Connect with us

BIG BOSS

ಜಗದೀಶ್ ಶರ್ಟ್ ಮೇಲೆ ಹಂಸಾ ಲಿಪ್​ಸ್ಟಿಕ್ ಗುರುತು; ಯಾವಾಗ ಆಯ್ತು ಈ ಕಲೆ ಗೊತ್ತಾ?

Published

on

ಲಾಯರ್​ ಜಗದೀಶ್ ಅವರಿಗೆ ಬಿಗ್ ಬಾಸ್​ ಆಟ ಹೇಳಿ ಮಾಡಿಸಿದಂತಿದೆ. ಆರಂಭದಿಂದಲೂ ಅವರು ಸಖತ್​ ಸದ್ದು ಮಾಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚು ಜಗಳ ಮಾಡಿದ್ದು ನಟಿ ಹಂಸಾ ಜೊತೆ. ಹಾಗಂತ ಆ ಜಗಳ ಹಾಗೆಯೇ ಮುಂದುವರಿದಿಲ್ಲ. ಹಂಸಾ ಜೊತೆ ಜಗದೀಶ್ ಎಷ್ಟು ಜಗಳ ಮಾಡಿದ್ದಾರೋ ಅಷ್ಟೇ ಸ್ನೇಹ ಕೂಡ ಬೆಳೆಸಿದ್ದಾರೆ. ಸೋಮವಾರದ (ಅಕ್ಟೋಬರ್​ 14) ಸಂಚಿಕೆಯಲ್ಲಿ ಜಗದೀಶ್ ಅವರು ಲಿಪ್​ಸ್ಟಿಕ್​ ಕಲೆ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತಿದ್ದಾಗ ಜಗದೀಶ್ ಅವರು ಎಂಟ್ರಿ ನೀಡಿದರು. ಅವರು ಬಿಳಿ ಬಣ್ಣದ ಶರ್ಟ್​ ಹಾಕಿಕೊಂಡು ಬಂದರು. ತಮ್ಮ ಶರ್ಟ್​ ಮೇಲೆ ಲಿಪ್​ಸ್ಟಿಕ್ ಗುರುತು ಇದೆ ಎಂದು ಅವರು ಹೇಳಿದರು. ‘ನನ್ನ ಶರ್ಟ್​ ಮೇಲೆ ನಿಮ್ಮ ಲಿಪ್​ ಸ್ಟಿಕ್​ ಕಲೆ ಇದೆ’ ಎಂದು ನೇರವಾಗಿ ಹಂಸಾ ಬಳಿಯೇ ಜಗದೀಶ್ ಹೇಳಿದರು. ಅದನ್ನು ಹಂಸಾ ಕೂಡ ಅಲ್ಲ ಎನ್ನಲಿಲ್ಲ.

‘ನಿನ್ನೆ ಹಗ್ ಮಾಡಿದಾಗ ಈ ಕಲೆ ಆಗಿದ್ದು’ ಎಂದು ಹಂಸಾ ಅವರು ಹೇಳಿದರು. ಅಲ್ಲದೇ, ‘ಬೇಕಿದ್ದರೆ ವಾಶ್ ಮಾಡಿ ಕೊಡುವೆ’ ಎಂದು ಕೂಡ ಅವರು ಹೇಳಿದರು. ಜಗದೀಶ್​ ಹಾಗೂ ಹಂಸಾ ಅವರ ನಡುವಿನ ಸ್ನೇಹ-ಜಗಳ ಎಲ್ಲರಿಗೂ ಗೊಂದಲ ಮೂಡಿಸುವ ರೀತಿಯಲ್ಲಿ ಇದೆ. ಹಂಸಾ ಅವರು ಕ್ಯಾಪ್ಟನ್ ಆದಾಗ ಜಗದೀಶ್​ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಏಕವಚನದಲ್ಲಿ ಬೈಯ್ದುಕೊಳ್ಳುವ ಮಟ್ಟಕ್ಕೆ ಕಿತ್ತಾಡಿದ್ದರು. ಆದರೆ ಆ ಘಟನೆಗಳ ಬಳಿಕ ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಹೆಚ್ಚಾಯಿತು.

