Connect with us

BANTWAL

ತ್ರಿವರ್ಣ ಬೆಳಕಿನಲ್ಲಿ ಜಗಮಗಿಸುತ್ತಿದೆ ತುಂಬೆ ಡ್ಯಾಂ…

Published

on

ಬಂಟ್ವಾಳ: ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಅಣೆಕಟ್ಟನ್ನು ದೇಶದ ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಪ್ರಯುಕ್ತ ತ್ರಿವರ್ಣ ಬೆಳಕಿನ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.


ಮಂಗಳೂರು ಮಹಾನಗರ ಪಾಲಿಕಾ ಅಧೀನದಲ್ಲಿ ಇರುವ ಈ ಅಣೆಕಟ್ಟು ರಾತ್ರಿ ವೇಳೆ ಜಗಮಗಿಸುತ್ತಿದೆ.

 

ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಮುತುವರ್ಜಿಯಲ್ಲಿ ಈ ಡ್ಯಾಮ್‌ಗೆ ರಾಷ್ಟ್ರಧ್ವಜದ ಬಣ್ಣದ ಬೆಳಕನ್ನು ನೀಡಲಾಗಿದ್ದು ಆಕರ್ಷಕವಾಗಿ ಕಂಗೊಳಿಸುತ್ತಿದೆ.

ಸಾರ್ವಜನಿಕರು ಅಗಸ್ಟ್ 13 ರಿಂದ ಅಗಸ್ಟ್ 15 ರವರೆಗೆ ಬಂಟವಾಳ ಬಂಟರ ಭವನದ ಕೆಳ‌ಅಂತಸ್ತಿನಿಂದ ಸಂಜೆ 6.00 ರಿಂದ 9.00 ರವರೆಗೆ ವೀಕ್ಷಣೆ ಮಾಡಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ತಿಳಿಸಿದ್ದಾರೆ.

BANTWAL

ಬಂಟ್ವಾಳ: ಕಾಂಗ್ರೆಸ್ ನಾಯಕನೊರ್ವನ ಕಾಲಿಗೆ ಗುಂಡೇಟು.!

Published

on

ಬಂಟ್ವಾಳ: ಗುಂಡೇಟಿನಿಂದ ಕಾಂಗ್ರೆಸ್ ಮುಖಂಡರೊಬ್ಬರು ಗಾಯ ಗೊಂಡಿದ್ದಾರೆ. ಇಂಟಕ್ ನಲ್ಲಿ ಸಕ್ರೀಯವಾಗಿದ್ದ ಚಿತ್ತರಂಜನ್ ಶೆಟ್ಟಿ ಗಾಯಗೊಂಡವರಾಗಿದ್ದಾರೆ.

ಬಂಟ್ವಾಳ ‌ತಾಲೂಕಿನ‌ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಅನಂತಾಡಿ ಎಂಬಲ್ಲಿ ಗುಂಡು ಹಾರಿದ್ದು, ಅಸಲಿಗೆ ಚಿತ್ತರಂಜನ್ ಶೆಟ್ಟಿ ಅವರ ಕಿಸೆಯಲ್ಲಿದ್ದ ಪಿಸ್ತೂಲ್ ನಿಂದಲೇ ಈ ಫೈರಿಂಗ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಸ್ವಂತ ಭದ್ರತೆಗಾಗಿ ಇರಿಸಿಕೊಂಡಿದ್ದ ಪಿಸ್ತೂಲ್ ಸರಿಯಾಗಿ ಲಾಕ್ ಮಾಡದ ಕಾರಣ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು. ಗಾಯಗೊಂಡ ಚಿತ್ತರಂಜನ್ ಶೆಟ್ಟಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Continue Reading

