Connect with us

BIG BOSS

BBK 12: ಟಾಸ್ಕ್ ಗೆದ್ದವರಿಗೆ ಉಳಿಗಾಲ… ಸೋತವರಿಗೆ ಎಲಿಮಿನೇಟ್ ಭಯ!

Published

on

‘ಬಿಗ್ ಬಾಸ್ ಕನ್ನಡ ಸೀಸನ್-12’ ರಲ್ಲಿ ಸ್ಪರ್ಧಿಗಳು ಆಟದಲ್ಲಿ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಇನ್ನೆನೂ ಮಿಡ್ ಸೀಸನ್ ಫಿನಾಲೆ ಹತ್ತಿರವಾಗುತ್ತಿದೆ. ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ.

ಹೌದು, ಜಂಟಿಗಳಾಗಿದ್ದ ಜೋಡಿ ಒಂಟಿಗಳಾಗಿದ್ದಾರೆ. ಹೀಗಾಗಿ ಆಟದಲ್ಲಿ ಒಂಟಿಯಾಗಿ ಮುನ್ನುಗಿ ಮಿಡ್ ಸೀಸನ್ ಫೈನಲಿಸ್ಟ್ ಆಗಿ ಮನೆಯೊಳಗಡೆ ಉಳಿದುಕೊಳ್ಳಲು ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಟೆಸ್ಕ್ ಗೆದ್ದವರಿಗೆ ಉಳಿಗಾಲ… ಸೋತವರಿಗೆ ಯಾವ ಸಂದರ್ಭದಲ್ಲಿ ಬೇಕಾದರೂ ಎಲಿಮಿನೇಟ್ ಆಗಬಹುದು ಎನ್ನುವ ಟೆನ್ಶನ್‌ ನಲ್ಲಿದ್ದಾರೆ ದೊಡ್ಮನೆಯ ಸದಸ್ಯರು.

ಬಿಗ್ ಬಾಸ್​ನಲ್ಲಿ ಎಲ್ಲ ಸ್ಪರ್ಧಿಗಳಿಗೆ ಈ ವಾರ ತುಂಬಾನೇ ಮಹತ್ವದ್ದಾಗಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ. ಯಾಕಂದ್ರೆ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಮೊದಲ ಫಿನಾಲೆ ನಡೆಯಲಿದೆ. ಹೀಗಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇನ್ನೋರ್ವ ಸ್ಪರ್ಧಿ ಯಾರು ಎಂಬುದು ನೋಡಬೇಕಿದೆ. ಸದ್ಯ ಈ ವಾರ ಫೈನಲಿಸ್ಟ್ ಬಿಟ್ಟು ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿರುವ ಕಾರಣ ವಾರಾಂತ್ಯದಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಈ ವಾರ ನೀಡಲಿರುವ ಟಾಸ್ಕ್ ಸ್ಪರ್ಧಿಗಳು ಮುಖ್ಯವಾಗಿದೆ.

ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಗೆದ್ದವರಿಗೆ ಉಳಿಗಾಲ.. ಸೋತವರು ಯಾವ ಸಂದರ್ಭದಲ್ಲಿ ಬೇಕಾದ್ರೂ ಎಲಿಮಿನೇಟ್ ಆಗಬಹುದು. ಇದೀಗ ಕಲರ್ಸ್ ಇಂದಿನ ಎಪಿಸೋಡ್​ನ ಒಂದು ಪ್ರೋಮೋ ವನ್ನು ಹಂಚಿಕೊಂಡಿದೆ.

ಇದನ್ನೂ ಓದಿ: ಬಿಗ್ ಬಾಸ್ ಅಂದ್ರೆ ಏನು? ರಕ್ಷಿತಾ ಉತ್ತರಕ್ಕೆ ಕಿಚ್ಚ ತಬ್ಬಿಬ್ಬು!