ಹಾಗಾದ್ರೆ ಈ ಲಿಪ್​ಸ್ಟಿಕ್ ಹತ್ತಿದ್ದು ಯಾವಾಗ? ಭಾನುವಾರದ ಸಂಚಿಕೆಯಲ್ಲಿ ‘ಅನಿಸುತಿದೆ ಯಾಕೋ ಇಂದು..’ ಹಾಡಿಗೆ ಹಂಸಾ ಮತ್ತು ಜಗದೀಶ್ ಅವರು ಡ್ಯಾನ್ಸ್​ ಮಾಡಿ ಎಲ್ಲರನ್ನೂ ರಂಜಿಸಿದ್ದರು. ಅವರಿಬ್ಬರ ಉತ್ಸಾಹಕ್ಕೆ ಸುದೀಪ್ ಕೂಡ ಭೇಷ್ ಎಂದಿದ್ದರು. ವೀಕೆಂಡ್ ಸಂಚಿಕೆ ಆದ್ದರಿಂದ ಹಂಸಾ ಅವರು ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದರು. ಖುಷಿಯಿಂದ ಡ್ಯಾನ್ಸ್ ಮಾಡುವಾಗ ಅವರ ಲಿಪ್​ಸ್ಟಿಕ್​ ಬಣ್ಣ ಜಗದೀಶ್ ಶರ್ಟ್​ಗೆ ಅಂಟಿತ್ತು ಅಷ್ಟೇ.

ಇಂಥ ಹಲವು ಘಟನೆಗಳಿಂದಾಗಿ ಜಗದೀಶ್ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗುತ್ತಿದೆ. ಅನೇಕ ಬಾರಿ ಅವರು ಬಿಗ್ ಬಾಸ್ ಮನೆಯ ನಿಯಮ ಮುರಿದಿದ್ದರು. ಬಿಗ್ ಬಾಸ್​ ಕಾರ್ಯಕ್ರಮದ ಬಗ್ಗೆಯೂ ಅವರು ಹಗುರಾಗಿ ಮಾತನಾಡಿದ್ದರು. ಹಾಗಿದ್ದರೂ ಕೂಡ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.

BIG BOSS

ತಮ್ಮದೇ ನಿರ್ಧಾರದಿಂದ ಜೋಕರ್‌ ಆದ ರಾಶಿಕಾ! ಅಷ್ಟಕ್ಕೂ ಆಗಿದ್ದೇನು?

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ರಾಶಿಕಾ ಅವರು ಕ್ಯಾಪ್ಟನ್‌ ಆಗಿದ್ದಾರೆ. ಆದರೆ ಇದನ್ನು ಕೆಲವರು ಒಪ್ಪಿಕೊಳ್ಳದೇ ಇರುವುದು ಒಂದು ಕಡೆಯಾದರೇ, ಟಾಸ್ಕ್‌ನಲ್ಲಿ ಮೋಸ ಆಗಿದೆ ಎಂದು ಅನೇಕರು ಹೇಳಿರುವುದು ಇನ್ನೊಂದು ಕಡೆ. ಇದನ್ನು ರಾಶಿಕಾ ಒಪ್ಪಿಕೊಂಡಿಲ್ಲ. ಈ ಮಧ್ಯೆ ಅವರು ಆಡಿದ ಒಂದು ಮಾತು ಅವರನ್ನೇ ಜೋಕರ್‌ ರೀತಿಯಲ್ಲಿ ನೋಡುವಂತೆ ಆಗಿದೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ.


