Connect with us

BANTWAL

ಬಂಟ್ವಾಳ: ಪೊಲೀಸರ ಬಲೆಗೆ ಕೊನೆಗೂ ಸಿಕ್ಕಿ ಬಿದ್ದ ಅಡಿಕೆ ಕಳ್ಳ

Published

on

ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಪುಂಜೂರು ಎಂಬಲ್ಲಿ 2.2 ಲಕ್ಷ ರೂಪಾಯಿ ಮೌಲ್ಯದ ಅಡಿಕೆಗಳನ್ನು ಕದ್ದು ಕೊಂಡು ಹೋಗಿದ್ದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಜುಲೈ 3 ರಿಂದ 22ರ ಅವಧಿಯಲ್ಲಿ ಸುಮಾರು 2.2 ಲಕ್ಷ ರೂಪಾಯಿ ಮೌಲ್ಯದ ಅಡಕೆಯನ್ನು ಮಣಿನಾಲ್ಕೂರು ಗ್ರಾಮದ ಪುಂಜೂರು ಎಂಬಲ್ಲಿ ಕಳವು ಮಾಡಲಾಗಿತ್ತು. ಇದೀಗ ಆರೋಪಿ ಸುಳ್ಯ ತಾಲೂಕಿನ ಪೈಚಾರು ಗ್ರಾಮದ 23 ವರ್ಷದ ಸತೀಶ್ ಎಂಬಾತನನ್ನು ಬಂಧಿಸಿ ಕಳವುಗೈದ 74,000 ರೂಪಾಯಿ ಮೌಲ್ಯದ 15 ಚೀಲ ಒಣ ಅಡಿಕೆ, ಕಳವು ಅಡಿಕೆಯನ್ನು ಮಾರಾಟ ಮಾಡಿದ ನಗದು ಹಣ 70,000 ರೂಪಾಯಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನ ಸೇರಿ ಒಟ್ಟು 2,24,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್‌ ನೇಮಕ

ಅಡಿಕೆ ಕಳವು ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

BANTWAL

ರಾಜ್ಯದ ಕಾನೂನು ವ್ಯವಸ್ಥೆ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆಯ ಮಳೆಗರೆದ ಎಂ.ಎಲ್.ಸಿ ಕಿಶೋರ್ ಕುಮಾರ್

Published

on

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ  ಕಿಶೋರ್ ಕುಮಾರ್ ಪುತ್ತೂರು ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ, ಮನೆಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಕುರಿತಾಗಿ ಗೃಹಸಚಿವರನ್ನು ಕಠಿಣವಾಗಿ ಪ್ರಶ್ನಿಸಿದರು.

ಕಳೆದ ಮೂರು ವರ್ಷಗಳ ಅಂಕಿಅಂಶವೇ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದನ್ನು ಸಾಬೀತುಪಡಿಸುತ್ತದೆ. 2023ರಲ್ಲಿ ದಾಖಲಾಗಿದ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 28 ಸಾವಿರ ಪತ್ತೆಯಾಗಿಲ್ಲ. 2024ರಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 23 ಸಾವಿರ ಪತ್ತೆಯಾಗಿಲ್ಲ. 2025ರಲ್ಲೇ ಈಗಾಗಲೇ 30 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 8 ಸಾವಿರ ಪ್ರಕರಣ ಪತ್ತೆಯೇ ಆಗಿಲ್ಲ. ಇದು ಜನರನ್ನು ಭಯಕ್ಕೆ ತಳ್ಳುವಂತೆ ಆಗಿದೆ.

