Connect with us

International news

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ? ದೇಶ ಬಿಟ್ಟು ಪರಾರಿ!

Published

on

ಮಂಗಳೂರು/ಢಾಕಾ : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹಿಂ*ಸಾಚಾರ ಭುಗಿಲೆದ್ದಿದೆ. ಈ ನಡುವೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಅವರು ‘ಸುರಕ್ಷಿತ ಸ್ಥಳ’ಕ್ಕಾಗಿ ಢಾಕಾ ಅರಮನೆ ತೊರೆದಿದ್ದಾರೆ ಎಂದು ವರದಿಯಾಗಿದೆ.


ಬಾಂಗ್ಲಾ ದೇಶದಾದ್ಯಂತ ಹಿಂ*ಸಾಚಾರ ಮಿತಿ ಮೀರಿದ್ದು 300ಕ್ಕೂ ಅಧಿಕ ಮಂದಿ ಬ*ಲಿಯಾಗಿದ್ದಾರೆ. ಹೀಗಾಗಿ ಭದ್ರತೆಯ ದೃಷ್ಠಿಯಿಂದ ಶೇಖ್ ಹಸೀನಾ ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳುವ ಮುನ್ನ ಶೇಖ್ ಹಸೀನಾ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿತ್ತು. ಜೊತೆಯಲ್ಲೇ ತಮ್ಮ ಭಾಷಣವನ್ನು ಧ್ವನಿ ಮುದ್ರಣ ಮಾಡುತ್ತಾರೆ ಎಂದೂ ಹೇಳಲಾಗಿತ್ತು. ಆದರೆ, ಇದಾವುದಕ್ಕೂ ಶೇಖ್ ಹಸೀನಾ ಅವರಿಗೆ ಅವಕಾಶ ಸಿಗಲೇ ಇಲ್ಲ ಎಂದು ತಿಳಿದು ಬಂದಿದೆ.

ಸೇನಾಡಳಿತ ಜಾರಿ?

ಬಾಂಗ್ಲಾದಲ್ಲಿ ಹಿಂ*ಸಾಚಾರ ಹೆಚ್ಚುತ್ತಿರುವ ಕಾರಣ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು, ಹೀಗಾಗಿ ದೇಶದಲ್ಲಿ ಸೇನಾಡಳಿತ ಜಾರಿಯಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬಾಂಗ್ಲಾ ದೇಶದ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ವಾಸ್ತವಾಂಶದ ಬಗ್ಗೆ ತಿಳಿದಿಲ್ಲ. ಶೇಖ್ ಹಸೀನಾ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯೂ ಲಭ್ಯವಾಗಿಲ್ಲ.

ಶೇಖ್ ಹಸೀನಾ ಪರ – ವಿರೋಧಿಗಳ ಬ*ಡಿದಾಟ :

ಸರ್ಕಾರ ಹಾಗೂ ಶೇಖ್ ಹಸೀನಾ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಹೊ*ಡೆದಾಟ ನಡೆಯುತ್ತಿದೆ. ಢಾಕಾದ ಶಹಭಾಗ್ ವೃತ್ತ ಸೇರಿದಂತೆ ಹಲವೆಡೆ ಎರಡೂ ಕಡೆಯವರು ಹೊಡೆದಾಡಿದ್ದಾರೆ. ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್‌ಗಳನ್ನ ಸಿಡಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ನಡೆಸಿದರು.

ಇದನ್ನೂ ಓದಿ : ದುರಂ*ತಕ್ಕೆ ಸಾಕ್ಷಿಯಾಯಿತೇ ‘ಚಾಲಿಯಾರ್’!: ನದಿಯಲ್ಲಿ ತೇಲಿ ಬರುತ್ತಿವೆ ಶ*ವಗಳು
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದ ಪ್ರತಿಭಟನಾಕಾರರು ಭಾನುವಾರ(ಆ.4) ಬೀದಿಗಿಳಿದಿದ್ದರು. ಇದಕ್ಕೂ ಮೊದಲು ಒಂದೆರಡು ದಿನಗಳ ಕಾಲ ಬಾಂಗ್ಲಾ ಪ್ರಶಾಂತ ಸ್ಥಿತಿಯಲ್ಲೇ ಇತ್ತು. ಸ್ವಾತಂತ್ರ್ಯ ಹೋರಾಟಗಾರರ ಮೀಸಲಾತಿ ಪ್ರಮಾಣವನ್ನ ಬಾಂಗ್ಲಾ ದೇಶ ಸುಪ್ರೀಂ ಕೋರ್ಟ್‌ ಶೇ. 30 ರಿಂದ ಶೇ. 5ಕ್ಕೆ ಇಳಿಸಿದ್ದರಿಂದ ತಣ್ಣಗಾಗಿತ್ತು. ಆದರೆ, ಬಾಂಗ್ಲಾ ಪ್ರಧಾನಿ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು, ರಾಜೀನಾಮೆಗೆ ಆಗ್ರಹಿಸಿ ಹಿಂಸಾಚಾರಕ್ಕೆ ಮುಂದಾಗಿದ್ದು, ದೇಶವೇ ಹೊತ್ತಿ ಉರಿಯುತ್ತಿದೆ.

