Connect with us

LATEST NEWS

ಬೆಂಗಳೂರಿನಲ್ಲಿ ದರೋಡೆಗೆ ಹೋದ ಮನೆಯಲ್ಲಿ ಸೇಬು ತಿಂದು ಸಿಕ್ಕಿಬಿತ್ತು ಕಳ್ಳರ ಗ್ಯಾಂಗ್..!

Published

on

ಬೆಂಗಳೂರಿನಲ್ಲಿ ದರೋಡೆಗೆ ಹೋದ ಮನೆಯಲ್ಲಿ ಸೇಬು ತಿಂದು ಸಿಕ್ಕಿಬಿತ್ತು ಕಳ್ಳರ ಗ್ಯಾಂಗ್..!

ಬೆಂಗಳೂರು: ಥೇಟ್ ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕಿ ದೊಡ್ಡ ದೊಡ್ಡ ಮನೆಗಳನ್ನು ನೋಡಿ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಗ್ಯಾಂಗನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬರೋಬ್ಬರಿ 50ಕ್ಕೂ ಹೆಚ್ಚು ದರೋಡೆ ಪ್ಲ್ಯಾನ್ ಗಳನ್ನು ಈ  ಗ್ಯಾಂಗ್ ಮಾಡಿದ್ದು  ಇದೀಗ ಕಂಬಿಯ ಹಿಂದೆ ಹೋಗಿದೆ. ಆ ಕಳ್ಳರ ಗ್ಯಾಂಗನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ.

ಕದಿಯಲು ಹೋದ ಮನೆಯ ಅಡುಗೆ ಮನೆಯಲ್ಲಿ ಸೇಬು ಹಣ್ಣು ತಿನ್ನುತ್ತಾ ಕುಳಿತಿದ್ದ ಕಳ್ಳಿಯನ್ನು ಮನೆಯ ಮಾಲೀಕರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಹೂ ಬೇಕಾ ಹೂವ ಎಂದು ಕೂಗುತ್ತಾ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬಳು ಒಂದು ಬಿಗ್ ಸ್ಕೆಚ್ ಹಾಕುತ್ತಿದ್ದಳು.

ಹೂ ಮಾರೋ ನೆಪದಲ್ಲಿ ಮನೆಗಳ್ಳತನ ಮಾಡಲು ಈ ಲೇಡಿ ಖದೀಮರಿಗೆ ಸಹಾಯ ಮಾಡುತ್ತಿದ್ದಳು.

ಇದೇ ತಿಂಗಳ 14ನೇ ತಾರೀಕಿನಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಅರಿಶಿನಕುಂಟೆಯ ಬಡಾವಣೆಯಲ್ಲಿ ಉದ್ಯಮಿ ರವಿ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಕಲ್ಯಾಣಿ ಹಾಗೂ ಬಸವರಾಜು, ಬೆಂಗಳೂರಿನ ಬನಶಂಕರಿ ಮೂಲದ ಶಿವಾನಂದ ಹಾಗೂ ಉಷಾ ಬಂಧಿತ ಆರೋಪಿಗಳು.

ನೆಲಮಂಗಲದಲ್ಲಿ ಕಳ್ಳತನದಲ್ಲಿ ತೊಡಗಿದ್ದಾಗ ಹಠಾತ್ತನೆ ಮನೆ ಮಾಲೀಕ ಬಂದಾಗ ಮನೆಯ ಹೊರಗಿದ್ದ ಶಿವಾನಂದ ಪರಾರಿಯಾಗುತ್ತಾನೆ.

ಮಾಲೀಕ‌ ರವಿ ಮನೆ ಒಳಗೆ ಎಂಟ್ರಿ ಕೊಡುತ್ತಲೇ ಕಳ್ಳತನ ಮಾಡುತ್ತಿದ್ದ ಬಸವರಾಜು ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಮನೆಯಿಂದ ಪರಾರಿಯಾಗಿದ್ದ.

ಆದರೆ, ಕುಡಿತದ ಮತ್ತಿನಲ್ಲಿದ್ದ ಕಲ್ಯಾಣಿ ಮನೆಯ ಫ್ರಿಡ್ಜ್‌ನಲ್ಲಿದ್ದ ಸೇಬು ಹಣ್ಣನ್ನು ತಿನ್ನುತ್ತಾ ಕುಳಿತಿದ್ದನ್ನು ಕಂಡು ಆರೋಪಿ ಕಲ್ಯಾಣಿಯನ್ನು ಮನೆ ಮಾಲೀಕ ರವಿ ನೆಲಮಂಗಲ ನಗರ ಪೊಲೀಸರಿಗೆ ಒಪ್ಪಿಸಿದ್ದ.

