Connect with us

BANTWAL

Bantwala: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

Published

on

ಕೊಲೆ ಯತ್ನ, ದರೋಡೆ, ಕಳ್ಳತನ ಸಹಿತ ವಿವಿಧ ಪ್ರಕರಣಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

ಬಂಟ್ವಾಳ: ಕೊಲೆ ಯತ್ನ, ದರೋಡೆ, ಕಳ್ಳತನ ಸಹಿತ ವಿವಿಧ ಪ್ರಕರಣಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ  ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಜೀಪ ಮುನ್ನೂರು ಗ್ರಾಮದ ಪೆರುವ ನಿವಾಸಿ ಇಬ್ರಾಹಿಂ ಅವರ ಮಗ ಉಮ್ಮರ್ ಫಾರೂಕ್ ಬಂಧಿತ ಆರೋಪಿಯಾಗಿದ್ದಾನೆ.

ಸುಮಾರು 17 ಪ್ರಕರಣಗಳಲ್ಲಿ ಉಮ್ಮರ್ ಫಾರೂಕ್ ಆರೋಪಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಈತನ ವಿರುದ್ಧ ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ, ಬಜಪೆ,ಕೋಣಾಜೆ, ಬರ್ಕೆ, ವಿಟ್ಲ, ಕಡಬ ಹೀಗೆ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ ಈತನ ವಿರುದ್ಧ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಈತ ಮಾಣಿ ಪರಿಸರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದರು.

ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಗಣೇಶ್, ಮೋಹನ್ ಅವರು ಕಾರ್ಯಚರಣೆ ನಡೆಸಿ ಮಾಣಿಯಲ್ಲಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

BANTWAL

ದೀಪಿಕಾ ಪ್ರೌಢಶಾಲೆ : ವಜ್ರಮಹೋತ್ಸವದ ಬೆನ್ನಲ್ಲೇ ಹಳೆ ವಿದ್ಯಾರ್ಥಿಗಳ ಪುನರ್ಮಿಲನ

Published

on

ಬಂಟ್ವಾಳ : ದೀಪಿಕಾ ಪ್ರೌಡಶಾಲೆಯ ವಜ್ರಮಹೋತ್ಸವ ಡಿಸೆಂಬರ್ 14-15, 2024 ರಂದು ಅದ್ದೂರಿಯಾಗಿ ನಡೆದಿದ್ದು, ಆ ಸವಿ ನೆನಪುಗಳು ಮಾಸುವ ಮುನ್ನವೇ 1974 ರಿಂದ 1977 ರ ಅವಧಿಯಲ್ಲಿ ತೇರ್ಗಡೆ ಹೊಂದಿದ ಸಹಪಾಠಿಗಳ ಪುನರ್ಮಿಲನವನ್ನು 2025ರ ಫ಼ೆಬ್ರವರಿ 5 ರಂದು ಬಹಳ ಅದ್ದೂರಿಯಾಗಿ ಬಿಸಿರೋಡಿನ ಕಳ್ಳಿಗೆ ಕೈಕಂಬದಲ್ಲಿರುವ ಸೂರ್ಯವಂಶ ಸಭಾಂಗಣದಲ್ಲಿ ನೆರವೇರಿಸಲಾಯಿತು.