ರಾಜ್ಯದಲ್ಲಿ ಕಳೆದ ಎಂಟು ತಿಂಗಳಲ್ಲಿ ಒಬ್ಬ ಎಸಿಪಿ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸಿದೆ ಎಂದು ಉದ್ಧರಿಸಿದರು. “ನಮ್ಮ ರಾಜ್ಯ ‘ಕಳ್ಳಕಾಕರ ರಾಜ್ಯವಾಗುತ್ತಿರುವಂತೆ ಕಂಡುಬರುತ್ತಿದೆ. ಗೃಹಸಚಿವರಿಗೆ ಇಲಾಖೆಯ ಮೇಲಿನ ಹಿಡಿತವಿಲ್ಲ, ಸರ್ಕಾರಕ್ಕೆ ಗೃಹ ಇಲಾಖೆಯ ಮೇಲಿನ ಕಂಟ್ರೋಲ್ ಕಾಣುತ್ತಿಲ್ಲ. ಜನರ ಸುರಕ್ಷತೆಯೇ ಚಿಂತಾಜನಕವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಸಿಸ್ ಉಗ್ರ ಮೊಬೈಲ್ ಬಳಸುವುದರ ಮೂಲಕ ವಾಟ್ಸಪ್ ವೀಡಿಯೋ ಕಾಲ್ ಮಾಡಿದ ಘಟನೆಯನ್ನು ಉಲ್ಲೇಖಿಸಿ, “ಇಂತಹ ಭದ್ರತಾ ವೈಫಲ್ಯಗಳು ರಾಷ್ಟ್ರದ ಮಾನವನ್ನು ಹರಾಜು ಮಾಡುತ್ತಿವೆ. ರಾಜ್ಯದ ಜೈಲು ನಿರ್ವಹಣೆಯಲ್ಲಿಯೇ ಗಂಭೀರ ಲೋಪವಿದೆ ಎಂದು ಗೃಹಸಚಿವರ ಗಮನಕ್ಕೆ ತಂದರು.

ಇದೇ ವೇಳೆ ಪಿಎಸ್‌ಐ ನೇಮಕಾತಿ ಇನ್ನೂ ನಡೆಯದೆ ಇರುವುದನ್ನು ಪ್ರಶ್ನಿಸಿದ ಶಾಸಕರು, ಯುವಕರ ಭವಿಷ್ಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಸಚಿವರ ಉಡಾಫೆ ಉತ್ತರಕ್ಕೆ ಆಕದಷೇಪವನ್ನು ವ್ಯಕ್ತಪಡಿಸಿದರು.

ರಾಜ್ಯದ ಹೊರರಾಜ್ಯ ಗಡಿಗಳು ಕಳ್ಳತನಕ್ಕೆ ಪ್ರಮುಖ ಮಾರ್ಗವಾಗಿರುವುದರಿಂದ, ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆಯ ಸಿಸಿಟಿವಿ, ನಿಗಾವ್ಯವಸ್ಥೆ ಮತ್ತು ಕಣ್ಗಾವಲುಗಳನ್ನು ಬಲಪಡಿಸಲು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.

ಕೆಲವು ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಮೆಚ್ಚಿಕೊಂಡ ಶಾಸಕರು, ದ.ಕ. ಎಸ್‌ಪಿ  ಡಾ. ಅರುಣ್ ಶಂಕರ್, ಹಿಂದಿನ ದ.ಕ. ಎಸ್‌ಪಿ ಯತೀಶ್, ಮಂಗಳೂರು ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರ ಶಿಸ್ತಿನ ಕಾರ್ಯನೈಪುಣ್ಯವನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಇದೇ ರೀತಿಯ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಅಧಿಕಾರಿಗಳು ಇನ್ನಷ್ಟು ಬೇಕು ಎಂದು ಹೇಳಿದರು.

 

 

Continue Reading

BANTWAL

ಇದನ್ನು ತಿನ್ನುವ ಮೊದಲು ಯೋಚಿಸಿ..! ಬಂಟ್ವಾಳದಲ್ಲಿ ಚಿಕನ್ ಶವರ್ಮದ ಮೆಶಿನ್ ಗೆ ಬಾಯಿ ಹಾಕಿದ ಬೌಬೌ..!

Published

on

ಬಂಟ್ವಾಳ:  ಚಿಕನ್ ಶವರ್ಮಪ್ರಿಯರೇ ಎಚ್ಚರ! ಎಚ್ಚರ! ಸರಿಯಾಗಿ ನೋಡಿಕೊಂಡು ತಿಂದರೆ ನೀವು ಸೇಫ್…ನಿಮ್ಮ ಹೊಟ್ಟೆಯೂ ಸೇಫ್…  ಇಲ್ಲಾಂದ್ರೆ ಚಿಕನ್ ಶವರ್ಮ ವನ್ನು ಬೌಬೌ ನ ಎಂಜಲು ಆಗಿ ಕೂಡಾ ತಿನ್ನುಬೇಕಾದ ಸ್ಥಿತಿಯೂ ಬಂದರೆ ಅಚ್ಚರಿಯೇನಿಲ್ಲ….