ಪ್ರಕರಣ ದಾಖಲಿಸಿಕೊಂಡ ನೆಲಮಂಗಲ‌ ನಗರ ಪೊಲೀಸರು ಪರಾರಿಯಾಗಿದ್ದ ಆರೋಪಿಗಳಾದ ಕಲ್ಯಾಣಿ, ಶಿವಾನಂದ, ಉಷಾಳನ್ನು ಬಂಧಿಸಿ 17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿ ಕಲ್ಯಾಣ್ ಮೇಲೆ ರಾಜ್ಯದ ಉದ್ದಗಲಕ್ಕೂ 50ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ.

ಒಟ್ಟಾರೆ ಹೂ ಮಾರೋ ನೆಪದಲ್ಲಿ ಒಂಟಿ ಮನೆಗಳ ನಿವಾಸಿಗಳಿಗೆ ಹೂ ಮುಡಿಸಲು ಹೋಗಿ ಕಳ್ಳರು ಸರಿಯಾಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಕಳ್ಳತನವನ್ನೇ ಫುಲ್ ಟೈಂ ಬ್ಯುಸಿನೆಸ್ ಮಾಡಿಕೊಂಡಿದ್ದ ಆರೋಪಿ ಕಲ್ಯಾಣ್ ಜೊತೆಗೆ ಮೂರು ಜನ ಆರೋಪಿಗಳು ಜೈಲಿಗಟ್ಟಿದ್ದಾರೆ.

LATEST NEWS

ಪಾಕ್‌ಗೆ ಮತ್ತೊಂದು ಶಾ*ಕ್ ಕೊಟ್ಟ ಭಾರತ;  ಸೋಶಿಯಲ್ ಮೀಡಿಯಾ ಖಾತೆಗಳಿಗೆ ನಿರ್ಬಂಧ

Published

on

ಮಂಗಳೂರು/ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭ*ಯೋತ್ಪಾದಕ ದಾ*ಳಿಯಿಂದ ಭಾರತ ಆಕ್ರೋಶಗೊಂಡಿದೆ. ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ.

ಸಾಂದರ್ಭಿಕ ಚಿತ್ರ

ಇದೀಗ ಭಾರತವು ಪಾಕಿಸ್ತಾನ ಸರ್ಕಾರದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ಬಂಧಿಸಿದೆ. ಹೀಗಾಗಿ ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಎಕ್ಸ್‌, ಫೇಸ್‌ ಬುಕ್ ಖಾತೆಗಳ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಪಾಕ್ ಜೊತೆಗಿನ ತನ್ನ ಸಂಬಂಧಕ್ಕೆ ಕೆಲವೊಂದು ಕಡಿವಾಣ  ಹಾಕುವ ಕ್ರಮಕ್ಕೆ ಭಾರತ ಮುಂದಾಗಿದೆ. ಪಾಕ್ ಪ್ರಜೆಗಳಿಗೆ ನೀಡಲಾಗುತ್ತಿದ್ದ ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು ರದ್ದು ಮಾಡಿದೆ. ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ರಕ್ಷಣಾ ಸಲಹೆಗಾರರನ್ನು ಹೊರಹಾಕಿದೆ.

ಇದನ್ನೂ ಓದಿ  : ಸೀರೆ ಬುಕ್ ಮಾಡಿದ ಮಹಿಳಾ ಐಎಎಸ್ ಅಧಿಕಾರಿಗೆ ವಂಚನೆ; ಯೂಟ್ಯೂಬರ್ ವಿರುದ್ಧ ಕೇಸ್

ಪಾಕ್ ಭಾರತ ನಡುವಿನ ಅಟ್ಟಾರಿ ಚೆಕ್ ಪೋಸ್ಟ್‌ನ್ನು ಭಾರತ ಮುಚ್ಚಿದೆ. 1960 ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮಾಡಿದ್ದು, ಇದೀಗ ಸೋಶಿಯಲ್ ಮೀಡಿಯಾ ಖಾತೆ ಮೇಲೆ ಸಮರ ಸಾರಿದೆ. ಪಾಕ್ ಸರ್ಕಾರದ ಅಧಿಕೃತ ಎಕ್ಸ್ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ಖಾತೆಗಳಿಗೆ ನಿಷೇಧ ಹೇರಿದೆ.