ಬಿಗ್‌ಬಾಸ್‌ನ ಡಿಸೆಂಬರ್‌ 15ರ ಎಪಿಸೋಡ್‌ನಲ್ಲಿ ರಾಶಿಕಾ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಸೂರಜ್‌ ಹೆಸರು ತೆಗೆದುಕೊಂಡರು. ಆ ವೇಳೆ ಅವರು ಕೊಟ್ಟ ಕಾರಣವೇ ಚರ್ಚೆಗೆ ದಾರಿಯಾಗಿದೆ. ರಾಶಿಕಾ ಆಡಿದ ಮಾತಿನಿಂದ ಅವರು ಜೋಕರ್‌ ರೀತಿಯಲ್ಲಿ ಕಾಣಿಸಿದ್ದಾರೆ.

ರಾಶಿಕಾ ಅವರು ಸೂರಜ್‌ನ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡೋದಾಗಿ ಹೇಳಿದ್ದಾರೆ. ʼಕಳೆದ ವಾರ ಅವರು ಕ್ಯಾಪ್ಟನ್‌ ಆಗಬೇಕಿತ್ತು. ಆದರೆ, ಚೈತ್ರಾ ಮಾಡಿದ ತಪ್ಪಿನಿಂದ ಅವರಿಗೆ ಆ ಅವಕಾಶ ತಪ್ಪಿತು. ಹಾಗಾಗಿ ಈ ಬಾರಿ ಅವರನ್ನು ನಾನು ಆಯ್ಕೆ ಮಾಡುತ್ತಿದ್ದಾನೆʼ ಎಂದು ರಾಶಿಕಾ ಕಾರಣ ಕೊಟ್ಟಿದ್ದಾರೆ. ಇದನ್ನು ನೋಡಿದ ಅನೇಕರಿಗೆ ನಗು ಬಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಇದನ್ನೂ ಓದಿ: ರಕ್ಷಿತಾಳ ಸಣ್ಣ ಬುದ್ಧಿಯನ್ನು ಎಕ್ಸ್‌ಪೋಸ್‌ ಮಾಡಿದ ಧ್ರುವಂತ್‌; ಮೆಚ್ಚುಗೆ ಸೂಚಿಸಿದ ವೀಕ್ಷಕರು!

ಏಕೆಂದರೆ ಕಳೆದ ವಾರ ಸೂರಜ್‌ ಇದೇ ವಿಷಯವನ್ನು ಇಟ್ಟುಕೊಂಡು ರಾಶಿಕಾ ಬಳಿ ವಾದ ಮಾಡಿದ್ದರು. ಆಗ ರಾಶಿಕಾ, ‘ನಾನು ಆಡಿ ಕ್ಯಾಪ್ಟನ್‌ ಆಗಿರೋದು. ಎಲ್ಲಿಯೂ ತಪ್ಪು ನಡೆದಿಲ್ಲ’ ಎಂದು ತಮ್ಮನ್ನು ತಾವು ಸಮರ್ಥಿಸಿ, ಸೂರಜ್‌ ಮಾತನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಕೆಲವೇ ದಿನಗಳಲ್ಲಿ ನಿರ್ಧಾರ ಬದಲಾಗಿದೆ ಎಂಬುದು ಅನೇಕರಿಗೆ ಅಚ್ಚರಿ ತಂದಿದೆ. ಅನೇಕರು ರಾಶಿಕಾನ ಜೋಕರ್‌ ಎಂದಿದ್ದಾರೆ.

Continue Reading

BIG BOSS

ರಕ್ಷಿತಾಳ ಸಣ್ಣ ಬುದ್ಧಿಯನ್ನು ಎಕ್ಸ್‌ಪೋಸ್‌ ಮಾಡಿದ ಧ್ರುವಂತ್‌; ಮೆಚ್ಚುಗೆ ಸೂಚಿಸಿದ ವೀಕ್ಷಕರು!

