Connect with us

ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ತಹಶೀಲ್ದಾರ್ ವಶಕ್ಕೆ..

Published

on

ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ತಹಶೀಲ್ದಾರ್ ವಶಕ್ಕೆ..

ಬಂಟ್ವಾಳ: ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರು ವಶಕ್ಕೆ ಪಡೆದುಕೊಂಡ ಘಟನೆ ಕುರ್ನಾಡು ಎಂಬಲ್ಲಿ ಇಂದು (ಎಪ್ರಿಲ್ 16) ಮಧ್ಯಾಹ್ನ ನಡೆದಿದೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕಾರದ ನಿಯಮ ಮೀರಿ ಮಧ್ಯಾಹ್ನ ಸುಮಾರು 1.30ರ ವೇಳೆ ಕುರ್ನಾಡು ಕಡೆಯಿಂದ ಮುಡಿಪು ಕಡೆಗೆ ಅನುಮತಿ ರಹಿತವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಆರೋಪಿ ಸಹಿತ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಳಿಕ ಲಾರಿ ಸಹಿತ ಆರೋಪಿಯನ್ನು ಕೋಣಾಜೆ ಠಾಣೆಗೆ ವರ್ಗಾಯಿಸಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಖಾವಿ ವೇಷದಲ್ಲಿ ಮನೆಗೆ ಬರ್ತಾರೆ, ಭಸ್ಮ ಹಾಕ್ತಾರೆ-ಇಂಥವರನ್ನು ಕಂಡ್ರೆ ಹುಷಾರಾಗಿರಿ..!

Published

on

ಕಾರ್ಕಳ: ಸ್ವಾಮೀಜಿಗಳ ವೇಷದಲ್ಲಿ ಕೆಲವರು ವಾಹನವೊಂದರಲ್ಲಿ ಮನೆ ಮನೆಗೆ ತೆರಳುತ್ತಿರುವ ಕುರಿತಂತೆ ಫೋಟೊ ಮತ್ತು ಎಚ್ಚರಿಕೆಯ ಸಂದೇಶ ನೀಡುವ ಆಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ  ಸ್ವಾಮೀಜಿ ವೇಷಧಾರಿಗಳು ಕಾರ್ಕಳದ ಮಿಯ್ಯಾರ್ ಪರಿಸರದಲ್ಲಿ ರಿಕ್ಷಾ ಟೆಂಪೊ ಮಾದರಿಯ ವಾಹನದಲ್ಲಿ ಪ್ರಯಾಣಿಸುತ್ತಾ ಮನೆ ಮನೆಗೆ ತೆರಳುತ್ತಿದ್ದಾರೆ.

ಮನೆಯೊಂದಕ್ಕೆ ತೆರಳಿ ಅಲ್ಲಿದ್ದ ಮಹಿಳೆಗೆ ಭಸ್ಮ ಹಾಕಿರುವುದು ಮತ್ತು ಪರಿಸರದ ಜನರು ಬಂದು ಈ ವೇಷಧಾರಿಗಳನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ಕಪಟ  ಸ್ವಾಮೀಜಿ ವೇಷಧಾರಿಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂಬ ಎಚ್ಚರಿಕೆಯ ಸಂದೇಶವನ್ನು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಇವರು ಎಂಎಚ್‌ ರಿಜಿಸ್ಟ್ರೇಷನ್‌ ಹೊಂದಿರುವ ವಾಹನದಲ್ಲಿ  ಆಗಮಿಸಿದ್ದು ಉತ್ತರ ಭಾರತದಿಂದ ಬಂದ ಕಪಟರಾಗಿದ್ದು, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವ ಇಂತಹ ಸ್ವಾಮೀಜಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.

