Connect with us

bangalore

Bangalore: ರಾಜ್ಯಾದ್ಯಂತ ನಾಲ್ಕು ದಿನ ಭಾರಿ ಮಳೆ ಮುಂದುವರಿಕೆ- ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್..!

Published

on

ಕರ್ನಾಟಕದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರಾಜ್ಯದಾದ್ಯಂತ ಅಲರ್ಟ್‌ ಘೋಷಣೆ ಮಾಡಿದೆ.

ಬೆಂಗಳೂರು:  ಕರ್ನಾಟಕದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರಾಜ್ಯದಾದ್ಯಂತ ಅಲರ್ಟ್‌ ಘೋಷಣೆ ಮಾಡಿದೆ.

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಸೋಮವಾರದಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ.

ಮುಂದಿನ ನಾಲ್ಕು ದಿನಗಳ ಕಾಲ ಇದು ಮುಂದುವರಿಯಬಹುದು ಎಂಬ ಮುನ್ಸೂಚನೆ ಲಭ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ತಗ್ಗು ಪ್ರದೇಶಗಳು, ಸರೋವರಗಳು, ನದಿ ದಡಗಳು ಮತ್ತು ಕಡಲ ತೀರಗಳಿಗೆ ಮಕ್ಕಳನ್ನು ಬಿಡದಂತೆ ಪೋಷಕರಿಗೆ ಸೂಚಿಸಲಾಗಿದೆ.

ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸನ್ನದ್ಧರಾಗಿ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ತಪ್ಪದೆ ಕೈಗೊಳ್ಳುವಂತೆ ತಿಳಿಸಲಾಗಿದೆ.

ಪ್ರತಿ ತಾಲೂಕಿನಲ್ಲಿ ಚಿಕಿತ್ಸಾ ಕೇಂದ್ರವನ್ನು ಸಿದ್ಧವಾಗಿಡಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

bangalore

ಓಡಿ ಹೋಗಿ ಮದುವೆ ..! ವಶೀಕರಣ ಆರೋಪ ..! ಖ್ಯಾತ ಗಾಯಕಿ ಪೃಥ್ವಿ ಭಟ್ ತಂದೆ ಹೇಳಿದ್ದೇನು ..?

Published

on

ಬೆಂಗಳೂರು : ಕನ್ನಡ ಸಿನಿಮಾಗಳು, ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹಾಡಿರುವ, ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದಾರೆ ಎಂದು ಪೃಥ್ವಿಯ ಹೆತ್ತವರು ಗಂಭೀರ ಆರೋಪ ಮಾಡಿದ್ದಾರೆ.

ಮೂಲತಃ ರಾಜ್ಯದ ಗಡಿನಾಡು ಕಾಸರಗೋಡು ಮೂಲದವಳಾದ ಪೃಥ್ವಿ ಭಟ್ ಇದೀಗ ಓಡಿಹೋಗಿ ದಿಢೀರ್ ಮದುವೆಯಾಗಿದ್ದಾರೆ. ಗಾಯಕಿ ಪೃಥ್ವಿ ಭಟ್, ಅಭಿಷೇಕ್ ಎನ್ನುವ ಯುವಕನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತಗೊಂಡಿದ್ದಾರೆ.

ಈ ಹಿಂದದೆ ಪೃಥ್ವಿಯ ಪ್ರೀತಿಯ ವಿಚಾರ ಮನೆಯಲ್ಲಿ ಎಲ್ಲರಿಗೂ ತಿಳಿದು ಗಲಾಟೆಯಾಗಿತ್ತು. ಆ ವೇಳೆ ಆಕೆ “ಅಭೀಷೇಕ್‌ನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದ ಮಗಳು, ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ನನ್ನ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ” ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದಾರೆ.