INTERNATIONAL

ನಿನ್ನ ಸೌಂದರ್ಯ ನೋಡಿ ನಿನ್ನ ಗಂಡನಿಗೆ ಕೆಲಸ ಕೊಟ್ಟೆ: ಟ್ರಂಪ್‌ ವಿವಾದಾತ್ಮಕ ಹೇಳಿಕೆ!

Published

on

ವಾಷಿಂಗ್ಟನ್: “ನಿಮ್ಮ ಸೌಂದರ್ಯವೇ ನಾನು ನಿಮ್ಮ ಗಂಡನನ್ನು ನೇಮಿಸಿಕೊಳ್ಳಲು ಕಾರಣ” ಎಂದು ಹೇಳುವ ಮೂಲಕ ಟ್ರಂಪ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಟ್ರಂಪ್ ಟೀಕೆಗೆ ಗುರಿಯಾಗಿದ್ದಾರೆ.‌


ಹೌದು..ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಾಗೇ ಮುನ್ನಲೆಗೆ ಬರುವುದು ಎರಡೇ ವಿಚಾರಕ್ಕೆ. ಒಂದು ತೆರಿಗೆ.. ಇನ್ನೊಂದು ವಿವಾದಾತ್ಮಕ ಹೇಳಿಕೆ. ಇದೀಗ ಹೊಸ ವಿವಾದಾತ್ಮಕ ಹೇಳಿಕೆ ಕೊಟ್ಟು, ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದಾರೆ.

ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತ ಭವನದಲ್ಲಿ ತಮ್ಮ ಅಧಿಕಾರಿಗಳೊಂದಿಗೆ ಡ್ರಗ್ಸ್‌ ಮತ್ತು ಪ್ರಸ್ತುತ ಸುದ್ದಿಯಲ್ಲಿರುವ ವೆನೆಜುವೆಲಾದ ವಿಷಯಗಳ ಕುರಿತು ಚರ್ಚಿಸುತ್ತಾರೆ. ಈ ಸಂದರ್ಭ ಓವಲ್‌ ಕಚೇರಿಯಲ್ಲಿ ಸ್ಟೀವ್‌ ವಿಟ್ಕಾಫ್‌, ಆಂತರಿಕ ಕಾರ್ಯದರ್ಶಿ ಡೌಗ್‌ ಬರ್ಗಮ್‌ ಮತ್ತು ಅವರ ಪತ್ನಿ ಕ್ಯಾಥರೀನ್‌ ಬರ್ಗಮ್‌ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಸಮಸ್ಯೆ ಹೇಳಿದ್ದಕ್ಕೆ ರೊಚ್ಚಿಗೆದ್ದ ಅಧ್ಯಕ್ಷ: ಬೆನ್ನು ಕಚ್ಚಿ, ತಾಯಿಯ ತಾಳಿ ಸರ ಕಿತ್ತು ಅತಿರೇಕದ ವರ್ತನೆ!

ಈ ವೇಳೆ ಟ್ರಂಪ್‌ ಡೌಗ್‌ ಬರ್ಗಮ್‌ ಅವರ ಪತ್ನಿಯನ್ನು ಎದುರು ಕರೆದು, “ನಾನು ಒಮ್ಮೆ ಕ್ಯಾಥರೀನ್‌  ಕುದುರೆ ಸವಾರಿ ಮಾಡುವ ವೀಡಿಯೋವನ್ನು ನೋಡಿದ್ದೆ. ನಾನು ಅಂದು ಇವಳು ಯಾರು? ಎಂದು ಕೇಳಿದ್ದೆ. ನಂತರ ನಿನ್ನ ಬಗ್ಗೆ ತಿಳಿದುಕೊಂಡೆ” ಎಂದು ಟ್ರಂಪ್‌ ಹೇಳಿದರು. ನಂತರ ಟ್ರಂಪ್‌, “ನೀವು ಸುಂದರವಾಗಿದ್ದೀರಿ” ಎಂದು ಹೇಳುವ ಮೂಲಕ ಮುಗುಳ್ನಕ್ಕರು. ಅಷ್ಟೇ ಅಲ್ಲದೆ “ನಿಮ್ಮ ಸೌಂದರ್ಯದಿಂದಾಗಿ ನಾನು ನಿಮ್ಮ ಗಂಡನನ್ನು ನೇಮಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಈ ವೇಳೆ ಕ್ಯಾಥರೀನ್‌ ಅವರ ಪತಿ ಡೌಗ್‌ ಬರ್ಗಮ್‌ ಕೂಡ ಪಕ್ಕದಲ್ಲೇ ನಿಂತಿದ್ದರು.