1977ನೇ ಸಾಲಿನಲ್ಲಿ 52 ಮಕ್ಕಳು ತೇರ್ಗಡೆ ಹೊಂದಿದ್ದರು. 48 ವರುಷಗಳ ಸುದೀರ್ಘ ಅಂತರದಲ್ಲಿ ಜೊತೆಗೊಳ್ಳುವ ಆಶಯದೊಂದಿಗೆ ಪ್ರೋ. ಡಾ. ಗೋವರ್ಧನ್, ಧರ್ಮಪಾಲ್, ಜಿಯೋ ಡಿ ಸಿಲ್ವ ಇವರ ನೇತ್ರತ್ವದಲ್ಲಿ ಪ್ರಾಥಮಿಕ ರೂಪುರೇಷೆಗಳನ್ನು ಮಾಡಲಾಗಿತ್ತು. ಅಂದಿನ 52 ವಿಧ್ಯಾರ್ಥಿಗಳಲ್ಲಿ 11 ಮಂದಿ ದೈವಾಧೀನರಾಗಿದ್ದು, ಉಳಿದ ಎಲ್ಲಾ 41 ವ್ಯಕ್ತಿಗಳನ್ನು ಸಂಪರ್ಕಿಸಿದ್ದು, 29 ವ್ಯಕ್ತಿಗಳು ಪುನರ್ಮಿಲನ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. 1974 ರಿಂದ 1977 ರ ಅವಧಿಯಲ್ಲಿ ಶಿಕ್ಷಣ ನೀಡಿದ ಗುರುಗಳನ್ನೂ ಅಹ್ವಾನಿಸಿ ಪ್ರಸಕ್ತ ಸಾಲಿನ ವಿಧ್ಯಾರ್ಥಿಗಳ ಬೆಳವಣಿಗೆ ಅವರುಗಳ ಮಹತ್ತರ ಕೊಡುಗೆಯನ್ನು ಗುರುತಿಸಲಾಯಿತು. ಅತ್ಯಂತ ಹುರುಪಿನಿಂದ ಅಹ್ವಾನಿಸಿದ ಎಲ್ಲಾ ಗುರುಗಳು ಉಪಸ್ಥತರಿದ್ದರು. ಗುರುಗಳಾದ ವಿಲಿಯಂ ಆಂಡ್ರ್ಯು ಪಿಂಟೊ, ಫ಼್ಹೆಲಿಕ್ಸ್ ವಾಸ್, ಸೀತಾರಾಮ್ ಭಟ್ಟ್, ಮಹಾಭಲೇಶ್ವರ ಹೆಬ್ಬಾರ್, ನಾರಾಯಣ ಹೆಬ್ಬಾರ್, ವೆಂಕಟ್ ರಾವ್, ರುಕ್ಮಯ ಗೌಡ ಹಾಗೂ ಪ್ರಲ್ಹಾದ್ ಶೆಟ್ಟಿ ಇವರುಗಳ ಉಪಸ್ಥಿತಿ ಹಾಗೂ ಸ್ಪಂದನೆ, ಹಿತನುಡಿಗಳು ಹಾಗೂ ಸಂದೇಶ ಹ್ರದಯ ತಟ್ಟಿದ ಸಾಂತ್ವನ ನೀಡಿತು. ಇಲ್ಲಾ ಗುರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ಜಿಯೋ ಡಿಸಿಲ್ವ ಕಾರ್ಯಕ್ರಮಕ್ಕೆ ಔಪಚರಿಕ ಸ್ವಾಗತ ಕೋರಿ ಕಾರ್ಯಕ್ರಮ ನೀರೂಪಿಸಿದರು. ಫ್ರೊ. ಡಾ. ಗೋವರ್ಧನ್ ರಾವ್ ಪ್ರಾಸ್ತವಿಕ ನುಡಿಗಳಿಂದ ಸಂಭ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಗುರುಗಳಾದ ವಿಲಿಯಂ ಆಂಡ್ರ್ಯು ಪಿಂಟೊ ಅಧ್ಯಕ್ಷತೆ ವಹಿಸಿ, ಕೇಕ್ ಕತ್ತರಿಸಿ ಹಳೇ ಬೇರಿಗೆ ಹೊಸ ಚಿಗುರಿನ ಉಲ್ಲಾಸ ನೀಡಿದರು. ಶ್ರೀಯುತ ಧರ್ಮಪಾಲ್ ಇವರು ಪ್ರಧಾನ ಭಾಷಣ ಮಾಡಿ ಎಲ್ಲರ ಮನ ಮುಟ್ಟಿದರು. ಪ್ರತೀ ಯೋರ್ವರೂ ತಮ್ಮ ಸಿಹಿ-ಕಹಿ ಅನುಭವಗಳನ್ನು ಹಂಚಿ ಕೆಲವೊಂದು ಮುಖಗಳಲ್ಲಿ ನಗು, ಕೆಲವೋಂದು ಕಣ್ಣಾಂಚಿನಲ್ಲಿ ತೇವ, ಮಾಗಿದ ನೆನಪುಗಳ ಅಲೆಗಳಲ್ಲಿ ತೇಲಾಡಿದ ಅನುಭವಗಳು ಇಂತಹ ಪುನರ್ಮಿಲನ ಸಾರ್ಥಕಯೆನಿಸಿತು. ಹಾಜಾರಿದ್ದ ಹಳೆ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಶಾಲು ನೀಡಿ ಗೌರವಿಸಲಾಯಿತು. ಅಚ್ಚುಗಟ್ಟಾದ ಕಾರ್ಯಕ್ರಮ ಭೋಜನದೊಂದಿಗೆ ಮುಕ್ತಾಯವಾಯಿತು.

