Connect with us

BIG BOSS

BBK11: ಪುತ್ತೂರಿಗೆ ಆಗಮಿಸಿದ ಧನರಾಜ್ ಆಚಾರ್ಯ; ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

Published

on

ಪುತ್ತೂರು : ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ಯ ನಿನ್ನೆ ಸಂಜೆ ಹುಟ್ಟೂರು ಪುತ್ತೂರಿಗೆ ಆಗಮಿಸಿದ್ದಾರೆ. ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸುಮಾರು 16 ವಾರಗಳ ಕಾಲ ಉಳಿದುಕೊಂಡು ಕೊನೆಯ ಹಂತದಲ್ಲಿ ಹೊರಬಂದಿದ್ದರು. ಬಹಳಷ್ಟು ಅಭಿಮಾನಿಗಳನ್ನ ತನ್ನ ಡೈಲಾಗ್ ಗಳ ಮೂಲಕವೇ ಮನರಂಜಿಸುತ್ತಿದ್ದರು.

ಬಿಗ್ ಬಾಸ್ ಮನೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಗ್ ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ವೀಕ್ಷಕರ ಮನಸ್ಸನ್ನೂ ಗೆದ್ದುಕೊಂಡು 16ನೇ ವಾರದವರೆಗೆ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ‘ಕಿಚ್ಚ’ ಸುದೀಪ್ ಅವರ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದರು.

ಧನರಾಜ್ ಅವರು ಆಸೆ ಪಟ್ಟಂತೆ ಅವರ ಕುಟುಂಬಸ್ಥರು, ಮುಖ್ಯವಾಗಿ ಅವರ ಮಗಳು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಖುಷಿಯನ್ನು ದುಪ್ಪಟ್ಟು ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರ ಜೊತೆಗೆ ಓಡಾಡಿಕೊಂಡಿದ್ದ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ನೇರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಅನಂತಾಡಿ ಕೊಡಾಜೆಯ ತನ್ನ ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ: ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?

ಧನರಾಜ್ ಅವರನ್ನ ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಭಿನಂದಿಸಿದರು. ಈ ಸಂದರ್ಭ ಧನ್ ರಾಜ್ ಆಚಾರ್ಯ ಅವರ ತಂದೆ, ಸಹೋದರಿ ಮತ್ತು ಚಿಕ್ಕಪ್ಪ ಮತ್ತು ಅವರ ಆಪ್ತ ಬಳಗದವರು ಜೊತೆಗಿದ್ದರು.

ಇನ್ನು ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಹಲವಾರು ಆಫರ್ ಗಳು ಹೊರಬಂದಿವೆ ಅಂತ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಸಿನಿಮಾ ಸೇರಿದಂತೆ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಿಂದ ಈಗಾಗ್ಲೇ ಆಫರ್‌ಗಳು ಲಭಿಸಿವೆ ಎಂದರು.

ಇನ್ನು ಬಿಗ್ ಬಾಸ್ ಅಂತಿಮ ಹಂತದಲ್ಲಿದ್ದು ನಮ್ ದೋಸ್ತ್ ಹನುಮಂತ ಗೆಲ್ಲುತ್ತಾನೆ ಅನ್ನೋ ನಂಬಿಕೆ ಇದೆ ಅಂತ ಪುನರುಚ್ಚರಿಸಿದರು.

Advertisement
Click to comment

Leave a Reply

Your email address will not be published. Required fields are marked *

BIG BOSS

ಅಂದು ನಾಗವಲ್ಲಿಯಾಗಿ ಗುರುತಿಸಿಕೊಂಡಿದ್ದ ಚೈತ್ರಕ್ಕ… ಇಂದು ನ್ಯಾಷನಲ್ ಕ್ರಶ್ ಆಗ್ಬಿಟ್ರಾ ??