BANTWAL

ಬಸ್ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು

Published

on

ಬಂಟ್ವಾಳ: ಸರ್ಕಾರಿ ಬಸ್‌ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಅಂದಾಜು 10.08 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3000 ರೂಪಾಯಿ ನಗದು ಕಳ್ಳತನವಾಗಿರುವ ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯ ತವರು ಮನೆಯಾದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ್‌ಗೆ ಖಾಸಗಿ ಕುಟುಂಬದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಿವಾಸಿ 68 ವರ್ಷದ ರಾಜಗೋಪಾಲ್ ಕಾರಂತ್ ಎಂಬವರು ಈ ಪ್ರಕರಣ ಸಂಬಂಧ ದೂರು ನೀಡಿದ್ದಾರೆ. ಶನಿವಾರ (ಫೆ. 1) ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಪತ್ನಿ ಮತ್ತು ಅಳಿಯನೊಂದಿಗೆ ಮನೆಯಿಂದ ಚಿನ್ನವನ್ನು ಬಾಕ್ಸನಲ್ಲಿ ಇಟ್ಟುಕೊಂಡು, ಜೊತೆಯಲ್ಲಿ 3000 ರೂ ಹಣವನ್ನು ತಮ್ಮ ಲಗೇಜು ಬ್ಯಾಗ್ ನಲ್ಲಿರಿಸಿ ಹೊರಟಿದ್ದಾರೆ.

 

ಇದನ್ನೂ ಓದಿ : ಕೋಟಿಗಟ್ಟಲೆ ನೀಡಿ ‘ಮಹಾಮಂಡಲೇಶ್ವರಿ’ ಪಟ್ಟ ಪಡೆದುಕೊಂಡಿರುವ ನಟಿ ವಿರುದ್ಧ ಆಕ್ರೋಶ

 

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಕುಣಿಗಲ್ ಬಳಿ ಬಸ್ ನಿಂತಾದ್ದು, ರಾಜಗೋಪಾಲನ ಹೆಂಡತಿ ಮತ್ತು ಅಳಿಯ ಸದ್ರಿ ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗುಗಳನ್ನು ಬಸ್ಸಿನಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿದ್ದರೆ. ನಿನ್ನೆ (ಫೆ. 2) ಕಾರಿಂಜಾ ಕ್ರಾಸ್ ತಲುಪಿಸ ವೇಳೆ ಬ್ಯಾಗ್ ತೆರೆದಾಗ 144 ಗ್ರಾಂ ಚಿನ್ನ ಮತ್ತು ನಗದು ನಾಪತ್ತೆಯಾಗಿರುವುದು ತಿಳಿಯಿತು. ಬಸ್ಸಿನ ಒಳಗೆ ಅಥವಾ ಕುಣಿಗಲ್‌ನ ಹೋಟೆಲ್ ಬಳಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತಪಡಿಸಿ ರಾಜಗೋಪಾಲ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಐಪಿಸಿ ಕಲಂ 303(2) ಮತ್ತು 305(ಬಿ) (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ಸಂಖ್ಯೆ 09/ ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

Continue Reading

BANTWAL

ಬಂಟ್ವಾಳ: ತರಕಾರಿ ಅಂಗಡಿಯಲ್ಲಿ ಕಳ್ಳತನ

Published

on

ಬಂಟ್ವಾಳ: ಚಂದ್ರಿಕಾ ತರಕಾರಿ ಅಂಗಡಿಯಲ್ಲಿ ಕಳ್ಳರು ನುಗ್ಗಿ ನಗದು ದೋಚಿಕೊಂಡು ಹೋದ ಘಟನೆ ಜ.31 ರಂದು ಮೆಲ್ಕಾರ್‌ನಲ್ಲಿ ನಡೆದಿದೆ.

ಮಹಮ್ಮದ್‌ ಶರೀಫ್‌ ಎಂಬುವವರ ಮಾಲಕತ್ವದ ತರಕಾರಿ ಅಂಗಡಿ ಇದಾಗಿದ್ದು, ಕಳ್ಳರು ಮಧ್ಯರಾತ್ರಿ ಬೀಗ ಮುರಿದು ಅಂಗಡಿಯೊಳಗೆ ನುಗ್ಗಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾಗಿರುವ ಶರೀಫ್‌ ಅವರು ಸರಕಾರಿ ಶಾಲೆಯ ಅಭಿವೃದ್ಧಿಗೆಂದು ಕಾಣಿಕೆ ಹುಂಡಿಯಲ್ಲಿ ತೆಗೆದಿಟ್ಟಿದ್ದ 5 ಸಾವಿರಕ್ಕೂ ಅಧಿಕ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page