ಆಟದಲ್ಲಿ ಉಳಿಸಲು ಇಚ್ಚಿಸುವ ಒಬ್ಬ ಸದಸ್ಯನ ಭಾವಚಿತ್ರದ ಮುಂದೆ ದೊಡ್ಡ ಚೆಂಡನ್ನು ಇಡಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಸಂದರ್ಭ ಕೆಲ ಮಹಿಳಾ ಸ್ಪರ್ಧಿಗಳು ಗುಂಪಾಗಿ ಚರ್ಚಿಸಿ ತಮ್ಮ ತಮ್ಮ ಫೋಟೋದ ಮುಂದೆ ಚೆಂಡನ್ನು ಇಡುವ ತೀರ್ಮಾನ ಮಾಡಿದ್ದಾರೆ. ಅಂತಿಮವಾಗಿ ಅಶ್ವಿನಿ ಅವರ ಫೋಟೋ ಎದುರು ಯಾರೂ ಚೆಂಡು ಇಟ್ಟಿರುವುದಿಲ್ಲ.. ಅವರು ಆಟದಿಂದ ಹೊರಗುಳಿದಿದ್ದಾರೆ.

ಎಲ್ಲಾ ಟಾಸ್ಕ್ ಮುಗಿದ ಬಳಿಕ ಮನೆಯಲ್ಲಿ ಜಗಳ ನಡೆದಿದೆ. ಸ್ಪಂದನಾ ಹಾಗೂ ರಾಶಿಕಾ ಮಾತನಾಡುತ್ತ ಟೀಮ್ ಆಗೋಣ ಅಂತ ಕರೆದಿದ್ದೇ ಕಾವ್ಯ ಅವರು ಎಂದು ಹೇಳಿದ್ದಾರೆ. ಇದು ಅಶ್ವಿನಿ ಅವರ ಕಿವಿಗೆ ಬಿದ್ದಿದೆ ಎಂಬಂತೆ ಕಾಣುತ್ತಿದೆ. ಸದ್ಯ ಇದೆಲ್ಲ ಕಾವ್ಯ ಪ್ಲ್ಯಾನ್.. ಅವಳು ನೋಡಿದ ರೀತಿ ಅಲ್ಲ ಎಂದು ಕೆಲವು ಅಭಿಪ್ರಾಯ ಹೊರಹಾಕಿದ್ದಾರೆ. ಅತ್ತ ಅಶ್ವಿನಿ ಅವರು ಬೇಸರದಲ್ಲಿ ಮುಳುಗಿದ್ದಾರೆ. ಇದಾದ ಬಳಿಕ ಏನೆಲ್ಲ ಆಗಿದೆ ಎಂಬುದು ಇಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ. ಇನ್ನೊಂದೆಡೆ ಮಿಡ್ ಸೀಸನ್ ಫಿನಾಲೆಗೆ ದಿನಾಂಕ ನಿಗದಿಯಾಗಿದ್ದು, ಅಕ್ಟೋಬರ್ 18 ಮತ್ತು 19ರಂದು ನಡೆಯಲಿದೆ.

BIG BOSS

ನಿಶ್ಚಿತಾರ್ಥ ಮಾಡಿಕೊಂಡ BBK11ರ ಸ್ಪರ್ಧಿ ಉಗ್ರಂ ಮಂಜು

Published

on

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ, ನಟ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಮಂಜು ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಬರೆದುಕೊಂಡಿದ್ದಾರೆ.

ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ.

ಇದನ್ನೂ ಓದಿ: 20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

ಹುಡುಗಿ ಯಾರು?
ಉಗ್ರಂ ಮಂಜು ಕೈಹಿಡಿಯಲಿರುವ ಸಂಧ್ಯಾ ಖುಷಿ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲ್ಯಾಂಟ್ ಕೋರ್ಡಿನೇಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿರುವ ಸಂಧ್ಯಾ ಅವರು ತಮ್ಮ ಹಲವಾರು ವಿಡಿಯೋಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ.

Continue Reading

BIG BOSS

ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಸುದೀಪ್ ಬಿಚ್ಚಿಟ್ರು ಅಸಲಿ ಸತ್ಯ!

Published

on

BBK 12 : ವಾರಾಂತ್ಯ ಬಂತೆಂದರೆ ಎಲ್ಲರೂ ಕಿಚ್ಚನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಈ ಬಾರಿ ಎಂದಿನಂತೆ ಕಿಚ್ಚ ವೀಕೆಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ವಾರದ ಪಂಚಾಯಿತಿ ನಡೆಸಲು ಬರುತ್ತಿದ್ದಂತೆ ಗರಂ ಆಗಿದ್ದರು. ರಕ್ಷಿತಾ ಶೆಟ್ಟಿ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾರೆಂಬ ಅಶ್ವಿನಿ ಗೌಡ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ.