Published

on

ಕನ್ನಡದ ಬಿಗ್ ಬಾಸ್ ಸೀಸನ್ 11 ಹಲವಾರು ಕಾರಣಗಳಿಂದ ಸದ್ದು ಮಾಡಿತ್ತು. ಅದರಲ್ಲೂ ಜಗಳಗಳಿಂದಲೇ ತುಂಬಿದ್ದ ಆ ಸೀಸನ್‌ನಲ್ಲಿ ಹಿಂದೂ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದ ಚೈತ್ರಾ ಕುಂದಾಪುರ ಸಹ ಸ್ಪರ್ಧಿಯಾಗಿ ಆಗಮಿಸಿದ್ದರು. ಅಷ್ಟು ಮಾತ್ರವಲ್ಲದೆ ತಮ್ಮ ಮಾತು, ಆಟದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡು ಫುಲ್ ಫೇಮಸ್ ಆಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ಹಣೆ ತುಂಬಾ ಕುಂಕುಮ ಇಟ್ಟು, ಸಿಂಪಲ್ ಆಗಿರುವ ಸಲ್ವಾರ್ ಧರಿಸಿ, ವೀಕೆಂಡ್ ಗಳಲ್ಲಿ ಸಿಂಪಲ್ ಆಗಿರುವ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಕುಂದಾಪುರ ದೊಡ್ಮನೆಯಿಂದ ಹೊರ ಬಂದ ಮೇಲೆ ತಮ್ಮ ಲುಕ್ ಫುಲ್ ಚೇಂಜ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೈತ್ರಾ, ಹೆಚ್ಚಾಗಿ ವಿವಿಧ ರೇಷ್ಮೆ ಸೀರೆಗಳನ್ನುಟ್ಟು, ಫೋಟೋ ಶೂಟ್ ಮಾಡಿಸಿ, ಅದರ ವಿಡಿಯೋ ಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಮುಖ ತುಂಬಾ ಮೇಕಪ್, ಸುಂದರವಾದ ಸೀರೆಯುಟ್ಟು ಪೋಸ್ ಕೊಡುವ ಚೈತ್ರಾಳ ಹೊಸ ಅವತಾರ ನೋಡಿ ಅಭಿಮಾನಿಗಳಿಗೆ ಫುಲ್ ಶಾಕ್ ಆಗಿದೆ.

ಇದೀಗ ಚೈತ್ರಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹೊಸದೊಂದು ಫೋಟೊ ಶೂಟ್ ಶೇರ್ ಮಾಡಿದ್ದು, “Beauty begins the moment you decide to be yourself, in a saree” ಎಂದು ಬರೆದುಕೊಂಡಿದ್ದಾರೆ. ಆ ಫೋಟೊದಲ್ಲಿ ಪೀಚ್ ಮತ್ತು ಕೆಂಪು ಶೇಡ್ ಉಳ್ಳ ಸೀರೆ ಉಟ್ಟಿದ್ದಾರೆ. ಚೈತ್ರಾ ಫೋಟೊ ನೋಡಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ‘ಅಬ್ಬಾ, ಕರ್ಪೂರದ ಗೊಂಬೆ ತರ ಕಾಣುಸ್ತಿದೀರಾ ಚೈತ್ರಕ್ಕಾ , ಹೆಮ್ಮೆಯ ಭಾರತಾಂಬೆಯ ಪುತ್ರಿ ನೀವು,  ನಮ್ಮ ಸಂಸ್ಕೃತಿ ಅಂದ್ರೆ ಇದೇ ಸೂಪರ್ ಅಕ್ಕ, ಹೃದಯ ಕದ್ದ ಕಳ್ಳಿ, ಮೈ ತೋರಿಸಿ ಫೇಮಸ್ ಆಗೋರೆ ಮುಂದೆ ನೀವು ಸಾಂಪ್ರದಾಯವನ್ನು ಬಿಡದೇ ಎದ್ದು ನಿಲ್ಲುತ್ತೀರಿ, ನ್ಯಾಷನಲ್ ಕ್ರಶ್’ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಕಾಮೆಂಟ್ ಮಾಡಿ ‘ನಿಜವಾದ ಸೌಂದರ್ಯ ಬಿಟ್ಟು, ಮೇಕಪ್ ಅನ್ನೋ ಸೌಂದರ್ಯಕ್ಕೆ ಮರುಳಾಗದಿರಿ ಚೈತ್ರಕ್ಕ. ನೀವು ಬಂದ ದಾರಿಯನ್ನು ನೀವು ಮರಿತ್ತಿದ್ದೀರಿ ಅನಿಸ್ತಿದೆ. ಹುಲಿ ಯಾವತ್ತಿದ್ರೂ ಹುಲಿಯಾಗಿರಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ‘ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಬಂದ ನಾಗವಲ್ಲಿ ತನ್ನ ಯೌವನದಲ್ಲಿದ್ದ ಸೌಂದರ್ಯವನ್ನು  ಚೈತ್ರಕ್ಕನಿಗೆ ದಾನ ಮಾಡಿರ ಬಹುದೇ…?  ಮಾತಿನ ಮಲ್ಲಿ ಸೌಂದರ್ಯವತಿ ಚೈತ್ರಕ್ಕ ನೃತ್ಯ ತರಭೇತಿ ಪಡೆದು ದಯವಿಟ್ಟು ಒಂದು ನೃತ್ಯ ಮಾಡಿ. ಅದನ್ನು ನೋಡುವ ಕಾತರ ನಮಗಿದೆ’ ಎಂದು ಒಬ್ಬರು ಹೇಳಿದ್ರೆ, ಇನ್ನೊಬ್ಬ ಅಭಿಮಾನಿ ‘ಬಿಗ್ ಬಾಸ್ ಮನೆಯಲ್ಲಿ ನಾಗವಲ್ಲಿ ಥರ ಇರ್ತಿದ್ದೋಳು, ಈಗ ನೋಡು ಗುರು, ವಾವ ಸೂಪರ್…’ ಎಂದು ಮೆಚ್ಚುಗೆ ಸೂಚಿಸಿದ್ದಾನೆ.