 

Continue Reading

DAKSHINA KANNADA

ಡಿ.6ರಂದು ಸಹಕಾರ ರತ್ನ ಭಾಸ್ಕರ್ ಎಸ್. ಕೋಟ್ಯಾನ್‌ ಅವರಿಗೆ ನಾಗರಿಕ ಪೌರ ಸನ್ಮಾನ

Published

on

ಮಂಗಳೂರು: ಕರ್ನಾಟಕ ಸರಕಾರದ 2025 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್‌ ಅವರಿಗೆ ನಾಗರಿಕ ಪೌರ ಸನ್ಮಾನ ಡಿಸೆಂಬರ್ 6 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಭಾಸ್ಕರಾಭಿನಂದನಾ ಸಮಿತಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾಸ್ಕರ್ ಎಸ್. ಕೋಟ್ಯಾನ್‌ ಅವರು ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಈ ವರ್ಷ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳೆಲ್ಲ ಸೇರಿ ಸಾರ್ವಜನಿಕವಾಗಿ ಅವರನ್ನು ಅಭಿನಂದಿಸಲು ತೀರ್ಮಾನಿಸಿದ್ದಾರೆ ಎಂದು ಭಾಸ್ಕರಾಭಿನಂದನಾ ಸಮಿತಿಯ ಸಂಚಾಲಕ ಚಿತ್ತರಂಜನ್ ಬೋಳಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರಭವನದಲ್ಲಿ ಡಿಸೆಂಬರ್ 6 ರಂದು ಅಪರಾಹ್ನ 3 ಗಂಟೆಗೆ ಚಿತ್ರನಟ ಮಂಜು ರೈ ಮೂಳೂರು ಅವರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರಂಭಕ್ಕೆ ಚಾಲನೆ ಸಿಗಲಿದೆ. 3.45 ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ.

 

ಸೋಲೂರು ಮಠದ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ  ಸಂಸದ ಬ್ರಿಜೇಶ್ ಚೌಟ ದೀಪ ಬೆಳಗಿಸುವರು. ಸ್ಪೀಕರ್ ಯು.ಟಿ. ಖಾದರ್ ಭಾಸ್ಕರಾಭಿನಂದನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಭಾಸ್ಕರಾಭಿನಂದನಾ ಸಮಿತಿಯ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಸಂಚಾಲಕ ಕೆ.ಟಿ. ಸುವರ್ಣ ಮತ್ತಿತರರು ಇದ್ದರು.

 

Continue Reading

DAKSHINA KANNADA

ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ

Published

on

ಮಂಗಳೂರು: ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆ, ನೃತ್ಯ, ಸಂಗೀತ ಇವೆಲ್ಲವುಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವ ಡಿ7ರ ಭಾನುವಾರದದಂದು ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಬಾರಿಯ ಕ್ರೀಡೋತ್ಸವ ಸಮಾರಂಭವನ್ನು ಮೈಸೂರಿನ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಆಗಮಿಸಲಿದ್ದಾರೆ. ಸಾಹಸ ಕ್ರೀಡೆ, ಸಾಂಸ್ಕೃತಿಕ ಪ್ರದರ್ಶನದಲ್ಲಿ ಸುಮಾರು 2000 ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಸಮೀರ್ ಪುರಾಣಿಕ್ ಮಾತನಾಡಿ 4ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಕಂಬ, ಫೈರ್ ಜಂಪ್, ಯೋಗಾಸನ ಸೇರಿದಂತೆ ಪಿರಮಿಡ್ ರಚನೆಯ ಕ್ರೀಡಾ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: WATCH : ಉಡುಪಿ: ಶಾಲೆಯ ರೋಡ್ ಸರಿ ಇಲ್ಲ…ನಗರಸಭೆ ಆಯುಕ್ತರಿಗೆ ದೂರು ಕೊಟ್ಟ ಪುಟ್ಟ ವಿದ್ಯಾರ್ಥಿ

ಸಂಸ್ಥೆಯ ಪ್ರಾಂಶುಪಾಲ ದಯಾನಂದ ಕಟೀಲ್ ಶೋಭಾಯಾತ್ರೆಯಲ್ಲಿ ಒಡೆಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಈ ಕ್ರೀಡೋತ್ಸವಕ್ಕೆ ಮಕ್ಕಳನ್ನು ತಯಾರು ಮಾಡಲು ಯಾವುದೇ ತರಬೇತುದಾರರಿಲ್ಲ. ಶಾರದಾ ಕುಟುಂಬ ಜೊತೆಯಾಗಿ ಸೇರಿಕೊಂಡೇ ಮಕ್ಕಳನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಧಾಕರ್ ಪೇಜಾವರ, ಶಾರದಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page