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೆಗೋಳಿ ಎಂಬಲ್ಲಿರುವ ಪಾಸ್ಟ್ ಪುಡ್ ಅಂಗಡಿಯೊಂದರ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.  ಅರ್ಬನ್ ಬೈಟ್ಸ್  ಎಂಬ ಪಾಸ್ಟ್ ಪುಂಡ್ ಅಂಗಡಿಯಲ್ಲಿ ಚಿಕನ್ ಶವರ್ಮ ವ್ಯಾಪಾರ ನಡೆಯುತ್ತಿದೆ.

ಶವರ್ಮ ತಯಾರಿಸುವ ಮೆಷಿನ್ ಒಳಗಿನಿಂದ ಚಿಕನ್ ಪೀಸ್ ಗಳನ್ನು ನಾಯಿಯೊಂದು ಎಳೆದು ತಿನ್ನುವ ದೃಶ್ಯ ಸಾಮಾಜಿಕ ಜಾಲತಾಣದ ಮೂಲಕ ಪುಲ್ ವೈರಲ್ ಆಗುತ್ತಿದೆ. ಅಂಗಡಿಯಲ್ಲಿ ಯಾರೂ ಇಲ್ಲದಿರುವ ವೇಳೆ ನಾಯಿ ಶವರ್ಮ ತಯಾರಿಸುವ ಮೆಷಿನ್ ನಿಂದ ಚಿಕನ್ ಪೀಸ್‌ ಎಳೆದು ತಿಂದು ಮತ್ತೆ ವಾಪಸ್‌ ಚಿಕನ್ ಗಾಗಿ ಹೋಗುವ ದೃಶ್ಯದ ವಿಡಿಯೋ ಒಂದನ್ನು ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

ಎರಡೆರಡು ಬಾರಿ ನಾಯಿ ಅಂಗಡಿಯೊಳಗಿನಿಂದ ಚಿಕನ್ ಕದ್ದು ತಿಂದರೂ ಅಂಗಡಿ ಮಾಲಕರಿಗೆ ಗೊತ್ತೇ ಅಗಲಿಲ್ಲ. ನೂರಾರು ಮಂದಿ ಹೊಟೇಲ್ ಆಹಾರ ನಂಬಿ ಬದುಕುವ ಕಾಲಘಟ್ಟದಲ್ಲಿ ಇಂತಹ ಬೇಜಾಬ್ದಾರಿತನದ ಬಗ್ಗೆ ಹಾಗೂ ಅಂಗಡಿಯವರ ಸ್ಚಚ್ಚತೆ ಬಗೆಗಿನ ಕಾಳಜಿಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

BANTWAL

ಬೆಂಗಳೂರಿನಲ್ಲಿ ನಡೆದ ರಸ್ತೆ ದುರಂತದಲ್ಲಿ ಬಂಟ್ವಾಳದ ಅಜಿಲಮೊಗರು ಯುವಕ ಸಾವು

Published

on

ಬಂಟ್ವಾಳ:  ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಮಧ್ಯಾಹ್ನ ನಡೆದ ರಸ್ತೆ ಅಪಘಾತವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಅಲ್ಲಿಪಾದೆ ಎಂಬಲ್ಲಿನ ಯುವಕ ಮುಹಮ್ಮದ್ ಹಾರಿಸ್ (34) ಮೃತಪಟ್ಟ ಯುವಕ.

ಮುಹಮ್ಮದ್ ಹಾರಿಸ್ ಬೆಂಗಳೂರಿನ ಏಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿಯೋರ್ವನೊಡನೆ ಬೈಕಿನಲ್ಲಿ ತೆರಳುತ್ತಿದ್ದಾಗ  ಗೂಡ್ಸ್ ವಾಹನವು ಹಿಂಬದಿಯಿಂದ ಢಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಹಾರಿಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿದ್ದ ಸಹೋದ್ಯೋಗಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ.

ಯುವಕ ಹಾರಿಸ್ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.ಘಟನೆಯ ಸಂಬಂಧ ಎಚ್‌ ಎಸ್‌ ಆರ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಹಾರಿಸ್ ಮೃತದೇಹವು ಕೋರಮಂಗಲದಲ್ಲಿರುವ ಸೈಂಟ್ ಜಾನ್ಸ್‌ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಊರಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಹಿಂಬದಿ ಸವಾರ ಒಡಿಶಾ ಮೂಲದವನಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page