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ಸೀಕ್ರೆಟ್ ರೂಂ ಟಾಸ್ಕ್‌ ನಡೆಯುತ್ತಿದೆ. ಧ್ರುವಂತ್‌ ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಈ ರೂಂನಲ್ಲಿ ಇಡಲಾಗಿದೆ. ಅಲ್ಲಿಯೂ ಇಬ್ಬರ ಮಧ್ಯೆ ಕಿರಿಕ್‌ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್‌ ರಕ್ಷಿತಾ ಶೆಟ್ಟಿಯ ಸಣ್ಣ ಬುದ್ಧಿಯನ್ನು ಎಕ್ಸ್‌ಪೋಸ್‌ ಮಾಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.


ಬಿಗ್‌ಬಾಸ್‌ ಆರಂಭದಲ್ಲಿ ರಕ್ಷಿತಾ ಶೆಟ್ಟಿ ಇದ್ದಿದ್ದೇ ಬೇರೆ, ಈಗ ಇರೋದೇ ಬೇರೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರು ಸಂಪೂರ್ಣವಾಗಿ ಬದಲಾದರು ಎಂಬ ಮಾತಿದೆ. ಅದೆಷ್ಟರ ಮಟ್ಟಿಗೆ ಎಂದರೆ, ಅವರು ಈಗ ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಈ ಬದಲಾವಣೆಯನ್ನು ಧ್ರುವಂತ್‌ ಅವರು ಸೂಕ್ಷ್ಮವಾಗಿ ಗಮನಿಸಿ, ಆ ಬಗ್ಗೆ ಮಾತನಾಡಿದ್ದಾರೆ.

ಮಾಳು ಅವರನ್ನು ಸೇವ್‌ ಮಾಡಿ, ಕಾವ್ಯಾ ಅವರನ್ನು ನಾಮಿನೇಟ್‌ ಮಾಡಬೇಕು ಎಂಬುದು ರಕ್ಷಿತಾ ಶೆಟ್ಟಿ ವಾದ ಆಗಿತ್ತು. ಆದರೆ, ಈ ವಾದವನ್ನು ಧ್ರುವಂತ್ ಒಪ್ಪಿಲ್ಲ. ಮಾಳುಗೆ ಹೋಲಿಸಿದರೆ ಕಾವ್ಯಾ ಸಮರ್ಥ ವ್ಯಕ್ತಿ. ಅವರನ್ನು ನಾಮಿನೇಟ್‌ ಮಾಡೋದು ಸರಿ ಅಲ್ಲ ಎಂದು ಧ್ರುವಂತ್‌ ವಾದ ಮಾಡಿದ್ದಾರೆ. ರಕ್ಷಿತಾ ಈ ರೀತಿ ಹೇಳಲು ಒಂದು ಕಾರಣ ಇದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಗಿಲ್ಲಿ ಹಾಗೂ ಕಾವ್ಯಾ ಒಟ್ಟಾಗಿ ಸಮಯ ಕಳೆಯುವುದನ್ನು ಕಂಡು ಕಾವ್ಯಾ ಬಗ್ಗೆ ರಕ್ಷಿತಾ ದ್ವೇಷ ಕಾರುತ್ತಿದ್ದಾರೆ ಎಂಬುದು ಕೆಲವರ ವಾದ. ಹಾಗೂ ಎದುರಿನವರು ಏನಾದರೂ ಹೇಳುವಾಗ ರಕ್ಷಿತಾ ಶೆಟ್ಟಿ ಓಡೋಡಿ ಹೋಗುತ್ತಾರೆ. ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. ಈ ವಿಷಯವನ್ನು ಧ್ರುವಂತ್‌ ಅವರು ಎತ್ತಿ ಹೇಳಿದ್ದಾರೆ.

ಇದನ್ನೂ ಓದಿ: ‘ಏನೋ ಟ್ವಿಸ್ಟ್‌ ಇದೆ’..ರಕ್ಷಿತಾ ಧ್ರುವಂತ್‌ ಬಗ್ಗೆ ರಘುಗೆ ಸಿಕ್ತು ಸುಳಿವು!