ರಕ್ಷಿತಾ.. ನಾಟಕ ಅಂತ ಹೇಳಿಕೊಂಡು ನೀನು ಚಪ್ಪಲಿ ತೋರಿಸಿದ್ದೀಯಾ ಅಂದರೆ ಯಾರಿಗೆ ನೀನು ಅವಮಾನ ಮಾಡುತ್ತಾ ಇದ್ದೀಯಾ? ಎಂದು ಕಿಚ್ಚ ಸುದೀಪ್ ಮುಂದೆಯೇ ಅಶ್ವಿನಿ ಗೌಡ ಆರೋಪ ಮಾಡಿದ್ದಾರೆ.

ಆಗ ಸುದೀಪ್, ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ನಾನು ತಪ್ಪು ಹೇಳಿಕೆ ಕೊಟ್ಟಾಗ ಏನಾಗುತ್ತೆ ಯಾರ್ ಯಾರೋ ಕಲಾವಿದರಿಗೆ ಹೇಳಿದ್ದರಂತೆ, ಕಲಾವಿದರಿಗೆ ಹೇಳಿದ್ದರಂತೆ ಅಂತಾರೆ. ಯಾಕೆ ಮೇಡಂ ವೇದಿಕೆ ಮೇಲೆ ನಿಂತಿರುವ ನಾನು ಒಬ್ಬ ಕಲಾವಿದ ಅಲ್ವಾ? ಕರ್ನಾಟದಲ್ಲಿ ಇರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಾಗಿತ್ತು. ಇದೊಂದು ತಪ್ಪು ಗ್ರಹಿಕೆ ಎಂದಿದ್ದಾರೆ.

ಅಸಲಿಗೆ ಆಗಿದ್ದೇನು?

ಕಳೆದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಜಗಳ ನಡೆದಿತ್ತು. ಈ  ವೇಳೆ ಅಶ್ವಿನಿ ಗೌಡ ರಕ್ಷಿತಾ ಮೇಲೆ ಗಂಭೀರ ಆರೋಪ ಮಾಡಿದ್ದರು. ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದರು. ನಾಲ್ಕೈದು ಬಾರಿ ಚಪ್ಪಲಿ ತೋರಿಸಿ ಮಾತನಾಡಿದ್ರು ಎಂದು ಆರೋಪಿಸಿದ್ದರು.

ಇದನ್ನೂ ಓದಿ : BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

ಇದೀಗ ಇದೇ ವಿಚಾರವಾಗಿ ಸುದೀಪ್ ಅವರು ವಾರದ ಪಂಚಾಯಿತಿಯಲ್ಲಿ ಪ್ರಶ್ನಿಸಿದ್ದಾರೆ. ಇದೊಂದು ತಪ್ಪು ಗ್ರಹಿಕೆ ಎಂದು ರಕ್ಷಿತಾ ಮೇಲಿನ ಆರೋಪಕ್ಕೆ ತೆರೆ ಎಳೆದಿದ್ದಾರೆ.

Continue Reading

BIG BOSS

ವ್ಯಕ್ತಿತ್ವದ ಪರೀಕ್ಷೆಯಲ್ಲಿ ಗೆಲ್ಲೋದು ಯಾರು? ಯಾರಿಗೆ ಗೇಟ್‌ ಪಾಸ್?

Published

on

BBK12 : ಬಿಗ್ ಬಾಸ್ ಕನ್ನಡ ಸೀಸನ್‌ 12 ಶೋನಲ್ಲಿ ವಾರಾಂತ್ಯ ಬಂತು ಅಂದ್ರೆ ಕುತೂಹಲ ಹೆಚ್ಚು. ಕಿಚ್ಚ ಯಾರಿಗೆ ಕ್ಲಾಸ್ ತಗೋತ್ತಾರೆ? ಕಿಚ್ಚನ ಚಪ್ಪಾಳೆ ಯಾರಿಗೆ? ಯಾರು ದೊಡ್ಮನೆಯಿಂದ ಹೊರ ಹೋಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತೆ. ಹಾಗಾಗಿ ಕಿಚ್ಚನ ಬರುವಿಕೆಗಾಗಿ ಬಿಗ್ ಬಾಸ್ ವೀಕ್ಷಕರು ಕಾಯುತ್ತಿರುತ್ತಾರೆ.