 

 

 

Continue Reading

LATEST NEWS

ಏ.29 ರವರೆಗೆ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು: ವಾಯುಭಾರ ಕುಸಿತಗೊಂಡ ಹಿನ್ನೆಲೆ ರಾಜ್ಯದಲ್ಲಿ ಏ.29ರವರೆಗೂ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ, ದಾವಣಗೆರೆ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಏ.29 ರವರೆಗೂ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ವಿಜಯಪುರ, ಕೊಪ್ಪಳ, ಯಾದಗಿರಿ, ಕಲಬುರ್ಗಿ, ಹಾಸನ, ಮೈಸೂರು, ಕೊಡಗು, ತುಮಕೂರು, ಮಂಡ್ಯ, ಚಿಕ್ಕಮಂಗಳೂರು, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Continue Reading

BELTHANGADY

ಬೆಳ್ತಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ಸಹಿತ ನಗದನ್ನು ದೋಚಿ ಪರಾರಿಯಾದ ಕಳ್ಳ

Published

on

ಬೆಳ್ತಂಗಡಿ: ರಾತ್ರಿಯ ವೇಳೆ ಮನೆಮಂದಿ ಎಲ್ಲಾ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆಸಿ ಚಿನ್ನಾಭರಣ ಸಹಿತ ನಗದುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುವಿನ ಮನೆಯಲ್ಲಿ ಏ.23ರಂದು ರಾತ್ರಿ ನಡೆದಿದೆ.

ಗುತ್ತು ಮನೆ ನಿವಾಸಿ ಮುಸ್ತಫಾ ರವರ ಮನೆಗೆ ಕಳ್ಳರು ಹಿಂಬದಿ ಬಾಗಿಲಿನಿಂದ ಬೀಗ ಮುರಿದು ಮನೆಯೊಳಗೆ ಬಂದದ್ದು ಮಾತ್ರವಲ್ಲದೇ ಸುಮಾರು 5 ಪವನ್ ನಷ್ಟು ಚಿನ್ನ, ಮೂರು ಸಾವಿರ ರೂಪಾಯಿ ನಗದುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.

ನಿನ್ನೆ ಸುಮಾರು ಮೂರರಿಂದ ನಾಲ್ಕುಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಮನೆಯವರು ತಿಳಿಸಿದ್ದಾರೆ. ಅಲ್ಲದೇ ಮನೆಯ ಬ್ಯಾಗ್‌ಗಳನ್ನು ಕದ್ದುಕೊಂಡು ಹೋಗಿದ್ದು, ಬಳಿಕ ಅದರಲ್ಲಿ ಏನೂ ಇಲ್ಲದ್ದನ್ನು ನೋಡಿ ಪಕ್ಕದ ಅಂಗಳದಲ್ಲಿ ಬಿಸಾಕಿ ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ತೆಕ್ಕಾರುವಿನ ಕೋಡಿ ನಿವಾಸಿ ಅನ್ವರ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು ಮನೆಯೊಳಗಡೆ ಕಪಾಟ್ ನ ಒಳಗಡೆಯಿದ್ದ ನಗದನ್ನು ದೋಚಿಕೊಂಡಿದ್ದು ಆದರೆ ಆಕಸ್ಮಾತ್ ಅವರ ಜೇಬಿಗೆ ಹಾಕುವ ಹಣವು ಕೆಳಗಡೆ ಬಿದ್ದಿದ್ದು ಬೆಳಿಗ್ಗೆ ಹೊತ್ತು ಮನೆಯವರು ನೀರು ಕುಡಿಯಲೆಂದು ಎದ್ದಾಗ ಕಳ್ಳತನ ನಡೆದ ಬಗ್ಗೆ ಅರಿವಾಗಿದೆ.

ಮನೆಯ ಹಿಂಬಾಗಿಲು ತೆರೆದ ಸ್ಥಿತಿಯಲ್ಲಿದ್ದು ದೋಚಿದ ಮೂರು ಸಾವಿರ ಹಣ ಅಂಗಳದಲ್ಲಿ ಬಿದ್ದು ಸಿಕ್ಕಿದೆ ಎಂದು ಅನ್ವರ್ ಮನೆಯವರು ತಿಳಿಸಿದ್ದಾರೆ. ಇದೇ ರೀತಿ ತೆಕ್ಕಾರು ವ್ಯಾಪ್ತಿಯ ಹಲವು ಮನೆಗಳಲ್ಲಿ ಕಳ್ಳತನ ನಡೆದಿದ್ದು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page