Continue Reading

BANTWAL

ತುಂಬೆ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೇರಿದ ಲಾರಿ

Published

on

ಬಂಟ್ವಾಳ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೆ ಲಾರಿ ಹತ್ತಿ ಸುಮಾರು 100 ಮೀ ನಷ್ಟು ಚಲಿಸಿ ನಿಂತಿದ್ದು, ಬಳಿಕ ಡ್ರೈವರ್ ಸೀಟಿನಲ್ಲಿ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ರಾ.ಹೆ.75ರ ತುಂಬೆ ಸಮೀಪ ನಡೆದಿದೆ.

ಲಾರಿ ಚಾಲಕನನ್ನು ಕೂಡಲೇ ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ 7.45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಡಿವೈಡರ್ ಮೇಲೆ ಹಾಕಿದ್ದ ರಸ್ತೆ ಸೂಚಕಾ ಫಲಕಕ್ಕೆ ಹಾನಿಯಾಗುವುದು ಬಿಟ್ಟರೆ ಬೇರೆ ಯಾವೂದೇ ರೀತಿಯ ತೊಂದರೆ ಆಗಲಿಲ್ಲ.

ಲಾರಿಯು ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಿಸುತ್ತಿತ್ತು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

Ancient Mangaluru

ಚಿಕಿತ್ಸೆ ಫಲಕಾರಿಯಾಗದೆ ಯುವ ಪೊಲೀಸ್ ಸಿಬ್ಬಂದಿ ನಿಧನ

Published

on

ಬಂಟ್ವಾಳ : ತೀವ್ರ ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೊಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ (ಫೆ.11) ನಡೆದಿದೆ.

ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ (26) ಮೃತಪಟ್ಟ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವಿವಾಹಿತರಾಗಿದ್ದ ಅಭಿಷೇಕ್ ಅವರು 2020ರಲ್ಲಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ಎಚ್.ಸಿ.ಯಾಗಿ ನೇಮಕಗೊಂಡಿದ್ದರು. ಆ ಬಳಿಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಕಳೆದ ಒಂದು ವರ್ಷದ ಹಿಂದೆ ಬೆನ್ನುಮೂಳೆಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಯಾನ್ಸರ್ ಕಂಡು ಬಂದಿತ್ತು.

ಇದನ್ನೂ ಓದಿ: ಶಾಲಾ ಬಸ್ ಸೀಟ್‌ಗಾಗಿ ನಡೆದ ಜಗಳ ಬಾಲಕನ ಸಾವಿನಲ್ಲಿ ಅಂತ್ಯ

ಆ ಬಳಿಕ ಸುಮಾರು 8 ತಿಂಗಳಿನಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ. ಅಭಿಷೇಕ್ ಅವರ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ನಗರದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page