ಮಾರ್ಚ್ 27 ರಂದು ಪೃಥ್ವಿ ಹಾಗೂ ಅಭಿಷೇಕ್ ವಿವಾಹವಾಗಿದೆ. ಮದುವೆಯಾಗಿ 20 ದಿನಗಳಾಗಿದೆ. ಮದುವೆಯಾದ ದಿನ ಪೊಲೀಸರು ಮನೆಯವರಿಗೆ ಕಾಲ್ ಮಾಡಿ ವಿಚಾರಿಸಿದಾಗ ‘ಪರಥ್ವಿ ಮನೆಗೆ ಬರುವುದು ಬೇಡ, ಬಂದರೆ ಗಲಾಟೆಯಾಗುವುದು ಕಂಡಿತ . ಹಾಗಾಗಿ ಅವಳು ಮನೆಗೆ ಬರದೆ ಇರುವುದೇ ಒಳ್ಳೆಯದು’ ಎಂದಿದ್ದಾರೆ. ಆದರೆ ಅದರ ಬಳಿಕವೂ ಆಕೆ ಪುನಃ ಕಾಲ್ ಮಾಡಿ ಕ್ಷಮಿಸುವಂತೆ ಕೋರಿದ್ದಾಳೆ. ಆವಾಗ ತಂದೆ ‘ಮದುವೆಯಾಗಿ 20 ದಿನ ನಮ್ಮ ನೆನಪಿರಲಿಲ್ಲ. ಈಗ ನಮ್ಮ ನೆನಪಾದರೆ ಬರುವುದೂ ಬೇಡ. ಹೀಗೆಲ್ಲಾ ಮಾಡುವ ಮೊದಲೇ ಯೋಚಿಸಬೇಕಿತ್ತು’ ಎಂದಿದ್ದಾರೆ. ಇದೀಗ ಈ ಸುದ್ಧಿ ಫುಲ್ ವೈರಲ್ ಆಗುತ್ತಿದೆ.

Continue Reading

bangalore

ಪಂಜಾಬ್ ಕಿಂಗ್ಸ್ ವಿರುದ್ಧ ಅಮೋಘ ಪ್ರದರ್ಶನ; ಸೇಡು ತೀರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

Published

on

IPL 2025 : ರಾಜ್ಯ ರಾಜಧಾನಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಿನ್ನೆಯ ಐಪಿಎಲ್‌ ಕೇವಲ 14 ಓವರ್‌ಗಳಿಗೆ ಸೀಮಿತವಾಗಿತ್ತು. ಈ ಹಿಂದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಅನುಭವಿಸಿದ್ದ ಆರ್‌ಸಿಬಿ ನಿನ್ನೆ (ಏ.20) ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಸೇಡು ತೀರಿಸಿಕೊಂಡಿದೆ.

ಪಂಜಾಬ್ ಕಿಂಗ್ಸ್‌ ಮೊದಲ ಬ್ಯಾಟಿಂಗ್ :

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಪ್ರಿಯಾಂಶ್ ಆರ್ಯ 22, ಪ್ರಭಸಿಮ್ರನ್ 33, ಜೋಶ್ ಇಂಗ್ಲಿಸ್ 29, ಶಶಾಂಕ್ ಸಿಂಗ್ ಔಟಾಗದೆ 31 ಮತ್ತು ಮಾರ್ಕೊ ಜಾನ್ಸೆನ್ ಔಟಾಗದೆ 25 ರನ್ ಕೊಡುಗೆಯಿಂದ 6 ವಿಕೆಟ್ ಗೆ 157 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್ ಸಿಬಿ 18.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 7 ವಿಕೆಟ್ ಗಳ ಜಯಭೇರಿ ಬಾರಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿ :

