ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ಜ.16 ರಂದು ದಾ*ಳಿ ನಡೆದಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ನಡೆದ ಹ*ಲ್ಲೆ ಪ್ರಕರಣದ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದ್ದವು. ಭದ್ರತೆಯ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದ್ದವು. ಅದರಲ್ಲಿ ಪ್ರಮುಖವಾಗಿ ಹ*ಲ್ಲೆಗೊಳಗಾದ ಸೈಫ್‌ನನ್ನುಆಟೋದಲ್ಲಿ ಆಸ್ಪತ್ರೆಯಲ್ಲಿ ಸಾಗಿಸಿದ್ಯಾಕೆ? ಐಷಾರಾಮಿ ಕಾರುಗಳ ಒಡೆಯನಾಗಿರುವ ಸೈಫ್ ಯಾಕೆ ಆಟೋದಲ್ಲಿ ಹೋದ್ರು? ಅನ್ನೋದು. ಇದಕ್ಕೆಲ್ಲ ಇದೀಗ ಸೈಫ್ ಉತ್ತರ ನೀಡಿದ್ದಾರೆ.

ದಾ*ಳಿಯ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಸೈಫ್ ಮಾತಾನಾಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹ*ಲ್ಲೆಗೊಳಗಾದ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.
ಕರೀನಾ ಊಟಕ್ಕಾಗಿ ಹೊರಗೆ ಹೋಗಿದ್ದು, ನನಗೆ ಬೆಳಗ್ಗೆ ಸ್ವಲ್ಪ ಮುಖ್ಯವಾದ ಕೆಲಸವಿದ್ದ ಕಾರಣ ಮನೆಯಲ್ಲೇ ಇದ್ದೆ. ಊಟ ಮುಗಿಸಿ ಕರೀನಾ ಮನೆಗೆ ವಾಪಾಸಾಗಿದ್ದಳು. ನಾವು ಸ್ವಲ್ಪ ಹೊತ್ತು ಮಾತಾಡಿ ಮಲಗಿದೆವು. ಅಷ್ಟರಲ್ಲಿ ಮನೆಯ ಸಹಾಯಕನೊಬ್ಬ ಯಾರೋ ಒಬ್ಬ ಮನೆಗೆ ನುಸುಳಿರುವ ಬಗ್ಗೆ ತಿಳಿಸಿದ. ಆತ ಜೆಹ್‌ನ ಕೋಣೆಯಲ್ಲಿದ್ದು, ಚಾ*ಕು ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಹೇಳಿದ.
ತಕ್ಷಣ ನಾವು ಅಲ್ಲಿಗೆ ಓಡಿದೆವು. ಜೆಹ್‌ನ ಹಾಸಿಗೆಯ ಮೇಲಿದ್ದ ಅವನನ್ನು ಎಳೆದೆ. ಬಳಿಕ ಇಬ್ಬರ ನಡುವೆ ಫೈ*ಟ್ ನಡೆಯಿತು. ಈ ವೇಳೆ ಆತ ನನ್ನ ಬೆನ್ನಿಗೆ ಬ*ಡಿಯುತ್ತಿದ್ದ. ಕುತ್ತಿಗೆ ಸೀ*ಳಲು ಯತ್ನಿಸಿದಾಗ ನಾನು ತಡೆದೆ. ನನ್ನ ಅಂಗೈ, ಮಣಿಕಟ್ಟು ಮತ್ತು ತೋಳಿಗೆ ಆತ ಚಾ*ಕುವಿನಿಂದ ಚು*ಚ್ಚಿದ. ಆತ ಎರಡೂ ಕೈಗಳಿಂದ ದಾ*ಳಿ ನಡೆಸುತ್ತಿದ್ದ. ಈ ಸಂದರ್ಭ ಮನೆ ಕೆಲಸಗಾರ್ತಿ ಗೀತಾ ಅವನನ್ನು ನನ್ನಿಂದ ಎಳೆದು ದೂರ ತಳ್ಳಿದಳು. ಬಳಿಕ ನಾವಿಬ್ಬರೂ ಬಾಗಿಲು ಮುಚ್ಚಿದೆವು. ಆ ಸಮಯದಲ್ಲಿ ನಾನು ರ*ಕ್ತದಲ್ಲಿ ಮುಳುಗಿದ್ದೆ. ಬಲಗಾಲಿನ ಸಂವೇದನೆ ಕಳೆದುಕೊಂಡಿದ್ದೆ. ಯಾಕೆಂದರೆ, ಆತನ ಬೆನ್ನುಮೂಳೆಗೆ ಚಾ*ಕುವಿನಿಂದ ಇರಿದಿದ್ದ. ಆತ ಬಂದ ದಾರಿಯಿಂದ ತಪ್ಪಿಸಿಕೊಂಡ. ಕರೀನಾ ರಿಕ್ಷಾಗಾಗಿ ಕೂಗಿದಳು. ರಿಕ್ಷಾದವನು ಬಂದು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದ ಎಂದಿದ್ದಾರೆ.
