Connect with us

BANTWAL

ಕೋಟಿ ರೂಪಾಯಿಯ ಅಭಿವೃದ್ದಿ ಕಾರ್ಯಗಳಿಗೆ ಅಟೋದಲ್ಲಿ ತೆರಳಿ ಮಾದರಿಯಾದ ಬಂಟ್ವಾಳ ಶಾಸಕರು..!

Published

on

ಕೋಟಿ ರೂಪಾಯಿಯ ಅಭಿವೃದ್ದಿ ಕಾರ್ಯಗಳಿಗೆ ಅಟೋದಲ್ಲಿ ತೆರಳಿ ಮಾದರಿಯಾದ ಬಂಟ್ವಾಳ ಶಾಸಕರು..!  

ಬಂಟ್ವಾಳ: ಯಾವಾಗಯೂ ಐ ಫೈ ಕಾರುಗಳಲ್ಲೇ ಓಡಾಟ ಮಾಡುತ್ತಿರುವ ಜನ ನಾಯಕರನ್ನ, ಜನ ಪ್ರತಿನಿಧಿಗಳನ್ನು ನಾವೆಲ್ಲ ಕಂಡಿದ್ದೇವೆ. ಆದರೆ ಸಾದ ಸೀದ ಇರುವ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್  ಕೊಂಚ ಭಿನ್ನವಾಗಿ ನಿಲ್ಲುತ್ತಾರೆ.

ಆದರೆ ಬಂಟ್ವಾಳ ಕ್ಷೇತ್ರದ ಶಾಸಕರು ಈ ಬಾರಿ ಅಟೋದಲ್ಲಿ ತೆರಳಿ ಅಭಿವೃದ್ದಿ ಕಾರ್ಯಗಳಿಗೆ ಶಿಲನ್ಯಾಸ ಮಾಡುವ ಮೂಲಕ ತಾನು ಜನ ಸಾಮಾನ್ಯ ಶಾಸಕ ಎಂದು ತೋರಿಸಿಕೊಟ್ಟಿದ್ದಾರೆ.

ಈ ಮೂಲಕ  ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ನಾಯಕ್  ಸುದ್ದಿಯಾಗಿದ್ದಾರೆ. ತಮ್ಮ ಕ್ಷೇತ್ರದ ಕಡೇಶಿವಾಲಯ ಗ್ರಾಮದಲ್ಲಿ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕರು ತೆರುಳುವ ಸಂದರ್ಭದಲ್ಲಿ ಶಾಸಕರ ಶಿಫಾರಸು ಮೇರೆಗೆ ಸ್ವಯಂ ಉದ್ಯೋಗದ ಯೋಜನೆಯಡಿಯಲ್ಲಿ ಅಟೋರಿಕ್ಷಾ ಸೌಲಭ್ಯ ಪಡೆದ ಮೋಹನ್ ನಾಯ್ಕ್ ಅವರು ಶಾಸಕರಿಗೆ ತನ್ನ ಅಟೋ ರಿಕ್ಷಾ ವನ್ನು ತೋರಿಸಿದರು.
ರಿಕ್ಷಾ ವನ್ನು ನೋಡಿದ ಬಳಿಕ ಶಾಸಕರು ರಿಕ್ಷಾದಲ್ಲಿ ಕುಳಿತು ಮುಂದಿನ ಶಿಲಾನ್ಯಾಸ ಕಾಮಗಾರಿಗಳಿಗೆ ತೆರಳಿದ್ದು ಗ್ರಾಮದ ಜನರ ಗಮನ ಸೆಳೆಯಿತು.
ಶಾಸಕರೇ ರಿಕ್ಷಾದಲ್ಲಿ ಕುಳಿತು ಪ್ರಯಾಣಿಸಿದ ಬಗ್ಗೆ ರಿಕ್ಷಾ ಮಾಲಕನಿಗೂ ಸಂತಸ ವ್ಯಕ್ತವಾಗಿದ್ದು ಮಾತ್ರ ಅಷ್ಟಿಷ್ಟಲ್ಲ..

BANTWAL

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಸಂಚಾರ ನಿಷೇಧ

Published

on

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಹಳೆಯ ಉಕ್ಕಿನ ಸೇತುವೆಯು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ನಿಷೇಧ ಮಾಡಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ಅವರು ಆದೇಶಿಸಿದ್ದಾರೆ.


ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಆಗಬಾರದೆಂಬ ನಿಟ್ಟಿನಲ್ಲಿ ಮತ್ತು ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಮಾಡಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: ಜೂನ್.16 ರಿಂದ 20ರ ವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಪಾಣೆಮಂಗಳೂರಿನ ಉಕ್ಕಿನ ಸೇತುವೆ 111 ವರ್ಷವನ್ನು ಪೂರೈಸಿದ್ದು, ಅವಿಭಜಿತ ದ.ಕ. ಜಿಲ್ಲೆಯ ಮೊದಲ ಸಂಪರ್ಕ ಸೇತುವೆ ಎನ್ನುವ ಹೆಗ್ಗಳಿಕೆಯೂ ಈ ಸೇತುವೆಗಿದೆ. ಇನ್ನು ಪಾಣೆಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು ಸ್ಥಳೀಯರಿಗೆ ಸಂಚಾರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

 

 

 

 