ರಕ್ಷಿತಾ ಶೆಟ್ಟಿ ನಿದ್ದೆ ಮಾಡುತ್ತಿದ್ದರು. ಆದರೆ ಅದನ್ನು ಅವರು ಒಪ್ಪಿಕೊಂಡಿಲ್ಲ. ಆ ವೇಳೆ ಧ್ರುವಂತ್‌, ನೀನು ಜನರನ್ನು ಮಂಗ ಮಾಡಬಹುದು ಆದರೆ, ಬಿಗ್‌ಬಾಸ್‌ನ ಅಲ್ಲ ಎಂದು ಹೇಳಿದರು. ಅವರ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

Continue Reading

BIG BOSS

‘ಏನೋ ಟ್ವಿಸ್ಟ್‌ ಇದೆ’..ರಕ್ಷಿತಾ ಧ್ರುವಂತ್‌ ಬಗ್ಗೆ ರಘುಗೆ ಸಿಕ್ತು ಸುಳಿವು!

Published

on

BBK12: ಬಿಗ್‌ಬಾಸ್ ಕನ್ನಡ ಸೀಸನ್‌ 12 ರಿಯಾಲಿಟಿ ಶೋನಲ್ಲಿ ಕಳೆದ ವಾರ ವೋಟಿಂಗ್‌ ಲೈನ್‌ ತೆರೆದಿರಲಿಲ್ಲ, ಹಾಗಾಗಿ ಯಾರೂ ಎಲಿಮಿನೇಟ್‌ ಆಗಲಿಲ್ಲ. ಆದರೆ, ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್‌ ಆದ ರೀತಿಯಲ್ಲಿ ತೋರಿಸಲಾಗಿದೆ. ಅವರಿಬ್ಬರನ್ನೂ ಸೀಕ್ರೆಟ್‌ ರೂಮ್‌ನಲ್ಲಿ ಇರಿಸಲಾಗಿದೆ. ಬಿಗ್‌ಬಾಸ್‌ ಮನೆಯ ಒಳಗಿನ ಸದಸ್ಯರಿಗೆ ಈ ವಿಷಯ ಗೊತ್ತಿಲ್ಲದ್ದಿದ್ರೂ ರಘುಗೆ ಈ ಬಗ್ಗೆ ಅನುಮಾನ ಮೂಡಿದೆ. ಅದನ್ನು ಅವರು ಗಿಲ್ಲಿ ಮತ್ತು ರಜತ್‌ ಎದುರು ಹೇಳಿಕೊಂಡಿದ್ದಾರೆ.


ಹೌದು, ಡಬಲ್‌ ಎಲಿಮಿನೇಷನ್‌ ಮಾಡಿದ್ದು ಮನೆಯ ಸ್ಪರ್ಧಿಗಳ ಜತೆಗೆ ವೀಕ್ಷಕರಿಗೂ ಅಚ್ಚರಿಯನ್ನೂ ಮೂಡಿಸಿತ್ತು. ಈ ಮೊದಲೇ ಮನೆಯಿಂದ ಹೊರ ಹೋಗಲು ಪ್ರಯತ್ನ ಪಡುತ್ತಿದ್ದ ಧ್ರುವಂತ್‌ ಎಲಿಮಿನೇಟ್‌ ಆಗುತ್ತಾರೆ ಎಂದು ಬಹುತೇಕರು ಊಹಿಸಿದ್ದರು. ಆದರೆ ರಕ್ಷಿತಾ ಶೆಟ್ಟಿ ಸಹ ಅವರ ಜತೆಗೆ ಎಲಿಮಿನೇಟ್‌ ಆಗುತ್ತಾರೆ ಎಂಬುದನ್ನು ಯಾರೂ ನಿರೀಕ್ಷಿಸಿಯೂ ಇರಲಿಲ್ಲ. ರಕ್ಷಿತಾ ಶೆಟ್ಟಿ ಫಿನಾಲೆ ತನಕ ಬರುವ ಸ್ಪರ್ಧಿ ಎಂದು ಮನೆಯಲ್ಲಿ ಬಹುತೇಕರ ಅಭಿಪ್ರಾಯ ಆಗಿತ್ತು. ಹಾಗಾಗಿ ಈ ಎಲಿಮಿನೇಷನ್‌ ಫೇಕ್‌ ಆಗಿರಬಹುದು ಎಂದು ರಘುಗೆ ಸಂಶಯ ಮೂಡಿದೆ.