ಅಂದಹಾಗೆ,  ಈ ಬಾರಿ ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಸುದೀಪ್‌ ನಾಮಿನೇಟ್‌ ಮಾಡಿದ್ದರು. ಈ ವಾರ ವ್ಯಕ್ತಿತ್ವದ ಆಟ, ಫಿಸಿಕಲ್‌ ಟಾಸ್ಕ್‌ ಇರೋದಿಲ್ಲ ಎಂದು ಹೇಳಿದ್ದರು. ಹಾಗಾಗಿ ಯಾರು ಬಚಾವಾಗ್ತಾರೆ ಅನ್ನೋ ಕುತೂಹಲ ಹೆಚ್ಚು.

ಕಲರ್ಸ್‌ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ವಾರದ ಪಂಚಾಯಿತಿ ನಡೆಸಲು ವೇದಿಕೆಗೆ ಎಂಟ್ರಿ ಕೊಟ್ಟಿರೋದನ್ನು ಕಾಣಬಹುದು. ತಾಳ್ಮೆ ನಮಗೆ ಕಲಿಸುವುದು ಪಾಠ ಒಂದು ಕಡೆಯಾದರೆ, ಬದುಕು ದಿನನಿತ್ಯ ಕಲಿಸುವ ಪಾಠಗಳೇ ಬೇರೆ ತರ ಆಗಿರುತ್ತವೆ.

ಬಿಗ್‌ಬಾಸ್‌ನಲ್ಲಿ ಪರೀಕ್ಷೆ ಎಲ್ಲರಿಗೂ ಒಂದೆ. ಆದರೇ, ಪಠ್ಯಕ್ರಮ ಎಲ್ಲ ವ್ಯಕ್ತಿತ್ವಗಳಿಗೆ ಸರಿಯಾಗಿ ಬದಲಾಗುತ್ತಾ ಹೋಗುತ್ತದೆ. ವ್ಯಕ್ತಿತ್ವದ ಪರೀಕ್ಷೆಯಲ್ಲಿ ಪಾಸ್ ಆದೋರು ಯಾರು? ಪಾಸ್ ಆಗದವರು ಯಾರು? ಎಂದು ಅವರು ಹೇಳಿದ್ದಾರೆ.

ಈ ಬಾರಿ ಲೆಟರ್‌ ಟಾಸ್ಕ್‌ ಇತ್ತು. ಎಲ್ಲ ಸ್ಪರ್ಧಿಗಳಿಗೂ ಮನೆಯವರಿಂದ ಪತ್ರ ಬಂದಿತ್ತು. ಈ ಪತ್ರ ಪಡೆಯಲು ಎಮೋಶನ್ ಟಾಸ್ಕ್ ಇತ್ತು. ಯಾರಿಗೆ ಪತ್ರ ಸಿಕ್ಕಿದೆಯೋ ಅವರಿಗೆ ಇಮ್ಯೂನಿಟಿ ಸಿಕ್ಕಿದೆ. ಅಭಿಷೇಕ್‌, ಜಾಹ್ನವಿ, ಕಾವ್ಯ ಶೈವ, ಮಾಳು ನಿಪನಾಳ, ರಿಷಾ ಗೌಡ ಅವರಿಗೆ ಪತ್ರ ಸಿಕ್ಕಿದ್ದು,  ಅವರು ಒಂದು ವಾರ ಸೇಫ್‌ ಆಗಿದ್ದಾರೆ.

ಇದನ್ನೂ ಓದಿ : BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

ಪತ್ರ ಸಿಗದ ಅಶ್ವಿನಿ ಗೌಡ, ರಕ್ಷಿತಾ, ಗಿಲ್ಲಿ ನಟ, ಧನುಷ್, ಕಾಕ್ರೋಚ್ ಸುಧಿ, ಸ್ಪಂದನಾ, ಧ್ರುವಂತ್, ಸೂರಜ್, ಚಂದ್ರಪ್ರಭ ಹಾಗೂ ರಾಶಿಕಾ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page