Continue Reading

BANTWAL

ಬಂಟ್ವಾಳ: ಅಡಿಕೆ ವ್ಯಾಪಾರಿಯಿಂದ ರೈತರಿಗೆ ಪಂಗನಾಮ; 10 ಕೋಟಿ ವಂಚಿಸಿ ಪರಾರಿ

Published

on

ಬಂಟ್ವಾಳ: ಅಡಿಕೆ ವ್ಯಾಪಾರಿಯೊಬ್ಬರು ಕೃಷಿಕರಿಂದ ಅಡಿಕೆ ಖರೀದಿಸಿ ಹಣ ಬಾಕಿ ಇರಿಸಿ ವಂಚಿಸಿ ನಂಬಿಕೆ ದ್ರೋಹ ಎಸಗಿದ ಆರೋಪದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಮೈಂದಾಳ ನಿವಾಸಿ ನೌಫಲ್‌ ಮಹಮ್ಮದ್‌ ಈ ಪ್ರಕರಣದ ಆರೋಪಿಯಾಗಿದ್ದು, ಇದೀಗ ಆತ ಗ್ರಾಹಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಆತ ಸುಮಾರು 94 ಲಕ್ಷ ರೂಪಾಯಿಗೂ ಆಧಿಕ ಮೊತ್ತದ ಹಣ ಬಾಕಿ ಇರಿಸಿ ವಂಚನೆ ಎಸಗಿರುವುದಾಗಿ ಆಪಾದಿಸಲಾಗಿದೆ. ನಾವೂರು ಗ್ರಾಮದ ನಿವಾಸಿ ಪ್ರವೀಣ್‌ ಡಿ’ ಸೋಜಾ ಎಂಬವರು ನೀಡಿದ ದೂರಿನಂತೆ ಎಫ್.ಐ.ಆರ್. ದಾಖಲಾಗಿದೆ.

ಅಡಿಕೆ ಮಾರಾಟ ಮಾಡುವ ವೇಳೆ ನೌಫಲ್ ಮಾರಾಟಗಾರರಿಗೆ ಸ್ವಲ್ಪ ಹಣವನ್ನು ಕೊಡುತ್ತಿದ್ದು, ಬಳಿಕ ಕೆಲವು ದಿನಗಳ ಬಳಿಕ ಹಣವನ್ನು ಕೊಡುತ್ತಿರುವ ಪ್ರಕ್ರಿಯೆ ನಡೆಯುತ್ತಿತ್ತು. ಮಾರ್ಚ್ 8 ರಂದು ಬೆಳಗ್ಗೆ ಪ್ರವೀಣ್ ಅವರು ನೌಫಲ್‌ ಮಹಮ್ಮದ್‌ ಅಂಗಡಿಗೆ ವಾಹನದಲ್ಲಿ ಹೋಗಿ ಸುಮಾರು 6.5 ಕ್ವಿಂಟಾಲ್‌ ಅಡಿಕೆಯನ್ನು ಮಾರಾಟ ಮಾಡಿದ ಬಗ್ಗೆ ಅಂದಾಜು 3,50,000 ರೂ ಹಣವನ್ನು ನೀಡಿರಲಿಲ್ಲ. ಜೂನ್ 9ರಂದು ರಾತ್ರಿ ಪ್ರವೀಣ್ ಗೆ ನೌಫಲ್ ಕರೆ ಮಾಡಿ, ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್‌ ಕಳುಹಿಸಿದ್ದಾಗಿ ದೂರಲಾಗಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ಮಂದಿರದಲ್ಲಿ 21 ನಕಲಿ ಅರ್ಚಕರು ಅರೆಸ್ಟ್

ಇದರಿಂದ ಗಾಬರಿಗೊಂಡ ಪ್ರವೀಣ್, ಜೂನ್ 10ರಂದು ಬೆಳಿಗ್ಗೆ ಅಂಗಡಿಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು, ಮನೆಗೂ ಬೀಗ ಹಾಕಲಾಗಿತ್ತು. ಆರೋಪಿಯ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿದ್ದು, ಹಣ ಪಡೆಯಲು ಬಾಕಿಯಿದ್ದ ಇತರ 24 ಜನರು ಕೂಡಾ ಸ್ಥಳದಲ್ಲಿದ್ದರು. ಆರೋಪಿಯು ತನ್ನೊಂದಿಗೆ ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಟ್ಟು 94,77,810 ರೂಪಾಯಿ ನೀಡದೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Continue Reading

BANTWAL

ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ ನಿಧನ

Published

on

ಬಂಟ್ವಾಳ: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಪದ್ಮನಾಭ ಶೆಟ್ಟಿಗಾರ್ ಕುಂಡಾವು, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದ ಕಟ್ಟೆ, ಸುರತ್ಕಲ್ ಮತ್ತು ದೀರ್ಘಕಾಲ ಕಟೀಲು ಮೇಳ ಹೀಗೆ ಒಟ್ಟೂ ಸುಮಾರು ಐದು ದಶಕ ಯಕ್ಷಗಾನ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: ತೆಂಕುತಿಟ್ಟಿನ ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

ಮೂಕಾಸುರ, ವಿಜಯ, ದಾರುಕ, ಪಾಪಣ್ಣ, ಬಾಹುಕ ಮೊದಲಾದ ಪೌರಾಣಿಕ ಪಾತ್ರಗಳ ಮೂಲಕ ಯಕ್ಷಗಾನ ಪ್ರಿಯರ ಮನಸೂರೆಗೊಳಿಸಿದ್ದರು. ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪಡೆದಿದ್ದ ಅವರು, ಒಂದು ವಾರದ ಹಿಂದೆಯಷ್ಟೇ ಯಕ್ಷನಿಧಿ ಸಂಸ್ಥೆಯು ರೂ.50,000 ನಿಧಿಯೊಂದಿಗೆ ನೀಡಿದ ‘ಸುವರ್ಣ ಪುರಸ್ಕಾರ’ಕ್ಕೂ ಭಾಜನರಾಗಿದ್ದರು. ಇವರು ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page