Continue Reading

bangalore

ಆ ರೀಲ್ಸ್ ಮಾಡಿದ್ದೇ ತಪ್ಪಾಯ್ತು ..! ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಬ್ಬರ ಮೇಲೆ ಎಫ್.ಐ.ಆರ್. ..!

Published

on

ಮಂಗಳೂರು / ಬೆಂಗಳೂರು : ಕನ್ನಡ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಗಳಾಗಿರುವ ರಜತ್ ಕಿಶನ್, ವಿನಯ್‌ಗೆ ಸದ್ಯ ಬಹುದೊಡ್ಡ ಸಂಕಷ್ಟ ಎದುರಾಗಿದ್ದು, ಅವರಿಬ್ಬರ ಮೇಲೆ ಎಫ್‌ಐ‌ರ್ ದಾಖಲಾಗಿದೆ. ಬಿಗ್ ಬಾಸ್ ಹಾಗೂ ಕಿರುತೆರೆಯ ಇತರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ರಜತ್ ಕಿಶನ್ ಹಾಗೂ ವಿನಯ್ ಗೌಡ ವಿರುದ್ಧ ಪೊಲೀಸರು ಎಫ್‌.ಐ.ಆ‌ರ್ ದಾಖಲಿಸಿಕೊಂಡಿದ್ದಾರೆ. ಹಾಗಾದರೆ ಅವರೇನುಅಂತಹ ತಪ್ಪು ಮಾಡಿದ್ದರು ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಿಸಿದ್ದ ವಿನಯ್ ಹಾಗೂ ಬಾಸ್ ಸೀಸನ್ 11ರಲ್ಲಿ ಕಾಣಿಸಿಕೊಂಡಿದ್ದ ರಜತ್ ಕಿಶನ್ ಇಬ್ಬರೂ ಕಿರುತೆರೆಯಲ್ಲಿ ಹೆಸರು ಮಾಡಿದವರೇ ಆಗಿದ್ದಾರೆ. ಸದ್ಯ ರಿಯಾಟಲಿ ಶೋವೊಂದರಲ್ಲಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದು, ಇದೀಗ ಅವರಿಬ್ಬರ ಮೇಲೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ.

ಎಫ್.ಐ.ಆರ್ ದಾಖಲಾಗಲು ಕಾರಣವೇನು ?

ವಿನಯ್, ರಜತ್ ಇಬ್ಬರು ಬೆಸ್ಟ್‌ಫ್ರೆಂಡ್ಸ್. ಇತ್ತೀಚೆಗೆ ಇಬ್ಬರು ಜತೆಯಾಗಿ ರೀಲ್ಸ್ ಮಾಡಿದ್ರುದಾರೆ. ಬರೀ ರೀಲ್ಸ್ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ರೀಲ್ಸ್ ಮಾಡುವಾಗ ಲಾಂಗ್ ಉಪಯೋಗಿದಿದ್ದಾರೆ. ಇದೇ ಅವರಿಗೆ ಸಂಕಷ್ಟ ತಂದೊಡ್ಡಿದೆ. ವಿನಯ್, ರಜತ್ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲಾಂಗ್, ಮಚ್ಚು, ಗನ್ ಅಸಲಿ ಇರಲಿ ಅಥವಾ ನಕಲಿ ಇರಲಿ ಇಂತಹ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರೀಲ್ಸ್ ಮಾಡುವಂತಿಲ್ಲ. ಈ ರೀತಿ ರೀಲ್ಸ್ ಮಾಡುವವರ ವಿರುದ್ದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಹಾಗಾಗಿ ಲಾಂಗ್ ಹಿಡಿದು ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ರಜತ್ ಹಾಗೂ ವಿನಯ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

Continue Reading

BIG BOSS

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್ ಬಾಸ್ ಸ್ಪರ್ಧಿಗಳು

Published

on

ಉಡುಪಿ: ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮೋಕ್ಷಿತಾ, ಐಶ್ವರ್ಯ ಮತ್ತು ಶಿಶಿರ್ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ.

ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಮೋಕ್ಷಿತಾ, ಶಿಶಿರ್, ಐಶ್ವರ್ಯಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿ ರಂಜಿತ್ ಅವರ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಇತ್ತೀಷೆಗಷ್ಟೇ ಇವರು ಮೂವರು ಭಾಗಿಯಾಗಿದ್ದರು. ಬಿಗ್‌ಬಾಸ್ ಸೀಸನ್ 11 ಮುಗಿದ ಬಳಿಕ ಹಲವು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸ್ಪರ್ಧಿಗಳು ಇದೀಗ ಟೆಂಪಲ್ ರನ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page