ಶಾಕ್ ಕೊಟ್ಟ ತೈಮೂರ್ ಪ್ರಶ್ನೆ!
ಬೆನ್ನಿನಲ್ಲಿ ಏನೋ ತೊಂದರೆ ಇರುವಂತೆ ನನಗೆ ಅನಿಸಿತ್ತು. ಇದನ್ನು ಕರೀನಾಳಲ್ಲೂ ಹೇಳಿದೆ. ಅದಕ್ಕವಳು ಆಸ್ಪತ್ರೆಗೆ ಹೋಗು. ನಾನು ಸಹೋದರಿಯ ಮನೆಗೆ ಹೋಗುತ್ತೇನೆ ಎಂದಳು. ನಾನು ಚೆನ್ನಾಗಿದ್ದೇನೆ, ಸಾ*ಯುವುದಿಲ್ಲ ಎಂದು ಆಕೆಯನ್ನು ಸಂತೈಸಿದೆ. ಆಗ ಮಗ ತೈಮೂರ್, ನೀನು ಸಾ*ಯುತ್ತೀಯಾ ಎಂದು ಕೇಳಿದ. ನಾನು ‘ಇಲ್ಲ’ ಎಂದು ಹೇಳಿದೆ.
ಇದನ್ನೂ ಓದಿ : ತಾನು ಪ್ರೀತಿಸುವ ಪುರುಷನ ಬಳಿ ಮಾತ್ರ ಮಹಿಳೆ ಈ ರೀತಿ ಇರುತ್ತಾಳೆ..
ಆಟೋದಲ್ಲಿ ಹೋಗಿದ್ಯಾಕೆ?
ಸೈಫ್ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ, ಹ*ಲ್ಲೆಗೊಳಗಾದಾಗ ಆಟೋದಲ್ಲಿ ಯಾಕೆ ಹೋದರು ಎಂಬುದು ಬಹುದೊಡ್ಡ ಪ್ರಶ್ನೆ. ಇದಕ್ಕೂ ಸೈಫ್ ಉತ್ತರಿಸಿದ್ದಾರೆ. ರಾತ್ರಿಯಿಡೀ ಯಾರೂ ಉಳಿಯುವುದಿಲ್ಲ. ಎಲ್ಲರಿಗೂ ಮನೆ ಇರುತ್ತೆ ಅಲ್ವಾ? ಅವರು ಮನೆಗೆ ಹೋಗುತ್ತಾರೆ. ನಮ್ಮ ಮನೆಯಲ್ಲಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಅವರು ಚಾಲಕರಲ್ಲ. ರಾತ್ರಿ ಹೊರಗೆ ಹೋಗುವುದಿದ್ದರೆ ಅಥವಾ ಏನಾದರೂ ಅಗತ್ಯವಿದ್ದರೆ ಚಾಲಕರನ್ನು ಉಳಿದುಕೊಳ್ಳಲು ಹೇಳುವುದು. ಆದರೆ, ಅಂದು ಅಗತ್ಯವಿರಲಿಲ್ಲ. ಅವತ್ತು ಕಾರಿನ ಕೀ ಸಿಕ್ಕಿದ್ದರೆ ನಾನೇ ಕಾರು ಓಡಿಸುತ್ತಿದ್ದೆ. ಅದೃಷ್ಟವಶಾತ್ ನಾನು ಹಾಗೆ ಮಾಡಲಿಲ್ಲ. ಏಕೆಂದರೆ, ನನ್ನ ಬೆನ್ನನ್ನು ಹೆಚ್ಚು ಅಲುಗಾಡಿಸಬಾರದಿತ್ತು. ಕರೆ ಮಾಡಿ ಡ್ರೈವರ್‌ನ್ನು ಕರೆಯಬಹುದಿತ್ತು. ಆದರೆ, ಆತ ಅಲ್ಲಿಗೆ ಬರಲು ಸಮಯವಾಗುತ್ತದೆ ಎಂದು ತಿಳಿದು ಬೇಗನೆ ಆಸ್ಪತ್ರೆಗೆ ಹೋಗುವ ಉದ್ದೇಶದಿಂದ ಆಟೋದಲ್ಲಿ ಹೋದೆ ಎಂದಿದ್ದಾರೆ.