ಇನ್ನೂ ಸೌಂಡ್‌ ಬಂದಿಲ್ಲ. ಏನೋ ಟ್ವಿಸ್ಟ್‌ ಇದೆ. ಪ್ರತಿ ಬಾರಿ ಈ ಸಮಯಕ್ಕೆ ತಕ್ಷಣ ಸೌಂಡ್‌ ಬರುತ್ತದೆ. ಬ್ಯಾಕ್‌ ಸ್ಟೇಜ್‌ನಿಂದ ಹೋಗಿ ಮಾತನಾಡಿಸುತ್ತಾರೆ. ಅವರ ವಿಟಿ ಹಾಕುತ್ತಾರೆ. ಜನರೆಲ್ಲ ಕೂಗಾಡುತ್ತಾರೆ. ಆದರೆ ಇವತ್ತು ಸ್ವಲ್ಪವೂ ಸೌಂಡ್‌ ಬಂದಿಲ್ಲ ಎಂದು ರಘು ಅವರು ಹೇಳಿದ್ದಾರೆ.

ರಘು ಮಾತು ಕೇಳಿದ ಮೇಲೆ ಗಿಲ್ಲಿಗೂ ಹೌದು ಅನಿಸುತ್ತಿದೆ. ಮಧ್ಯರಾತ್ರಿ ಅವರು ಬಂದು ನಮಗೆ ತಣ್ಣೀರು ಸುರಿಯುತ್ತಾರೆ ಎಂದು ಗಿಲ್ಲಿ ಹೇಳಿದ್ದಾರೆ. ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಹೋಗಿದ್ದಕ್ಕೆ ಹಲವರು ಬೇಸರ ಮಾಡಿಕೊಂಡಿದ್ದಾರೆ. ರಕ್ಷಿತಾ ವಾಪಸ್‌ ಬಂದಾಗ ಅವರೆಲ್ಲರೂ ಖುಷಿಪಡಲಿದ್ದಾರೆ. ಆದರೆ ಧ್ರುವಂತ್‌ ವಾಪಸ್‌ ಬರಬಾರದು ಎಂದು ರಜತ್‌ ಹೇಳಿದ್ದಾರೆ.

ಇದನ್ನೂ ಓದಿ: BBK12: ಟಾಸ್ಕ್‌ ಸೋಲುವ ತಂಡದ ನಾಯಕ ನಾಮಿನೇಟ್;‌ ಅಶ್ವಿನಿ- ಚೈತ್ರಾ ನಡುವೆ ಕಿತ್ತಾಟ!

ಸೀಕ್ರೆಟ್‌ ರೂಂನಲ್ಲಿ ಕುಳಿತಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್‌ ಅವರು ಎಲ್ಲವನ್ನೂ ಟಿವಿಯಲ್ಲಿ ನೋಡುತ್ತಿದ್ದಾರೆ. ಅಶ್ವಿನಿ ಗೌಡ, ರಜತ್, ರಘು, ಗಿಲ್ಲಿ ಮುಂತಾದವರು ತಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನ ಆಡಿದ್ದು ಕೇಳಿ ರಕ್ಷಿತಾ ಶೆಟ್ಟಿ ಅವರು ಎಮೋಷನಲ್‌ ಆಗಿದ್ದಾರೆ. ಆದರೆ ಧ್ರುವಂತ್‌ ಅವರು ತಮ್ಮ ಬಗ್ಗೆ ನೆಗೆಟಿವ್‌ ಮಾತುಗಳೇ ಕೇಳಿಸಿಕೊಂಡು ಕೋಪ ಮಾಡಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page