ಗೆ ಕೇಳುತ್ತಾರೆ. ಮೊಮ್ಮಗಳು ಯಾರು ಬೇಕು ನಿಮಗೆ ಎಂದು ಕೇಳಿದಾಗ, ತಮ್ಮ ಕುಂದಾಪುರ ಭಾಷೆಯಲ್ಲಿ ಅದೊಂದು ಹೆಣ್ ಬರ್ತಲೆ ಎಂದು ಹೇಳುತ್ತಾರೆ.


ಯಾವ್ ಹೆಣ್ಣ್ ಎಂದು ಕೇಳಿದಾಗ, ಶೆಟ್ರ ಹೆಣ್ ಜೋರಿತ್ತಲ್ಲ ಎಂದಾಗ ಮೊಮ್ಮಗಳು ಆ ಕಾರ್ಯಕ್ರಮ ಮುಗಿತು ಎಂದು ಹೇಳುತ್ತಾರೆ. ಅದಕ್ಕೆ ಅವರು ಮೊಮ್ಮಗಳಿಗೆ ನೀನು ಸುಳ್ಳು ಹೇಳುವುದು ನನಗೆ ಆ ಕಾರ್ಯಕ್ರಮ ಮುಗಿದಿಲ್ಲ ಎಂದು ಹೇಳುತ್ತಾರೆ. ನಿಜವಾಗಿಯೂ ಆ ಕಾರ್ಯಕ್ರಮ ಮುಗಿತು ಎಂದು ನಂತರ ಅವರ ಮೊಮ್ಮಗಳು ಅವರಿಗೆ ಮನವರಿಕೆ ಮಾಡುತ್ತಾರೆ. ನಂತರ ಹೋ ಹೌದಾ ಎಂದು ಅವರು ಬೇಜಾರಾಗಿದ್ದಾರೆ.

ಮೊಮ್ಮಗಳು, ರಕ್ಷಿತಾ ನಿಮ್ಮನ್ನು ಭೇಟಿ ಮಾಡುವುದಕ್ಕೆ ಬರುತ್ತಿದ್ದಾಳೆ ಎಂದಾಗ, ಅಜ್ಜಿ ಅವರು ಖುಷಿಯಿಂದ ಬರಲಿ ಬರಲಿ ಎಂದು ಹೇಳುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ. ಬಳಿಕ ಅಜ್ಜಿ ತಲೆಬಾಚಿ ರೆಡಿಯಾಗಿದ್ದು, ರಕ್ಷಿತಾ ಅಜ್ಜಿಯನ್ನು ಭೇಟಿ ಮಾಡಿದ್ದು, ಅವರನ್ನು ತಬ್ಬಿಹಿಡಿದುಕೊಂಡು ಪ್ರೀತಿಯಿಂದ ಮಾತನಾಡಿಸುವ ವೀಡಿಯೋವನ್ನು ಕೂಡ ಅವರ ಮೊಮ್ಮಗಳು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್ ಹೆಸರು ಚೇಂಜ್ ಮಾಡಿದ ರಕ್ಷಿತಾ ಶೆಟ್ಟಿ; ವೈರಲ್ ಆಯ್ತು ಹೊಸ ಹೆಸರು!

ಈ ಹಿರಿಯ ಅಭಿಮಾನಿ ರಕ್ಷಿತಾ ಅವರ ಮಾತು ಮತ್ತು ಸ್ವಭಾವಕ್ಕೆ ಮಾರುಹೋಗಿದ್ದರು. ರಕ್ಷಿತಾ ಅವರನ್ನು ಖುದ್ದಾಗಿ ಭೇಟಿ ಮಾಡುವುದು ಅವರ ದೊಡ್ಡ ಆಸೆಯಾಗಿತ್ತು, ಅದನ್ನು ರಕ್ಷಿತಾ ಈಡೇರಿಸಿದ್ದಾರೆ. ಈ ಭೇಟಿಯ ಸಮಯದಲ್ಲಿ ರಕ್ಷಿತಾ ಅವರು ಆ ಅಜ್ಜಿಯೊಂದಿಗೆ ಸಮಯ ಕಳೆದು, ಅವರ ಆಶೀರ್ವಾದ ಪಡೆದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

bangalore

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ ಎಫ್‌ಐಆರ್ ದಾಖಲು

Published

on

ಬೆಂಗಳೂರು: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಬೆದರಿಕೆ ಮತ್ತು ನಿಂದನೆ ಆರೋಪದಡಿ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(2) ಮತ್ತು 352 ಅಡಿ ರಜತ್ (A1) ಮತ್ತು ಕಿರಣ್ (A2) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ‘ಡಾಗ್’ ಸತೀಶ್ ಜೊತೆಗಿನ ಸ್ನೇಹವನ್ನು ಬಿಡಬೇಕು ಎಂದು ರಜತ್ ಫೋನ್ ಕರೆ ಮತ್ತು ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ದೂರುದಾರರ ಕಾರಿನ ಫೋಟೋ ಕಳಿಸಿ, ‘ಇದು ರಜತ್ ಬುಜ್ಜಿ… ವಾಪಸ್ ಕಾಲ್ ಮಾಡ್ತೀರಾ ಇಲ್ಲ ನಾವೇ ಒಳಗೆ ನುಗ್ಗಬೇಕಾ?” ಎಂದು ಸಂದೇಶ ಕಳಿಸಿರುವುದು ಮತ್ತು ಕಾನ್ಫರೆನ್ಸ್ ಕಾಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!

ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನ ಆಧಾರದ ಮೇಲೆ ರಜತ್ ಮತ್ತು ಕಿರಣ್ ಮೇಲೆ FIR ದಾಖಲು ಮಾಡಿಕೊಂಡಿರುವ ಕೆ.ಆರ್.ಪುರಂ ಪೊಲೀಸರು ಘಟನೆ ಸಂಬಂಧ ವಿಚಾರಣೆಗೆ ಬರುವಂತೆ ರಜತ್ ಹಾಗೂ ಕಿರಣ್ ಎಂಬುವವರಿಗೆ ನೋಟಿಸ್ ನೀಡಿ, ವಿಚಾರಣೆ ಕರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

Continue Reading

BIG BOSS

ಬಿಗ್‌ ಬಾಸ್‌ ವಿನ್ನರ್‌ನ ಅನ್‌ಫಾಲೋ ಮಾಡಿದ ರಘು; ಮೌನ ಮುರಿದ ಗಿಲ್ಲಿ ನಟ

Published

on

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ-ರಘು ಅವರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಹೊರಗಡೆ ಬಂದ ನಂತರವೂ ಅದೇ ಗೆಳೆತನ ಕಂಟಿನ್ಯೂ ಆಗಿತ್ತು. ಇದೀಗ ಇಬ್ಬರ ಸ್ನೇಹದ ನಡುವೆ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ ರಘು ಅವರು ಈಗ ಗಿಲ್ಲಿಯನ್ನ ಅನ್‌ಫಾಲೋ ಮಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಗಿದು ತಿಂಗಳುಗಳೇ ಕಳೆದಿವೆ. ಆದ್ರೂ ಕೂಡಾ ಬಿಗ್‌ ಸ್ಪರ್ಧಿಗಳ ಹವಾ ಮಾತ್ರಾ ಚೂರು ಕಮ್ಮಿ ಆಗಿಲ್ಲ ಎನ್ನಬಹುದು. ಅದರಲ್ಲೂ ವಿಶೇಷವಾಗಿ ಗಿಲ್ಲಿ ನಟನ ಹೆಸರು ಮಾತ್ರಾ ಕೇಳದ ದಿನಗಳೇ ಇಲ್ಲ ಎನ್ನಬಹುದು.

ಹಾಗೆಯೇ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಹಾಗೂ ಕೆಲವು ಸ್ಪರ್ಧಿಗಳ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅದ್ರಲ್ಲಿ ಮ್ಯೂಟೆಂಟ್‌ ರಘು ಹಾಗೂ ಗಿಲ್ಲಿ ನಡುವಿನ ಸ್ನೇಹ ಎಲ್ಲರ ಗಮನ ಸೆಳೆದಿತ್ತು. ಈ ಇಬ್ಬರ ಸ್ನೇಹ ಬಿಗ್‌ ಬಾಸ್‌ ಮಗಿದ ಬಳಿಕವೂ ಮುಂದುವರೆದಿತ್ತು. ಹಲವಾರು ಕಾರ್ಯಕ್ರಮದಲ್ಲಿ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ವಾ? ಭಿನ್ನಾಭಿಪ್ರಾಯ ಮೂಡಿದ್ಯಾ? ಅಷ್ಟಕ್ಕೂ ಗಿಲ್ಲಿ ಅಕೌಂಟ್‌ ಅನ್ನು ರಘು ಅನ್‌ ಫಾಲೋ ಮಾಡಿದ್ದು ಯಾಕೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಸ್ವತಃ ಗಿಲ್ಲಿ ಈಗ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ವಿಚಾರ; ಹೀಗಿತ್ತು ರಿಷಭ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

‘ಅವರು ಏಕೆ ಅನ್​ಫಾಲೋ ಮಾಡಿದ್ರು ಅನ್ನೋದು ನಿಜಕ್ಕೂ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲೇ ಗೊತ್ತಾಗಿದ್ದು. ನಾನು ಸೋಶಿಯಲ್ ಮೀಡಿಯಾ ಬಳಸಲ್ಲ. ಪೋಸ್ಟ್​ ಮಾಡೋದಲ್ಲ ಮಾಡಲ್ಲ. ಅವರು ಫಾಲೋ ಮಾಡಿರ್ತಾರೆ, ನಾನು ಫಾಲೋ ಬ್ಯಾಕ್ ಮಾಡಿಲ್ಲ ಎಂದು ಅನ್​​ಫಾಲೋ ಮಾಡಿರಬಹುದು’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ರಘು ಅವರು ಅವಕಾಶವಾದಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ‘ರಘು ಅವರು ಮಗುವಿನ ರೀತಿಯ ಮನಸ್ಸು ಹೊಂದಿರುವವರು. ಅವರು ಯಾವಾಗಲೂ ಆ ರೀತಿ ಮಾಡಿದವರಲ್ಲ. ಅವರ ದೇಹಕ್ಕೂ ವೈಕ್ತಿತ್ವಕ್ಕೂ ಸಂಬಂಧವೇ ಇಲ್ಲ’ ಎಂದು ಒಳ್ಳೆಯ ಮಾತನ್ನು ಆಡಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page