ಗುರಿ ಬೆನ್ನಟ್ಟಿದ ಆರ್ ಸಿಬಿ ಆರಂಭಿಕ ಆಘಾತ ಅನುಭವಿಸಿತು. ಫಿಲಿಪ್ ಸಾಲ್ಟ್ ಒಂದು ರನ್ ಗೆ ನಿರ್ಗಮಿಸಿದರು. ಕೊಹ್ಲಿ ಸಮಯೋಚಿತ ಆಟದ ನೆರವಿನಿಂದ ಗೆಲುವಿನ ದಡ ಸೇರಿಸಿದರು. ಅಮೋಘ ಆಟವಾಡಿದ ದೇವದತ್ ಪಡಿಕ್ಕಲ್ 61(35ಬಾಲ್) ರನ್ ಗಳಿಸಿ ಔಟಾದರು. ನಾಯಕ ರಜತ್ ಪಾಟಿದಾರ್ 12 ರನ್ ಗೆ ಔಟಾದರು. ಸಮಯೋಚಿತ ಆಟವಾಡಿದ ಕೊಹ್ಲಿ 73 ರನ್ (54ಎಸೆತ) ಗಳಿಸಿ ಅಜೇಯರಾಗಿ ಉಳಿದರು.

ಆರ್‌ಸಿಬಿ ಹಾಗೂ ಪಂಜಾಬ್ ಸ್ಥಾನ :

ಆರ್ ಸಿಬಿ ಬೌಲಿಂಗ್ ನಲ್ಲಿ ಕೃನಾಲ್ ಪಾಂಡ್ಯ 25 ಕ್ಕೆ 2 ವಿಕೆಟ್ ಮತ್ತು ಸುಯಾಶ್ ಶರ್ಮ 26 ಕ್ಕೆ 2 ವಿಕೆಟ್ ಕಿತ್ತು ಮಿಂಚಿದರು. ರೊಮಾರಿಯೋ ಶೆಫರ್ಡ್18 ಕ್ಕೆ 1 ವಿಕೆಟ್ ಪಡೆದರು. ಆರ್‌ಸಿಬಿಗೆ ಇದು 8ನೇ ಪಂದ್ಯದಲ್ಲಿ 5 ನೇ ಗೆಲುವು, ಪಂಜಾಬ್ ಗೆ 8 ನೇ ಪಂದ್ಯದಲ್ಲಿ 3 ನೇ ಸೋಲು. ಅಂಕಪಟ್ಟಿಯಲ್ಲಿ ಅರ್‌ಸಿಬಿ 3 ನೇ ಸ್ಥಾನದಲ್ಲಿದೆ. ಪಂಜಾಬ್ 4 ನೇ ಸ್ಥಾನದಲ್ಲಿದೆ.

Continue Reading

bangalore

ವಿಮಾನ ಹಾಗೂ ಟೆಂಪೋ ಅಪಘಾತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

Published

on

ಬೆಂಗಳೂರು : ವಿಮಾನ ಮತ್ತು ಟೆಂಪೋ ಮಧ್ಯೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಸಂಭವಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿನ್ನೆ (ಏ.19) ಸಂಜೆ ನಡೆದಿದ್ದು, ವಿಮಾನದ ಇಂಜಿನ್ ರಿಪೇರಿಯಿಂದಾಗಿ ವಿಮಾನ ಕೆಟ್ಟು ನಿಂತಿತ್ತು. ಆಗ ಟಿಟಿ ವಾಹನ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದೆ.

ಚಾಲಕನ ಅಜಾಗರೂಕತೆಯಿಂದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬ್ಬಸಕ್ಕೆ ಟಿಟಿ ವಾಹನದ ಟಾಪ್ ನುಚ್ಚುಗುಜ್ಜಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಟಿಟಿ ಚಾಲಕ ಪಾರಾಗಿದ್ದಾರೆ. ಕೆಲ ದಿನಗಳಿಂದ ಇಂಡಿಗೋ ವಿಮಾನ ಕೆಟ್ಟ ನಿಂತಿತ್ತು.

ವಿಮಾನಕ್ಕೆ ಸಿಬ್ಬಂದಿಯನ್ನು ಟಿಟಿ ವಾಹನದ ಮೂಲಕ ಕರೆದೊಯ್ಯುವ ವೇಳೆ ಘಟನೆ ನಡೆದಿದೆ. ಸಿಬ್ಬಂದಿ ಬಿಟ್ಟು ಬರುವಾಗ ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿಯಾಗಿದೆ. ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಇಲಾಖೆಯಿಂದ ತನಿಖೆ ಕೈಗೊಳ್ಳಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page