ಮಂಗಳೂರು/ಮುಂಬೈ : ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ನಟಿ ಊರ್ವಶಿ ರೌಟೇಲಾ. ಇತ್ತೀಚೆಗೆ ಅವರ ಬಾತ್ ರೂಮ್ ವೀಡಿಯೋವೊಂದು ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ, ಊರ್ವಶಿ ರೌಟೇಲಾ ಅವರು ಬಾತ್ರೂಂಗೆ ಒಳಗೆ ಬರುವುದನ್ನು ಕಾಣಬಹುದು. ಕೈಯಲ್ಲಿದ್ದ ಟವೆಲ್ ನ್ನು ಹ್ಯಾಂಗರ್ ಗೆ ಹಾಕುತ್ತಾರೆ. ಬಳಿಕ ಸ್ನಾನ ಮಾಡುವ ಸಲುವಾಗಿ ಬಟ್ಟೆ ಬಿಚ್ಚಲು ತೊಡುಗುತ್ತಾರೆ. ಅಲ್ಲಿಗೆ ವೀಡಿಯೋ ಕಟ್ ಆಗುತ್ತದೆ. ವೀಡಿಯೋ ನೋಡಿದರೆ, ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದಂತಿತ್ತು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು.
ಊರ್ವಶಿ ರೌಟೇಲಾ ಪ್ರಚಾರದಲ್ಲಿ ಇರಲು ಬಯಸುವವರಾಗಿದ್ದು, ಲೀಕ್ ಆಗಿದ್ದ ವೀಡಿಯೋ ಕೂಡ ಪ್ರಚಾರದ ಭಾಗವೇ ಆಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿತ್ತು. ಏಕೆಂದರೆ, ಅವರು ಸರಿಯಾಗಿ ಬಟ್ಟೆ ತೆಗೆಯುವ ವೇಳೆಗೆ ವೀಡಿಯೋ ಕಟ್ ಆಗಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಮಾಡಿದ್ದರು. ಇನ್ನು ಇದರಲ್ಲಿ ಊವರ್ಶಿ ರೌಟೇಲಾ ಕತ್ತಲ್ಲಿ ಕರಿಮಣಿ ಸರವೂ ಇತ್ತು. ಹಾಗಾಗಿ ಈ ವೀಡಿಯೋ ಫೇಕ್ ಇರಬಹುದಾ ಎಂಬ ಪ್ರಶ್ನೆಯೂ ಇತ್ತು. ಆದರೆ, ಈ ಅನುಮಾನಗಳನ್ನು ಸ್ವತಃ ಊರ್ವಶಿ ಬಗೆ ಹರಿಸಿದ್ದಾರೆ.
ನಟಿ ಊರ್ವಶಿ ರೌಟೇಲಾ ಬಾತ್ ರೂಂ ವೀಡಿಯೋ ಲೀಕ್; ಸೋಶಿಯಲ್ ಮೀಡಿಯಾದಲ್ಲಿ ಸಂಚಲನ
ನಟಿ ಹೇಳಿದ್ದೇನು?
ವೀಡಿಯೋ ವೈರಲ್ ಆಗಿರುವ ಬಗ್ಗೆ ನಟಿ ಊರ್ವಶಿ ರೌಟೇಲಾ ಮಾತನಾಡಿದ್ದಾರೆ. ವೈರಲ್ ಆಗಿರುವ ದೃಶ್ಯ ‘ಘುಸ್ಪೈಥಿಯಾ’ ಚಿತ್ರದ್ದು ಎಂದಿದ್ದಾರೆ. ವೀಡಿಯೋ ಕ್ಲಿಪ್ ವೈರಲ್ ಆದ ದಿನ ನಿಜಕ್ಕೂ ನನಗೆ ಬಹಳ ಬೇಸರವಾಯಿತು. ಖಂಡಿತ ಅದು ನನ್ನ ಪರ್ಸನಲ್ ವೀಡಿಯೋ ಅಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ದೃಶ್ಯವಲ್ಲ. ಇದು ‘ಘುಸ್ಪೈಥಿಯಾ’ ಚಿತ್ರದ ದೃಶ್ಯ ಎಂದು ಹೇಳಿದ್ದಾರೆ.
ಊರ್ವಶಿ ರೌಟೇಲಾ ʻಸಿಂಗ್ ಸಾಬ್ ದಿ ಗ್ರೇಟ್ʼ, ʻಗ್ರೇಟ್ ಗ್ರ್ಯಾಂಡ್ ಮಸ್ತಿʼ, ಮತ್ತು ʻಹೇಟ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದರ್ಶನ್ ಜೊತೆ ‘ಮಿ.ಐರಾವತ’ದಲ್ಲಿ ಬಣ್ಣ ಹಚ್ಚಿದ್ದರು.
ಇದನ್ನೂ ಓದಿ : ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ಈ ದಾದಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳ..!?
ಮೆಗಾ ಸ್ಟಾರ್ ಚಿರಂಜೀವಿ ನಟನೆಯ, ‘ವಾಲ್ತೇರು ವೀರಯ್ಯ’ದಲ್ಲಿ ಐಟಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿಯೂ ಮೈ ಡಿಯರ್ ಮಾರ್ಕಂಡೇಯ ಎಂದು ಕುಣಿದಿದ್ದರು. ಸದ್ಯ ಊವರ್ಶಿ ‘ಘುಸ್ಪೈಥಿಯಾ’, ‘NBK109’, ‘ಬ್ಲ್ಯಾಕ್ ರೋಸ್’, ‘ವೆಲ್‌ಕಮ್ ಟು ದಿನ ಜಂಗಲ್’ ಹಾಗೂ ‘ಕಸೂರ್-2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಊರ್ವಶಿ ಹಾಗೂ ಕ್ರಿಕೆಟಿಗ ರಿಷಭ್ ಪಂತ್ ಡೇಟಿಂಗ್ ಸುದ್ದಿ ಕೆಲ ವರ್ಷಗಳಿಂದ ಹರಿದಾಡುತ್ತಿದೆ.