ಡೌರ್ಗ್‌ ಬರ್ಗ್ಮ್‌ ಯಾರು?
69 ವರ್ಷದ ಡೌಗ್‌ ಬರ್ಗ್ಮ್‌ ಅವರು ಅಮೆರಿಕದ ಆಂತರಿಕ ಕಾರ್ಯದರ್ಶಿಯಾಗಿದ್ದಾರೆ. ಈ ಹುದ್ದೆಯನ್ನು ಅಲಂಕರಿಸುವ ಮೊದಲು ಬರ್ಗ್ಮ್‌ ಉತ್ತರ ಡಕೋಟಾದ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದರು. ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವ ಬರ್ಗ್ಮ್‌ ಒಬ್ಬ ಯಶಸ್ವಿ ಉದ್ಯಮಿಯೂ ಹೌದು.

Continue Reading

INTERNATIONAL

ಬಾರಾಮತಿ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ವಿಮಾನ ಅಪಘಾತ; ಸಂಸದ ಸೇರಿ 15 ಮಂದಿ ಸಾವು

Published

on

ಕೊಲಂಬಿಯಾ: ಬಾರಾಮತಿಯಲ್ಲಿ ಅಜಿತ್‌ ಪವಾರ್‌ ವಿಮಾನ ಅಪಘಾತಕ್ಕೀಡಾದ ದುರಂತ ಮಾಸುವ ಮುನ್ನವೇ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ.

ಸಂಸದ ಸೇರಿದಂತೆ 15 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಕೊಲಂಬಿಯಾ-ವೆನೆಜುವೆಲಾದ ಗಡಿಯ ಬಳಿ ಪತನಗೊಂಡು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಇದನ್ನೂ ಓದಿ: ಬಾರಾಮತಿ ವಿಮಾನ ಅಪಘಾತದಲ್ಲಿ ನಿಧನ ಹೊಂದಿದ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಯಾರು ಗೊತ್ತಾ?

ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ಫ್ಲೈಟ್. ವಿಮಾನದಲ್ಲಿ ಒಬ್ಬರು ಸಂಸತ್ ಸದಸ್ಯರು, ಒಬ್ಬರು ಶಾಸನಸಭೆ ಅಭ್ಯರ್ಥಿ ಸೇರಿದಂತೆ ಒಟ್ಟು 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.

ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

Continue Reading

INTERNATIONAL

ದಾವೋಸ್ ನಲ್ಲಿ ಫ್ರೆಂಚ್‌ ಅಧ್ಯಕ್ಷರ ಭಾಷಣ; ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆ!

Published

on

ದಾವೋಸ್:‌ ವಿಶ್ವ ನಾಯಕರು ಸೇರಿದ್ದ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಸನ್‌ ಗ್ಲಾಸ್‌ ಧರಿಸಿದ್ದರು. ಇದೀಗ ಈ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಬದಲಾದಂತಾಗಿದೆ.


ಹೌದು, ಜಾಗತೀಕವಾಗಿರುವ ಅತ್ಯಂತ ಸಂಕೀರ್ಣ ಮತ್ತು ಆತಂಕಕಾರಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಸೇರಿ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಸೇರಿರುವ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಮಹತ್ವದ ವಿಚಾರಗಳ ಬದಲಾಗಿ, ಎಲ್ಲರ ಕಣ್ಣುಗಳು ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಧರಿಸಿದ್ದ ಸನ್‌ ಗ್ಲಾಸ್‌ ಮೇಲೆ ಬಿದ್ದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ತಮ್ಮ ಕಣ್ಣು ಊದಿಕೊಂಡು ಕೆಂಪಾಗಿ ಕಾಣುತ್ತಿವೆ. ಹೀಗಾಗಿ ಸನ್‌ ಗ್ಲಾಸ್‌ ಧರಿಸುವ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದರು.

“ದಯವಿಟ್ಟು ಸನ್ ಗ್ಲಾಸ್ ಧರಿಸಿರುವ ನನ್ನ ಕಣ್ಣಿನ ನೋಟಕ್ಕಾಗಿ ಕ್ಷಮಿಸಿ, ಇದು ಸಂಪೂರ್ಣವಾಗಿ ನಿರುಪದ್ರವ” ಎಂದು ಹೇಳಿದ್ದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ದಿಢೀರ್‌ ಏರಿಕೆ!
ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಖಲಾಯಿಸಿದೆ. ಅದರ ತಯಾರಕ ಐವಿಷನ್ ಟೆಕ್‌ನ ಷೇರುಗಳು ಗುರುವಾರ ಸುಮಾರು 28% ರಷ್ಟು ಏರಿಕೆ ಕಂಡಿವೆ. ಫ್ರೆಂಚ್ ಐಷಾರಾಮಿ ಕನ್ನಡಕ ಬ್ಯಾಂಡ್ ಹೆನ್ರಿ ಜೂಲಿಯನ್ ಅನ್ನು ಹೊಂದಿರುತ ಐವಿಷನ್ ಟೆಕ್, ಮ್ಯಾಕ್ರನ್ ಧರಿಸಿದ್ದ ಸನ್ ಗ್ಲಾಸ್ ಪೆಸಿಫಿಕ್ S 01 ಮಾದರಿಯಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆ 659 ಯುರೋಗಳ ಎಂದು ಬುಧವಾರ ಹೇಳಿದೆ ಎಂದು ವರದಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page