Connect with us

BANTWAL

ತಲಕಾವೇರಿ ಭೂಕುಸಿತ ದುರಂತದಲ್ಲಿ ಬಂಟ್ವಾಳದ ಅರ್ಚಕರು..!

Published

on

ತಲಕಾವೇರಿ ಭೂಕುಸಿತ ದುರಂತದಲ್ಲಿ ಬಂಟ್ವಾಳದ ಅರ್ಚಕರು..!

ಬಂಟ್ವಾಳ : ಕೊಡಗಿನ ತಲಕಾವೇರಿಯಲ್ಲಿ ಗುಡ್ಡ ಜರಿದು ಅರ್ಚಕರ ಮನೆ ಸಮಾಧಿಯಾದ ದುರಂತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಐವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಯುವ ಅರ್ಚಕರೊಬ್ಬರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಬಂಟ್ವಾಳ ಮೂಲದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ ಈ ದುರಂತದಲ್ಲಿ ನಾಪತ್ತೆಯಾಗಿರುವ ಅರ್ಚಕರಾಗಿದ್ದಾರೆ.

ರವಿ ಅವರು ಕಳೆದ ಎರಡು ವರ್ಷಗಳಿಂದ ತಲಕಾವೇರಿ ದೇವಸ್ಥಾನದಲ್ಲಿ  ಸಹಾಯಕಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಸುಮಾರು 24 ವರ್ಷದ ರವಿಕಿರಣ್ ಅವರು ರಾಮಕೃಷ್ಣ ಮತ್ತು ರೇಣುಕಾ ಭಟ್ ದಂಪತಿಯ ಪುತ್ರನಾಗಿದ್ದಾರೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸ್ವ ಊರು ಬಂಟ್ವಾಳದಲ್ಲೇ ಇದ್ದ ರವಿಕಿರಣ್ ಬಳಿಕ ತಲಕಾವೇರಿ ದೇವಳದ ಆರ್ಚಕರು ಮರಳಿ ಕರೆದ ಹಿನ್ನೆಲೆಯಲ್ಲಿ ತಲಕಾವೇರಿಗೆ ವಾಪಸ್ಸಾಗಿದ್ದರು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಅವರು ಅಲ್ಲಿನ ಶಾಸಕರಾದ ಬೋಪಯ್ಯ ಅವರನ್ನು ಸಂಪರ್ಕಿಸಿ ಮಾಹಿತಿ ಧೃಡಪಡಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

BANTWAL

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ

Published

on

ಬಂಟ್ವಾಳ: ಗಂಜಿಮಠದ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದ ಪುನರ್ ನಿರ್ಮಾಣದ ಸಲುವಾಗಿ ಸಾವಿರ ಸೀಮೆಯ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ ನಡೆಯಿತು.

ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಲಕ್ಷ ಕುಂಕುಮಾರ್ಚನೆ ಮಾಡಲಾಯಿತು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿ.ಪಂ. ಸಿಇಒ ಡಾ. ಆನಂದ್ ವರ್ಗಾವಣೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಜರಗಿದ ಕುಂಕುಮಾರ್ಚನೆಯಲ್ಲಿ ಕ್ಷೇತ್ರದ ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಕೆ.ರಾಮ್ ಭಟ್, ಸಹ ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್ ಮೊದಲಾದವರಿದ್ದರು.

Continue Reading

BANTWAL

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Published

on

ಬಂಟ್ವಾಳ: ಪಿಯುಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ತುಂಬೆ ಬಳಿ ನಡೆದಿದೆ.

ತುಂಬೆಯ ಪರ್ಲಕ್ಕೆ ನಿವಾಸಿಗಳಾದ ಕರುಣಾಕರ ಗಟ್ಟಿ ಮತ್ತು ಶೋಭಾ ಗಟ್ಟಿ ದಂಪತಿಯ ಏಕೈಕ ಪುತ್ರ 17 ವರ್ಷದ ತೇಜಸ್ ಗಟ್ಟಿ ಮೃತ ವಿದ್ಯಾರ್ಥಿ. ತೇಜಸ್ ಗಟ್ಟಿ ಮೊಡಂಕಾಪು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ನಿನ್ನೆ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ತೇಜಸ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೃದಯಾಘಾತಕ್ಕೆ ಲಾರಿ ಚಾಲಕ ಬಲಿ

ತಂದೆ ಕರುಣಾಕರ ಎಂದಿನಂತೆ ಮನೆಗೆ ಬಂದಾಗ ಬಾಗಿಲು ತೆರೆದಿದ್ದು, ಒಳಗೆ ನೋಡಿದಾಗ ತೇಜಸ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಶನಿವಾರ ಕಾಲೇಜಿನಲ್ಲಿ ತೇಜಸ್ ಮೊಬೈಲ್ ಬಳಸಿ ಉಪನ್ಯಾಸಕರಿಗೆ ಸಿಕ್ಕಿಬಿದ್ದಿದ್ದನಂತೆ. ಕಾಲೇಜು ಆಡಳಿತದವರು ಮೊಬೈಲ್ ವಶಪಡಿಸಿ ಪೋಷಕರಿಗೆ ವಿಚಾರ ತಿಳಿಸಿದ್ದರಂತೆ.

ಕಾಲೇಜು ಆಡಳಿತವು ಸೋಮವಾರವೂ ಮೊಬೈಲನ್ನು ತೇಜಸ್ ಗೆ ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Continue Reading

BANTWAL

ಭಾರೀ ಮಳೆ: ಬಂಟ್ವಾಳ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜು.4) ರಜೆ ಘೋಷಣೆ

Published

on

ಬಂಟ್ವಾಳ: ತಾಲೂಕಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಶುಕ್ರವಾರ (ಜು.4) ರಜೆ ಘೋಷಣೆ ಮಾಡಲಾಗಿದೆ.

ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಕ್ರಿಸ್ಟಿಯಾನೋ ರೋನಾಲ್ಡೋ ಟೀಮ್‌ಮೇಟ್ ಕಾರು ಅಪಘಾತದಲ್ಲಿ ಸಾ*ವು

ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ. ಸಾರ್ವಜನಿಕರು ಕೂಡಾ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page